ಚೀನಾದ ಡನ್ಹ್ಯಾಂಗ್ ನಗರದಲ್ಲಿ ಬೀಸಿರುವ ಮರಳುಗಾಳಿಗೆ ಅಲ್ಲಿಯ ಜನರು ತತ್ತರಿಸಿಹೋಗಿದ್ದಾರೆ. ಗೋಬಿ ಮರುಭೂಮಿಯ ಅಂಚಿನಲ್ಲಿರುವ ಡನ್ಹ್ಯಾಂಗ್ ನಗರದಲ್ಲಿ ಸೋಮವಾರ ಭಾರೀ ಪ್ರಮಾಣದ ಮರಳುಗಾಳಿ ಬೀಸಿದೆ. ಮರಳುಗಾಳಿಯ ಆರ್ಭಟಕ್ಕೆ ಹೆದ್ದಾರಿ ಕಾಣದೇ ವಾಹನ ಸವಾರರು ತೊಂದರೆ ಅನುಭವಿಸುತ್ತಿದ್ದಾರೆ. ಮರಳುಗಾಳಿಯ ಆರ್ಭಟ ಹೇಗಿತ್ತೆಂದರೆ ಸುಮಾರು 100 ಮೀಟರ್ ಎತ್ತರದವರೆಗೂ ಅದು ವ್ಯಾಪಿಸಿತ್ತು ಎಂದು ಡನ್ಹ್ಯಾಂಗ್ನ ನಿವಾಸಿಗಳು ತಿಳಿಸಿದ್ದಾರೆ. ಮರಳುಗಾಳಿ (Sandstorm) ಎಷ್ಟು ದಟ್ಟವಾಗಿತ್ತೆಂದರೆ 5 ಮೀಟರ್ ಆಚೆಗಿನ ಏನೂ ಕಾಣುತ್ತಿರಲಿಲ್ಲ ಎಂದು ಪ್ರತ್ಯಕ್ಷದರ್ಶಿಗಳು ವಿವರಿಸಿದ್ದಾರೆ.
ಸೋಮವಾರ ಮಧ್ಯಾಹ್ನ 3 ಗಂಟೆಯ ಹೊತ್ತಿಗೆ ಮರಳುಗಾಳಿ ಬೀಸಲು ಆರಂಭಿಸಿದೆ. ಅಪಾಯದ ಸುಳಿವು ಬಡಿದ ತಕ್ಷಣ ಎಚ್ಚೆತ್ತ ಸ್ಥಳೀಯ ಪೊಲೀಸರು ಹತ್ತಿರದ ಅಂಗಡಿಗಳನ್ನು ಬಂದ್ ಮಾಡಿಸಿದ್ದಾರೆ. ವಾಹನ ಸವಾರರಿಗೆ ಸ್ವಲ್ಪ ಕಾಲ ಪ್ರಯಾಣವನ್ನು ಮುಂದೂಡುವಂತೆ ವಿನಂತಿ ಮಾಡಿದ್ದಾರೆ.
ಸ್ಥಳೀಯರೋರ್ವರು ಬೃಹತ್ ಮರಳುಗಾಳಿ ಬೀಸುವುದನ್ನು ಚಿತ್ರೀಕರಿಸಿದ್ದು, ಆ ವಿಡಿಯೋವನ್ನು ಇಲ್ಲಿ ನೋಡಬಹುದಾಗಿದೆ. ಮರಳುಗಾಳಿಯಿಂದ ರಕ್ಷಿಸಿಕೊಳ್ಳಲು ನಗರವಾಸಿಗಳು ಕನ್ನಡಕ, ಮಾಸ್ಕ್ ಮುಂತಾದವುಗಳನ್ನು ಬಳಸಿದ್ದರು.
Sandstorm today, #Dunhuang #沙尘暴 #敦煌 pic.twitter.com/XDpyhlW0PV
— Neil Schmid 史瀚文 (@DNeilSchmid) July 25, 2021
ಕೆಲವು ದಿನಗಳ ಹಿಂದಷ್ಟೇ ಅಮೆರಿಕದ ಉತಾಹ್ ನಗರದಲ್ಲಿ ಭಾರಿ ಮರಳುಗಾಳಿಯೊಂದು ಬೀಸಿತ್ತು. ಅದರ ಪರಿಣಾಮವಾಗಿ 8 ಜನರು ಮೃತಪಟ್ಟಿದ್ದರು ಎಂಬುನ್ನು ಇಲ್ಲಿ ಉಲ್ಲೇಖಿಸಬಹುದು. ಈ ವಿಡಿಯೋವನ್ನು ವೀಕ್ಷಿಸಿದರೆ ಮರಳುಗಾಳಿಯು ಎಷ್ಟೆಲ್ಲ ಅನಾಹುತಗಳನ್ನು ಸೃಷ್ಟಿಸಬಹುದು ಎಂಬುದನ್ನು ನೆನೆಸಿಕೊಂಡರೇ ಭಯವಾಗದಿರದು.
ಇದನ್ನೂ ಓದಿ:
Viral Video: ಸೀರೆಯುಟ್ಟು ರೈಲಿನ ಕಿಟಕಿಯಲ್ಲೇ ಒಳನುಗ್ಗಿದ ಮಹಿಳೆ!; ಎಮರ್ಜೆನ್ಸಿ ಎಂಟ್ರಿಯ ವಿಡಿಯೋ ವೈರಲ್
(China sandstorm viral video you must see this)