ಬಾಟಲ್‌ಗೆ ಕೇವಲ 600 ರೂ; ಹುಲಿಯ ಮೂತ್ರ ಮಾರಾಟ ಮಾಡಿ ಹಣ ಗಳಿಸುತ್ತಿರುವ ಮೃಗಾಲಯ
ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುವ ಕೆಲವೊಂದು ಸುದ್ದಿಗಳನ್ನು ಕೇಳಿದಾಗ ತಲೆ ಗಿರ್ ಎನ್ನುತ್ತೆ. ಇದೀಗ ಅಂತಹದ್ದೇ ವಿಚಿತ್ರ ಸುದ್ದಿ ಹರಿದಾಡುತ್ತಿದ್ದು, ಚೀನಾದ ಮೃಗಾಲಯವೊಂದು ಹುಲಿ ಮೂತ್ರವನ್ನು ಮಾರಾಟ ಮಾಡಿ ಹಣ ಗಳಿಸುತ್ತಿದೆಯಂತೆ. ಹೌದು ಉಳುಕು, ಸ್ನಾಯು ನೋವು, ಸಂಧಿವಾತಕ್ಕೆ ಔಷಧಿಯೆಂದು ಹೇಳಿ 250 ಎಂ.ಎಲ್ ಹುಲಿ ಮೂತ್ರವನ್ನು ರೂ. 600 ಕ್ಕೆ ಮಾರಾಟ ಮಾಡುತ್ತಿದೆಯಂತೆ. ಈ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಗ್ರಾಸವಾಗಿದೆ.

ಟೆಕ್ನಾಲಜಿಯ ವಿಷಯದಲ್ಲಿ ಎಲ್ಲರನ್ನೂ ಮೀರಿಸುವಂತೆ ಬೆಳೆದು ನಿಂತಿರುವ ಚೀನಾ ತನ್ನ ಆಹಾರ ಪದ್ಧತಿ, ಕೆಲವೊಂದು ವಿಚಿತ್ರ ಸಂಗತಿಗಳ ಮೂಲಕವೇ ಆಗಾಗ್ಗೆ ಸುದ್ದಿಯಲ್ಲಿರುತ್ತದೆ. ಇದೀಗ ಚೀನಾದ ಮೃಗಾಲಯವೊಂದು ಹುಲಿ ಮೂತ್ರ ಮಾರಾಟ ಮಾಡುವ ಮೂಲಕ ಸುದ್ದಿಯಲ್ಲಿದೆ. ಹೌದು, ಚೀನಾದ ಮೃಗಾಲಯವೊಂದು ಹುಲಿ ಮೂತ್ರವನ್ನು ಮಾರಾಟ ಮಾಡಿ ಹಣ ಗಳಿಸುತ್ತಿದೆಯಂತೆ. ಉಳುಕು, ಸ್ನಾಯು ನೋವು, ಸಂಧಿವಾತಕ್ಕೆ ಔಷಧಿಯೆಂದು ಹೇಳಿ 250 ಎಂ.ಎಲ್ ಹುಲಿ ಮೂತ್ರವನ್ನು ರೂ. 600 ಕ್ಕೆ ಮಾರಾಟ ಮಾಡುತ್ತಿದೆಯಂತೆ. ಈ ಸುದ್ದಿ ವೈರಲ್ ಆಗುತ್ತಿದ್ದಂತೆ ತಜ್ಞರು ಹುಲಿ ಮೂತ್ರದಿಂದ ಯಾವುದೇ ಆರೋಗ್ಯ ಪ್ರಯೋಜನಗಳಿಲ್ಲ ಎಂಬುದನ್ನು ಖಚಿತಪಡಿಸಿದ್ದಾರೆ.
