ಕಲಿಯುಗದ ಶ್ರವಣ ಕುಮಾರ; ಹೆತ್ತವಳ ಆಸೆ ಈಡೇರಿಸಲು ವೃದ್ಧ ತಾಯಿಯನ್ನು ಬಂಡಿಯಲ್ಲಿ ಕುಂಭಮೇಳಕ್ಕೆ ಕರೆದೊಯ್ದ ಮಗ
ಉತ್ತರ ಪ್ರದೇಶದ ಪ್ರಯಾಗ್ ರಾಜ್‌ನಲ್ಲಿ ಮಹಾ ಕುಂಭಮೇಳ ನಡೆಯುತ್ತಿದ್ದು, ಲಕ್ಷಾಂತರ ಭಕ್ತರು ಜಗತ್ತಿನ ಈ ಅತಿದೊಡ್ಡ ಧಾರ್ಮಿಕ ಕಾರ್ಯದಲ್ಲಿ ಭಾಗವಹಿಸುತ್ತಿದ್ದಾರೆ. ಅದೇ ರೀತಿ ಇಲ್ಲೊಬ್ಬರು ವೃದ್ಧೆ ಕುಂಭಮೇಳದಲ್ಲಿ ಪಾಲ್ಗೊಳ್ಳಬೇಕೆಂಬ ಆಸೆಯನ್ನು ವ್ಯಕ್ತಪಡಿಸಿದ್ದು, ತಾಯಿಯ ಈ ಬಯಕೆಯನ್ನು ಈಡೇರಿಸಲೇಬೇಕೆಂದು ತಾನು ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದರೂ ಮಗ, ವೃದ್ಧ ತಾಯಿಯನ್ನು ಬಂಡಿಯಲ್ಲಿ ಕೂರಿಸಿ, ಕುಂಭಮೇಳಕ್ಕೆ ಕರೆದುಕೊಂಡು ಹೋಗಿದ್ದಾರೆ. ಕಲಿಯುಗದ ಶ್ರವಣ ಕುಮಾರನ ಈ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.
![ಕಲಿಯುಗದ ಶ್ರವಣ ಕುಮಾರ; ಹೆತ್ತವಳ ಆಸೆ ಈಡೇರಿಸಲು ವೃದ್ಧ ತಾಯಿಯನ್ನು ಬಂಡಿಯಲ್ಲಿ ಕುಂಭಮೇಳಕ್ಕೆ ಕರೆದೊಯ್ದ ಮಗ](https://images.tv9kannada.com/wp-content/uploads/2025/01/maha-kumbh-mela.jpg?w=1280)
ಅಂದಿನ ಕಾಲದಲ್ಲಿ ಶ್ರವಣ ಕುಮಾರ ಕಣ್ಣು ಕಾಣದ ತನ್ನ ಹೆತ್ತವರನ್ನು ಹೆಗಲ ಮೇಲೆ ಹೊತ್ತು ತೀರ್ಥಯಾತ್ರೆಗೆ ಕರೆದೊಯ್ಯುವ ಮೂಲಕ ಮಾತೃ ಮತ್ತು ಪಿತೃ ಭಕ್ತಿ ಮೆರೆದಿದ್ದ. ಅದೇ ರೀತಿ ಇಲ್ಲೊಬ್ರು ಆಧುನಿಕ ಶ್ರವಣ ಕುಮಾರ ಹೆತ್ತವಳ ಆಸೆಯನ್ನು ಈಡೇರಿಸಲು ವೃದ್ಧ ತಾಯಿಯನ್ನು ಬಂಡಿಯ ಮೇಲೆ ಕೂರಿಸಿ ಮಹಾ ಕುಂಭಮೇಳಕ್ಕೆ ಕರೆದೊಯದಿದ್ದಾರೆ. ಹೌದು ತಾಯಿಯ ಈ ಬಯಕೆಯನ್ನು ಈಡೇರಿಸಲೇಬೇಕೆಂದು ತಾನು ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದರೂ ಮಗ, ವೃದ್ಧ ತಾಯಿಯನ್ನು ಬಂಡಿಯಲ್ಲಿ ಕೂರಿಸಿ, ಕುಂಭಮೇಳಕ್ಕೆ ಕರೆದುಕೊಂಡು ಹೋಗಿದ್ದಾರೆ. ಕಲಿಯುಗದ ಶ್ರವಣ ಕುಮಾರನ ಈ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.
