Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹರಾಜಿನಲ್ಲಿ 18 ಕೋಟಿ ರೂ.ಗೆ ಕನ್ಯತ್ವ ಮಾರಿಕೊಂಡ ವಿದ್ಯಾರ್ಥಿನಿ; ಖರೀದಿಸಿದ್ದು ಹಾಲಿವುಡ್ ಹೀರೋ

22 ವರ್ಷದ ಲಂಡನ್ ವಿದ್ಯಾರ್ಥಿನಿ ತನ್ನ ಕನ್ಯತ್ವವನ್ನು ಆನ್‌ಲೈನ್ ಹರಾಜಿನಲ್ಲಿ ಹಾಲಿವುಡ್ ನಟನಿಗೆ ಮಾರಾಟ ಮಾಡಿದ್ದಾಳೆ. 18 ಕೋಟಿ ರೂಪಾಯಿಗೆ ಈ ಮಾರಾಟ ನಡೆದಿದೆ. ಶಿಕ್ಷಣ ಮತ್ತು ಭವಿಷ್ಯದ ಭದ್ರತೆಗಾಗಿ ಈ ನಿರ್ಧಾರ ಕೈಗೊಂಡಿದ್ದಾಳೆ ಎಂದು ವಿದ್ಯಾರ್ಥಿನಿ ಹೇಳಿಕೊಂಡಿದ್ದಾಳೆ. ಈ ಘಟನೆ ಸಾಕಷ್ಟು ವಿವಾದ ಹುಟ್ಟುಹಾಕಿದೆ.

ಹರಾಜಿನಲ್ಲಿ 18 ಕೋಟಿ ರೂ.ಗೆ ಕನ್ಯತ್ವ ಮಾರಿಕೊಂಡ ವಿದ್ಯಾರ್ಥಿನಿ; ಖರೀದಿಸಿದ್ದು ಹಾಲಿವುಡ್ ಹೀರೋ
ಲೌರಾ
Follow us
ರಾಜೇಶ್ ದುಗ್ಗುಮನೆ
|

Updated on: Mar 13, 2025 | 9:58 AM

ಹಾಲಿವುಡ್ (Hollwyood) ಹೀರೋಗಳ ಬಳಿ ಸಾಕಷ್ಟು ಹಣ ಇದೆ. ಹಣ ಇರೋ ಕಾರಣದಿಂದಲೇ ಅವರಲ್ಲಿ ಕೆಲವರಿಗೆ ವಿವಿಧ ರೀತಿಯ ದುರಾಸೆಗಳು ಸೇರಿಕೊಂಡಿವೆ. ಈಗ ಹಾಲಿವುಡ್ ಹೀರೋ ಒಬ್ಬರು ದೊಡ್ಡ ಮೊತ್ತಕ್ಕೆ ವಿದ್ಯಾರ್ಥಿನಿಯೊಬ್ಬರ ಕನ್ಯತ್ವ ಖರೀದಿಸಿದ್ದು ಸಾಕಷ್ಟು ಸಂಚಲನ ಸೃಷ್ಟಿಸಿದೆ! ಹೌದು, ಇತ್ತೀಚೆಗೆ ನಡೆದ ಬಿಡ್ಡಿಂಗ್​ನಲ್ಲಿ ಈ ಘಟನೆ ನಡೆದಿದೆ. ಲಂಡನ್ ಮೂಲದ ವಿದ್ಯಾರ್ಥಿನಿ ಕನ್ಯತ್ವ ಕಳೆದುಕೊಳ್ಳಲು ಇಷ್ಟು ದೊಡ್ಡ ಮೊತ್ತ ತೆಗೆದುಕೊಂಡಿದ್ದಾಳೆ! ಜೀವನದಲ್ಲಿ ಸೆಟಲ್ ಆಗಬೇಕು ಎಂಬುದು ಆಕೆಯ ಆಸೆ. ಅದಕ್ಕಾಗಿ ಈ ಹಾದಿ ಹಿಡಿದಿದ್ದಾಳೆ.

