ಈ ದೇಶದಲ್ಲಿ ಚಾಲಕ ರಹಿತ ಆಟೋನೊಮಸ್ ವಾಹನಗಳ ಬಳಕೆಗೆ ಹೊಸ ಸುರಕ್ಷತಾ ಮಾರ್ಗಸೂಚಿ
ಇತ್ತೀಚಿನ ದಿನಗಳಲ್ಲಿ ಚಾಲಕರಹಿತ ಕಾರುಗಳ ಕುರಿತು ಆಟೋಮೊಬೈಲ್ ಜಗತ್ತಿನಲ್ಲಿ ಭಾರಿ ಚರ್ಚೆ ನಡೆಯುತ್ತಿದೆ. ಈ ನಡುವೆ ಚೀನಾದಲ್ಲಿ ಚಾಲಕ ರಹಿತ ಅಟೋನೊಮಸ್ ವಾಹನಗಳ ಬಳಕೆಯನ್ನು ಹೆಚ್ಚಿಸಲು ಭರದಿಂದ ಸಿದ್ಧತೆ ನಡೆಯುತ್ತಿದ್ದು, ಚಾಲಕ ರಹಿತ ಸಾರ್ವಜನಿಕ ವಾಹನಗಳ ವ್ಯಾಪಕ ಬಳಕೆಗಾಗಿ ಸರಕು ಸಾಗಾಣೆ ವಾಹನಗಳು, ಪ್ರಯಾಣಿಕರು ಮತ್ತು ಟ್ಯಾಕ್ಸಿಗಳು ಸೇರಿದಂತೆ ಎಲ್ಲಾ ಆಟೋನೊಮಸ್ ವಾಹನಗಳಿಗೆ ಅನ್ವಯವಾಗುವಂತೆ ಚೀನಾದ ಸಾರಿಗೆ ಸಚಿವಾಲಯವು ಹೊಸ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ.
ತಂತ್ರಜ್ಞಾನದ ಪ್ರಗತಿಯಿಂದ ತಂತ್ರಜ್ಞಾನ ಕ್ಷೇತ್ರದಲ್ಲಿ ಹೊಸ ಹೊಸ ಆವಿಷ್ಕಾರಗಳು ನಡೆಯುತ್ತಿವೆ. ಅದರಲ್ಲಿ ಒಂದು ಆಟೋನೊಮಸ್ ಕಾರುಗಳು. ಇತ್ತೀಚಿನ ದಿನಗಳಲ್ಲಿ ಈ ಚಾಲಕ ರಹಿತ ಕಾರುಗಳ ಕುರಿತ ಸುದ್ದಿಗಳು ಭಾರಿ ಚರ್ಚೆಯಲ್ಲಿದೆ. ಆಟೋನೊಮಸ್ ವಾಹನಗಳ ಕಾರಣದಿಂದ ಹಲವರು ಉದ್ಯೋಗ ಕಳೆದುಕೊಳ್ಳಬೇಕಾಗುತ್ತದೆ ಎಂದು ಈ ಚಾಲಕ ರಹಿತ ವಾಹನಗಳ ಕುರಿತು ಪರ ವಿರೋಧ ಚರ್ಚೆಗಳು ನಡೆಯುತ್ತಿದೆ. ಈ ನಡುವೆ ಚೀನಾವು ತನ್ನ ದೇಶದಲ್ಲಿ ಆಟೋನೊಮಸ್ ವಾಹನಗಳ ಬಳಕೆಯನ್ನು ಹೆಚ್ಚಿಸಲು ಭರದಿಂದ ಸಿದ್ಧತೆ ನಡೆಸುತ್ತಿದೆ. ಮತ್ತು ಇದರ ಮುಂದುವರಿದ ಭಾಗವಾಗಿ ಚೀನಾ ಸರ್ಕಾರವು ಮಂಗಳವಾರ ಸಾರ್ವಜನಿಕ ಸಾರಿಗೆ ವ್ಯವಸ್ಥೆಯಲ್ಲಿ ಚಾಲಕ ರಹಿತ ವಾಹನಗಳ ಬಳಕೆಗಾಗಿ ಹೊಸ ಸುರಕ್ಷತಾ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. ಚಾಲಕ ರಹಿತ ವಾಹನಗಳ ವ್ಯಾಪಕ ಬಳಕೆಗಾಗಿ ಚೀನಾದ ಸಾರಿಗೆ ಸಚಿವಾಲಯವು ಸಾರ್ವಜನಿಕ ಸಾರಿಗೆ ಮತ್ತು ಸರಕು ಸೇವೆಗಳಲ್ಲಿ ಬಳಸುವ ಚಾಲಕರಹಿತ ವಾಹನಗಳಿಗೆ ಅನ್ವಯವಾಗುವ ಹೊಸ ಸುರಕ್ಷತಾ ಕ್ರಮಗಳನ್ನು ಹೊರಡಿಸಿದೆ.
