ಗ್ರಾಹಕರನ್ನು ತಮ್ಮತ್ತ ಸೆಳೆಯಲು ಸಾಕಷ್ಟು ಉದ್ಯಮಗಳು ಹಲವು ರೀತಿಯ ಪ್ಲಾನ್ ಮಾಡಿತ್ತಾರೆ. ಜೊತೆಗೆ ತಮ್ಮ ಗ್ರಾಹಕರಿಗಾಗಿ ನಾನಾ ರೀತಿಯ ಆಫರ್ ಗಳನ್ನು ತರುತ್ತಲೇ ಇರುವುದನ್ನು ನೀವು ನೋಡಿರಬಹುದು. ಕೆಲವರು ಉತ್ಪನ್ನಗಳ ಮೇಲೆ ಬಂಪರ್ ಡಿಸ್ಕೌಂಟ್ ನೀಡಿದರೆ, ಇನ್ನು ಕೆಲವರು ಉಚಿತ ಆಫರ್ ಗಳ ಮೂಲಕ ಆಮಿಷ ಒಡ್ಡುತ್ತಾರೆ. ಇದೀಗಾ ಚೀನಾದಲ್ಲಿ ಕಾಸ್ಮೆಟಿಕ್ ಸರ್ಜರಿ ಕ್ಲಿನಿಕ್ ಮಹಿಳೆಯರನ್ನು ಓಲೈಸಲು ಮಾರ್ಕೆಟಿಂಗ್ ತಂತ್ರಗಳ ಮೂಲಕ ಜನರಿಗೆ ಮೋಸ ಮಾಡಿದ್ದು,ಪರಿಣಾಮ ಈ ಕ್ಲಿನಿಕ್ ವಿರುದ್ಧ ಸಾಕಷ್ಟು ಮಹಿಳೆಯರು ದೂರು ದಾಖಲಿಸಿದ್ದಾರೆ.
ಶಾಂಘೈ ಮೂಲದ ಕಂಪನಿ ‘ಜೀನ್ ಬ್ಯೂಟಿ ಬಯೋಜೆನೆಟಿಕ್ ಇಂಜಿನಿಯರಿಂಗ್ ಕಾರ್ಪೊರೇಷನ್ ಲಿಮಿಟೆಡ್’ ಜನರನ್ನು ತನ್ನತ್ತ ಸಳೆಯಲು ವಿಚಿತ್ರ ಆಫರ್ ನೀಡಿ ಭಾರೀ ಸುದ್ದಿಯಲ್ಲಿದೆ. ‘ನಮ್ಮ ಕ್ಲಿನಿಕ್ನಲ್ಲಿ ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡರೆ, ಶ್ರೀಮಂತ ಹುಡುಗರು ನಿಮ್ಮೊಂದಿಗೆ ಡೇಟ್ ಮಾಡಲು ಮುಂದೆ ಬರುತ್ತಾರೆ’ ಎಂದು ಕಂಪನಿ ಹೇಳಿಕೊಂಡಿದೆ.
ಇದನ್ನೂ ಓದಿ: ಸಿಂಗಲ್ ಬಾಯ್ಸ್ ನಿಮ್ಮ ಒಂಟಿತನವನ್ನು ಹೋಗಲಾಡಿಸಲು ಬಂದಿದ್ದಾಳೆ AI ಗೆಳತಿ
ಆದರೆ ಇದೀಗ ಈ ಆಫರ್ ಕಂಪನಿಗೇ ಕಂಟಕವಾಗಿ ಪರಿಣಮಿಸಿದೆ. ಸುಳ್ಳು ಭರವಸೆಗಳ ಮೂಲಕ ಗ್ರಾಹಕರನ್ನು ಸೆಳೆಯುವುದು, ಸಾಮಾಜಿಕ ನೀತಿಗಳನ್ನು ಉಲ್ಲಂಘಿಸುವುದು ಮತ್ತು ಜಾಹೀರಾತು ಕಾನೂನುಗಳನ್ನು ಉಲ್ಲಂಘಿಸಿದ್ದಕ್ಕಾಗಿ ಚೀನಾದ ಅಧಿಕಾರಿಗಳು ಕಂಪನಿಯ ಮೇಲೆ ಭಾರಿ ದಂಡವನ್ನು ವಿಧಿಸಿದ್ದಾರೆ. ಕಂಪನಿಯು ಈಗ 30 ಸಾವಿರ ಯುವಾನ್ (ಅಂದರೆ ಮೂರೂವರೆ ಲಕ್ಷ ರೂಪಾಯಿಗಳಿಗಿಂತ ಹೆಚ್ಚು) ಪಾವತಿಸಬೇಕಾಗುತ್ತದೆ ಎಂದು ವರದಿಯಾಗಿದೆ.
ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