ನೈಋತ್ಯ ಚೀನಾದ ಸಿಚುವಾನ್ ಪ್ರಾಂತ್ಯದಲ್ಲಿರುವ ಯಾನ್ ಬಿಫೆಂಗ್ಕ್ಸಿಯಾ ವನ್ಯಜೀವಿ ಮೃಗಾಲಯ 250 ಎಂ.ಎಲ್ ಸೈಬೀರಿಯನ್ ಹುಲಿ ಮೂತ್ರವನ್ನು ಸುಮಾರು 50 ಯುವಾನ್‌ಗೆ ಅಂದರೆ 600 ರೂ. ಗಳಿಗೆ ಮಾರಾಟ ಮಾಡುತ್ತಿದೆ. ಹುಲಿ ಮೂತ್ರ ತುಂಬಿದ ಬಾಟಲಿಗಳ ಫೋಟೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡುವ ಮೂಲಕ ಪ್ರವಾಸಿಯೊಬ್ಬರು ಈ ವಿಷಯವನ್ನು ಬಹಿರಂಗಪಡಿಸಿದ್ದಾರೆ.
ಸೌತ್ ಚೀನಾ ಮಾರ್ನಿಂಗ್ ಪೋಸ್ಟ್ (SCMP) ಪ್ರಕಾರ, “ಚೀನಾದ ಸಿಚುವಾನ್ ಪ್ರಾಂತ್ಯದ ಮೃಗಾಲಯವೊಂದು ಸೈಬೀರಿಯನ್ ಹುಲಿ ಮೂತ್ರವನ್ನು ಬಾಟಲಿಗಳಲ್ಲಿ ಮಾರಾಟ ಮಾಡುತ್ತಿದೆ. ಹುಲಿ ಮೂತ್ರ ಸ್ನಾಯು ನೋವು, ದೀರ್ಘಕಾಲದ ಸಂಧಿವಾತ ಮತ್ತು ಉಳುಕುಗಳಿಂದ ಪರಿಹಾರವನ್ನು ನೀಡುತ್ತದೆ ಮತ್ತು ನೋವಿರುವ ಜಾಗಕ್ಕೆ ಹುಲಿಯ ಮೂತ್ರವನ್ನು ವೈಟ್ ವೈನ್‌ನಲ್ಲಿ ಅದ್ದಿದ ಶುಂಠಿಯ ಸಹಾಯದಿಂದ ಲೇಪಿಸಿ ಎಂದು ಹುಲಿ ಮೂತ್ರ ಬಾಟಲಿಗಳ ಮೇಲೆ ಬರೆಯಲಾಗಿದೆ” ಅಲ್ಲದೆ ಇದನ್ನು ಬೇಕಾದರೆ ಕುಡಿಯಲುಬಹುದು ಎಂದು ಮೃಗಾಲಯದಲ್ಲಿ ಈ ಔಷಧಿಯನ್ನು ತಯಾರಿಸಿದವರು ಹೇಳಿದ್ದಾರಂತೆ.
ಇದನ್ನೂ ಓದಿ: ಮಹಾಕುಂಭಮೇಳದಲ್ಲಿ ಲೈವ್ ರಿಪೋರ್ಟಿಂಗ್ ವೇಳೆ ವರದಿಗಾರನ ಕೈಯಲ್ಲಿದ್ದ ಮೈಕ್ ಎಗರಿಸಿದ ಆಸಾಮಿ; ವಿಡಿಯೋ ವೈರಲ್
ಚೀನಾದ ಮಾಧ್ಯಮಗಳು ಈ ವಿಷಯದ ಬಗ್ಗೆ ವೈದ್ಯಕೀಯ ತಜ್ಞರೊಂದಿಗೆ ಮಾತನಾಡಿದಾಗ, ಅವರು ವಿಭಿನ್ನ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಅದರಲ್ಲಿ ಹಲವರು ಹುಲಿ ಮೂತ್ರವು ಸಾಂಪ್ರದಾಯಿಕ ಔಷಧವಲ್ಲ, ಇದು ಯಾವುದೇ ಸಾಬೀತಾದ ಔಷಧೀಯ ಗುಣವನ್ನು ಹೊಂದಿಲ್ಲ ಎಂದು ಅವರು ಹೇಳಿದ್ದಾರೆ. ಇನ್ನೂ ಕೆಲ ತಜ್ಞರು ಇದು ಪ್ರಯೋಜನಕಾರಿ ಅಲ್ಲ, ಹುಲಿ ಮೂತ್ರ ಮಾರಾಟವನ್ನು ಅಪಾಯಕಾರಿ ಎಂದು ಬಣ್ಣಿಸಿದ್ದಾರೆ.
ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