ಹನ್ನೊಂದು ವರ್ಷದ ಬಾಲಕನ ಹೊಟ್ಟೆಯಲ್ಲಿತ್ತು ಚಿನ್ನದ ಗಟ್ಟಿ, ಎಕ್ಸ್ ರೇ ಕಂಡು ಶಾಕ್ ಆದ ವೈದ್ಯರು

ಕೆಲವು ಪ್ರಕರಣಗಳು ವೈದ್ಯ ಲೋಕವನ್ನೇ ಬೆಚ್ಚಿ ಬೀಳಿಸುತ್ತವೆ. ಇದೀಗ ಇಂತಹದೊಂದು ಪ್ರಕರಣವು ಬೆಳಕಿಗೆ ಬಂದಿದ್ದು, ಹನ್ನೊಂದು ವರ್ಷ ಬಾಲಕನೊಬ್ಬನು ಚಿನ್ನದ ಗಟ್ಟಿಯನ್ನು ನುಂಗಿದ್ದು ವೈದ್ಯರು ಶಸ್ತ್ರಚಿಕಿತ್ಸೆಯ ಮೂಲಕ ಅದನ್ನು ಹೊರತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ. ಈ ಸುದ್ದಿಯೊಂದು ಇದೀಗ ವೈರಲ್ ಆಗಿದ್ದು ಈ ಕುರಿತಾದ ಸಂಪೂರ್ಣ ಮಾಹಿತಿ ಇಲ್ಲಿದೆ.

ಹನ್ನೊಂದು ವರ್ಷದ ಬಾಲಕನ ಹೊಟ್ಟೆಯಲ್ಲಿತ್ತು ಚಿನ್ನದ ಗಟ್ಟಿ, ಎಕ್ಸ್ ರೇ ಕಂಡು ಶಾಕ್ ಆದ ವೈದ್ಯರು
ವೈರಲ್​​ ಫೋಟೋ
Updated By: ಅಕ್ಷಯ್​ ಪಲ್ಲಮಜಲು​​

Updated on: Apr 22, 2025 | 2:52 PM

ಮಕ್ಕಳೆಂದರೆ ಹಾಗೆಯೇ ಸಿಕ್ಕ ಸಿಕ್ಕ ವಸ್ತುಗಳನ್ನು ಬಾಯಿಗೆ ಹಾಕಿಕೊಳ್ಳುತ್ತಾರೆ. ಹೀಗಾಗಿ ಮಕ್ಕಳ ವಿಷಯದಲ್ಲಿ ಹೆತ್ತವರು ಎಷ್ಟು ಜಾಗರೂಕರಾಗಿದ್ದರೂ ಸಾಲುವುದಿಲ್ಲ. ಸಣ್ಣ ಮಕ್ಕಳು ನಾಣ್ಯ, ಬಾಟಲಿ ಮುಚ್ಚಳ ನುಂಗಿರುವ ಘಟನೆಗಳ ಬಗ್ಗೆ ಕೇಳಿರುತ್ತೇವೆ. ಇದೀಗ ಹನ್ನೊಂದು ವರ್ಷದ ಬಾಲಕನೊಬ್ಬನು ಚಿನ್ನದ ಗಟ್ಟಿ (gold bar) ನುಂಗಿದ್ದು, ಶಸ್ತ್ರಚಿಕಿತ್ಸೆ ಮಾಡಿ ಹೊರತೆಗೆದ ಘಟನೆಯು ಚೀನಾ (China) ದ ಜಿಯಾಂಗ್ಸು (Jiangsu)ಪ್ರಾಂತ್ಯದಲ್ಲಿ ನಡೆದಿದೆ. ಹೌದು ಪೋಷಕರು ಬಾಲಕನ ಹೊಟ್ಟೆ ಊದಿಕೊಂಡಿರುವುದನ್ನು ಗಮನಿಸಿದ್ದಾರೆ. ಆದರೆ ಈ ಹುಡುಗನಿಗೆ ಹೊಟ್ಟೆ ನೋವು ಸೇರಿದಂತೆ ಇನ್ಯಾವುದೋ ಲಕ್ಷಣಗಳು ಕಾಣಿಸಿರಲಿಲ್ಲ.

