Viral Video: ಈ ದೇಶದ ಜನರು ಗೋ ಮೂತ್ರದಿಂದ ತಲೆ ಸ್ನಾನ ಮಾಡ್ತಾರೆ; ಇದರ ಹಿಂದಿನ ಕಾರಣ ಏನ್ ಗೊತ್ತಾ?

ದಕ್ಷಿಣ ಸುಡಾನ್ ದೇಶದಲ್ಲಿನ ಮಂಡರಿ ಮತ್ತು ಡಿಂಕಾ ಬುಡಕಟ್ಟು ಜನಾಂಗದವರು ಕೂಡಾ ಗೋವುಗಳಿಗೆ ಪೂಜನೀಯ ಸ್ಥಾನವನ್ನು ನೀಡಿದ್ದು, ಇವರು ಪ್ರತಿದಿನ ಗೋಮೂತ್ರದಲ್ಲಿಯೇ ತಲೆ ಸ್ನಾನ ಮಾಡುತ್ತಾರಂತೆ. ಈ ಕುರಿತ ಇಂಟೆರೆಸ್ಟಿಂಗ್ ವಿಡಿಯೋವೊಂದು ಇದೀಗ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.

Viral Video: ಈ ದೇಶದ ಜನರು ಗೋ ಮೂತ್ರದಿಂದ ತಲೆ  ಸ್ನಾನ ಮಾಡ್ತಾರೆ; ಇದರ ಹಿಂದಿನ ಕಾರಣ ಏನ್ ಗೊತ್ತಾ?
Cow urine bath
Follow us
ಮಾಲಾಶ್ರೀ ಅಂಚನ್​
| Updated By: ಅಕ್ಷತಾ ವರ್ಕಾಡಿ

Updated on: Apr 07, 2024 | 10:46 AM

ಹಿಂದೂ ಧರ್ಮದಲ್ಲಿ ಗೋವಿಗೆ ಪೂಜನೀಯ ಸ್ಥಾನವಿದೆ. ಜೊತೆಗೆ ಗೋಮೂತ್ರ ಹಾಗೂ ಸಗಣಿಯನ್ನು ಕೂಡಾ ಪವಿತ್ರ ಎಂದು ಪರಿಗಣಿಸಲಾಗಿದ್ದು, ಇವುಗಳನ್ನು ಹೋವ ಹವನದಂತಹ ಮಂಗಳ ಕಾರ್ಯಗಳಲ್ಲಿ ಬಳಸಲಾಗುತ್ತದೆ. ಅದೇ ರೀತಿ ದಕ್ಷಿಣ ಸೂಡಾನ್ ದೇಶದ ಬುಡಕಟ್ಟು ಜನಾಂಗದವರು ಗೋವುಗಳಿಗೆ ಪವಿತ್ರ ಸ್ನಾನವನ್ನು ನೀಡಿದ್ದು, ಅವರು ಪ್ರತಿನಿತ್ಯ ಪವಿತ್ರ ಗೋ ಮೂತ್ರದಲ್ಲಿಯೇ ತಲೆ ಸ್ನಾನ ಮಾಡುತ್ತಾರಂತೆ. ಈ ಕುರಿತ ವಿಡಿಯೋವೊಂದು ಇದೀಗ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.

ಹೌದು ದಕ್ಷಿಣ ಸುಡಾನ್ ನ ಮಂಡರಿ ಮತ್ತು ಡಿಂಕಾ ಬುಡಕಟ್ಟು ಜನಾಂಗದವರು ಇಂದಿಗೂ ಗೋ ಮೂತ್ರದಿಂದಲೇ ತಲೆ ಸ್ನಾನ ಮಾಡ್ತಾರೆ. ಹಸು ಸಾಕಾನೆ ಈ ಬುಡಕಟ್ಟು ಜನಾಂಗದವರ ಮೂಲ ಕಸುಬಾಗಿದ್ದು, ಭಾರತೀಯರಂತೆ ಅವರು ಕೂಡಾ ಗೋವುಗಳಿಗೆ ಪೂಜನೀಯ ಸ್ಥಾನವನ್ನು ನೀಡಿದ್ದಾರೆ. ಹಸುಗಳ ಪವಿತ್ರತೆಯ ಬಗ್ಗೆ ಅವರ ನಂಬಿಕೆ ಎಷ್ಟು ಬಲವಾಗಿದೆಯೆಂದರೆ, ಅವರು ಗೋಮೂತ್ರದಿಂದ ತಲೆ ಸ್ನಾನ ಮಾಡುತ್ತಾರೆ. ಏಕೆಂದರೆ ಗೋ ಮೂತ್ರವು ರೋಗ ನಿವಾರಕ ಮತ್ತು ಆರೋಗ್ಯವರ್ಧಕವಾಗಿದ್ದು, ಇಂತಹ ಪವಿತ್ರ ಗೋಮೂತ್ರದಿಂದ ಸ್ನಾನ ಮಾಡುವುದರಿಂದ ಆರೋಗ್ಯ ವೃದ್ಧಿಸುವುದಲ್ಲದೆ, ಅವುಗಳು ಸೊಳ್ಳೆಗಳ ಕಾಟದಿಂದಲೂ ನಮ್ಮನ್ನು ರಕ್ಷಿಸುತ್ತವೆ ಎಂಬ ಬಲವಾದ ನಂಬಿಕೆಯನ್ನು ಹೊಂದಿದ್ದಾರೆ.

