ಈ ವೃತ್ತಿ ಜೀವನದಲ್ಲಿ ನಾನು ವಿಫಲಳಾಗಿದ್ದೇನೆ; 8 ಲಕ್ಷ ರೂ. ಖರ್ಚು ಮಾಡಿ ಆರಂಭಿಸಿದ ಯೂಟ್ಯೂಬ್ ವೃತ್ತಿಯನ್ನೇ ತೊರೆದ ವ್ಲಾಗರ್
ಯೂಟ್ಯೂಬ್ ಚಾನೆಲ್‌ಗಳನ್ನು ಆರಂಭಿಸಿ, ಅದರಿಂದ ಸಂಪಾದಿಸಿದ ಹಣದಿಂದಲೇ ಕೋಟ್ಯಾಧಿಪತಿ, ಲಕ್ಷಾಧಿಪತಿಗಳಾದ ಅದೆಷ್ಟೋ ವ್ಲಾಗರ್ಸ್‌ಗಳಿದ್ದಾರೆ. ಆದ್ರೆ ಇಲ್ಲೊಬ್ರು ಮಹಿಳೆ ನಾನು 8 ಲಕ್ಷ ಹೂಡಿಕೆ ಮಾಡಿ ಯೂಟ್ಯೂಬ್ ಚಾನೆಲ್ ಓಪನ್ ಮಾಡಿದ್ರೂ ಇಲ್ಲಿಯವರೆಗೆ ಒಂದು ರೂಪಾಯಿ ಹಣ ಕೂಡ ನನ್ಗೆ ಸಿಗಲಿಲ್ಲ ಎಂದು ಹತಾಶರಾಗಿ ತಮ್ಮ ಯೂಟ್ಯೂಬ್ ಚಾನೆಲ್ ಅನ್ನು ಡಿಲೀಟ್ ಮಾಡಿದ್ದಾರೆ. ಈ ಕುರಿತ ಪೋಸ್ಟ್ ಒಂದು ಇದೀಗ ಸಖತ್ ವೈರಲ್ ಆಗುತ್ತಿದೆ.
ಹಗಲು ರಾತ್ರಿ ಕಷ್ಟ ಪಟ್ಟು ದುಡಿದರೆ ಎಷ್ಟು ಹಣ ಸಂಪಾದಿಸುತ್ತೆವೆಯೋ ಗೊತ್ತಿಲ್ಲ ಆದ್ರೆ ಲೈಕ್ಸ್, ವೀವ್ಸ್‌ಗಳಿಂದ ಸುಲಭವಾಗಿ ಕೈತುಂಬಾ ಸಂಪಾದನೆ ಮಾಡಬಹುದು ಎಂದು ತಮ್ಮ ವೃತ್ತಿ ಜೀವನವನ್ನೇ ತೊರೆದು ಯೂಟ್ಯೂಬ್ ವ್ಲಾಗ್ ಅನ್ನು ವೃತ್ತಿಯನ್ನಾಗಿ ಆರಿಸಿಕೊಂಡವರು ಹಲವರಿದ್ದಾರೆ. ಹೀಗೆ ಯೂಟ್ಯೂಬ್ ವೇದಿಕೆಯನ್ನು ಉತ್ತಮ ರೀತಿಯಲ್ಲಿ ಬಳಸಿಕೊಂಡು ತಿಂಗಳಿಗೆ ಲಕ್ಷಾಂತರ ರೂಪಾಯಿ ಹಣ ಗಳಿಕೆ ಮಾಡುತ್ತಿರುವ ಅನೇಕ ಯುಟ್ಯೂಬರ್‌ಗಳಿದ್ದಾರೆ. ಇದೇ ರೀತಿ ನಾನು ಕೂಡಾ ಲಕ್ಷಾಂತರ ರೂಪಾಯಿ ಸಂಪಾದನೆ ಮಾಡಬಹುದೆಂದು ಮಹಿಳೆಯೊಬ್ಬರು ಬರೋಬ್ಬರಿ 8 ಲಕ್ಷ ರೂಪಾಯಿ ಹೂಡಿಕೆ ಮಾಡಿ ಮೂರು ವರ್ಷದ ಹಿಂದೆ ಕುಕಿಂಗ್ ಚಾನೆಲ್ ಒಂದನ್ನು ಪ್ರಾರಂಭಿಸಿದ್ದರು. ಆದರೆ ಅವರಿಗೆ ಯೂಟ್ಯೂಬ್‌ನಿಂದ ಒಂದು ರೂಪಾಯಿ ಹಣ ಕೂಡಾ ಸಿಗ್ಲಿಲ್ಲ. ಇದರಿಂದ ಹತಾಶರಾಗಿ ಆಕೆ ತಮ್ಮ ಯೂಟ್ಯೂಬ್ ಚಾನೆಲ್ ಅನ್ನು ಡಿಲೀಟ್ ಮಾಡಿದ್ದಾರೆ. ಈ ಕುರಿತ ಪೋಸ್ಟ್ ಒಂದು ಇದೀಗ ಸಖತ್ ವೈರಲ್ ಆಗುತ್ತಿದೆ.
