Viral Video: ರಾಸ್​ಪ್ಯೂಟಿನ್​​ ಬೀಟ್ಸ್​ಗೆ ಹೆಜ್ಜೆ ಹಾಕಿದ ಕೊವ್ಯಾಕ್ಸಿನ್​, ಕೊವಿಶೀಲ್ಡ್​ ಲಸಿಕೆ.. ಕೇರಳ ಪೊಲೀಸರ ಟ್ವೀಟ್​ಗೆ ಭಾರೀ ಮೆಚ್ಚುಗೆ

Rasputin Dance Viral Video: ನಿಮ್ಮ ಹತ್ತಿರದ ಲಸಿಕಾ ಕೇಂದ್ರಗಳಿಗೆ ತೆರಳಿ ಕೊರೊನಾ ಲಸಿಕೆ ಪಡೆಯಿರಿ ಎಂಬ ಸಂದೇಶ ಹೊತ್ತಿರುವ ಈ ವಿಡಿಯೋ ಭಾರೀ ಸದ್ದು ಮಾಡುತ್ತಿದ್ದು, ಕೊರೊನಾ ಲಸಿಕೆ ತೆಗೆದುಕೊಳ್ಳಿ ಎಂಬ ಜಾಹೀರಾತನ್ನು ಹೀಗೆ ಕ್ರಿಯಾಶೀಲವಾಗಿ ನೀಡಿರುವುದಕ್ಕೆ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Viral Video: ರಾಸ್​ಪ್ಯೂಟಿನ್​​ ಬೀಟ್ಸ್​ಗೆ ಹೆಜ್ಜೆ ಹಾಕಿದ ಕೊವ್ಯಾಕ್ಸಿನ್​, ಕೊವಿಶೀಲ್ಡ್​ ಲಸಿಕೆ.. ಕೇರಳ ಪೊಲೀಸರ ಟ್ವೀಟ್​ಗೆ ಭಾರೀ ಮೆಚ್ಚುಗೆ
ಕೇರಳ ಪೊಲೀಸರು ಹಂಚಿಕೊಂಡಿರುವ ವಿಡಿಯೋ ತುಣುಕು
Follow us
Skanda
| Updated By: Digi Tech Desk

Updated on:Apr 12, 2021 | 11:57 AM

ಸಾಮಾಜಿಕ ಜಾಲತಾಣಗಳಲ್ಲಿ ಯಾವ ವಿಚಾರ, ಯಾವ ಹೊತ್ತಿನಲ್ಲಿ ವೈರಲ್​ ಆಗುತ್ತವೆ ಎಂದು ಹೇಳಲಾಗುವುದಿಲ್ಲ. ಯಾವುದೋ ಹಾಡು, ಘಟನೆ, ಹೇಳಿಕೆ, ಫೋಟೋ ಇತ್ಯಾದಿಗಳು ಕ್ಷಣಾರ್ಧದಲ್ಲಿ ಸಾಮಾಜಿಕ ಜಾಲತಾಣವೆಂಬ ಲೋಕವನ್ನಾವರಿಸಿಕೊಂಡು ಜನರನ್ನು ಸಮೂಹಸನ್ನಿಗೆ ಒಳಗಾಗಿಸಿಬಿಡುತ್ತವೆ. ಸದ್ಯ ಬೋನಿ ಎಂ ಅವರ 1978ರ ಕಾಲದ ಸೂಪರ್​ ಹಿಟ್ ಯೂರೋ ಡಿಸ್ಕೋ ಟ್ರ್ಯಾಕ್ ರಾಸ್​ಪ್ಯೂಟಿನ್​​ ಪೆಪ್ಪಿ ಬೀಟ್ಸ್ ಎಲ್ಲರ ಗಮನ ಸೆಳೆಯುತ್ತಿದ್ದು ವೈರಲ್ ಆಗಿದೆ.