ಸ್ವಾಯತ್ತ ವಾಹನಗಳಿಗೆ ಮಾರ್ಗಸೂಚಿಗಳು:
ಇದು ಸಾರ್ವಜನಿಕರು ಮತ್ತು ವಾಹನಗಳ ಸುರಕ್ಷತೆಯ ಮೇಲೆ ಬಲವಾದ ಒತ್ತು ನೀಡುವ ಮೂಲಕ ಚಾಲಕರಹಿತ ವಾಹನಗಳ ವ್ಯಾಪಕ ಅನುಷ್ಠಾನಕ್ಕೆ ಸಿದ್ಧತೆ ನಡೆಸಲು ಸರ್ಕಾರ ಕೈಗೊಂಡಿರುವ ಕ್ರಮಗಳಲ್ಲಿ ಒಂದಾಗಿದೆ. ಈ ಮಾರ್ಗಸೂಚಿಗಳು ಚಾಲಕ ರಹಿತ ಟ್ಯಾಕ್ಸಿಗಳು, ಸರಕು ಸಾಗಾಣೆ ವಾಹನಗಳು ಸೇರಿದಂತೆ ಪ್ರಯಾಣಿಕರಿಗೆ ಮತ್ತು ಸಾರ್ವಜನಿಕ ಆಟೋನೊಮಸ್ ವಾಹನಗಳಿಗೆ ಅನ್ವಯಿಸುತ್ತದೆ ಎಂದು ಚೀನಾದ ಸಾರಿಗೆ ಸಚಿವಾಲಯ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ವೈರಲ್ ವಿಡಿಯೋ ಇಲ್ಲಿದೆ ನೋಡಿ:
ಹೊಸ ನಿಯಮಗಳು ಎಲ್ಲಾ ರೀತಿಯ ಚಾಲಕ ರಹಿತ ವಾಹನಗಳಿಗೆ ಅನ್ವಯವಾಗುತ್ತದೆ ಮತ್ತು ಸುರಕ್ಷತೆಯ ದೃಷ್ಟಿಯಿಂದ ಪ್ರತಿಯೊಂದು ಚಾಲಕ ರಹಿತ ವಾಹನದಲ್ಲಿ ಕನಿಷ್ಠ ಒಬ್ಬ ಚಾಲಕ ಅಥವಾ ಭದ್ರತಾ ಸಿಬ್ಬಂದಿ ಕಡ್ಡಾಯವಾಗಿ ಇರಬೇಕು ಎಂದು ಆದೇಶಿಸಿದೆ.
ಇದನ್ನೂ ಓದಿ: ತನ್ನ ನೆಚ್ಚಿನ ಹಾಡನ್ನು ಕೇಳಿದಾಗ ಈ ಶ್ವಾನದ ಪ್ರತಿಕ್ರಿಯೆ ಹೇಗಿತ್ತು ನೋಡಿ
ನಗರ ಸಾರಿಗೆಗಾಗಿ ಚಾಲಕ ರಹಿತ ವಾಹನಗಳನ್ನು ಬಳಸುವ ಸಾರಿಗೆ ಕಂಪೆನಿಗಳು ಅಥವಾ ವಾಹನ ನಿರ್ವಾಹಕರು ಕಟ್ಟುನಿಟ್ಟಾದ ಅರ್ಹತಾ ಕ್ರಮಗಳನ್ನು ಮತ್ತು ಪರವಾನಗಿಯನ್ನು (ಲೈಸನ್ಸ್) ಹೊಂದಿರಬೇಕು ಹಾಗೂ ಸುರಕ್ಷತೆಯ ದೃಷ್ಟಿಯಿಂದ ಪ್ರಯಾಣಿಕರು ಹಾಗೂ ವಾಹನ ನಿರ್ವಾಹಕರು, ಮಾಲೀಕರು ವಿಮೆಯನ್ನು (ಇನ್ಷ್ಸೂರೆನ್ಸ್) ಕೂಡಾ ಮಾಡಿಸಿಕೊಳ್ಳಬೇಕು ಎಂದು ಹೇಳಿದೆ.
2025ರ ವೇಳೆಗೆ ನಗರ ಸಾರಿಗೆ ವ್ಯವಸ್ಥೆಯಲ್ಲಿ ಸಂಪೂರ್ಣವಾಗಿ ಚಾಲಕ ರಹಿತ ವಾಹನಗಳ ಬಳಕೆಯನ್ನು ಜಾರಿಗೊಳಿಸಲು ಮತ್ತು ಹೆಚ್ಚಿನ ಸುರಕ್ಷತಾ ವ್ಯವಸ್ಥೆಯನ್ನು ಸ್ಥಾಪಿಸುವುದು ಈ ಹೊಸ ಮಾರ್ಗಸೂಚಿಯ ಮುಖ್ಯ ಉದ್ದೇಶವಾಗಿದೆ.
ಮತ್ತಷ್ಟು ವೈರಲ್ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: