15 ನಿಮಿಷದಲ್ಲಿ ನೀವು ಎಷ್ಟು ಹಣವನ್ನು ಎಣಿಸುತ್ತೀರಿ ಅದೆಲ್ಲಾ ನಿಮಗೆಯೇ; ಉದ್ಯೋಗಿಗಳಿಗೆ ಬೋನಸ್‌ ಹಣ ಕೊಟ್ಟ ಕಂಪೆನಿ

ಸಾಮಾನ್ಯವಾಗಿ ಪ್ರತಿಯೊಂದು ಕಂಪೆನಿಗಳಲ್ಲಿ ಉದ್ಯೋಗಿಗಳಿಗೆ ಇಂತಿಷ್ಟು ಬೋನಸ್‌ ಹಣವನ್ನು ನೀಡಲಾಗುತ್ತದೆ. ಆದ್ರೆ ಇಲ್ಲೊಂದು ಕಂಪೆನಿ 15 ನಿಮಿಷ ಟೈಮ್‌, ನಿಮಗೆ ಎಷ್ಟು ಬೇಕಾದರೂ ಹಣ ತೆಗೆದುಕೊಳ್ಳಿ ಎಂದು ವಿಶಿಷ್ಟ ರೀತಿಯಲ್ಲಿ ಬೋನಸ್‌ ಹಣವನ್ನು ಹಂಚಿದ್ದು, ಕಂಪೆನಿಯ ಉದ್ಯೋಗಿಗಳೆಲ್ಲರೂ ಸಿಕ್ಕಿದ್ದೇ ಚಾನ್ಸ್‌ ಎನ್ನುತ್ತಾ 15 ನಿಮಿಷ ಸಮಯದಲ್ಲಿ ಹರಡಿದ್ದ ಸಾಕಷ್ಟು ಹಣ ತೆಗೆದುಕೊಂಡು ಹೋಗಿದ್ದಾರೆ. ಈ ಕುರಿತ ವಿಡಿಯೋವೊಂದು ಇದೀಗ ಸಖತ್‌ ವೈರಲ್‌ ಆಗುತ್ತಿದ್ದು, ನಮಗೆ ಈ ರೀತಿಯ ಅವಕಾಶ ಯಾವಾಗ ಸಿಗುತ್ತೋ ಎಂದು ನೆಟ್ಟಿಗರು ಕಾಮೆಂಟ್ಸ್‌ ಮಾಡಿದ್ದಾರೆ.

15 ನಿಮಿಷದಲ್ಲಿ ನೀವು ಎಷ್ಟು ಹಣವನ್ನು ಎಣಿಸುತ್ತೀರಿ ಅದೆಲ್ಲಾ ನಿಮಗೆಯೇ; ಉದ್ಯೋಗಿಗಳಿಗೆ ಬೋನಸ್‌ ಹಣ ಕೊಟ್ಟ ಕಂಪೆನಿ
ವೈರಲ್​​ ವಿಡಿಯೋ
Edited By:

Updated on: Jan 29, 2025 | 4:37 PM

ಸಾಮಾನ್ಯವಾಗಿ ಹೆಚ್ಚಿನ ಕಂಪನಿಗಳಲ್ಲಿ, ಸರ್ಕಾರಿ ಕಚೇರಿಗಳಲ್ಲಿ ಪ್ರತಿವರ್ಷವೂ ಉದ್ಯೋಗಿಗಳಿಗೆ ಇಂತಿಷ್ಟು ಬೋನಸ್‌ ಹಣವನ್ನು ನೀಡಲಾಗುತ್ತದೆ. ಚೆಕ್‌ ಮೂಲಕವೋ ಅಥವಾ ನೇರವಾಗಿ ಬ್ಯಾಂಕ್‌ ಖಾತೆಗೆ ಈ ಹಣವನ್ನು ಜಮೆ ಮಾಡಲಾಗುತ್ತದೆ. ಆದ್ರೆ ಇಲ್ಲೊಂದು ಕಂಪೆನಿ ಬಾಸ್‌ ತನ್ನ ಭರ್ಜರಿ ಬೋನಸ್‌ ನೀಡಿದ್ದು, 15 ನಿಮಿಷ ಟೈಮ್‌, ನಿಮಗೆ ಎಷ್ಟು ಬೇಕಾದರೂ ಹಣ ತೆಗೆದುಕೊಳ್ಳಿ ಎಂದು ಉದ್ಯೋಗಿಗಳಿಗೆ ಬೇಕಾದಷ್ಟು ಬೋನಸ್‌ ಹಣವನ್ನು ತೆಗೆದುಕೊಳ್ಳುವಂತೆ ಹೇಳಿದ್ದಾರೆ. ಉದ್ಯೋಗಿಗಳು ಸಿಕ್ಕಿದ್ದೇ ಚಾನ್ಸ್‌ ಎನ್ನುತ್ತಾ ಟೇಬಲ್‌ ಮೇಲೆ ಹರಡಿದ್ದ ಸಾಕಷ್ಟು ಹಣ ತೆಗೆದುಕೊಂಡು ಹೋಗಿದ್ದು, ಈ ಕುರಿತ ವಿಡಿಯೋವೊಂದು ಇದೀಗ ಸಖತ್‌ ವೈರಲ್‌ ಆಗುತ್ತಿದೆ. ಈ ದೃಶ್ಯ ಕಂಡು ನಮಗೆ ಈ ರೀತಿಯ ಅವಕಾಶ ಯಾವಾಗ ಸಿಗುತ್ತೋ ಎಂದು ನೆಟ್ಟಿಗರು ಕಾಮೆಂಟ್ಸ್‌ ಮಾಡಿದ್ದಾರೆ.

