ಸಾಷ್ಟಾಂಗ ನಮಸ್ಕಾರ ಮಾಡಿ ಬಾಸ್​​​ನ ಸ್ವಾಗತಿಸಿದ ಉದ್ಯೋಗಿಗಳು; ವಿಲಕ್ಷಣ ವಿಡಿಯೋ ವೈರಲ್‌

ಚೀನಾದಲ್ಲಿ ನಡೆಯುವ ಕೆಲವೊಂದು ವಿಲಕ್ಷಣ ಸಂಗತಿಗಳ ಸುದ್ದಿಗಳನ್ನು ಕೇಳಿದಾಗ ತಲೆ ಗಿರ್‌ ಎನ್ನುತ್ತೆ. ಇದೀಗ ಅಂತಹದ್ದೇ ವಿಚಿತ್ರ ಘಟನೆಯೊಂದು ನಡೆದಿದ್ದು, ಉದ್ಯೋಗಿಗಳು ಆಫೀಸ್‌ ಒಳಗೆ ಬಾಸ್‌ ಎಂಟ್ರಿಯಾಗುತ್ತಿದ್ದಂತೆ ಸಾಷ್ಟಾಂಗ ನಮಸ್ಕಾರ ಮಾಡಿ, ಜೀವನ-ಮರಣ ಏನೇ ಆಗಲಿ ನಿಮ್ಮ ಕಾರ್ಯವನ್ನು ನಾವು ಪೂರ್ಣಗೊಳಿಸುತ್ತೇವೆ ಎಂಬ ಘೋಷಣೆಯನ್ನು ಕೂಗುತ್ತಾ ವಿಶಿಷ್ಟ ರೀತಿಯಲ್ಲಿ ಸ್ವಾಗತ ಕೋರಿದ್ದಾರೆ. ಈ ವಿಡಿಯೋ ಸಿಕ್ಕಾಪಟ್ಟೆ ವೈರಲ್‌ ಆಗುತ್ತಿದ್ದು, ಕೆಲಸದ ಸ್ಥಳದಲ್ಲಿರುವ ಇಂತಹ ಉಸಿರುಗಟ್ಟಿಸುವಂತ ವಾತಾವರಣದ ಬಗ್ಗೆ ಭಾರೀ ಚರ್ಚೆಗೆ ಗ್ರಾಸ್ತವಾಗಿದೆ.

ಸಾಷ್ಟಾಂಗ ನಮಸ್ಕಾರ ಮಾಡಿ ಬಾಸ್​​​ನ ಸ್ವಾಗತಿಸಿದ ಉದ್ಯೋಗಿಗಳು; ವಿಲಕ್ಷಣ ವಿಡಿಯೋ ವೈರಲ್‌
ವೈರಲ್​ ವಿಡಿಯೋ
Edited By:

Updated on: Dec 19, 2024 | 6:01 PM

ಕೆಲಸದ ಸ್ಥಳದಲ್ಲಿ ಬಾಸ್‌ ಮತ್ತು ಉದ್ಯೋಗಿಗಳ ನಡುವೆ ಉತ್ತಮ ಸಂಬಂಧವಿರುತ್ತೆ ನಿಜ ಆದರೆ ಯಾವುದೇ ಉದ್ಯೋಗಿಯೂ ಬಾಸ್‌ಗೆ ಅಡಿಯಾಳು ಆಗಿ ಕೆಲಸ ಮಾಡಲು ಬಯಸುವುದಿಲ್ಲ. ಆದ್ರೆ ಇಲ್ಲೊಂದು ಕಂಪೆನಿಯಲ್ಲಿ ಬಾಸ್‌ ಆಫೀಸ್‌ ಒಳಗೆ ಪ್ರವೇಶಿಸುತ್ತಿದ್ದಂತೆ ಉದ್ಯೋಗಿಗಳು ಸಾಷ್ಟಾಂಗ ನಮಸ್ಕಾರ ಮಾಡಿ ಸ್ವಾಗತ ಕೋರಿದ್ದಾರೆ. ಹೌದು ಚೀನಾದ ಕಂಪೆನಿಯೊಂದರಲ್ಲಿ ಉದ್ಯೋಗಿಗಳು ಸಾಷ್ಟಾಂಗ ನಮಸ್ಕಾರ ಮಾಡಿ, ಜೀವನ-ಮರಣ ಏನೇ ಆಗಲಿ ನಿಮ್ಮ ಕಾರ್ಯವನ್ನು ನಾವು ಪೂರ್ಣಗೊಳಿಸುತ್ತೇವೆ ಎಂಬ ಘೋಷಣೆಯನ್ನು ಕೂಗುತ್ತಾ ವಿಶಿಷ್ಟ ರೀತಿಯಲ್ಲಿ ಸ್ವಾಗತ ಕೋರಿದ್ದಾರೆ. ಈ ವಿಡಿಯೋ ಸಿಕ್ಕಾಪಟ್ಟೆ ವೈರಲ್‌ ಆಗುತ್ತಿದ್ದು, ಉದ್ಯೋಗಿಗಳಿಗೆ ಕೆಲಸದ ಸ್ಥಳದಲ್ಲಿರುವ ಇಂತಹ ಉಸಿರುಗಟ್ಟಿಸುವಂತ ವಾತಾವರಣದ ಬಗ್ಗೆ ಭಾರೀ ಆಕ್ರೋಶ ವ್ಯಕ್ತವಾಗಿದೆ.

