20 ಬಾರಿ ಬೇಯಿಸಿದರೂ ಮಾಂಸ ಬೆಂದಿಲ್ಲ ಎಂದು ಕುಕ್ಕರ್ ಹಿಡಿದು ಪೊಲೀಸ್ ಠಾಣೆಗೆ ಹೋದ ವ್ಯಕ್ತಿ

ಮಾಂಸ ಬೇಯಲಿಲ್ಲ ಎಂದ್ರೆ ಯಾರಾದ್ರೂ ಪೊಲೀಸ್ ಠಾಣೆಗೆ ಹೋಗ್ತಾರಾ ಎಂದು ನೀವು ಪ್ರಶ್ನೆ ಕೇಳಬಹುದು. ಇಲ್ಲೊಬ್ಬ ವ್ಯಕ್ತಿ  ಇಪ್ಪತ್ತು ಬಾರಿ ಬೇಯಿಸಿದರೂ ಬೇಯದ ಮಾಂಸವಿರುವ ಕುಕ್ಕರ್ ಹಿಡಿದು ವ್ಯಕ್ತಿಯೊಬ್ಬ ಪೊಲೀಸ್ ಠಾಣೆ ಮೆಟ್ಟಿಲೇರಿರುವ ಘಟನೆ ಆಂಧ್ರಪ್ರದೇಶದಲ್ಲಿ ನಡೆದಿದೆ. ಎನ್​ಡಿಟಿವಿ ವರದಿ ಪ್ರಕಾರ,  ತಡಿಪತ್ರಿಯ ಪುಟ್ಲೂರು ರಸ್ತೆಯ ನಿವಾಸಿ ಸೋದಲ ಹಾಜಿ ಸ್ಥಳೀಯ ಮಾರಾಟಗಾರರಿಂದ ಮೇಕೆ ತಲೆಯ ಮಾಂಸವನ್ನು ಖರೀದಿಸಿದ್ದರು.

20 ಬಾರಿ ಬೇಯಿಸಿದರೂ ಮಾಂಸ ಬೆಂದಿಲ್ಲ ಎಂದು ಕುಕ್ಕರ್ ಹಿಡಿದು ಪೊಲೀಸ್ ಠಾಣೆಗೆ ಹೋದ ವ್ಯಕ್ತಿ
ಕುಕ್ಕರ್
Image Credit source: The Guardian

Updated on: Mar 27, 2026 | 2:45 PM

ಆಂಧ್ರಪ್ರದೇಶ, ಮಾರ್ಚ್​ 27: ಮಾಂಸ(Meat) ಬೇಯಲಿಲ್ಲ ಎಂದ್ರೆ ಯಾರಾದ್ರೂ ಪೊಲೀಸ್ ಠಾಣೆಗೆ ಹೋಗ್ತಾರಾ ಎಂದು ನೀವು ಪ್ರಶ್ನೆ ಕೇಳಬಹುದು. ಇಲ್ಲೊಬ್ಬ ವ್ಯಕ್ತಿ  ಇಪ್ಪತ್ತು ಬಾರಿ ಬೇಯಿಸಿದರೂ ಬೇಯದ ಮಾಂಸವಿರುವ ಕುಕ್ಕರ್ ಹಿಡಿದು ವ್ಯಕ್ತಿಯೊಬ್ಬ ಪೊಲೀಸ್ ಠಾಣೆ ಮೆಟ್ಟಿಲೇರಿರುವ ಘಟನೆ ಆಂಧ್ರಪ್ರದೇಶದಲ್ಲಿ ನಡೆದಿದೆ. ಎನ್​ಡಿಟಿವಿ ವರದಿ ಪ್ರಕಾರ,  ತಡಿಪತ್ರಿಯ ಪುಟ್ಲೂರು ರಸ್ತೆಯ ನಿವಾಸಿ ಸೋದಲ ಹಾಜಿ ಸ್ಥಳೀಯ ಮಾರಾಟಗಾರರಿಂದ ಮೇಕೆ ತಲೆಯ ಮಾಂಸವನ್ನು ಖರೀದಿಸಿದ್ದರು.

