ರಿಪೋರ್ಟಿಂಗ್ ವೇಳೆ ಕಾಟ ಕೊಟ್ಟ ಶ್ವಾನ, ವಿಡಿಯೋ ವೈರಲ್

ಈ ಮಾತುಬಾರದ ಶ್ವಾನಗಳು ಮಾಡುವ ಎಡವಟ್ಟುಗಳು ಒಂದೆರಡಲ್ಲ. ಸುಖಾಸುಮ್ಮನೆ ತುಂಟಾಟ ಮಾಡಿ ಮಾಲೀಕರಿಗೂ ಕೂಡ ಈ ಶ್ವಾನದ ಸಹವಾಸ ಸಾಕಪ್ಪ ಸಾಕು ಎನ್ನುವ ಹಾಗೆ ಮಾಡಿ ಬಿಡುತ್ತವೆ. ಇಂತಹದ್ದೇ ಹಲವಾರು ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುತ್ತದೆ. ಇದೀಗ ವೈರಲ್ ಆಗಿರುವ ವಿಡಿಯೋದಲ್ಲಿ ನ್ಯೂಸ್ ರಿಪೋರ್ಟಿಂಗ್ ಮಾಡುವ ವೇಳೆಯಲ್ಲಿ ಅಲ್ಲೇ ಇದ್ದ ನಾಯಿಗಳು ತುಂಟಾಟ ಮಾಡಿದ್ದು ನ್ಯೂಸ್ ರಿಪೋರ್ಟರ್ ನಕ್ಕು ನಕ್ಕು ಸುಸ್ತಾಗಿದ್ದಾರೆ. ಈ ವಿಡಿಯೋವೊಂದು ವೈರಲ್ ಆಗುತ್ತಿದ್ದಂತೆ ಸೋಶಿಯಲ್ ಮೀಡಿಯಾದಲ್ಲಿ ಬಳಕೆದಾರರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ರಿಪೋರ್ಟಿಂಗ್  ವೇಳೆ ಕಾಟ ಕೊಟ್ಟ ಶ್ವಾನ, ವಿಡಿಯೋ ವೈರಲ್
ವೈರಲ್ ವಿಡಿಯೋ
Image Credit source: Twitter

Updated on: May 05, 2025 | 12:20 PM

ಪ್ರಾಣಿ (animal) ನಿಷ್ಠೆಗೆ ಇನ್ನೊಂದು ಹೆಸರೇ ಈ ಶ್ವಾನಗಳು. ಹೀಗಾಗಿ ಹೆಚ್ಚಿನವರಿಗೆ ಶ್ವಾನಗಳೆಂದರೆ ತುಂಬಾನೇ ಇಷ್ಟ. ಹೌದು, ಈ ಶ್ವಾನಗಳ ಮುದ್ದು ಮುದ್ದಾದ ವಿಡಿಯೋಗಳು ಸೋಷಿಯಲ್‌ ಮೀಡಿಯಾ (social media) ದಲ್ಲಿ ಹರಿದಾಡುತ್ತಿರುತ್ತವೆ. ಅವುಗಳ ಆಟ, ತುಂಟಾಟ, ಮುದ್ದಾಟಗಳನ್ನು ಕಣ್ತುಂಬಿಸಿಕೊಳ್ಳುವುದೇ ಚೆಂದ. ಇದೀಗ ಅಂತಹದ್ದೇ ಮುದ್ದಾದ ವಿಡಿಯೋವೊಂದು ವೈರಲ್‌ ಆಗಿದ್ದು, ನ್ಯೂಸ್ ರಿಪೋರ್ಟರ್ (news reporter) ಗಳು ಲೈವ್ ಕವರೇಜ್ ನೀಡುತ್ತಿರುವ ವೇಳೆಯಲ್ಲಿ ಅಲ್ಲೇ ಇದ್ದ ಮುದ್ದಾದ ಶ್ವಾನವೊಂದು ತುಂಟಾಟ ಮಾಡಿದ್ದು ಈ ವಿಡಿಯೋವೊಂದು ವೈರಲ್ ಆಗಿದೆ.