ಈ ಬಾಲಕನ ಹೊಟ್ಟೆ ಊದಿಕೊಂಡಿರುವ ಬಗ್ಗೆ ಅನುಮಾನಗೊಂಡ ಪೋಷಕರು ಸುಝೌ ವಿಶ್ವವಿದ್ಯಾಲಯಕ್ಕೆ ಸಂಯೋಜಿತವಾಗಿರುವ ಮಕ್ಕಳ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಈ ವೇಳೆಯಲ್ಲಿ ವೈದ್ಯರು ಎಕ್ಸ್-ರೇ ಮಾಡಿದ್ದು ಬಾಲಕನ ಹೊಟ್ಟೆಯಲ್ಲಿ ಘನ ಲೋಹದ ವಸ್ತುವೊಂದು ಸಿಲುಕಿಕೊಂಡಿರುವುದು ತಿಳಿದು ಬಂದಿದೆ. ಆ ಬಳಿಕ ಸ್ಕ್ಯಾನ್ ಮಾಡಿ ನೋಡಿದಾಗ 100 ಗ್ರಾಂ ತೂಕದ ಚಿನ್ನದ ಗಟ್ಟಿ ಇರುವುದು ಕಂಡು ವೈದ್ಯರೇ ಶಾಕ್ ಆಗಿದ್ದಾರೆ. ಶಸ್ತ್ರಚಿಕಿತ್ಸೆ ಅಗತ್ಯವಿಲ್ಲದೇ ಈ ಚಿನ್ನದ ಗಟ್ಟಿಯು ಮಲದ ಮೂಲಕ ಹೊರ ಹೋಗಲು ಸಾಧ್ಯವಾಗುವಂತೆ ಔಷಧಿಯನ್ನು ನೀಡಿದ್ದಾರೆ.

ವೈರಲ್​​ ಫೋಟೋ ಇಲ್ಲಿದೆ ನೋಡಿ:

ಇದನ್ನೂ ಓದಿ
ಭಾರತದ ಮೊದಲ ಕಾಫಿ ತೋಟ ತಾಣದ ಕಥೆಯನ್ನು ಹಂಚಿಕೊಂಡ ಆನಂದ್‌ ಮಹೀಂದ್ರಾ
ಕಾಲೇಜು ಪ್ರೊಫೆಸರ್‌ ಎನರ್ಜಿಗೆ ಫಿದಾ ಆದ ವಿದ್ಯಾರ್ಥಿಗಳು
ಬೆಂಗಳೂರಿನಲ್ಲಿ ಆಟೋ ಬುಕ್ ಮಾಡುವ ಟಿಪ್ಸ್ ನೀಡಬೇಕು
ಒಂದೇ ಮಂಟಪದಲ್ಲಿ, ಒಂದೇ ಸಮಯದಲ್ಲಿ ಇಬ್ಬರು ಮಹಿಳೆಯರನ್ನು ಮದುವೆಯಾದ ವ್ಯಕ್ತಿ

ಇದಾದ ಎರಡು ದಿನಗಳ ಬಳಿಕ ಮತ್ತೆ ಸ್ಕ್ಯಾನ್‌ನಲ್ಲಿ ಪರೀಕ್ಷಿಸಿದ ವೇಳೆ ಚಿನ್ನದ ಗಟ್ಟಿಯು ಬಾಲಕನ ಹೊಟ್ಟೆಯಲ್ಲೇ ಇರುವುದು ತಿಳಿದು ಬಂದಿದೆ. ಔಷಧಿಯಿಂದ ಯಾವುದೇ ಪ್ರಯೋಜನವಾಗದ ಕಾರಣ ವೈದ್ಯರು ಶಸ್ತ್ರ ಚಿಕಿತ್ಸೆಗೆ ಮುಂದಾಗಿದ್ದಾರೆ. ಹೌದು, ಹುಡುಗನಿಗೆ ಎಂಡೋಸ್ಕೋಪಿಕ್ ಶಸ್ತ್ರಚಿಕಿತ್ಸೆ ಮಾಡಿ ಹೊಟ್ಟೆಯಲ್ಲಿದ್ದ ಚಿನ್ನದ ಗಟ್ಟಿಯನ್ನು ಯಶಸ್ವಿಯಾಗಿ ಹೊರತೆಗೆಯಲಾಗಿದೆ.

ಇದನ್ನೂ ಓದಿ : ಬೇಸಿಗೆಗೆ ವಿದ್ಯುತ್ ಆಧಾರಿತ ಎಸಿ ಬೇಕಿಲ್ಲ, ಅಗ್ಗದ ಬೆಲೆಯಲ್ಲಿ ಸಿಗುವ ಮಣ್ಣಿನ ಮಡಕೆ ಏರ್ ಕೂಲರ್​​​​​ಗಳೇ ಬೆಸ್ಟ್

ಈ ಶಸ್ತ್ರಚಿಕಿತ್ಸೆಯ ನಂತರ ಬಾಲಕನು ಶೀಘ್ರವೇ ಚೇತರಿಸಿಕೊಂಡಿದ್ದು, ಯಥಾಪ್ರಕಾರ ಊಟ ತಿಂಡಿ ಸೇವಿಸಲು ಪ್ರಾರಂಭಿಸಿದ್ದಾನೆ. ಹುಡುಗನ ಆರೋಗ್ಯದಲ್ಲಿ ಬಹುಬೇಗನೆ ಚೇತರಿಕೆ ಕಂಡಿದ್ದು, ಆರೋಗ್ಯ ಸುಧಾರಿಸಿದೆ ಯಾವುದೇ ಸಮಸ್ಯೆ ಇಲ್ಲ ಎಂದು ಖಚಿತಪಡಿಸಿಕೊಂಡ ವೈದ್ಯರು ಬಾಲಕನನ್ನು ಡಿಸ್ಚಾರ್ಜ್ ಮಾಡಿ ಮನೆಗೆ ಕಳುಹಿಸಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