Viral News: ದೈತ್ಯಾಕಾರದ ಕೋಬ್ರಾ ಮನೆಗೆ ನುಗ್ಗಲು ಸುಳಿದಾಟ; ಮನೆಯವರಿಗೆ ಕಾವಲಾಗಿ ನಿಂತಿತು ಮುದ್ದಿನ ಬೆಕ್ಕು

ದೈತ್ಯಾಕಾರದ ನಾಗರ ಹಾವು ಮನೆಯನ್ನು ಪ್ರವೇಶಿಸುವುದಕ್ಕೆ ಹೊಂಚು ಹಾಕಿತ್ತು. ಆದರೆ ಮನೆಯವರ ಕಾವಲಿಗಾಗಿ ಬಾಗಿಲ ಬಳಿಯಲ್ಲಿಯೇ ನಿಂತಿದೆ ಸಾಕಿದ ಮುದ್ದಿನ ಬೆಕ್ಕು.

Viral News: ದೈತ್ಯಾಕಾರದ ಕೋಬ್ರಾ ಮನೆಗೆ ನುಗ್ಗಲು ಸುಳಿದಾಟ; ಮನೆಯವರಿಗೆ ಕಾವಲಾಗಿ ನಿಂತಿತು ಮುದ್ದಿನ ಬೆಕ್ಕು
ದೈತ್ಯಾಕಾರದ ಕೋಬ್ರಾ ಮನೆಗೆ ನುಗ್ಗಲು ಸುಳಿದಾಟ
Edited By:

Updated on: Jul 22, 2021 | 12:27 PM

ಸಾಕು ಪ್ರಾಣಿಗಳು ನಮ್ಮನ್ನು ಎಷ್ಟು ಜಾಗರೂಕತೆಯಿಂದ ಕಾಯುತ್ತವೆ ಎಂಬುದಕ್ಕೆ ಸಾಕ್ಷಿ ಎಂಬಂತೆ ಇಲ್ಲೊಂದು ಘಟನೆ ನಡೆದಿದೆ. ಅಪಾಯದ ಸಂದರ್ಭದಲ್ಲಿ ನಾಯಿ ಕಾವಲಾಗಿ ನಿಂತಿರುವ ಘಟನೆಯನ್ನು ಕೇಳಿಯೇ ಇರ್ತೀರಿ ಜತೆಗೆ ನಿಮ್ಮ ಮನೆಯಲ್ಲಿಯೂ ಅಂತಹ ಘಟನೆಗಳು ನಡೆದಿರಬಹುದು. ಆದರೆ ಇಲ್ಲಿರುವ ಬೆಕ್ಕು ಮನೆಯವರ ರಕ್ಷಣೆಗಾಗಿ ನಾಗರ ಹಾವನ್ನೇ ಎದುರಿಸುತ್ತಿದೆ. ಘಟನೆ ಇದೀಗ ಭಾರೀ ಸುದ್ದಿಯಲ್ಲಿದೆ.

ಒಡಿಶಾದ ಮನೆಯೊಂದರಲ್ಲಿ 1.5 ವರ್ಷದಿಂದ ಬೆಕ್ಕು ವಾಸವಾಗಿದೆ. ಮನೆಯ ಸದಸ್ಯರೂ ಕೂಡಾ ಅಷ್ಟೇ ಕಾಳಜಿಯಿಂದ ಬೆಕ್ಕನ್ನು ನೋಡಿಕೊಳ್ಳುತ್ತಿದ್ದಾರೆ. ಇದ್ದಕ್ಕಿದ್ದಂತೆಯೇ ಒಂದು ದಿನ ತಿಂಡಿ ತಿನ್ನುತ್ತಿದ್ದ ಬೆಕ್ಕು ಕೂಗುತ್ತಾ ಓಡೋಡಿ ಮನೆಯ ಹಿತ್ತಲಿನ ಬಾಗಿಲಿಗೆ ಹೋಗಿದೆ. ಸಂಶಯದಿಂದ ಮನೆಯ ಮಾಲೀಕ ಬೆಕ್ಕಿನ ಹಿಂದೆಯೇ ಹಿಂಬಾಲಿಸಿದ್ದಾರೆ. ದೈತ್ಯಾಕಾರದ ನಾಗರ ಹಾವು ಮನೆಯನ್ನು ಪ್ರವೇಶಿಸುವುದಕ್ಕೆ ಹೊಂಚು ಹಾಕಿತ್ತು. ಆದರೆ ಮನೆಯವರ ಕಾವಲಾಗಿ ಬಾಗಿಲ ಬಳಿಯಲ್ಲಿಯೇ ನಿಂತಿದೆ ಸಾಕಿದ ಮುದ್ದಿನ ಬೆಕ್ಕು.

ಮನೆಯವರು ಹಾವನ್ನು ನೋಡಿ ಹಾವು ಹಿಡಿಯುವುದಕ್ಕೆ ದೂರವಾಣಿ ಕರೆ ಮಾಡಿದ್ದಾರೆ. ಸಿಬ್ಬಂದಿ ಮನೆಗೆ ಪ್ರವೇಶಿಸುವವರೆಗೂ ಮುದ್ದಿನ ಬೆಕ್ಕು ಮನೆಯ ಕಾವಲಾಗಿ ನಿಂತಿದೆ. ಸಿಬ್ಬಂದಿ ಮನೆಗೆ ತಲುಪಲು ಸುಮಾರು ಅರ್ಥ ಗಂಟೆ ಸಮಯ ಹಿಡಿಯಿತು. ಅಲ್ಲಿಯವರೆಗೂ ಬೆಕ್ಕು ಬಾಗಿಲಲ್ಲೇ ಕುಳಿತು ಹಾವಿನ ಚಲನೆಯನ್ನು ನೋಡುತ್ತಾ ಮನೆಯವರ ರಕ್ಷಣೆಗೆ ನಿಂತಿದೆ.

ಇದನ್ನೂ ಓದಿ:

Viral Photo: ನಾಗರಹಾವನ್ನು ತಿನ್ನುತ್ತಿರುವ ಕಾಳಿಂಗ ಸರ್ಪ; ಈ ಫೋಟೋವನ್ನು ನೀವೂ ನೋಡಲೇಬೇಕು..!

Viral Video: ಆಶ್ಚರ್ಯ.. ಬರೋಬ್ಬರಿ 10 ಕೋಳಿ ಮೊಟ್ಟೆಗಳನ್ನು ಬಾಯಿಂದ ಹೊರ ಹಾಕುತ್ತಿದೆ ನಾಗರಹಾವು! ವಿಡಿಯೋ ನೋಡಿ