Puppies ಹೆಸರಿನ ಖಾತೆಯಲ್ಲಿ ಈ ವಿಡಿಯೋವನ್ನು ಶೇರ್ ಮಾಡಿಕೊಳ್ಳಲಾಗಿದ್ದು, ಈ ವಿಡಿಯೋದಲ್ಲಿ ಸುದ್ದಿವಾಚಕರು ಹಾಗೂ ನ್ಯೂಸ್ ರಿಪೋರ್ಟರ್ ಗಳು ಲೈವ್ ನ್ಯೂಸ್ ಕವರೇಜ್ ಮಾಡುತ್ತಿರುವ ವೇಳೆಯಲ್ಲಿ ಈ ಶ್ವಾನಗಳ ತುಂಟಾಟದ ವಿಡಿಯೋ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ಶ್ವಾನಗಳ ತುಂಟಾಟ ಕಂಡು ನ್ಯೂಸ್ ರಿಪೋರ್ಟರ್ ಹಾಗೂ ಸುದ್ದಿವಾಚಕರು ಬಿದ್ದು ಬಿದ್ದು ನಕ್ಕಿರುವುದನ್ನು ಕಾಣಬಹುದು.

ಇದನ್ನೂ ಓದಿ
ಹೇರ್ ಕಟ್ ಮಾಡಿಸಲು ಹೋದ ವಿದೇಶಿಗನ ಜೇಬಿಗೆ ಬಿತ್ತು ಕತ್ತರಿ
ವರನ ಡಾನ್ಸ್ ನೋಡುತ್ತಿದ್ದಂತೆ ನಾಚಿ ನೀರಾದ್ಲು ವಧು
ಈ ಅಮ್ಮ ನನಗೆ ನಿದ್ದೆ ಮಾಡೋಕು ಬಿಡಲ್ಲ, ಯಾಕೆ ಇಷ್ಟು ಬೇಗ ಎಬ್ಬಿಸ್ತಾಳೋ
ವಿಮಾನ ನಿಲ್ದಾಣದಲ್ಲಿ ಕೊಳಲುವಾದಕನ ಹಾಡಿಗೆ ತಲೆದೂಗಿದ ಭದ್ರತಾ ಸಿಬ್ಬಂದಿಗಳು

ಇದನ್ನೂ ಓದಿ :Viral : ಇಲ್ಲಿ ನೋಡು ಸೋನ್ಯಾ…. ಪ್ರೀತಿಯ ಹೋರಿಯ ಟ್ಯಾಟೂ ಹಾಕಿಸಿಕೊಂಡ ಯುವತಿ

ವೈರಲ್ ವಿಡಿಯೋ ಇಲ್ಲಿದೆ ನೋಡಿ

ಈ ವಿಡಿಯೋವೊಂದು ವೈರಲ್ ಆಗುತ್ತಿದ್ದಂತೆ ಒಂದೂವರೆ ಲಕ್ಷದಷ್ಟು ವೀಕ್ಷಣೆ ಪಡೆದುಕೊಂಡಿದ್ದು, ಈ ವಿಡಿಯೋಗೆ ನೆಟ್ಟಿಗರಿಂದ ಮಿಶ್ರಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ಬಳಕೆದಾರರು, ‘ಸುದ್ದಿಗಿಂತ ಈ ಶ್ವಾನಗಳೇ ಹೆಚ್ಚಿನ ಮನೋರಂಜನೆ ನೀಡಿವೆ’ ಎಂದು ಬರೆದುಕೊಂಡಿದ್ದಾರೆ. ಇನ್ನೊಬ್ಬರು, ‘ನಮ್ಮ ಬಳಿಯೂ ಮುದ್ದಾದ ಶ್ವಾನಗಳಿವೆ, ಹೀಗಾಗಿ ನಾವೇ ಅದೃಷ್ಟವಂತರು’ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬ ಬಳಕೆದಾರರು, ‘ತುಂಬಾನೇ ಮುದ್ದಾಗಿದೆ’ ಎಂದು ಕಾಮೆಂಟ್ ನಲ್ಲಿ ತಿಳಿಸಿದ್ದಾರೆ. ಈ ಕೆಲವು ಬಳಕೆದಾರರು ಈ ವಿಡಿಯೋವನ್ನು ಮೆಚ್ಚಿಕೊಂಡಿದ್ದು, ಹೃದಯದ ಸಿಂಬಲ್ ಕಳುಹಿಸಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Published On - 12:18 pm, Mon, 5 May 25