ಇತ್ತೀಚೆಗೆ ಕೇರಳದ ತ್ರಿಶೂರ್ ಮೆಡಿಕಲ್​ ಕಾಲೇಜಿನ ವೈದ್ಯಕೀಯ ವಿದ್ಯಾರ್ಥಿಗಳಿಬ್ಬರು ಈ ಬೀಟ್ಸ್​ಗೆ ಡ್ಯಾನ್ಸ್​ ಮಾಡಿದ್ದು ಮೊದಲು ಹಿಟ್ ಆಗಿತ್ತು. ಇದೀಗ ಅದನ್ನೇ ಕೇಂದ್ರೀಕರಿಸಿಕೊಂಡ ಕೇರಳ ರಾಜ್ಯ ಸರ್ಕಾರ ಕೊರೊನಾ ಲಸಿಕೆಗಳಿಗೆ ರಾಸ್​ಪ್ಯೂಟಿನ್​ನ ಪೆಪ್ಪಿ ಬೀಟ್ಸ್ ಬಳಸಿಕೊಂಡು ಹುಬ್ಬೇರಿಸುವಂತೆ ವಿಡಿಯೋ ತಯಾರಿಸಿದೆ. ಕೊವಿಶೀಲ್ಡ್ ಮತ್ತು ಕೊವ್ಯಾಕ್ಸಿನ್ ಲಸಿಕೆಗಳ ಗ್ರಾಫಿಕ್ಸ್ ತಯಾರಿಸಿ ಅವು ಈ ಬೀಟ್​ಗೆ ಹೆಜ್ಜೆ ಹಾಕುವಂತೆ ಮಾಡಲಾಗಿದೆ.

ಕೇರಳ ಪೊಲೀಸ್​ ಅವರ ಅಧಿಕೃತ ಟ್ವಿಟರ್ ಅಕೌಂಟ್​ನಲ್ಲಿ ಈ ವಿಡಿಯೋ ಹಂಚಿಕೊಳ್ಳಲಾಗಿದ್ದು, ಜನರು ಕೊರೊನಾ ಲಸಿಕೆ ತೆಗೆದುಕೊಳ್ಳುವಂತೆ ಆ ಮೂಲಕ ಉತ್ತೇಜಿಸುವ ಪ್ರಯತ್ನ ನಡೆದಿದೆ. ನೋಡಲು ಮಜವಾಗಿರುವ ಈ ವಿಡಿಯೋದಲ್ಲಿ ರಾಸ್​ಪ್ಯೂಟಿನ್​​ ಡ್ಯಾನ್ಸ್​ ಚಾಲೆಂಜ್​ನಿಂದ ಪ್ರೇರಿತರಾಗಿ ಈ ವಿಡಿಯೋ ತಯಾರಿಸಿದ್ದೇವೆಂದು ಹೇಳಲಾಗಿದೆ. ನಿಮ್ಮ ಹತ್ತಿರದ ಲಸಿಕಾ ಕೇಂದ್ರಗಳಿಗೆ ತೆರಳಿ ಕೊರೊನಾ ಲಸಿಕೆ ಪಡೆಯಿರಿ ಎಂಬ ಸಂದೇಶ ಹೊತ್ತಿರುವ ಈ ವಿಡಿಯೋ ಭಾರೀ ಸದ್ದು ಮಾಡುತ್ತಿದ್ದು, ಕೊರೊನಾ ಲಸಿಕೆ ತೆಗೆದುಕೊಳ್ಳಿ ಎಂಬ ಜಾಹೀರಾತನ್ನು ಹೀಗೆ ಕ್ರಿಯಾಶೀಲವಾಗಿ ನೀಡಿರುವುದಕ್ಕೆ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: Rahul Dravid: ವೆಂಕಟೇಶ್​ ಪ್ರಸಾದ್​ ಕೂಡ ಇಂದಿರಾ ನಗರದ ಗೂಂಡಾ! ದ್ರಾವಿಡ್​ ಬಳಿಕ ಇನ್ನೊಂದು ವಿಡಿಯೋ ವೈರಲ್​ 

ಕೊರೊನಾ ಟೆಸ್ಟ್ ಕಳ್ಳಾಟದ ವಿಡಿಯೋ ವೈರಲ್; ಕೊಡಿಗೆಹಳ್ಳಿ ಬಿಬಿಎಂಪಿ ಆಸ್ಪತ್ರೆ ಸಿಬ್ಬಂದಿ ವಜಾ

(Covaxin Covishield vaccine steps to Rasputin beat goes viral in Kerala)

Published On - 11:39 am, Mon, 12 April 21

ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್