Viral: ಮಟನ್ ಕರಿ ಮಾಡಲು ನಿರಾಕರಿಸಿದ ಪತ್ನಿಯನ್ನು ಹೊಡೆದು ಕೊಂದ ಪತಿರಾಯ
ಉಪ್ಪಿಲ್ಲ, ಹುಳಿಯಿಲ್ಲ, ಖಾರವಿಲ್ಲ ಎಂದು ಅಡುಗೆ ವಿಚಾರವಾಗಿ ಗಂಡಂದಿರು ತಗಾದೆ ತೆಗೆಯುವುದು ಹೊಸದೇನಲ್ಲ ಬಿಡಿ. ಇನ್ನೂ ಈ ವಿಚಾರವಾಗಿಯೇ ಗಲಾಟೆಗಳು ಕೂಡಾ ನಡೆದದ್ದುಂಟು. ಅದೇ ರೀತಿ ಇಲ್ಲೊಂದು ಮಟನ್ ಕರಿ ಮಾಡುವ ವಿಚಾರಕ್ಕೆ ಪತಿ-ಪತ್ನಿಯ ನಡುವೆ ಗಲಾಟೆ ನಡೆದಿದ್ದು, ಈ ಗಲಾಟೆ ಹಿಂಸಾಚಾರಕ್ಕೆ ತಿರುಗಿ ಮಟನ್ ಕರಿ ಮಾಡಲ್ಲ ಎಂದು ಹೇಳಿದ ಪತ್ನಿಯನ್ನು ಪತಿರಾಯ ಹೊಡೆದು ಕೊಂದಿದ್ದಾನೆ.

ತೆಲಂಗಾಣ, ಮಾ. 13: ಗಂಡ ಹೆಂಡತಿ (husband-wife) ಜಗಳ ಉಂಡು ಮಲಗೋ ತನಕ ಎಂಬ ಮಾತಿದೆ. ಹೀಗೆ ಗಂಡ ಹೆಂಡತಿ ನಡುವೆ ಸಣ್ಣಪುಟ್ಟ ಜಗಳಗಳು (hassle) ನಡೆಯುವುದು ಸಾಮಾನ್ಯ. ಆದ್ರೆ ಇತ್ತೀಚಿನ ದಿನಗಳಲ್ಲಿ ಪತಿ ಪತ್ನಿಯರ ಜಗಳ ಕೌಟುಂಬಿಕ ಹಿಂಸಾಚಾರಕ್ಕೆ ತಿರುಗುವ ಹಾಗೂ ವಿಚ್ಛೇದನದವರೆಗೂ ಹೋಗುವ ಸಂಗತಿಗಳೇ ಹೆಚ್ಚಾಗಿ ಕೇಳಿ ಬರುತ್ತಿವೆ. ಇಲ್ಲೊಂದು ಅಂತಹದ್ದೇ ಆಘಾತಕಾರಿ ಘಟನೆ ನಡೆದಿದ್ದು, ಅಡುಗೆ ವಿಚಾರಕ್ಕೆ ಗಂಡ ಹೆಂಡತಿಯ ನಡುವೆ ನಡೆದ ಕ್ಷುಲ್ಲಕ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ. ಮಟನ್ ಕರಿ (mutton curry) ಮಾಡುವ ವಿಚಾರವಾಗಿ ಇವರಿಬ್ಬರ ನಡುವೆ ಗಲಾಟೆ ನಡೆದಿದ್ದು, ಈ ಗಲಾಟೆ ಹಿಂಸಾಚಾರಕ್ಕೆ ತಿರುಗಿ ಕೊನೆಗೆ ಮಟನ್ ಕರಿ ಮಾಡಲ್ಲ ಎಂದು ಹೇಳಿದ ಪತ್ನಿಯನ್ನು ಪತಿರಾಯ ಹೊಡೆದು ಕೊಂದಿದ್ದಾನೆ.
ಈ ಆಘಾತಕಾರಿ ಘಟನೆ ತೆಲಂಗಾಣದ ಮಹಬೂಬಾಬಾದ್ ಎಂಬಲ್ಲಿ ನಡೆದಿದ್ದು, ಮಟನ್ ಕರಿ ಮಾಡಲು ನಿರಾಕರಿದ ಪತ್ನಿಯನ್ನು ಪತಿರಾಯ ಹೊಡೆದು ಕೊಂದಿದ್ದಾನೆ. ಮೃತ ಮಹಿಳೆಯನ್ನು 35 ವರ್ಷದ ಮಾಲೋತ್ ಕಲಾವತಿ ಎಂದು ಗುರುತಿಸಲಾಗಿದೆ. ಅಡುಗೆ ವಿಚಾರವಾಗಿ ಕಲಾವತಿ ಹಾಗೂ ಆಕೆಯ ಗಂಡನ ನಡುವೆ ಜಗಳ ನಡೆದಿದ್ದು, ನಾನು ಮಟನ್ ಕರಿ ಮಾಡಲ್ಲ ಎಂದು ಕಲಾವತಿ ಹೇಳಿದ್ದಾಳೆ. ಇದರಿಂದ ಕೋಪಗೊಂಡ ಪತಿರಾಯ ತಡರಾತ್ರಿ ಯಾರೂ ಇಲ್ಲದ ವೇಳೆ ಆಕೆಯ ಮೇಲೆ ಹಲ್ಲೆ ನಡೆಸಿ ಕೋಲಿನಿಂದ ಹೊಡೆದು ಕೊಂದಿದ್ದಾನೆ. ಹೀಗೆ ಇವರಿಬ್ಬರ ನಡುವೆ ನಡೆದ ಈ ವಾಗ್ವಾದ ಹಿಂಸಾಚಾರಕ್ಕೆ ತಿರುಗಿ ಕ್ಷುಲ್ಲಕ ಕಾರಣಕ್ಕೆ ಆರಂಭವಾದ ಈ ಜಗಳ ಕಲಾವತಿಯ ದುರಂತ ಸಾವಿಗೆ ಕಾರಣವಾಗಿದೆ.
ಮೃತ ಮಹಿಳೆಯ ತಾಯಿ ನೀಡಿದ ದೂರಿನ ಆಧಾರದ ಮೇಲೆ ಮೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಸದ್ಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಮಹಬೂಬಾಬಾದ್ ಜಿಲ್ಲಾಸ್ಪತ್ರೆಯ ಕೊಂಡೊಯ್ಯಲಾಗಿದ್ದು, ಪತ್ನಿಯನ್ನು ಕೊಂದು ತಲೆ ಮರೆಸಿಕೊಂಡಿರುವ ಪತಿರಾಯನಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.
ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ








