Viral: ತಿರುಪತಿ ತಿಮ್ಮಪ್ಪನಿಗೆ ಮುಡಿ ಕೊಟ್ಟ ಚೆಸ್‌ ತಾರೆ ಡಿ. ಗುಕೇಶ್;‌ ವಿಡಿಯೋ ವೈರಲ್‌

ತಿರುಪತಿ ದೇಗುಲಕ್ಕೆ ಪ್ರತಿನಿತ್ಯ ಸಾವಿರಾರು ಭಕ್ತರು ಭೇಟಿ ನೀಡಿರುತ್ತಿರುತ್ತಾರೆ. ಹೀಗೆ ಭೇಟಿ ನೀಡೋ ಹೆಚ್ಚಿನ ಸಂಖ್ಯೆಯ ಭಕ್ತರು ಇಲ್ಲಿ ಮುಡಿ ಕೊಡ್ತಾರೆ. ಹಾಗೆಯೇ ಚೆಸ್‌ ತಾರೆ ಡಿ. ಗುಕೇಶ್‌ ಕೂಡಾ ಕುಟುಂಬ ಸಮೇತರಾಗಿ ತಿರುಪತಿಗೆ ಭೇಟಿ ನೀಡಿ, ದೇವರ ದರ್ಶನ ಪಡೆದು ತಿಮ್ಮಪ್ಪನಿಗೆ ಮುಡಿ ಕೊಟ್ಟಿದ್ದಾರೆ. ಈ ಕುರಿತ ವಿಡಿಯೋವೊಂದು ಇದೀಗ ವೈರಲ್‌ ಆಗುತ್ತಿದೆ.

Viral: ತಿರುಪತಿ ತಿಮ್ಮಪ್ಪನಿಗೆ ಮುಡಿ ಕೊಟ್ಟ ಚೆಸ್‌ ತಾರೆ ಡಿ. ಗುಕೇಶ್;‌ ವಿಡಿಯೋ ವೈರಲ್‌
ವೈರಲ್​​ ವಿಡಿಯೋ
Edited By:

Updated on: Mar 13, 2025 | 2:05 PM

ಭಾರತದ ಯುವ ಗ್ರ್ಯಾಂಡ್‌ ಮಾಸ್ಟರ್‌ ಡಿ. ಗುಕೇಶ್‌ (D Gukesh) ಚೆಸ್‌ ಲೋಕದಲ್ಲಿ ಪ್ರಜ್ವಲಿಸುತ್ತಿರುವ ತಾರೆ. ವಿಶ್ವ ಚೆಸ್‌ ಚಾಂಪಿಯನ್‌ಶಿಪ್‌ ಗೆಲ್ಲುವ ಮೂಲಕ ಇವರು ವಿಶ್ವ ಚಾಂಪಿಯನ್‌ಶಿಪ್‌ (World Championship) ಗೆದ್ದ ಶ್ರೇಯಕ್ಕೆ ಪಾತ್ರರಾಗಿದ್ದಾರೆ. ಇದೀಗ ಇವರು ತಮ್ಮ ಕುಟುಂಬ ಸದಸ್ಯರೊಂಗಿದೆ ತಿರುಪತಿಗೆ (Tirupati) ತೆರಳಿ ತಿಮ್ಮಪ್ಪನ ಸನ್ನಿಧಾನದಲ್ಲಿ ಮುಡಿ ಕೊಟ್ಟು ಬಂದಿದ್ದಾರೆ. ಈ ವರ್ಷದ ಪ್ರಮುಖ ಚೆಸ್‌ ಪಂದ್ಯಾವಳಿಗಳಿಗೆ ಮುಂಚಿತವಾಗಿ ಚೆಸ್‌ ತಾರೆ ಗುಕೇಶ್‌ ತಿರುಪತಿ ತಿಮ್ಮಪ್ಪನ ದರ್ಶನ ಪಡೆದು, ಕೇಶದಾನ ಮಾಡಿದ್ದಾರೆ. ಈ ಕುರಿತ ವಿಡಿಯೋವೊಂದು ಇದೀಗ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ.

ಕುಟುಂಬ ಸಮೇತರಾಗಿ ತಿರುಪತಿ ದೇಗುಲಕ್ಕೆ ಭೇಟಿ ನೀಡಿದ ಚೆಸ್‌. ತಾರೆ ಡಿ. ಗುಕೇಶ್‌ ದೇವರ ದರ್ಶನ ಪಡೆದು, ತಿಮ್ಮಪ್ಪನಿಗೆ ಮುಡಿ ಕೊಟ್ಟು ಬಂದಿದ್ದಾರೆ. ಆ ಬಳಿಕ ಮಾತನಾಡಿದ ಅವರು “ನಾನು ಕಷ್ಟಪಟ್ಟು ಕೆಲಸ ಮಾಡುತ್ತಲೇ ಇರಬೇಕು. 2025 ರಲ್ಲಿ ಸಾಕಷ್ಟು ಪ್ರಮುಖ ಚೆಸ್‌ ಪಂದ್ಯಾವಳಿಗಳಿವೆ. ಆದ್ದರಿಂದ ನಾನು ಅದರ ಮೇಲೆ ಗಮನವನ್ನು ಕೇಂದ್ರೀಕರಿಸುತ್ತಿದ್ದೇನೆ. ನಾನು ಎಲ್ಲಾ ಸ್ವರೂಪಗಳಲ್ಲಿಯೂ ಸುಧಾರಿಸಲು ಬಯಸುತ್ತೇನೆ, ಮತ್ತು ದೇವರ ಕೃಪೆಯಿಂದ ಎಲ್ಲಾ ಒಳ್ಳೆಯದೇ ಆಗುತ್ತೆ ಎಂದು ಭಾವಿಸುತ್ತೇನೆ” ಎಂದು ಹೇಳಿದರು.

