AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral: ವಿಮಾನದೊಳಗೆ ದೈತ್ಯ ಶ್ವಾನವನ್ನು ಕರೆತಂದ ವ್ಯಕ್ತಿ;‌ ಸಹ ಪ್ರಯಾಣಿಕರ ರಿಯಾಕ್ಷನ್‌ ಹೇಗಿತ್ತು ನೋಡಿ…

ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುವ ಕೆಲವೊಂದು ದೃಶ್ಯಗಳು ನಮ್ಮನ್ನು ಹುಬ್ಬೇರಿಸುವಂತೆ ಮಾಡುತ್ತವೆ. ಇಲ್ಲೊಂದು ಅಂತಹ ವಿಡಿಯೋ ವೈರಲ್‌ ಆಗಿದ್ದು, ವ್ಯಕ್ತಿಯೊಬ್ಬ ನನಗೆ ಎಮೋಷನಲ್‌ ಸಪೋರ್ಟ್‌ ಬೇಕೆಂದು ವಿಮಾನದೊಳಕ್ಕೆ ಸಾಕು ನಾಯಿಯನ್ನು ಕರೆ ತಂದಿದ್ದಾನೆ. ಗ್ರೇಟ್‌ ಡೇನ್‌ ತಳಿಯ ಈ ದೈತ್ಯ ಶ್ವಾನವನ್ನು ಕಂಡು ಸಹ ಪ್ರಯಾಣಿಕರು ಫುಲ್‌ ಶಾಕ್‌ ಆಗಿದ್ದು, ಅಷ್ಟು ದೊಡ್ಡ ನಾಯಿಯನ್ನು ವಿಮಾನದೊಳಕ್ಕೆ ಬಿಡಬಾರದಿತ್ತು ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ.

Viral: ವಿಮಾನದೊಳಗೆ ದೈತ್ಯ ಶ್ವಾನವನ್ನು ಕರೆತಂದ ವ್ಯಕ್ತಿ;‌ ಸಹ ಪ್ರಯಾಣಿಕರ ರಿಯಾಕ್ಷನ್‌ ಹೇಗಿತ್ತು ನೋಡಿ…
ವೈರಲ್​​ ವಿಡಿಯೋ
ಮಾಲಾಶ್ರೀ ಅಂಚನ್​
| Edited By: |

Updated on: Dec 19, 2024 | 4:29 PM

Share

ವಿಮಾನದಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ಯಾವುದೇ ರೀತಿಯಲ್ಲಿ ತೊಂದರೆಯಾಗಬಾರದು ಎಂಬ ಕಾರಣಕ್ಕೆ ಯಾರಾದರೂ ಪ್ರಯಾಣಿಕರೊಂದಿಗೆ ಸಾಕು ಪ್ರಾಣಿಗಳು ಕೂಡಾ ಪ್ರಯಾಣಿಸುತ್ತಿದ್ದರೆ ಅವುಗಳನ್ನು ಕಾರ್ಗೋ ಕಂಪಾರ್ಟ್‌ಮೆಂಟ್‌ನಲ್ಲಿ ಇರಿಸಲಾಗುತ್ತದೆ. ಇನ್ನೂ ಕಡಿಮೆ ತೂಕ ಹೊಂದಿರುವ ಸಾಕು ಪ್ರಾಣಿಗಳಿಗೆ ಕ್ಯಾಬಿನ್‌ನಲ್ಲಿ ಪ್ರಯಾಣಿಸುವಂತಹ ಅವಕಾಶವನ್ನು ಕೂಡಾ ಕೆಲವು ವಿಮಾನಯಾನ ಸಂಸ್ಥೆಗಳು ನೀಡಿವೆ. ಆದ್ರೆ ಇಲ್ಲೊಬ್ಬ ವ್ಯಕ್ತಿ ನನಗೆ ಇಮೋಷನಲ್‌ ಸಪೋರ್ಟ್‌ ಬೇಕೆಂದು ದೈತ್ಯ ಗಾತ್ರದ ಗ್ರೇಟ್‌ ಡೇನ್‌ ತಳಿ ನಾಯಿಯನ್ನೇ ವಿಮಾನದೊಳಕ್ಕೆ ಕರೆ ತಂದಿದ್ದಾನೆ. ಈ ದೈತ್ಯ ಸಾಕು ನಾಯಿಯನ್ನು ನೋಡಿ ವಿಮಾನದಲ್ಲಿದ್ದ ಪ್ರಯಾಣಿಕರು ಫುಲ್‌ ಶಾಕ್‌ ಆಗಿದ್ದಾರೆ. ಈ ವಿಡಿಯೋ ಸಿಕ್ಕಾಪಟ್ಟೆ ವೈರಲ್‌ ಆಗುತ್ತಿದ್ದು, ಅಷ್ಟು ದೊಡ್ಡ ಗಾತ್ರದ ನಾಯಿಯನ್ನು ವಿಮಾನದೊಳಕ್ಕೆ ಬಿಡಬಾರದಿತ್ತು ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ.

