Viral Video: ಆಗಸದಲ್ಲಿ ಹಾರುತ್ತಿದ್ದ ವಿಮಾನದೊಳಗೆ ಹಾವು ಪ್ರತ್ಯಕ್ಷ; ಶಾಕಿಂಗ್ ವಿಡಿಯೋ ಇಲ್ಲಿದೆ

ಪ್ರಯಾಣಿಕರ ಲಗೇಜ್ ಬ್ಯಾಗ್​ನಿಂದ ತಪ್ಪಿಸಿಕೊಂಡು ವಿಮಾನದೊಳಗೆ ಬಂದಿದ್ದ ಹಾವನ್ನು ನೋಡುತ್ತಿದ್ದಂತೆ ವಿಮಾನದ ಸಿಬ್ಬಂದಿ ಆತಂಕಗೊಂಡರು. ಕಮರ್ಷಿಯಲ್ ವಿಮಾನದ ಪೈಲಟ್ ಈ ವಿಡಿಯೋವನ್ನು ಶೇರ್ ಮಾಡಿದ್ದಾರೆ.

Viral Video: ಆಗಸದಲ್ಲಿ ಹಾರುತ್ತಿದ್ದ ವಿಮಾನದೊಳಗೆ ಹಾವು ಪ್ರತ್ಯಕ್ಷ; ಶಾಕಿಂಗ್ ವಿಡಿಯೋ ಇಲ್ಲಿದೆ
ವಿಮಾನದೊಳಗಿದ್ದ ಹಾವು
Updated By: ಸುಷ್ಮಾ ಚಕ್ರೆ

Updated on: Feb 14, 2022 | 7:38 PM

ವಿಮಾನ ಟೇಕಾಫ್ ಆಗುತ್ತಿದ್ದಂತೆ ಜೀವವನ್ನು ಕೈಯಲ್ಲಿಟ್ಟುಕೊಂಡು ಆತಂಕದಿಂದ ಸೀಟಿನ ತುದಿಯಲ್ಲಿ ಕೂರುವವರಿದ್ದಾರೆ. ಕೆಲವರಿಗೆ ವಿಮಾನದಲ್ಲಿ ಹೋಗುವುದೆಂದರೆ ಖುಷಿ. ಇನ್ನು ಕೆಲವರಿಗೆ ವಿಮಾನದಲ್ಲಿ ಹಾರಾಟ ಮಾಡುವುದು ಭಯ. ಹೀಗೆ ಭಯ ಪಟ್ಟುಕೊಂಡು ವಿಮಾನದಲ್ಲಿ ಆಕಾಶದಲ್ಲಿ ಹಾರಾಟ ಮಾಡುವಾಗ ವಿಮಾನದೊಳಗೆ (Plane) ಹಾವು ಕಂಡರೆ ಹೇಗಿರುತ್ತದೆ? ಇರೋಬರೋ ಧೈರ್ಯವೂ ಹುದುಗಿಬಿಡುತ್ತದೆ. ವಿಮಾನದಲ್ಲಿ ಪ್ರಯಾಣಿಕರ ಜೊತೆಗೆ ಹಾವು (Snake) ಕೂಡ ಪ್ರಯಾಣಿಸುವ ಸಂದರ್ಭವನ್ನು ನೀವು ಊಹಿಸಿಕೊಳ್ಳಲು ಸಾಧ್ಯವೇ?

ವಿಮಾನದಲ್ಲಿ ಹಾವಿನ ವಿಡಿಯೋ ಆನ್‌ಲೈನ್‌ನಲ್ಲಿ ವೈರಲ್ ಆಗಿದೆ. ಈ ವಿಡಿಯೋ ಕ್ಲಿಪ್ ಅನ್ನು ಹನಾ ಮೊಹ್ಸಿನ್ ಖಾನ್ ಎಂಬ ಕಮರ್ಷಿಯಲ್ ಪೈಲಟ್ ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಈ ಸಣ್ಣ ವಿಡಿಯೋ ತುಣುಕಿನಲ್ಲಿ ವಿಮಾನದೊಳಗೆ ಹಾವು ಸಿಲುಕಿಕೊಂಡಿರುವುದನ್ನು ಕಾಣಬಹುದು. ಏರ್ ಏಷ್ಯಾ ಏರ್‌ಬಸ್ ಎ320-200 ವಿಮಾನವು ಕೌಲಾಲಂಪುರದಿಂದ ಮಲೇಷ್ಯಾದ ತವೌಗೆ ತೆರಳುತ್ತಿತ್ತು. ಆಗ ಹಾವು ಪ್ರಯಾಣಿಕರ ಲಗೇಜ್​ನಿಂದ ತಪ್ಪಿಸಿಕೊಂಡು ವಿಮಾನದೊಳಗೆ ನುಸುಳಿದೆ ಎಂದು ಸೂಚಿಸಲಾಗಿದೆ. ವಿಮಾನದೊಳಗೆ ಹಾವು ಕಾಣಿಸಿಕೊಳ್ಳುತ್ತಿದ್ದಂತೆ ಪ್ರಯಾಣಿಕರು ಆತಂಕಗೊಂಡಿದ್ದರಿಂದ ವಿಮಾನವನ್ನು ಕೆಳಗಿಳಿಸಲಾಯಿತು. ಈ ವಿಡಿಯೋವನ್ನು ಕಮರ್ಷಿಯಲ್ ಪೈಲಟ್ ಟ್ವಿಟ್ಟರ್​​ನಲ್ಲಿ ಶೇರ್ ಮಾಡಿಕೊಂಡಿದ್ದಾರೆ.

ಅಯ್ಯೋ! ವಿಮಾನದಲ್ಲಿ ಹಾವು! ಪ್ರಯಾಣಿಕನ ಲಗೇಜ್‌ನಿಂದ ತಪ್ಪಿಸಿಕೊಂಡ ಸಾಕು ಹಾವೊಂದು ವಿಮಾನದೊಳಗೆ ಸೇರಿಕೊಂಡಿತ್ತು. ಏರ್ ಏಷ್ಯಾ ಏರ್‌ಬಸ್ A320-200, ಕೌಲಾಲಂಪುರದಿಂದ ತವಾವಿಗೆ ಹೊರಟಿತ್ತು. ಆಗ ಹಾವು ಕಾಣಿಸಿಕೊಂಡ ವಿಷಯ ತಿಳಿದು ಆತಂಕಗೊಂಡ ಕಮರ್ಷಿಯಲ್ ಪೈಲಟ್ ವಿಮಾನವನ್ನು ವಾಪಾಸ್ ತಿರುಗಿಸಿದ್ದಾರೆ.

ಇದನ್ನೂ ಓದಿ: Shocking Video: ಕೆಳಗೆ ಬಿದ್ದ ಬಟ್ಟೆ ತರಲು ಮಗನನ್ನು ಸೀರೆಗೆ ಕಟ್ಟಿ 10ನೇ ಮಹಡಿಯಿಂದ ನೇತಾಡಿಸಿದ ತಾಯಿ!

Shocking Video: ಉದ್ಯಮಿಗೆ ಡಿಕ್ಕಿ ಹೊಡೆದು ಬಾನೆಟ್ ಮೇಲೆ ಎಳೆದುಕೊಂಡು ಹೋದ ಕಾರು; ಮಾಜಿ ಐಎಎಸ್​ ಅಧಿಕಾರಿ, ಮಗನ ಬಂಧನ