ಉತ್ತರ ಪ್ರದೇಶದ ಬುಲಂದರ್‌ಶಹರ್‌ನ 65 ವರ್ಷದ ವ್ಯಕ್ತಿಯೊಬ್ಬರು 92 ವರ್ಷ ವಯಸ್ಸಿನ ತನ್ನ ತಾಯಿಯನ್ನು ಬಂಡಿಯ ಮೇಲೆ ಕೂರಿಸಿ ಮಹಾಕುಂಭಮೇಳಕ್ಕೆ ಕರೆದೊಯ್ದಿದ್ದಾರೆ. ತಾನು ಪ್ರಯಾಗ್‌ರಾಜ್‌ನಲ್ಲಿ ನಡೆಯುವ ಮಹಾಕುಂಭಮೇಳದಲ್ಲಿ ಪುಣ್ಯ ಸ್ನಾನವನ್ನು ಮಾಡಬೇಕೆಂದು ತಾಯಿ ಮಗನ ಬಳಿ ಹೇಳಿಕೊಂಡಿದ್ದು, ತಾಯಿಯ ಆಸೆಯನ್ನು ಇಡೇರಿಸಲೇಬೇಕೆಂದು ತಾನು ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದರೂ ಮಗ, ವೃದ್ಧ ತಾಯಿಯನ್ನು ಬಂಡಿಯಲ್ಲಿ ಕೂರಿಸಿ, ಸ್ವತಃ ತಾನೇ ಬಂಡಿಯನ್ನು ಎಳೆದೊಯ್ಯುವ ಮೂಲಕ ಕುಂಭಮೇಳಕ್ಕೆ ಕರೆದುಕೊಂಡು ಹೋಗುತ್ತಿದ್ದಾರೆ. ವರದಿಗಳ ಪ್ರಕಾರ 13 ದಿನಗಳ ಕಾಲ ಪ್ರಯಾಣ ಮಾಡುವ ಮೂಲಕ ಅವರು ಪ್ರಯಾಗ್‌ರಾಜ್‌ಗೆ ತಲುಪಲಿದ್ದಾರೆ.
ವೈರಲ್ ವಿಡಿಯೋ ಇಲ್ಲಿದೆ ನೋಡಿ:
Watch: In Bulandshahr, Uttar Pradesh, A man is walking with a cart, taking his 92-year-old mother to the Maha Kumbh in Prayagraj. They started their journey from Muzaffarnagar, fulfilling her wish to bathe at the Kumbh pic.twitter.com/2IstKkqMXY
— IANS (@ians_india) January 28, 2025
ಈ ಕುರಿತ ವಿಡಿಯೋವನ್ನು ians_india ಹೆಸರಿನ ಎಕ್ಸ್ ಖಾತೆಯಲ್ಲಿ ಈ ಕುರಿತ ವಿಡಿಯೋವನ್ನು ಶೇರ್ ಮಾಡಲಾಗಿದೆ. ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಮಗ ತನ್ನ ವೃದ್ಧ ತಾಯಿಯನ್ನು ಬಂಡಿಯ ಮೇಲೆ ಕೂರಿಸಿ, ಆಕೆಯನ್ನು ಮಹಾಕುಂಭಮೇಳಕ್ಕೆ ಕರೆದುಕೊಂಡು ಹೋಗುತ್ತಿರುವ ದೃಶ್ಯವನ್ನು ಕಾಣಬಹುದು. ಈ ದೃಶ್ಯ ಇದೀಗ ಸಖತ್ ವೈರಲ್ ಆಗುತ್ತಿದ್ದು, ಕಲಿಯುಗದ ಶ್ರವಣ ಕುಮಾರನ ಈ ಮಾತೃ ಪ್ರೇಮವನ್ನು ನೆಟ್ಟಿಗರು ಕೊಂಡಾಡಿದ್ದಾರೆ.
ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:46 pm, Wed, 29 January 25