ಇದನ್ನೂ ಓದಿ: Viral Video: ಲಿಫ್ಟ್ ಒಳಗೆ ಸೆಲ್ಫಿ ತೆಗೆಯುವ ಅಭ್ಯಾಸ ನಿಮಗಿದೆಯಾ? ಹಾಗಿದ್ರೆ ಈ ವಿಡಿಯೋ ನೀವು ನೋಡಲೇ ಬೇಕು

ಈ ಕುರಿತ ವಿಡಿಯೋವೊಂದನ್ನು @Rainmaker1973 ಎಂಬ ಹೆಸರಿನ ಎಕ್ಸ್ ಖಾತೆಯಲ್ಲಿ ಹಚಿಕೊಳ್ಳಲಾಗಿದ್ದು, “ಇದು ನೋಡಲು ಸ್ವಲ್ಪ ವಿಲಕ್ಷಣವಾಗಿ ಕಾಣಿಸಬಹುದು, ಆದರೆ ದಕ್ಷಿಣ ಸುಡಾನ್ ನ ಮುಂಡರಿ ಮತ್ತು ಡಿಂಕಾ ಬುಡಕಟ್ಟು ಜನಾಂಗದವರು ಪ್ರತಿನಿತ್ಯ ಗೋಮೂತ್ರದಿಂದಲೇ ಸ್ನಾನ ಮಾಡುತ್ತಾರೆ. ಏಕೆಂದರೆ ಗೋಮೂತ್ರ ನಂಜು ನಿರೋಧಕ ಮಾತ್ರವಲ್ಲದೆ ಅದು ಸೊಳ್ಳೆ ಕಡಿತದಿಂದಲೂ ನಮ್ಮನ್ನು ರಕ್ಷಿಸುತ್ತದೆ ಎಂದು ಅವರು ಭಾವಿಸುತ್ತಾರೆ” ಎಂಬ ಶೀರ್ಷಿಕೆಯನ್ನು ಬರೆದುಕೊಂಡಿದ್ದಾರೆ.

ವೈರಲ್ ವಿಡಿಯೋದಲ್ಲಿ ಹಸು ಮೂತ್ರ ವಿಸರ್ಜನೆ ಮಾಡುವ ಸಂದರ್ಭದಲ್ಲಿ ಆ ಪವಿತ್ರ ಗೋಮೂತ್ರದಲ್ಲಿಯೇ ಡಿಂಕಾ ಬುಡಕಟ್ಟು ಜನಾಂಗದ ವ್ಯಕ್ತಿಯೊಬ್ಬ ತಲೆ ಸ್ನಾನ ಮಾಡುತ್ತಿರುವ ದೃಶ್ಯವನ್ನು ಕಾಣಬಹುದು.

ಮತ್ತಷ್ಟು ವೈರಲ್​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಶರಣಾದ ನಕ್ಸಲರ ಶಸ್ತ್ರಾಸ್ತ್ರ ಎಲ್ಲಿ? ಕೊನೆಗೂ ಉತ್ತರಿಸಿದ ಸಿದ್ದರಾಮಯ್ಯ
ಶರಣಾದ ನಕ್ಸಲರ ಶಸ್ತ್ರಾಸ್ತ್ರ ಎಲ್ಲಿ? ಕೊನೆಗೂ ಉತ್ತರಿಸಿದ ಸಿದ್ದರಾಮಯ್ಯ
ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