Viral Video : ಕಳ್ಳಿ ಬಂದ್ಲು ಕಳ್ಳಿ! ಅಲಂಕಾರಿಕ ಗಿಡ ಕದಿಯೋಕೆ ಹೋದಳು, ಮುಂದೇನಾಯಿತು?

Steal : ಆಧುನಿಕ ಕಳ್ಳ-ಕಳ್ಳಿಯರೇ ದಯವಿಟ್ಟು ಗಮನಿಸಿ, ನೀವು ಕಳ್ಳತನದ ಕೌಶಲವನ್ನಾದರೂ ವೃದ್ಧಿಸಿಕೊಳ್ಳಿ ಅಥವಾ ಈ ವೃತ್ತಿಯಿಂದ ನಿವೃತ್ತಿಯನ್ನಾದರೂ ಪಡೆಯಿರಿ. ಹೀಗೆಲ್ಲ ಮಾಡಿ ಚೋರವೃತ್ತಿಯ ಘನತೆಗೆ ಧಕ್ಕೆ ತರದಿರಿ!

Viral Video : ಕಳ್ಳಿ ಬಂದ್ಲು ಕಳ್ಳಿ! ಅಲಂಕಾರಿಕ ಗಿಡ ಕದಿಯೋಕೆ ಹೋದಳು, ಮುಂದೇನಾಯಿತು?
ಸಸ್ಯಕುಂಡ ಕಳ್ಳತನ ಮಾಡುತ್ತಿರುವ ಹುಡುಗಿ
Updated By: ಶ್ರೀದೇವಿ ಕಳಸದ

Updated on: Sep 13, 2022 | 2:31 PM

Viral Video : ಮನೆಗಳ್ಳರು, ಮಕ್ಕಳ ಕಳ್ಳರು, ಮೊಬೈಲ್​ ಕಳ್ಳರು, ಸರಗಳ್ಳರು, ಪಾಕೆಟ್​ಕಳ್ಳರು ಹೀಗೆ ಥರಾವರಿ ಕಳ್ಳರ ಸಂತತಿಗೆ ಗಿಡಕಳ್ಳಿಯೊಬ್ಬಳು ಸೇರ್ಪಡೆಯಾಗಿದ್ದಾಳೆ. ಟೂ ವ್ಹೀಲರ್ ಮೇಲೆ ಬರುವ ಈ ಯುವತಿ, ಅತ್ತಿತ್ತ ನೋಡಿದವಳೇ ರಸ್ತೆ ಬದಿಗಿದ್ದ ಅಲಂಕಾರಿಕ ಗಿಡದ ಕುಂಡಕ್ಕೆ ಕೈಹಾಕಲು ನೋಡುತ್ತಾಳೆ. ದುರಾದೃಷ್ಟಕ್ಕೆ ಕುಂಡವನ್ನು ಎತ್ತಿಕೊಳ್ಳಲು ಆಕೆಗೆ ಸಾಧ್ಯವಾಗದೆ, ಟೂ ವ್ಹೀಲರ್​ ಮುಂದೆ ಚಲಿಸುತ್ತದೆ. ಆಗ ಬ್ಯಾಲೆನ್ಸ್​ ತಪ್ಪಿಬಿಡುತ್ತದೆ. ತಾರಾಮಾರಾ ಗಾಡಿಗಳ ಓಡಾಟ ಬೇರೆ. ಮುಂದೇನಾಗುತ್ತದೆ?

 

ಇದನ್ನೂ ಓದಿ
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಮುಂದೇನಾಗುತ್ತದೆ, ಬ್ಯಾಲೆನ್ಸ್​ ತಪ್ಪಿದಾಗ? ನೋಡಿದಿರಲ್ಲ. ಎಂಥ ಕ್ಷುಲ್ಲಕ ಅಲ್ಲವಾ ಇದು, ಬೇಕಿತ್ತಾ ಇದೆಲ್ಲ? ಒಂದು ಸಸ್ಯಕುಂಡ ಕದಿಯಲು ಹೋಗಿ ಇಡೀ ಜಗತ್ತಿಗೆ ತನ್ನನ್ನು ತಾನು…

ಇನ್​ಸ್ಟಾಗ್ರಾಂನ ಘಂಟಾ ಎಂಬ ಮೀಮ್​ ಪೇಜ್​ನಲ್ಲಿ ಈ ವಿಡಿಯೋ ಪೋಸ್ಟ್ ಮಾಡಲಾಗಿದೆ. ಈತನಕ 2.2 ಮಿಲಿಯನ್​ ವೀಕ್ಷಕರನ್ನು ಇದು ಸೆಳೆದಿದೆ. 63 ಸಾವಿರಕ್ಕೂ ಹೆಚ್ಚು ಪ್ರತಿಕ್ರಿಯೆಗಳು ಲಭಿಸಿವೆ. ‘ಯಕ್ಕೋ ಕದಿಯೋದು ಪಾಪ, ಅದಕ್ಕೆ ನೀ ಹಿಂಗ್​ ಬಿದ್ದಿದೀಯಾ’ ಎಂದು ಒಬ್ಬರು ಬುದ್ಧಿ ಹೇಳಿದ್ದಾರೆ. ‘ನನ್ನ ಅಮ್ಮ ಕೂಡ ಹೀಗೇನೇ, ತನಗೆ ಇಷ್ಟವಾದ ಗಿಡವನ್ನು ಕದ್ದುಬಿಡುತ್ತಾಳೆ’ ಎಂದು ಮತ್ತೊಬ್ಬರು ಸತ್ಯ ಹಂಚಿಕೊಂಡಿದ್ದಾರೆ. ‘ಹೀಗೆಲ್ಲ ಕಳ್ಳತನ ಮಾಡಿದರೆ ನೀನು ಕಳ್ಳಿಯಾಗಲು ಸಾಧ್ಯವಿಲ್ಲ’ ಎಂದು ಮಗದೊಬ್ಬರು ಕಳ್ಳತನದ ಕೌಶಲದ ಬಗ್ಗೆ ತಮಾಷೆ ಮಾಡಿದ್ಧಾರೆ. ಅಂತೂ ನೆಟ್ಟಿಗರು ಈ ವಿಡಿಯೋವನ್ನು ಮನಬಂದಂತೆ ಪ್ರತಿಕ್ರಿಯಿಸಿ ಮಜಾ ತೆಗೆದುಕೊಂಡಿದ್ದಾರೆ.

ಕ್ಯಾಮೆರಾ ಕಣ್ಣುಗಳು ಈಗ ಎಲ್ಲೆಡೆಯೂ ಹಿಂಬಾಲಿಸುತ್ತಿರುತ್ತವೆ ಎನ್ನುವ ಖಬರು ಬೇಡವೆ ಈ ಆಧುನಿಕ ಕಳ್ಳ-ಕಳ್ಳಿಯರಿಗೆ? ಛೆ ನಿಮ್ಮಿಂದ ಈ ವೃತ್ತಿಗೇ ಅಪಮಾನ!?

ಮತ್ತಷ್ಟು ವೈರಲ್​ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 2:18 pm, Tue, 13 September 22