Video: ಕಾಡಿನಿಂದ ನಾಡಿಗೆ ಬಂದ ಕರಡಿಗೆ ಕೂಲ್ ಡ್ರಿಂಕ್ಸ್‌ ಕುಡಿಸಿದ ಯುವಕ; ವಿಡಿಯೋ ವೈರಲ್‌

ಈ ರೀಲ್ಸ್‌ಗಾಗಿ ಕೆಲವೊಬ್ಬರು ಎಂತಹ ದುಸ್ಸಾಹಸಕ್ಕೂ ಬೇಕಾದರೂ ಕೈ ಹಾಕುತ್ತಾರೆ. ಇಂತಹ ಹುಚ್ಚಾಟಗಳ ಸಾಕಷ್ಟು ಉದಾಹರಣೆಗಳನ್ನು ನೀವು ಸಹ ನೋಡಿರಬಹುದು. ಇದೀಗ ಇಂತಹದ್ದೇ ದೃಶ್ಯವೊಂದು ವೈರಲ್‌ ಆಗಿದ್ದು, ರೀಲ್ಸ್‌ ರಾಜನೊಬ್ಬ ಭಂಡ ಧೈರ್ಯದಿಂದ ಕಾಡಿನಿಂದ ನಾಡಿಗೆ ಬಂದ ಕರಡಿಗೆ ಕುಡಿಯಲು ಕೂಲ್‌ ಡ್ರಿಂಕ್ಸ್‌ ಕೊಟ್ಟಿದ್ದಾನೆ. ಯುವಕನ ಈ ಹುಚ್ಚಾಟಕ್ಕೆ ಭಾರೀ ಆಕ್ರೋಶ ವ್ಯಕ್ತವಾಗಿದೆ.

Video: ಕಾಡಿನಿಂದ ನಾಡಿಗೆ ಬಂದ ಕರಡಿಗೆ ಕೂಲ್ ಡ್ರಿಂಕ್ಸ್‌ ಕುಡಿಸಿದ ಯುವಕ; ವಿಡಿಯೋ ವೈರಲ್‌
ಕರಡಿಗೆ ಕೂಲ್‌ ಡ್ರಿಂಕ್ಸ್‌ ಕುಡಿಸಿದ ಯುವಕ
Image Credit source: Social Media
Edited By:

Updated on: Sep 13, 2025 | 7:08 PM

ಅರಣ್ಯ ನಾಶದ ಕಾರಣದಿಂದಾಗಿ ಇತ್ತೀಚಿನ ದಿನಗಳಲ್ಲಿ ಕಾಡು ಪ್ರಾಣಿಗಳು ನಾಡಿನತ್ತ ಆಹಾರ ಅರಸುತ್ತಾ ಬರುವಂತಹದ್ದು ಸಾಮಾನ್ಯವಾಗಿ ಬಿಟ್ಟಿದೆ. ಮಾನವ ಕಾಡುಪ್ರಾಣಿ ಸಂಘರ್ಷವೂ ಹೆಚ್ಚಾಗಿದೆ. ಹೀಗೆ ಬರುವ ಪ್ರಾಣಿಗಳು ಮನುಷ್ಯರ ಮೇಲೆ ಅಟ್ಯಾಕ್‌ ಮಾಡುವ ಸಂಭವವೂ ಇರುತ್ತದೆ. ಹಾಗಾಗಿ ಕಾಡು ಪ್ರಾಣಿಗಳತ್ತ ಯಾರು ಸುಳಿಯಲು ಕೂಡ ಹೋಗುವುದಿಲ್ಲ. ಅಂತದ್ರಲ್ಲಿ ಛತ್ತೀಸ್‌ಗಢದಲ್ಲೊಬ್ಬ ಯುವಕ ರೀಲ್ಸ್‌ ಮಾಡುವ ಸಲುವಾಗಿ ಕಾಡು ಕರಡಿಗೆ ಕೂಲ್‌ ಡ್ರಿಂಕ್ಸ್‌ (man feed cool drinks to wild bear) ಕುಡಿಸಿದ್ದಾನೆ. ಈ ದೃಶ್ಯ ತಮಾಷೆಯಾಗಿ ಕಂಡುಬಂದರೂ ವನ್ಯಜೀವಿ ತಜ್ಞರು ಮತ್ತು ಪರಿಸರವಾದಿಗಳು ಅಂತಹ ನಡವಳಿಕೆ ಅಪಾಯಕಾರಿ ಮತ್ತು ಜೀವಕ್ಕೆ ಸಂಚಕಾರಕ ಎಂದು ಎಚ್ಚರಿಸಿದ್ದಾರೆ. ಕರಡಿಗಳು  ಪರಭಕ್ಷಕಗಳಾಗಿದ್ದು, ಇವುಗಳು ದಾಳಿ ನಡೆಸುವ ಸಾಧ್ಯತೆ ಇರುತ್ತದೆ ಎಂದು ಎಚ್ಚರಿಸಿದ್ದಾರೆ. ಈ ವಿಡಿಯೋ ಇದೀಗ ಎಲ್ಲೆಡೆ ವೈರಲ್‌ ಆಗುತ್ತಿದೆ.