ಲಂಡನ್​ನ ಮ್ಯಾಂಚೆಸ್ಟರ್ ವಿದ್ಯಾರ್ಥಿನಿ ಲೌರಾ ಎಂಬಾಕೆಗೆ ಈಗಿನ್ನೂ 22 ವರ್ಷ. ಆಕೆ ವಿದ್ಯಾರ್ಥಿನಿ. ಅವಳು ಈಗ ಸುದ್ದಿಯಲ್ಲಿ ಇದ್ದಾಳೆ. ಅವಳು ತನ್ನ ಕನ್ಯತ್ವವನ್ನು ವೆಬ್​ಸೈಟ್ ಮೂಲಕ ಹರಾಜಿಗೆ ಇಟ್ಟಿದ್ದಳು. ಈ ಹರಾಜಿನಲ್ಲಿ ಜನಸಾಮಾನ್ಯರು, ಉದ್ಯಮಿಗಳು, ಸೆಲೆಬ್ರಿಟಿಗಳು ಹಾಗೂ ರಾಜಕಾರಣಿಗಳು ಭಾಗಿ ಆಗಿದ್ದರು. ಈಗ ಈ ಹುಡುಗಿಯ ಕನ್ಯತ್ವ ಹಾಲಿವುಡ್ ಹೀರೋಗೆ ಮಾರಾಟ ಆಗಿದೆ. ಆದರೆ, ಹೀರೋನ ಹೆಸರು ಎಲ್ಲಿಯೂ ರಿವೀಲ್ ಆಗಿಲ್ಲ.

ಲೌರಾ ಧಾರ್ಮಿಕ ಹಿನ್ನೆಲೆ ಹೊಂದಿದ್ದಾಳೆ. ಅವಳಿಗೆ ತನ್ನ ನಿರ್ಧಾರದ ಬಗ್ಗೆ ಯಾವುದೇ ಬೇಸರ ಇಲ್ಲ. ತನ್ನ ಜೀವನ ಸೆಟಲ್ ಮಾಡಿಕೊಳ್ಳಲು ಇದು ಒಳ್ಳೆಯ ಆಯ್ಕೆ ಎಂದು ಆಕೆ ಹೇಳಿದ್ದಾಳೆ. ‘ನನಗೆ ಆ ಬಗ್ಗೆ ಬೇಸರ ಇಲ್ಲ. ಪ್ರತಿಯಾಗಿ ಏನೂ ಸಿಗದೇ ಕೆಲವರು ಕನ್ಯತ್ವ ಕಳೆದುಕೊಳ್ಳುತ್ತಾರೆ. ನನಗೆ ಭವಿಷ್ಯವೇ ಸೆಟಲ್ ಆಗುತ್ತಿದೆ’ ಎಂದು ಅವಳು ಹೇಳಿದ್ದಾಗಿ ವರದಿ ಆಗಿದೆ.

ಇದನ್ನೂ ಓದಿ
Image
ಮಜಾ ಟಾಕೀಸ್​ನಲ್ಲಿ ಸ್ಯಾಂಡಲ್​ವುಡ್ ಬ್ಯೂಟಿಗಳು; ಕುರಿನ ಕಾಲೆಳೆದ ಮಾನ್ವಿತಾ
Image
ಬೇಸರದಲ್ಲಿರೋ ಸೋನು ನಿಗಮ್ ಬೆಂಬಲಕ್ಕೆ ನಿಂತ ಸಂಗೀತಾ ಶೃಂಗೇರಿ
Image
ಯಶ್​ ಬಗ್ಗೆ ಗುಣಗಾನ ಮಾಡಿದ ಹಾಲಿವುಡ್ ತಂತ್ರಜ್ಞ; ಕನ್ನಡ ಚಿತ್ರರಂಗದ ಹೆಮ್ಮೆ
Image
‘ಇದು ಸಿಂಹದ ಮರಿ’; ‘ಅಪ್ಪು’ 100ನೇ ದಿನದ ಸೆಲೆಬ್ರೇಷನ್​ನಲ್ಲಿ ರಜನಿ ಮಾತು