ಯೂಟ್ಯೂಬರ್ ನಳಿನಿ ಉನಗರ್ ಮೂರು ವರ್ಷಗಳ ಹಿಂದೆ ಲೈಟ್ಸ್ , ಕ್ಯಾಮೆರಾ, ಕಿಚನ್ ಸೆಟಪ್ಸ್‌ಗಳಿಗೆ ಬರೋಬ್ಬರಿ 8 ಲಕ್ಷ ರೂಪಾಯಿ ಖರ್ಚು ಮಾಡಿ ಕುಕಿಂಗ್ ಚಾನೆಲ್ ಒಂದನ್ನು ಪ್ರಾರಂಭಿಸುತ್ತಾರೆ. ಆದರೆ ಅವರಿಗೆ ಈವರೆಗೆ ನಿರೀಕ್ಷಿತ ಸಬ್‌ಸ್ಕ್ರೈಬರ್ಸ್ ಆಗಲಿ ಅಥವಾ ವೀವ್ಸ್ ಆಗಲಿ ದೊರೆಯಲಿಲ್ಲ. ಪ್ರಸ್ತುತ 11 ಸಾವಿರ ಸಬ್‌ಸ್ಕ್ರೈಬರ್‌ಗಳನ್ನು ಹೊಂದಿರುವ ಅವರು ಈ ವೃತ್ತಿಯಿಂದ ಒಂದು ರೂಪಾಯಿ ಕೂಡಾ ಆದಾಯ ಬರಲಿಲ್ಲ ಎಂದು ಹತಾಶೆಯಿಂದ 250 ಕ್ಕೂ ಹೆಚ್ಚು ವಿಡಿಯೋಗಳನ್ನು ಡಿಲಿಟ್ ಮಾಡಿ ತಮ್ಮ ಯೂಟ್ಯೂಬ್ ಚಾನೆಲ್ ಅನ್ನೇ ಡಿಲೀಟ್ ಮಾಡಿದ್ದಾರೆ. “ನಾನು ಮೂರು ವರ್ಷಗಳಿಂದ ಯುಟ್ಯೂಬ್ ವೃತ್ತಿಯಲ್ಲಿದ್ದೇನೆ. 250 ಕ್ಕೂ ಹೆಚ್ಚು ವಿಡಿಯೋಗಳನ್ನು ಅಪ್‌ಲೋಡ್ ಮಾಡಿದ್ದೇನೆ ಆದರೆ ನನಗೆ ಹಣವಾಗಲಿ, ನಿರೀಕ್ಷಿತ ಪ್ರತಿಕ್ರಿಯೆಯಾಗಲಿ ಯಾವುದು ಸಿಗಲಿಲ್ಲ ಆದ್ದರಿಂದ ನಾನು ಯೂಟ್ಯೂಬ್ ವೃತ್ತಿಯನ್ನು ತೊರೆಯುತ್ತಿದ್ದೇನೆ” ಎಂದು ಹೇಳಿದ್ದಾರೆ.
ವೈರಲ್ ಪೋಸ್ಟ್ ಇಲ್ಲಿದೆ ನೋಡಿ:
I failed in my YouTube career, so I’m selling all my kitchen accessories and studio equipment. If anyone is interested in buying, please let me know. 😭 pic.twitter.com/3ew6opJjpL
— Nalini Unagar (@NalinisKitchen) December 18, 2024
ನಳಿನಿ ಉನಗರ್ (NaliniKitchen) ಅವರು ತಮ್ಮ ಎಕ್ಸ್ ಖಾತೆಯಲ್ಲಿ ಈ ಕುರಿತು ಅಧೀಕೃತ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದು, “ನಾನು ಯೂಟ್ಯೂಬ್ ವೃತ್ತಿ ಜೀವನದಲ್ಲಿ ವಿಫಲತೆಯನ್ನು ಕಂಡಿದ್ದೇನೆ. ಆದ್ದರಿಂದ ನಾನು ನನ್ನ ಎಲ್ಲಾ ಅಡುಗೆ ಪರಿಕರಗಳು ಮತ್ತು ಸ್ಟುಡಿಯೋ ಉಪಕರಣಗಳನ್ನು ಮಾರಾಟ ಮಾಡುತ್ತಿದ್ದೇನೆ; ಯಾರಾದರೂ ಖರೀದಿಸಲು ಆಸಕ್ತಿಯನ್ನು ಹೊಂದಿದ್ದರೆ ದಯವಿಟ್ಟು ನನ್ನನ್ನು ಸಂಪರ್ಕಿಸಿ” ಎಂಬ ಶೀರ್ಷಿಕೆಯನ್ನು ಬರೆದುಕೊಂಡಿದ್ದಾರೆ.
ಡಿಸೆಂಬರ್ 18 ರಂದು ಹಂಚಿಕೊಳ್ಳಲಾದ ಈ ಪೋಸ್ಟ್ 2.6 ಮಿಲಿಯನ್ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼನಮ್ಮ ಪ್ರಯತ್ನಗಳು ನಿರೀಕ್ಷಿತ ಫಲ ನೀಡಲಿಲ್ಲದಿದ್ದರೆ ಖಂಡಿತವಾಗಿಯೂ ಅದರಿಂದ ದುಃಖವಾಗುತ್ತದೆʼ ಎಂಬ ಕಾಮೆಂಟ್ ಬರೆದುಕೊಂಡಿದ್ದಾರೆ. ಮತ್ತೊಬ್ಬ ಬಳಕೆದಾರರು ʼತುಂಬಾ ಒಳ್ಳೆಯ ನಿರ್ಧಾರ ನಿಮ್ಮದು; ನೀವು ನಳಿನಿ ಕಿಚನ್ ಎಂಬ ರೆಸ್ಟೋರೆಂಟ್ ಓಪನ್ ಮಾಡಿʼ ಎಂಬ ಸಲಹೆ ನೀಡಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