ಇದನ್ನೂ ಓದಿ
ಕೃಷ್ಣ ಸುಂದರಿʼಯ ಮದುವೆಯ ಫೋಟೋ ಝಲಕ್‌ ನೋಡಿ
ಐಸ್‌ಕ್ರೀಂ ತಿಂದ ತಾಯಿಯ ವಿರುದ್ಧ ಪೊಲೀಸರಿಗೆ ದೂರು ನೀಡಿದ ಮಗ
ಪ್ರೀತಿಯಲ್ಲಿ ಮೋಸ, ಅಶಾಂತಿ ಎಲ್ಲಾ ಸಮಸ್ಯೆಗಳಿಗೂ ಚಹಾ ಒಂದೇ ಪರಿಹಾರ
ಸ್ಲಿಮ್‌ ಆಗಿ ಕಾಣಲು ತೂಕ ಇಳಿಸಿಕೊಳ್ಳುವ ಭರದಲ್ಲಿ ಯುವತಿಯ ಪ್ರಾಣವೇ ಹೋಯ್ತು

ವೈರಲ್​ ವಿಡಿಯೋ ಇಲ್ಲಿದೆ ನೋಡಿ:

ಈ ಕುರಿತ ವಿಡಿಯೋವನ್ನು Norway Chess ಹೆಸರಿನ ಎಕ್ಸ್‌ ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು, “ವಿಶ್ವ ಚೆಸ್‌ ಚಾಂಪಿಯನ್‌ ಗುಕೇಶ್‌ ತಮ್ಮ ಕುಟುಂಬ ಸದಸ್ಯರೊಂದಿಗೆ ತಿರುಪತಿ ತಿರುಮಲ ದೇವಸ್ಥಾನಕ್ಕೆ ಭೇಟಿ ನೀಡಿದ ಕ್ಷಣ” ಎಂಬ ಶೀರ್ಷಿಕೆಯನ್ನು ಬರೆದುಕೊಳ್ಳಲಾಗಿದೆ. ವೈರಲ್‌ ಆಗುತ್ತಿರುವ ವಿಡಿಯೋದಲ್ಲಿ ದೇವರ ದರ್ಶನ ಪಡೆದು ಮುಡಿ ಕೊಟ್ಟ ಬಳಿಕ ಗುಕೇಶ್‌ ʼ ನಾನು ಕಷ್ಟಪಟ್ಟು ಕೆಲಸ ಮಾಡುತ್ತಲೇ ಇರಬೇಕು. 2025 ರಲ್ಲಿ ಸಾಕಷ್ಟು ಪ್ರಮುಖಚೆಸ್‌ ಪಂದ್ಯಾವಳಿಗಳಿವೆ. ಆದ್ದರಿಂದ ನಾನು ಅದರ ಮೇಲೆ ಗಮನವನ್ನು ಕೇಂದ್ರೀಕರಿಸುತ್ತಿದ್ದೇನೆ. ದೇವರ ಕೃಪೆಯಿಂದ ಎಲ್ಲಾ ಒಳ್ಳೆಯದೇ ಆಗುತ್ತೆ ಎಂದು ಭಾವಿಸುತ್ತೇನೆʼ ಎಂದ ಹೇಳುತ್ತಿರುವ ದೃಶ್ಯವನ್ನು ಕಾಣಬಹುದು.

ಇದನ್ನೂ ಓದಿ: 18 ಕೋಟಿ ರೂ.ಗೆ ಕನ್ಯತ್ವ ಮಾರಿಕೊಂಡ ವಿದ್ಯಾರ್ಥಿನಿ; ಹಾಲಿವುಡ್ ಹೀರೋ ಖರೀದಿ

ಮಾರ್ಚ್‌ 12 ರಂದು ಶೇರ್‌ ಮಾಡಲಾದ ಈ ವಿಡಿಯೋ 28 ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಇವರ ನಮ್ರತೆ ಇವರನ್ನು ಬಹಳ ಎತ್ತರಕ್ಕೆ ಕೊಂಡೊಯ್ಯುತ್ತದೆʼ ಎಂದು ಹೇಳಿದ್ದಾರೆ. ಇನ್ನೊಬ್ಬ ಬಳಕೆದಾರರು ʼವಿಶ್ವ ಚಾಂಪಿಯನ್‌ನ ದೇವರ ಮೇಲಿರುವ ನಂಬಿಕೆ ನಿಜವಾಗಿಯೂ ಅದ್ಭುತವಾಗಿದೆʼ ಎಂಬ ಕಾಮೆಂಟ್‌ ಬರೆದುಕೊಂಡಿದ್ದಾರೆ.

ವೈರಲ್​​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Published On - 11:06 am, Thu, 13 March 25