ಲೌರಾನ ಕನ್ಯತ್ವ ಪಡೆದುಕೊಳ್ಳಲು ಹಾಲಿವುಡ್​ನ ಹೀರೋ ಜೊತೆ ಅನೇಕ ರಾಜಕಾರಣಿಗಳು, ಉದ್ಯಮಿಗಳು ರೇಸ್​ನಲ್ಲಿ ಇದ್ದರು. ಅಂತಿಮವಾಗಿ 18 ಕೋಟಿ ರೂಪಾಯಿ ಕೊಡಲು ರೆಡಿ ಆದ ಹೀರೋಗೆ ಲೌರಾ ಸಿಕ್ಕಿದ್ದಾಳೆ. ಲೌರಾ ಇನ್ನೂ ಶಿಕ್ಷಣ ಪಡೆಯುತ್ತಿದ್ದಾಳೆ. ಈ ರೀತಿ ಬಂದ ಹಣವನ್ನು ಓದಿಗೆ ಬಳಕೆ ಮಾಡೋದಾಗಿ ಹೇಳಿದ್ದಾಳೆ. ಅಲ್ಲದೆ, ಭವಿಷ್ಯದಲ್ಲಿ ಹಣಕ್ಕಾಗಿ ಸುಗರ್ ಡ್ಯಾಡಿನ ಹುಡುಕಿಕೊಳ್ಳೋದಾಗಿ ಹೇಳಿದ್ದಾಳೆ.

ಇದನ್ನೂ ಓದಿ: ವಿದ್ಯಾರ್ಥಿಗಳ ಕನ್ಯತ್ವ ಪರೀಕ್ಷೆ ವರದಿ ಜೊತೆಗೆ ಹೆಸರು,ಫೋನ್ ನಂಬರ್ ಶೇರ್​​​​​​ ಮಾಡಿದ ಪ್ರತಿಷ್ಠಿತ ವಿಶ್ವವಿದ್ಯಾನಿಲಯ