ಗ್ರೇಟ್‌ ಡೇನ್‌ ತಳಿ ಶ್ವಾನಗಳು ಸುಮಾರು 50 ರಿಂದ 82 ಕೆಜಿಗಳಷ್ಟು ತೂಕವನ್ನು ಹೊಂದಿರುತ್ತವೆ. ಇಂತಹ ದೈತ್ಯ ಶ್ವಾನವನ್ನೇ ಪ್ರಯಾಣಿಕನೊಬ್ಬ ನನಗೆ ಇಮೋಷನ್‌ ಸಪೋರ್ಟ್‌ ಬೇಕೆಂದು ವಿಮಾನದೊಳಕ್ಕೆ ಕರೆ ತಂದಿದ್ದಾನೆ. ಈ ವಿಡಿಯೋವನ್ನು clearpath_coach ಹೆಸರಿನ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ವೈರಲ್‌ ವಿಡಿಯೋದಲ್ಲಿ ಪ್ರಯಾಣಿಕನೊಬ್ಬ ಕಪ್ಪು ಬಣ್ಣದ ಗೇಟ್‌ ಡೇನ್‌ ತಳಿಯ ದೈತ್ಯ ಶ್ವಾನವನ್ನು ಕ್ಯಾಬಿನ್‌ ಒಳಕ್ಕೆ ತರೆತರುವಂತಹ ದೃಶ್ಯವನ್ನು ಕಾಣಬಹುದು. ಈ ದೈತ್ಯ ಗಾತ್ರದ ನಾಯಿಯನ್ನು ಕಂಡು ಸಹ ಪ್ರಯಾಣಿಕರು ಮಾತ್ರವಲ್ಲದೆ ಕ್ಯಾಬಿನ್‌ ಸಿಬ್ಬಂದಿಯೂ ಕೂಡಾ ಬೆಚ್ಚಿ ಬಿದ್ದಿದ್ದಾರೆ.

ವೈರಲ್​ ವಿಡಿಯೋ ಇಲ್ಲಿದೆ ನೋಡಿ:

ಐದು ದಿನಗಳ ಹಿಂದೆ ಹಂಚಿಕೊಳ್ಳಲಾದ ಈ ವಿಡಿಯೋ 6.6 ಮಿಲಿಯನ್‌ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼನನಗೂ ನಾಯಿಗಳೆಂದರೆ ಇಷ್ಟ ಆದ್ರೆ ಇಂತಹ ದೈತ್ಯ ಶ್ವಾನಗಳನ್ನು ವಿಮಾನದೊಳಕ್ಕೆ ಕರೆ ತರುವುದು ಸರಿಯಲ್ಲʼ ಎಂದು ಹೇಳಿದ್ದಾರೆ. ಇನ್ನೊಬ್ಬ ಬಳಕೆದಾರರು ʼನಾನೇನಾದರೂ ಆ ವಿಮಾನದಲ್ಲಿದ್ದರೆ ಮನುಷ್ಯರ ಬದಲಿಗೆ ಆ ನಾಯಿಯ ಪಕ್ಕವೇ ಕೂರುತ್ತಿದ್ದೆʼ ಎಂಬ ಕಾಮೆಂಟ್‌ ಬರೆದುಕೊಂಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