Viral Video : ನೂಡಲ್ಸ್! ಯಾರಿಗೆ ತಾನೆ ಇಷ್ಟವಿಲ್ಲ. ಪುಟ್ಟಮಕ್ಕಳಿಂದ ಹಿಡಿದು ಮುಪ್ಪಾನುಮುದುಕರವರೆಗೂ ಬಾಯಲ್ಲಿ ನೀರೂರುತ್ತದೆ. ನೂಡಲ್ಸ್ ಅನ್ನು ಹೇಗೆ ತಯಾರಿಸಲಾಗುತ್ತದೆ ಎಂದು ನಿಮಗೆ ತಿಳಿದಿದೆಯೇ? ಚೀನಾದಲ್ಲಿ ಸಾಂಪ್ರದಾಯಿಕ ಶೈಲಿಯಲ್ಲಿ ನೂಡಲ್ಸ್ ಹೇಗೆ ತಯಾರಿಸಲಾಗುತ್ತದೆ ಎಂಬ ವಿಡಿಯೋ ಇದೀಗ ವೈರಲ್ ಆಗಿದೆ. ಈ ವಿಡಿಯೋ ನೋಡುತ್ತಿದ್ದಂತೆ ನೀವೀಗ ಅಡುಗೆಮನೆಗೆ ಹೋಗಿ ನೂಡಲ್ಸ್ ಮಾಡಿಕೊಂಡು ತಿಂದೇಬಿಡುವಿರೋ ಏನೋ.
Historians discuss whether Italians invented noodles and brought them to China. Or it was vice versa?
ಇದನ್ನೂ ಓದಿTraditional noodles in Shaanxi, China. Originated in the Tang Dynasty.???@TripInChina
— Erik Solheim (@ErikSolheim) December 4, 2022
‘ಈ ನೂಡಲ್ಸ್ ಅನ್ನು ಮೊದಲು ಯಾರು ಕಂಡುಹಿಡಿದರು? ಇಟಾಲಿಯನ್ನರು ಕಂಡುಹಿಡಿದು ನಂತರ ಅದು ಚೀನಾಕ್ಕೆ ಬಂದಿತೆ? ಅಥವಾ ಚೀನಾದಿಂದ ಇಟಲಿಗೆ ಬಂದಿತೆ? ಎಂದು ಇತಿಹಾಸಕಾರರು ಈ ಬಗ್ಗೆ ಚರ್ಚೆ ಮಾಡುತ್ತಲೇ ಇರುತ್ತಾರೆ. ಆದರೆ ಇಲ್ಲಿ ನೋಡಿ ಚೀನಾದ ಶಾಂಕ್ಸಿಯ ಟ್ಯಾಂಗ್ ರಾಜವಂಶದ ಆಳ್ವಿಕೆಯಲ್ಲಿ ಬೆಳಕಿಗೆ ಬಂದಿರುವ ಸಾಂಪ್ರದಾಯಿಕ ನೂಡಲ್ಸ್ ತಯಾರಿಕೆ ಇಲ್ಲಿದೆ’ ಎಂಬ ಒಕ್ಕಣೆ ಈ ವಿಡಿಯೋಗಿದೆ.
ಹಿಟ್ಟನ್ನು ಸಣ್ಣ ಎಳೆಗಳಾಗಿ ಪರಿವರ್ತಿಸುವುದು, ಎಳೆಗಳನ್ನು ಹತ್ತು ಹನ್ನೆರಡು ಅಡಿಗಳಷ್ಟು ಉದ್ದ ಎಳೆಗಳನ್ನಾಗಿಸುವುದು, ಒಣಗಿಸುವುದು ಮತ್ತು ಸಣ್ಣಸಣ್ಣ ತುಂಡುಗಳನ್ನಾಗಿಸುವುದು ಬಹಳ ಮಜವಾಗಿದೆಯಲ್ಲ ಇದೆಲ್ಲ ನೋಡಲು? ಈ ವಿಡಿಯೋ ಅನ್ನು ಈತನಕ 20,000ಕ್ಕಿಂತಲೂ ಹೆಚ್ಚು ಜನರು ನೋಡಿದ್ದಾರೆ. 300ಕ್ಕೂ ಹೆಚ್ಚು ಜನ ಈ ವಿಡಿಯೋ ಇಷ್ಟಪಟ್ಟಿದ್ದಾರೆ. ಅನೇಕರು ನೂಡಲ್ಸ್ನ ಮೂಲದ ಬಗ್ಗೆ ಚರ್ಚಿಸಿದ್ದಾರೆ.
ಇದನ್ನೂ ನೋಡಿ : ಜಗತ್ತಿನ ಅತೀ ಎತ್ತರದ ಮನುಷ್ಯನ ಚಿತ್ರಗಳು ಮತ್ತೆ ಹರಿದಾಡಿದಾಗ
ಟ್ಯಾಂಗ್ ರಾಜವಂಶಸ್ಥರು ಮಧ್ಯ ಏಷ್ಯಾದೊಂದಿಗೆ ಸಂಪರ್ಕವನ್ನು ಹೊಂದಿದ್ದರು. ಆಹಾರ ಉತ್ಪಾದನೆಯ ಮೇಲೆ ಇದು ಪರಸ್ಪರ ಪ್ರಭಾವ ಬೀರಿದೆ ಎಂದಿದ್ದಾರೆ ಒಬ್ಬರು. ಇಟಲಿಯ ಮಾರ್ಕೋ ಪೋಲೋ ಚೀನಾದಲ್ಲಿ ಸೃಷ್ಟಿಯಾದ ಈ ನೂಡಲ್ಸ್ ಅನ್ನು ಇಟಲಿಗೆ ಪರಿಚಯಿಸಿದರು ಎಂದಿದ್ದಾರೆ ಮತ್ತೊಬ್ಬರು. ಚೀನಾದ ಪ್ರತೀ ಪ್ರಾಂತ್ಯವೂ ಬೇರೆಬೇರೆ ರೀತಿಯಲ್ಲಿ ಸಾಂಪ್ರದಾಯಿಕ ನೂಡಲ್ಸ್ ತಯಾರಿಕೆ ವಿಧಾನವನ್ನು ಅಳವಡಿಸಿಕೊಂಡಿದೆ. ಯಂತ್ರದ ಮೂಲಕ ತಯಾರಾಗುವ ನೂಡಲ್ಸ್ಗಿಂತ ಇವು ರುಚಿಯಾಗಿರುತ್ತವೆ ಎಂದು ಮಗದೊಬ್ಬರು ಹೇಳಿದ್ದಾರೆ.
ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?
ಮತ್ತಷ್ಟು ವೈರಲ್ ವಿಡಿಯೋಗಳಿಗಾಗಿ ಕ್ಲಿಕ್ ಮಾಡಿ
Published On - 2:55 pm, Wed, 7 December 22