ಚೀನಾದ ಹೆನಾನ್‌ ಮೈನಿಂಗ್‌ ಕ್ರೇನ್‌ ಕಂ. ಲಿಮಿಟೆಡ್‌ ಕಂಪೆನಿಯ ಬಾಸ್‌ ತಮ್ಮ ಉದ್ಯೋಗಿಗಳಿಗೆ ವಿಶಿಷ್ಟ ರೀತಿಯಲ್ಲಿ ಇಯರ್‌ ಎಂಡ್‌ ಬೋನಸ್‌ ಹಣವನ್ನು ನೀಡಿದ್ದಾರೆ. ಸುಮಾರು 100 ಮಿಲಿಯನ್‌ ಯುವಾನ್‌ ಅಂದ್ರೆ 70 ಕೋಟಿ ರೂ. ಹಣವನ್ನು ಟೇಬಲ್‌ ಮೇಲೆ ಹರಡಿ, ನಂತರ ಅಲ್ಲಿ ಸಾಲಾಗಿ ನೌಕರರನ್ನು ನಿಲ್ಲಿಸಿ 15 ನಿಮಿಷಗಳ ಕಾಲಾವಕಾಶದಲ್ಲಿ ನೀವು ಎಷ್ಟು ಹಣವನ್ನು ಎಣಿಸುತ್ತೀರೋ ಅದೆಲ್ಲಾ ನಿಮಗೆಯೇ ಎಂದು ಹೇಳಿದ್ದಾರೆ. ಉದ್ಯೋಗಿಗಳೆಲ್ಲರೂ ಸಿಕ್ಕಿದ್ದೇ ಚಾನ್ಸ್‌ ಎನ್ನುತ್ತಾ ಬೇಗ ಬೇಗ ಹಣ ಎಣಿಸಿ, ಬೋನಸ್‌ ಹಣವನ್ನು ತಮ್ಮದಾಗಿಸಿಕೊಂಡಿದ್ದಾರೆ.

ವೈರಲ್​​ ವಿಡಿಯೋ ಇಲ್ಲಿದೆ ನೋಡಿ:

mothershipsg ಹೆಸರಿನ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಹಂಚಿಕೊಳ್ಳಲಾದ ಈ ವಿಡಿಯೋದಲ್ಲಿ ಕಂಪೆನಿಯ ಉದ್ಯೋಗಿಗಳು ಟೇಬಲ್‌ ಮೇಲೆ ಹರಡಿದ್ದ ನೋಟುಗಳನ್ನು ಎಣಿಸುತ್ತಿರುವ ದೃಶ್ಯವನ್ನು ಕಾಣಬಹುದು. ಹೀಗೆ 15 ನಿಮಿಷಗಳಲ್ಲಿ ತಮ್ಮ ಕೈಯಿಂದ ಎಷ್ಟು ಸಾಧ್ಯವೋ ಅಷ್ಟು ಹಣವನ್ನು ಎಣಿಸಿ, ಆ ಹಣವನ್ನು ತಮ್ಮದಾಗಿಸಿಕೊಂಡಿದ್ದಾರೆ.

ಇದನ್ನೂ ಓದಿ: ಬಾಟಲ್‌ಗೆ ಕೇವಲ 600 ರೂ; ಹುಲಿಯ ಮೂತ್ರ ಮಾರಾಟ ಮಾಡಿ ಹಣ ಗಳಿಸುತ್ತಿರುವ ಮೃಗಾಲಯ

ಒಂದು ದಿನದ ಹಿಂದೆ ಹಂಚಿಕೊಳ್ಳಲಾದ ಈ ವಿಡಿಯೋ 1 ಮಿಲಿಯನ್‌ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼನನ್ನ ಕಂಪೆನಿ ಹಣ ಅಲ್ಲ, ಹೀಗೆ ಟನ್‌ಗಟ್ಟಲೆ ಕೆಲಸವನ್ನು ಕೊಡುತ್ತೆʼ ಎಂಬ ಕಾಮೆಂಟ್‌ ಬರೆದುಕೊಂಡಿದ್ದಾರೆ. ಮತ್ತೊಬ್ಬ ಬಳಕೆದಾರರು ʼಹೀಗೆ ಸರ್ಕಸ್‌ ಮಾಡುವ ಬದಲಿಗೆ ಆ ಹಣವನ್ನು ಉದ್ಯೋಗಿಗಳ ಬ್ಯಾಂಕ್‌ ಖಾತೆಗೆ ನೇರವಾಗಿ ಜಮೆ ಮಾಡಬಹುದಿತ್ತಲ್ಲವೇʼ ಎಂಬ ಕಾಮೆಂಟ್‌ ಬರೆದುಕೊಂಡಿದ್ದಾರೆ. ಇನ್ನೂ ಅನೇಕರು ಈ ವಿಡಿಯೋ ನೋಡಿ ಫುಲ್‌ ಶಾಕ್‌ ಆಗಿದ್ದಾರೆ.

ವೈರಲ್​​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