ಸ್ಥಳೀಯವಾಗಿ ತಲಾಕುರ ಎಂದು ಕರೆಯಲ್ಪಡುವ ಸಾಂಪ್ರದಾಯಿಕ ತಲೆ ಮಾಂಸದ ಕರಿಯನ್ನು ತಯಾರಿಸಲು ಉತ್ಸುಕರಾಗಿದ್ದ ಹಾಜಿ,   ಮಾಂಸವನ್ನು ಬೇಯಿಸಲು ಪ್ರಾರಂಭಿಸಿದರು. ಸುಮಾರು 20 ಪ್ರಯತ್ನಗಳ ನಂತರವೂ, ಮಾಂಸವು ಗಟ್ಟಿಯಾಗಿಯೇ ಉಳಿದಿತ್ತು. ಗೊಂದಲಕ್ಕೊಳಗಾದ ಮತ್ತು ಹತಾಶನಾದ ಹಾಜಿ, ಇಡೀ ಅಡುಗೆ ಪಾತ್ರೆಯನ್ನು ಸಾಕ್ಷಿಯಾಗಿ ತೆಗೆದುಕೊಂಡು ನೇರವಾಗಿ ಪೊಲೀಸ್ ಠಾಣೆಗೆ ಹೋಗಿದ್ದಾರೆ. ಒಮ್ಮೆ ಈ ದೂರಿನ ಬಗ್ಗೆ ಪೊಲೀಸ್ ಅಧಿಕಾರಿಗಳು ಆರಂಭದಲ್ಲಿ ಆಶ್ಚರ್ಯಚಕಿತರಾದರು ಆದರೆ ಸಮಸ್ಯೆಯನ್ನು ತನಿಖೆ ಮಾಡಲು ಒಪ್ಪಿಕೊಂಡರು.

ಮಾಂಸ ಮಾರಾಟಗಾರರೊಂದಿಗೆ ನಡೆದ ಚರ್ಚೆ ಬಳಿಕ, ಪಟ್ಟಣ ವೃತ್ತ ನಿರೀಕ್ಷಕ ಆನಂದ ರಾವ್ ಮಧ್ಯಪ್ರವೇಶಿಸಿ ಸಮಸ್ಯೆಯನ್ನು ತಕ್ಷಣವೇ ಬಗೆಹರಿಸಿದರು.ಮಾರಾಟಗಾರರು ಅದೇ ಪ್ರಮಾಣದ ತಾಜಾ, ಖಾದ್ಯ ಮಟನ್‌ನೊಂದಿಗೆ ಬದಲಿಯನ್ನು ಒದಗಿಸಲು ಒಪ್ಪಿಕೊಂಡರು.

ಮತ್ತಷ್ಟು ಓದಿ: ಯುಗಾದಿ ದಿನವೂ, ಶಿವರಾತ್ರಿ ದಿನವೂ ಮಾಂಸ ತಿಂತೀನಿ, ನನ್ನಿಷ್ಟ! ಸಿಎಂ ಸಿದ್ದರಾಮಯ್ಯ ಹೀಗೆಂದಿದ್ದೇಕೆ ನೋಡಿ

ಆ ಮಾಂಸವು ಕತ್ತರಿಸಿಟ್ಟು ಬು ಸಮಯ ಕಳೆದಿರಬಹುದು ಎಂದು ಸ್ಥಳೀಯರು ಹೇಳಿದ್ದಾರೆ. ಇದು ಅನೇಕ ಪ್ರಯತ್ನಗಳ ಹೊರತಾಗಿಯೂ ಅದು ಗಟ್ಟಿಯಾಗಿ ಮತ್ತು ಬೇಯಿಸದೆ ಇರುವುದಕ್ಕೆ ಕಾರಣವಾಗಿರಬಹುದು. ಮಾರಾಟಗಾರರು ಸ್ಪಷ್ಟ ವಿವರಣೆಯನ್ನು ನೀಡಲಿಲ್ಲ, ಆದರೆ ಪ್ರಾಣಿಯ ವಯಸ್ಸು ಕಾರಣ ಎಂದು ಹೇಳಲಾಗುತ್ತಿದೆ.

ಟ್ರೆಂಡಿಂಗ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 8:55 am, Fri, 27 March 26

Nayana Rajeev

ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್​ ಇಂಡಿಯಾ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ

Read More
Follow Us