Viral Video: ಅಪ್ಪಾ ನನಗೆ ಮುತ್ತು ಕೊಡಪ್ಪಾ….ವೈರಲ್​​​ ಆಗುತ್ತಿದೆ ತಂದೆ ಮಗಳ ಮುದ್ದಾದ ವೀಡಿಯೊ

ಪುಟ್ಟ ಮಗುವೊಂದು ತನ್ನ ತಂದೆಯ ಬಳಿ ಮುತ್ತುಗಳನ್ನು ಕೇಳುವ ಮುದ್ದಾದ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ತಂದೆ ಮಗುವಿನ ಪರಿಶುದ್ಧ ಪ್ರೀತಿ ನೋಡುಗರ ಮುಖದಲ್ಲಿ ಕಿರು ನಗೆಯನ್ನು ಮೂಡಿಸಿದೆ.

Viral Video: ಅಪ್ಪಾ ನನಗೆ ಮುತ್ತು ಕೊಡಪ್ಪಾ....ವೈರಲ್​​​ ಆಗುತ್ತಿದೆ ತಂದೆ ಮಗಳ ಮುದ್ದಾದ ವೀಡಿಯೊ
ವೈರಲ್​​ ವೀಡಿಯೊ
Edited By:

Updated on: Jun 02, 2023 | 1:26 PM

ಪುಟ್ಟ ಮಕ್ಕಳಿರುವ ಮನೆ ನಂದಗೋಕುಲವಿದ್ದಂತೆ. ಆ ಮನೆಯು ಪ್ರತಿನಿತ್ಯ ಸಂತೋಷದ ವಾತಾವರಣದಿಂದ ಕೂಡಿರುತ್ತದೆ. ಇನ್ನೂ ತಂದೆತಾಯಿಗಳಿಗಂತೂ ತಮ್ಮ ಪುಟ್ಟ ಮಗುವೇ ಪ್ರಪಂಚ. ಮಗುವಿನ ಸಂತೋಷಕ್ಕಾಗಿ ತಮ್ಮ ಕೈಯಿಂದ ಸಾಧ್ಯವಿರುವ ಎಲ್ಲವನ್ನೂ ಮಾಡುತ್ತಾರೆ. ಮಗುವನ್ನು ಸಂತೋಷವಾಗಿ ನೋಡಿಕೊಳ್ಳಲು ಪೋಷಕರು ತಾವು ಮಕ್ಕಳಂತೆ ವರ್ತಿಸುತ್ತಾರೆ. ಇದೇ ರೀತಿ ಇಲ್ಲೊಂದು ಪುಟ್ಟ ಕಂದಮ್ಮ ತನ್ನ ತಂದೆಯ ಬಳಿ ಕೆನ್ನೆಗೆ ಕೈ ಕಾಲಿಗೆ ಮುತ್ತು ಕೊಡಪ್ಪಾ ಎಂದು ಕೇಳುತ್ತದೆ. ಮುಗುವಿನ ಈ ಮುದ್ದಾದ ಆಜ್ಞೆಯನ್ನು ಪಾಲಿಸುತ್ತಾ ತಂದೆ ಪ್ರೀತಿಯಿಂದ ಮಗುವಿಗೆ ಮುತ್ತುಗಳನ್ನು ನೀಡುತ್ತಾನೆ. ತಂದೆ ಮಗಳ ಈ ವೀಡಿಯೋ ಸಾಮಾಜಿಕ ಜಾಲತಾಣ ಬಳಕೆದಾರರ ಮನಗೆದ್ದಿದೆ.

