ಸನಾತನ ಸಂಪ್ರದಾಯದಂತೆ ನಡೆದ ಶ್ರೀಕೃಷ್ಣನ ಭಕ್ತೆಯ ವಿವಾಹ ಮಹೋತ್ಸವ; ʼಕೃಷ್ಣ ಸುಂದರಿʼಯ ಮದುವೆಯ ಫೋಟೋ ಝಲಕ್ ನೋಡಿ
ವಿದೇಶಿಯರು ಭಾರತೀಯರನ್ನು ಮದುವೆಯಾದ ಹಾಗೂ ವಿದೇಶಿ ಜೋಡಿಗಳು ಹಿಂದೂ ಸಂಪ್ರದಾಯದಂತೆ ಮದುವೆಯಾದಂತಹ ಸಾಕಷ್ಟು ಕಥೆಗಳನ್ನು ನೋಡಿದ್ದೀರಿ ಅಲ್ವಾ. ಅದೇ ರೀತಿ ಇಲ್ಲೊಂದು ವಿವಾಹ ಸಮಾರಂಭದ ಫೋಟೋ ವೈರಲ್ ಆಗಿದ್ದು, ವಿದೇಶಿ ಮೂಲಕ ಕೃಷ್ಣ ಸುಂದರಿಯೊಬ್ಬರು ಸನಾತನ ಧರ್ಮದಂತೆ ಮದುವೆಯಾಗಿದ್ದಾರೆ. ಅಪ್ಪಟ ಕೃಷ್ಣ ಭಕ್ತೆಯಾದ ಇವರು ತಮ್ಮ ಮದುವೆ ಸಮಾರಂಭದಲ್ಲಿ ಕೆಂಪು ಬಣ್ಣದ ಬನಾರಸಿ ಸೀರೆಯುಟ್ಟು ದೇವತೆಯಂತೆ ಕಂಗೊಳಿಸಿದ್ದಾರೆ.

ಹಿಂದೂಗಳು (Hindu) ಮಾತ್ರವಲ್ಲದೆ ಹೆಚ್ಚಿನ ಸಂಖ್ಯೆಯ ವಿದೇಶಿಗರು (Foreigners) ಕೂಡಾ ಶ್ರೀಕೃಷ್ಣ(Sri Krishna) ನನ್ನು ಪೂಜಿಸುತ್ತಾರೆ. ವಿದೇಶಿಗರಿಗೆ ಸನಾತನ ಧರ್ಮದ ಮೇಲಿರುವ ಪ್ರೀತಿ, ಗೌರವಕ್ಕೆ ಸಂಬಂಧಿಸಿದ ಸಾಕಷ್ಟು ಫೋಟೋ, ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ಆಗಾಗ್ಗೆ ಕಾಣಸಿಗುತ್ತಿರುತ್ತವೆ. ಇಲ್ಲೊಂದು ಅಂತಹದ್ದೇ ಅದ್ಭುತ ಫೋಟೋ ವೈರಲ್ ಆಗಿದ್ದು, ವಿದೇಶಿ ಮೂಲದ ಕೃಷ್ಣ ಸುಂದರಿಯೊಬ್ಬರು ಶಾಸ್ತ್ರೋಕ್ತವಾಗಿ ಭಾರತೀಯ ವ್ಯಕ್ತಿಯನ್ನು ಮದುವೆಯಾಗಿದ್ದಾರೆ. ಮಹಾನ್ ಕೃಷ್ಣ (Krishna) ಭಕ್ತೆಯಾದ ಇವರು ತಮ್ಮ ಮದುವೆ ಸಮಾರಂಭದಲ್ಲಿ ತಮ್ಮ ಮದುವೆ ಸಮಾರಂಭದಲ್ಲಿ ಹಣೆಗೆ ಕೃಷ್ಣ ತಿಲಕ ಹಾಗೂ ಕೆಂಪು ಬಣ್ಣದ ಬನಾರಸಿ ಸೀರೆಯುಟ್ಟು ದೇವತೆಯಂತೆ ಕಂಗೊಳಿಸಿದ್ದಾರೆ.
ದೇವತೆಯಂತೆ ಕಂಗೊಳಿಸಿದ ಕೃಷ್ಣ ಸುಂದರಿ:
ಇಸ್ಕಾನ್ ಅನುಯಾಯಿ ಹಾಗೂ ಅಪ್ಪಟ ಕೃಷ್ಣ ಭಕ್ತೆಯಾದ ಆಫ್ರಿಕಾ ಮೂಲದ ಶ್ಯಾಮ ಸನಾತನ ಸಂಸ್ಕೃತಿಯಂತೆ ಮದುವೆಯಾಗಿದ್ದಾರೆ. ಕೆಂಪು ಬಣ್ಣದ ಬನಾರಸಿ ಸೀರೆ, ಹಣೆಗೆ ಕೃಷ್ಣ ತಿಲಕ, ಚೋಕರ್, ಚಿನ್ನದ ಹಾರ, ಬಳೆಗಳು, ಮೂಗುತಿ ಹಾಕಿ ಶ್ಯಾಮ ತಮ್ಮ ಮದುವೆಯಲ್ಲಿ ದೇವತೆಯಂತೆ ಕಂಗೊಳಿಸಿದ್ದಾರೆ.