ಕರಡಿಗೆ ಕೂಲ್‌ ಡ್ರಿಂಕ್ಸ್‌ ಕುಡಿಸಿದ ಯುವಕ:

ಛತ್ತೀಸ್‌ಗಢದ ಕಾಂಕೇರ್ ಜಿಲ್ಲೆಯಲ್ಲಿ ಇತ್ತೀಚೆಗೆ ಈ ಘಟನೆ ನಡೆದಿದ್ದು, ಕಾಡಿನಿಂದ ನಾಡಿನತ್ತ ಬಂದಂತಹ ಕರಡಿಗೆ ಯುವಕನೊಬ್ಬ ಮಾಜಾ ಕೂಲ್‌ ಡ್ರಿಂಕ್ಸ್‌ ಕುಡಿಸಿದ್ದಾನೆ.  ರೀಲ್ಸ್‌ ಮಾಡುವ ಸಲುವಾಗಿ ಆ ಯುವಕ ಈ ರೀತಿ ಹುಚ್ಚಾಟವನ್ನು ಮೆರೆದಿದ್ದಾನೆ. ಈ ದೃಶ್ಯ ವೈರಲ್‌ ಆಗಿದ್ದು, ವ್ಯಾಪಕ ಟೀಕೆಗೆ ಗುರಿಯಾಗಿದೆ.

ಇದನ್ನೂ ಓದಿ
ಆಂಧ್ರದಲ್ಲಿ ಕುತ್ತಿಗೆಗೆ ಹಾವು ಸುತ್ತಿಕೊಂಡು ಕುಡುಕನ ಹೈಡ್ರಾಮಾ
ರೈಲ್ವೆ ಹಳಿ ಮೇಲೆ ಮಲಗಿ ರೀಲ್ಸ್ ಮಾಡಿದ ಯುವಕ,
ಈ ಪ್ರೇಮಿಗಳಿಗೆ ರೈಲೇ ಬೆಡ್​​​ ರೂಮ್​​ , ಅಪ್ಪಿಕೊಂಡು ಮುದ್ದಾಡಿದ ಜೋಡಿಗಳು
ನೆರೆಮನೆಯ ಯುವಕನೊಂದಿಗೆ ಓಡಿಹೋದ ಒಂದೇ ಮನೆಯ ಸೊಸೆಯಂದಿರು

ಛತ್ತೀಸ್‌ಗಢದ ಅರಣ್ಯ ಇಲಾಖೆ ಈ ವೀಡಿಯೊವನ್ನು ಗಂಭೀರವಾಗಿ ಪರಿಗಣಿಸಿದ್ದು, ಅಧಿಕಾರಿಗಳು ಈ ವಿಡಿಯೋದಲ್ಲಿ ಕಾಣಿಸಿರುವ ಯುವಕನನ್ನು ಗುರುತಿಸುವ ಪ್ರಕ್ರಿಯೆಯನ್ನು ಪ್ರಾರಂಭಿಸಿದ್ದಾರೆ ಮತ್ತು ಆತನ ವಿರುದ್ಧ ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿಯಲ್ಲಿ ಕಾನೂನು ಕ್ರಮ ಕೈಗೊಳ್ಳುವ ನಿರೀಕ್ಷೆಯಿದೆ, ಏಕೆಂದರೆ ಆತನ ನಡೆಯಿಂದ ವನ್ಯಜೀವಿ ಸುರಕ್ಷತಾ ನಿಯಮಗಳ ಉಲ್ಲಂಘನೆಯಾಗಿದೆ ಎಂದು ಪರಿಗಣಿಸಲಾಗಿದೆ.

ವೈರಲ್‌  ವಿಡಿಯೋ ಇಲ್ಲಿದೆ ನೋಡಿ:

ಈ ಕುರಿತ ವಿಡಿಯೋವನ್ನು ಕುಷ್ಬು (Khushbu_journo) ಎಂಬವರು ತಮ್ಮ ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ವೈರಲ್‌ ಆಗುತ್ತಿರುವ ವಿಡಿಯೋದಲ್ಲಿ ಯುವಕನೊಬ್ಬ ಭಂಡ ಧೈರ್ಯದಲ್ಲಿ ಕಾಡು ಕರಡಿಗೆ ಕೂಲ್‌ ಡ್ರಿಂಕ್ಸ್‌ ನೀಡುತ್ತಿರುವ ದೃಶ್ಯವನ್ನು ಕಾಣಬಹುದು. ಹೀಗೆ ಯುವಕ ಕೊಟ್ಟ ತಂಪು ಪಾನೀಯವನ್ನು ಕರಡಿ ಗಟಗಟನೆ ಕುಡಿದಿದೆ.

ಇದನ್ನೂ ಓದಿ: ರೈಲ್ವೆ ಹಳಿ ಮೇಲೆ ಮಲಗಿ ರೀಲ್ಸ್ ಮಾಡಿದ ಯುವಕ, ಮುಂದೇನಾಯ್ತು ನೋಡಿ

ಯುವಕನ ಹುಚ್ಚಾಟದಿಂದ ಆತನ ಪ್ರಾಣಕ್ಕೂ ಅಪಾಯ ಮಾತ್ರವಲ್ಲದೆ, ಆತ ನೀಡಿದ ಕೂಲ್‌ ಡ್ರಿಂಕ್ಸ್‌ ಪ್ರಾಣಿಗಳ ಆರೋಗ್ಯಕ್ಕೂ ತುಂಬಾನೇ ಅಪಾಯಕಾರಿ. ಏಕೆಂದರೆ ತಂಪು ಪಾನೀಯಗಳು ಸಕ್ಕರೆ, ಕೆಫೀನ್ ಇತ್ಯಾದಿ ಅನಾರೋಗ್ಯಕರ ಅಂಶಗಳಿಂದ ತುಂಬಿರುತ್ತವೆ. ಇವುಗಳನ್ನು ಜೀರ್ಣಿಸಿಕೊಳ್ಳಲು ಕಾಡು ಪ್ರಾಣಿಗಳಿಗಳಿಗೆ ಕಷ್ಟಸಾಧ್ಯ. ಹಾಗಾಗಿ ಯುವಕನ ಈ ನಡೆಯ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾಗಿದೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:50 pm, Sat, 13 September 25