@TheFigen ಎಂಬ ಟ್ವಿಟರ್ ಖಾತೆಯಲ್ಲಿ ಈ ವೀಡಿಯೋವನ್ನು ಹಂಚಿಕೊಳ್ಳಲಾಗಿದ್ದು, ಸೋ ಕ್ಯೂಟ್ ಎಂಬ ಶೀರ್ಷಿಕೆಯನ್ನು ನೀಡಲಾಗಿದೆ. ಹಾಸಿಗೆಯ ಮೇಲೆ ತನ್ನ ಮುದ್ದು ಕಂದಮ್ಮನೊಂದಿಗೆ ತಂದೆಯು ಆಟವಾಡುತ್ತಿರುತ್ತಾನೆ. ಆಗ ಮಗು ತನ್ನ ಕಾಲನ್ನು ಎತ್ತಿ ಮುತ್ತು ನೀಡು ಎಂದು ಕೇಳುತ್ತದೆ. ತಂದೆಯು ಮಗುವಿನ ಪುಟ್ಟ ಕಾಲುಗಳಿಗೆ ಪ್ರೀತಿಯ ಮುತ್ತುಗಳನ್ನು ನೀಡುತ್ತಾನೆ. ಹೀಗೆ ಕೈಗಳಿಗೆ ಬೆರಳುಗಳಿಗೆ, ಕೆನ್ನೆಗೆ, ಕಣ್ಣಿಗೆ ಮುತ್ತು ನೀಡು ಎಂದು ಮಗು ಕೇಳುತ್ತದೆ. ಮಗಳ ಈ ಮುದ್ದು ಆಜ್ಞೆಯನ್ನು ಶಿರಸಾವಹಿಸಿ ಪಾಲಿಸುತ್ತಾ ತಂದೆಯು ಮಗಳಿಗೆ ಮುತ್ತಿನ ಸುರಿಮಳೆಯನ್ನೇ ನೀಡುವುದನ್ನು ಈ ಮುದ್ದಾದ ವೀಡಿಯೋದಲ್ಲಿ ಕಾಣಬಹುದು.


ಇದನ್ನೂ ಓದಿ: Viral: ಗ್ರಾಹಕರ ಹೂಕುಂಡವೇನೋ ಒಡೆಯಿತು, ಡೆಲಿವರಿ ಸಿಬ್ಬಂದಿ ಮುಂದೇನು ಮಾಡಿದ?

ಮೇ 30 ರಂದು ಟ್ವಿಟರ್ ನಲ್ಲಿ ಹಂಚಿಕೊಳ್ಳಲಾದ ಈ ವೀಡಿಯೋ ಇಲ್ಲಿಯವರೆಗೆ 6.5 ಮಿಲಿಯನ್ ವೀಕ್ಷಣೆಗಳನ್ನು ಹಾಗೂ 71.6 ಸಾವಿರ ಲೈಕ್ಸ್​​​ಗಳನ್ನು ಪಡೆದುಕೊಂಡಿದೆ. ಹಾಗೂ ಹಲವಾರು ಕಮೆಂಟ್ಸ್ ಗಳು ಹರಿದುಬಂದಿವೆ. ಒಬ್ಬ ಬಳಕೆದಾರರು ‘ಈ ವಿಡಿಯೋ ನನ್ನ ಹೃದಯವನ್ನು ಕರಗಿಸಿದೆ’ ಎಂದು ಬರೆದುಕೊಂಡಿದ್ದಾರೆ. ಅನೇಕ ಬಳಕೆದಾರರು ತಂದೆ ಮಗುವಿನ ಬಾಂಧವ್ಯದ ಈ ವೀಡಿಯೋ ತುಂಬಾ ಮುದ್ದಾಗಿದೆ ಎಂದು ಕಮೆಂಟ್ ಮಾಡಿದ್ದಾರೆ.

ಮತ್ತಷ್ಟು ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ

ಮಾಲಾಶ್ರೀ ಅಂಚನ್​

ಮಾಲಾಶ್ರೀ ಅಂಚನ್- ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದವರು. ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ (MCJ) ಸ್ನಾತಕೋತ್ತರ ಪದವಿಧರೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಹೆಚ್ಚಿನ ಒಲವನ್ನು ಹೊಂದಿದ್ದು, ಪತ್ರಿಕಾ ರಂಗದಲ್ಲಿ 2 ವರ್ಷಗಳ ಅನುಭವವಿದೆ. ಜೀವನಶೈಲಿ, ವೈರಲ್ ಸುದ್ದಿಗಳನ್ನು ಬರೆಯುವುದರಲ್ಲಿ ಆಸಕ್ತಿಯನ್ನು ಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುತ್ತಿದ್ದಾರೆ.

Read More
Loading...
Unable to load recommendations.
Follow Us