ಸೀರೆಯುಟ್ಟು, ಆಭರಣ ತೊಟ್ಟು ರಾಣಿಯಂತೆ ಸಿಂಗಾರಕೊಂಡ ಕೃಷ್ಣ ಸುಂದರಿ ಭಾರತೀಯ ವ್ಯಕ್ತಿಯೊಂದಿಗೆ ಶಾಸ್ತ್ರೋಕ್ತವಾಗಿ ಮದುವೆಯಾಗಿದ್ದಾರೆ. ಇವರ ವಿವಾಹ ಸಮಾರಂಭದ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದ್ದು, ವಧುವಿನ ಸೌಂದರ್ಯ ಮತ್ತು ಸನಾತನ ಸಂಸ್ಕೃತಿಯ ವೈಭವದ ದೃಶ್ಯವನ್ನು ಕಂಡು ಸ್ವರ್ಗವೇ ಧರೆಗಿಳಿದು ಬಂದಂತಿದೆ ಎಂದು ನೆಟ್ಟಿಗರು ಮಾತನಾಡಿಕೊಳ್ಳುತ್ತಿದ್ದಾರೆ.
ವೈರಲ್ ಫೋಟೋ ಇಲ್ಲಿದೆ ನೋಡಿ:
View this post on Instagram
ಕಾಸ್ಮೆಟಾಲಜಿಸ್ಟ್ ಆಗಿರುವ ಶ್ಯಾಮ (oh.no.not.syami/ Śyāma Premī Nair) ಇನ್‌ಸ್ಟಾಗ್ರಾಮ್‌ನಲ್ಲೂ ಸಿಕ್ಕಾಪಟ್ಟೆ ಆಕ್ಟಿವ್ ಆಗಿದ್ದು, ಸನಾತನ ಧರ್ಮದಂತೆ ಹಾಗೂ ಶಾಸ್ತ್ರೋಕ್ತವಾಗಿ ನಡೆದ ತಮ್ಮ ಮದುವೆ ಸಮಾರಂಭದ ಫೋಟೋ ವಿಡಿಯೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಮದುವೆ ಮಾತ್ರವಲ್ಲದೆ ಅರಶಿನ ಶಾಸ್ತ್ರ ಕಾರ್ಯಕ್ರಮವೂ ಅದ್ದೂರಿಯಾಗಿ ನಡೆದಿದ್ದು, ಈ ಕಾರ್ಯಕ್ರಮದಲ್ಲಿ ಶ್ಯಾಮ ಹಳದಿ ಬಣ್ಣದ ಬಟ್ಟೆ ತೊಟ್ಟು ಭಾರತೀಯ ನಾರಿಯಂತೆ ಮಿಂಚಿದ್ದಾರೆ.
ಇದನ್ನೂ ಓದಿ: ಮಮ್ಮಿನಾ ಈಗ್ಲೇ ಕರ್ಕೊಂಡು ಹೋಗಿ; ಐಸ್‌ಕ್ರೀಂ ತಿಂದ ತಾಯಿಯನ್ನು ಬಂಧಿಸಲು ಪೊಲೀಸರನ್ನೇ ಮನೆಗೆ ಕರೆಸಿದ ಪುಟ್ಟ ಪೋರ
ಮದುವೆಯಲ್ಲಿ ಕೃಷ್ಣ ಸುಂದರಿ ಶ್ಯಾಮ ಕೆಂಪು ಹಾಗೂ ಗೋಲ್ಡನ್ ಮಿಶ್ರಿತ ಬಣ್ಣದ ಬನಾರಸಿ ಸೀರೆ, ಚಿನ್ನದ ಸರಗಳು, ಬಳೆಗಳು, ಸೊಂಟದ ಪಟ್ಟಿ ಧರಿಸಿ ಲಕ್ಷ್ಮೀ ದೇವಿಯಂತೆ ಕಂಗೊಳಿಸಿದ್ದಾರೆ. ಕೃಷ್ಣ ತಿಲಕ ಆಕೆಯ ಸೌಂದರ್ಯವನ್ನು ಮತ್ತಷ್ಟು ಹೆಚ್ಚಿಸಿದ್ದು, ಕೃಷ್ಣ ಸುಂದರಿಯ ಸೌಂದರ್ಯಕ್ಕೆ ಎಲ್ಲರೂ ಮಾರು ಹೋಗಿದ್ದಾರೆ. ಮದುವೆಯಲ್ಲಿ ವಧು ಮಾತ್ರವಲ್ಲ, ವರನೂ ಸಹ ಸಂಪೂರ್ಣ ಸಾಂಪ್ರದಾಯಿಕ ಉಡುಪಿನಲ್ಲಿ ಕಾಣಿಸಿಕೊಂಡಿದ್ದು, ಶಾಸ್ತ್ರೋಕ್ತವಾಗಿ ನಡೆದ ಈ ವಿವಾಹ ಮಹೋತ್ಸವದ ಫೋಟೋಗಳು ಎಲ್ಲೆಡೆ ವೈರಲ್ ಆಗುತ್ತಿದೆ.
ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