ಚೀನಾದ ಗುವಾಂಗ್‌ಝೌ ಎಂಬಲ್ಲಿನ ಶಿಕ್ಷಣ ಸಂಸ್ಥೆಯೊಂದರಲ್ಲಿ ಈ ವಿಡಿಯೋವನ್ನು ಚಿತ್ರೀಕರಿಸಲಾಗಿದೆ ಎಂದು ಹೇಳಲಾಗುತ್ತಿದೆ. ಈ ಸಂಸ್ಥೆಯ ನೌಕಕರು ಬಾಸ್‌ ಬರುತ್ತಿದ್ದಂತೆ ನೆಲದ ಮೇಲೆ ಮಲಗಿ ಸಾಷ್ಟಾಂಗ ನಮಸ್ಕಾರ ಮಾಡಿ, ಜೀವನ-ಮರಣ ಏನೇ ಆಗಲಿ ನಿಮ್ಮ ಕಾರ್ಯವನ್ನು ನಾವು ಪೂರ್ಣಗೊಳಿಸುತ್ತೇವೆ ಎಂಬ ಘೋಷಣೆಯನ್ನು ಕೂಗುತ್ತಾ ವಿಶಿಷ್ಟ ರೀತಿಯ ಸ್ವಾಗತ ಕೋರಿದ್ದಾರೆ. ಇಲ್ಲಿನ 20 ಉದ್ಯೋಗಿಗಳು ಹೀಗೆ ಬಾಸ್‌ ಕಾಲಿಗೆ ಬಿದ್ದು ನಮಸ್ಕರಿಸಿದ್ದು, ಇಂತಹ ರೂಲ್ಸ್‌ಗಳನ್ನು ನಿಲ್ಲಿಸಿ ಎಂದು ಈ ಬಗ್ಗೆ ಸೋಷಿಯಲ್‌ ಮೀಡಿಯಾದಲ್ಲಿ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ.

ವೈರಲ್​​ ವಿಡಿಯೋ ಇಲ್ಲಿದೆ ನೋಡಿ:

ಸಂಸ್ಥೆಯ ಕಾನೂನು ಪ್ರತಿನಿಧಿ ಲಿಯು “ಈ ಒಂದು ದೃಶ್ಯ ನಮ್ಮ ಸಂಸ್ಥೆಯ ಮೇಲೆ ಶಾಶ್ವತವಾದ ನಕಾರಾತ್ಮಕ ಪರಿಣಾಮವನ್ನು ಉಂಟುಮಾಡಿದೆ. ಸ್ಥಾಪಕ ತಂಡವು 2020 ರಲ್ಲಿಯೇ ಇಂತಹ ರೂಲ್ಸ್‌ಗಳಿಗೆ ಬ್ರೇಕ್‌ ಹಾಕಿದೆ. ಈಗಂತೂ ಇಂತಹ ಯಾವುದೇ ನೀತಿಗಳು ನಮ್ಮ ಸ್ಥಂಸ್ಥೆಯಲ್ಲಿಲ್ಲ” ಎಂಬ ಹೇಳಿಕೆ ನೀಡಿದ್ದಾರೆ ಎಂದು ಸೌತ್‌ ಚೀನಾ ಮಾರ್ನಿಂಗ್‌ ಪೋಸ್ಟ್‌ ವರದಿ ಮಾಡಿದೆ. ಸ್ಥಳೀಯ ಅಧಿಕಾರಿಗಳು ಕಂಪೆನಿಯ ನೀತಿಗಳು ಮತ್ತು ವಿಡಿಯೋ ತುಣುಕಿನ ಸತ್ಯಾಸತ್ಯತೆ ಎರಡರ ಬಗ್ಗೆಯೂ ತನಿಖೆಯನ್ನು ಪ್ರಾರಂಭಿಸಿದ್ದಾರೆ ಎಂಬುದು ತಿಳಿದು ಬಂದಿದೆ.

ಇದನ್ನೂ ಓದಿ: ವಿಮಾನದೊಳಗೆ ದೈತ್ಯ ಶ್ವಾನವನ್ನು ಕರೆತಂದ ವ್ಯಕ್ತಿ;‌ ಸಹ ಪ್ರಯಾಣಿಕರ ರಿಯಾಕ್ಷನ್‌ ಹೇಗಿತ್ತು ನೋಡಿ…

Ar7513 ಹೆಸರಿನ ಎಕ್ಸ್‌ ಖಾತೆಯಲ್ಲಿ ಹಂಚಿಕೊಳ್ಳಲಾದ ಈ ವಿಡಿಯೋದಲ್ಲಿ ಉದ್ಯೋಗಿಗಳು ಸಾಲಾಗಿ ಮಲಗಿ ಸಾಷ್ಟಾಂಗ ನಮಸ್ಕಾರ ಮಾಡುತ್ತಿರುವಂತಹ ದೃಶ್ಯವನ್ನು ಕಾಣಬಹುದು. ಬಾಸ್‌ ಬರುತ್ತಿದ್ದಂತೆ ಉದ್ಯೋಗಿಗಳೆಲ್ಲರೂ ಜೀವನ-ಮರಣ ಏನೇ ಆಗಲಿ ನಿಮ್ಮ ಕಾರ್ಯವನ್ನು ನಾವು ಪೂರ್ಣಗೊಳಿಸುತ್ತೇವೆ ಎಂಬ ಘೋಷಣೆಯನ್ನು ಕೂಗಿ ಸ್ವಾಗತ ಕೋರಿದ್ದಾರೆ. ಈ ವಿಡಿಯೋ ವೈರಲ್‌ ಆಗುತ್ತಿದ್ದು, ಇಂತಹ ವಾತಾವರಣ ಉದ್ಯೋಗಿಗಳ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ ಎಂದು ಹಲವರು ಅಭಿಪ್ರಾಯ ಪಟ್ಟಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