ಲೌರಾ ಕನ್ಯೆ ಹೌದೋ ಅಥವಾ ಇಲ್ಲವೋ ಎಂಬುದನ್ನು ಖಚಿತಪಡಿಸಲು ವೈದ್ಯಕೀಯ ಪರೀಕ್ಷೆಗಳನ್ನು ಮಾಡಿಸಲಾಗಿದೆ. ಆಕೆ ಕನ್ಯತ್ವ ಹೊಂದಿದ್ದಾಳೆ ಎಂಬ ವರದಿ ಬಂದ ಬಳಿಕವೇ ಅವಳನ್ನು ಹರಾಜಿಗೆ ಇಡಲಾಗಿತ್ತು.  ಸದ್ಯ ಈ ವಿಚಾರ ಸಾಕಷ್ಟು ಚರ್ಚೆಗಳನ್ನು ಹುಟ್ಟುಹಾಕಿದೆ. ಕೆಲವರು ಇದನ್ನು ಟೀಕಿಸಿದ್ದಾರೆ. ಆದರೆ, ಇದಕ್ಕೆ ಲೌರಾ ತಲೆಕೆಡಿಸಿಕೊಂಡಿಲ್ಲ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಸಿಎಂ ಸಿದ್ದರಾಮಯ್ಯಕ್ಕಿಂತ ಮೊದಲು ಡಿಸಿಎಂ ಶಿವಕುಮಾರ್ ದೆಹಲಿ ಪಯಣ
ಸಿಎಂ ಸಿದ್ದರಾಮಯ್ಯಕ್ಕಿಂತ ಮೊದಲು ಡಿಸಿಎಂ ಶಿವಕುಮಾರ್ ದೆಹಲಿ ಪಯಣ
ಕರಾಟೆಯಲ್ಲಿ ಪುಟ್ಟ ಹುಡುಗನ ಅದ್ಭುತ ಸಾಧನೆ, ಏಷ್ಯಾ ಬುಕ್ ಆಫ್​ಗೆ ಸೇರ್ಪಡೆ
ಕರಾಟೆಯಲ್ಲಿ ಪುಟ್ಟ ಹುಡುಗನ ಅದ್ಭುತ ಸಾಧನೆ, ಏಷ್ಯಾ ಬುಕ್ ಆಫ್​ಗೆ ಸೇರ್ಪಡೆ
ಪಾರ್ಲಿಮೆಂಟ್ ಕಚೇರಿಯಲ್ಲಿ ಇವತ್ತು ಸಹ ಹೆಚ್​ಡಿಕೆಯನ್ನು ಭೇಟಿಯಾದ ಸತೀಶ್
ಪಾರ್ಲಿಮೆಂಟ್ ಕಚೇರಿಯಲ್ಲಿ ಇವತ್ತು ಸಹ ಹೆಚ್​ಡಿಕೆಯನ್ನು ಭೇಟಿಯಾದ ಸತೀಶ್
Video: ಬೆಂಗಳೂರಿನಲ್ಲಿ ಭಯಾನಕ ಸಿಲಿಂಡರ್ ಸ್ಫೋಟ, ವ್ಯಕ್ತಿ ಜಸ್ಟ್ ಮಿಸ್
Video: ಬೆಂಗಳೂರಿನಲ್ಲಿ ಭಯಾನಕ ಸಿಲಿಂಡರ್ ಸ್ಫೋಟ, ವ್ಯಕ್ತಿ ಜಸ್ಟ್ ಮಿಸ್
ಸ್ಥಳೀಯ ಸಂಸ್ಥೆಗಳ ಚುನಾವಣೆ ಬ್ಯಾಲಟ್ ಪೇಪರ್ ಮೂಲಕ ನಡೆಸುವ ಚಿಂತನೆ: ಆಯುಕ್ತ
ಸ್ಥಳೀಯ ಸಂಸ್ಥೆಗಳ ಚುನಾವಣೆ ಬ್ಯಾಲಟ್ ಪೇಪರ್ ಮೂಲಕ ನಡೆಸುವ ಚಿಂತನೆ: ಆಯುಕ್ತ
ಮಾಜಿ ಶಾಸಕರ ಭೇಟಿ ಆಕಸ್ಮಿಕವೋ ಅಥವಾ ಉದ್ದೇಶಪೂರ್ವಕವೋ ಗೊತ್ತಾಗುತ್ತಿಲ್ಲ!
ಮಾಜಿ ಶಾಸಕರ ಭೇಟಿ ಆಕಸ್ಮಿಕವೋ ಅಥವಾ ಉದ್ದೇಶಪೂರ್ವಕವೋ ಗೊತ್ತಾಗುತ್ತಿಲ್ಲ!
ಉಚಿತ ಪ್ರಯಾಣದ ಟಿಕೆಟ್ ಕಳಕೊಂಡು ಇಡೀ ಬಸ್​ ತಡಕಾಡಿದ ಅಜ್ಜಿ​​
ಉಚಿತ ಪ್ರಯಾಣದ ಟಿಕೆಟ್ ಕಳಕೊಂಡು ಇಡೀ ಬಸ್​ ತಡಕಾಡಿದ ಅಜ್ಜಿ​​
ಶಿವಕುಮಾರ್ ಡಿಸಿಎಂ ಆಗಿರುವುದರಿಂದ ಭೇಟಿಯಾಗಲೇಬೇಕಾಗುತ್ತದೆ: ಸೋಮಶೇಖರ್
ಶಿವಕುಮಾರ್ ಡಿಸಿಎಂ ಆಗಿರುವುದರಿಂದ ಭೇಟಿಯಾಗಲೇಬೇಕಾಗುತ್ತದೆ: ಸೋಮಶೇಖರ್
ಸ್ಕೂಟಿಗೆ ಡಿಕ್ಕಿ ಹೊಡೆದು 11 ಕಿ.ಮೀ ಎಳೆದೊಯ್ದ ಕಾರು, ಭಯಾನಕ ವಿಡಿಯೋ
ಸ್ಕೂಟಿಗೆ ಡಿಕ್ಕಿ ಹೊಡೆದು 11 ಕಿ.ಮೀ ಎಳೆದೊಯ್ದ ಕಾರು, ಭಯಾನಕ ವಿಡಿಯೋ
ಹೇಳಬೇಕಾಗಿದ್ದನ್ನು ಸರಿಯಾಗಿ ಕನ್ವೇ ಮಾಡಲು ಶಿವಕುಮಾರ್​ಗೆ ಅಗಿಲ್ಲ: ಯತೀಂದ್ರ
ಹೇಳಬೇಕಾಗಿದ್ದನ್ನು ಸರಿಯಾಗಿ ಕನ್ವೇ ಮಾಡಲು ಶಿವಕುಮಾರ್​ಗೆ ಅಗಿಲ್ಲ: ಯತೀಂದ್ರ