ಭೋಪಾಲದ ಪೊಲೀಸ್ ಠಾಣೆಯಲ್ಲಿ ಸಬ್ಇನ್ಸ್ಪೆಕ್ಟರ್ ಕರೀಷ್ಮಾ ಅವರ ಸೀಮಂತ
Baby Shower : ಈ ಖಾಕಿಧಾರಿಣಿಯ ಒಡಲೊಳಗೊಂದು ಪುಟ್ಟ ಜೀವ ಅವಿತು ಕುಳಿತಿದೆ. ಸಹೋದ್ಯೋಗಿಗಳಿಗೆ ಸುಮ್ಮನಿರಲಾಗಿಲ್ಲ. ಒಬ್ಬರು ಅಮ್ಮನ ಸ್ಥಾನ, ಇನ್ನೊಬ್ಬರು ಅಣ್ಣನ ಸ್ಥಾನ ತುಂಬಿ, ಉಳಿದವರೊಂದಿಗೆ ತವರ ಸಂಭ್ರಮ ಸೃಷ್ಟಿಸಿದ್ದಾರೆ.
Viral : ಸಾರ್ವಜನಿಕ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುವ ಹೆಣ್ಣುಮಕ್ಕಳು ಕುಟುಂಬ ಮತ್ತು ವೃತ್ತಿಯನ್ನು ಏಕಕಾಲಕ್ಕೆ ತೂಗಿಸಿಕೊಂಡು ಹೋಗುವುದು ಸವಾಲಿನ ಕೆಲಸ. ಎಷ್ಟೋ ಸಲ ಹಬ್ಬ ಹರಿದಿನ ಮತ್ತು ಕುಟುಂಬದ ಕಾರ್ಯಕ್ರಮಗಳಿಗೆ ಹೋಗಲು ಅವರಿಗೆ ಪುರುಸೊತ್ತು ಸಿಗದು. ಕೆಲವರಿಗಂತೂ ತಮ್ಮ ವೈಯಕ್ತಿಕ ಸಂಭ್ರಮಗಳನ್ನು ಅನುಭವಿಸಲು ಕರ್ತವ್ಯ ಎನ್ನುವುದು ಅನುವು ಮಾಡಿಕೊಡದು. ಆದರೆ ಆಪ್ತ ಸಹೋದ್ಯೋಗಿಗಳಿದ್ಧಾಗ ಕರ್ತವ್ಯದ ಮಧ್ಯೆಯೇ ಸಣ್ಣಪುಟ್ಟ ಖುಷಿಗಳು ಅರಳುವುದು ಸಾಧ್ಯವಿದೆ. ಇದಕ್ಕೆ ಮಾದರಿಯಂತಿದೆ ಭೋಪಾಲ ಪೊಲೀಸ್ ಠಾಣೆಯಲ್ಲಿ ನಡೆದ ಈ ಸೀಮಂತ. ಸಬ್ ಇನ್ಸ್ಪೆಕ್ಟರ್ ಕರೀಷ್ಮಾ ರಾಜಾವತ್ ಅವರಿಗೆ ಅವರ ಸಹೋದ್ಯೋಗಿಗಳು ತಕ್ಕಮಟ್ಟಿಗೆ ಶಾಸ್ತ್ರೋಕ್ತವಾಗಿ ಸೀಮಂತ ಮಾಡಿ ಹರಸಿದ್ದಾರೆ.
ಈ ಸೀಮಂತ ಕಾರ್ಯಕ್ರಮಕ್ಕಾಗಿ ಪೊಲೀಸ್ ಸ್ಟೇಷನ್ ತುಂಬಾ ಬಲೂನು ಕಟ್ಟಿ, ಹೂಗಳನ್ನು ಅಲಂಕರಿಸಲಾಗಿತ್ತು. ನಂತರ ಕರೀಷ್ಮಾ ಅವರಿಗೆ ಕೆಂಪು ಸೀರೆಯುಡಿಸಿ ಸಿಹಿ ತಿನ್ನಿಸಿ ಆರತಿ ಮಾಡಲಾಯಿತು. ಕರೀಷ್ಮಾ ಅವರ ತಾಯಿ ಮತ್ತು ಅಣ್ಣನ ಸ್ಥಾನವನ್ನು ಸಹೋದ್ಯೋಗಿಗಳೇ ಅಲಂಕರಿಸಿದರು. ಈ ಎಲ್ಲ ವ್ಯವಸ್ಥೆಯಿಂದ ಗ್ವಾಲಿಯರ್ ಮೂಲದ ಕರೀಷ್ಮಾ ಅಚ್ಚರಿಗೆ ಒಳಗಾದರು.
ಕರ್ತವ್ಯದ ಮಧ್ಯೆ ಕೊಂಚ ಸಮಯೋಚಿತವಾಗಿ ಮತ್ತು ಹೃದಯದಿಂದ ಯೋಚಿಸಿದರೆ ಎಂಥ ಸಂದರ್ಭದಲ್ಲಿಯೂ ಖುಷಿ ಪಡೆಯಬಹುದು ಮತ್ತು ಖುಷಿ ಹಂಚಬಹುದು.
ಏನಂತೀರಿ?
ಮತ್ತಷ್ಟು ವೈರಲ್ ವಿಡಯೋಗಾಗಿ ಕ್ಲಿಕ್ ಮಾಡಿ
Published On - 6:19 pm, Sat, 22 October 22