ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಇದು ಶವದ ಪಾದವೇ?

Dead man's finger : ಥ್ಯಾಂಕ್ಸ್​ ಬ್ರೋ ಯುಪಿಎಸ್​ಸಿ ಪರೀಕ್ಷೆಯಲ್ಲಿ ಈ ಪ್ರಶ್ನೆ ಕೇಳುವುದು ಗ್ಯಾರಂಟಿ ಎಂದಿದ್ದಾರೆ ಒಬ್ಬರು. ಇನ್ನೊಬ್ಬರು, ಹನುಮಾನ್ ಚಾಲೀಸಾ ಪಠಿಸಿದರೆ ದೆವ್ವ ಹತ್ತಿರ ಬಾರದು ಎಂದಿದ್ದಾರೆ. ನಿಜವಾಗಲೂ ಇದು ಏನು?

ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಇದು ಶವದ ಪಾದವೇ?
ಶವದ ಪಾದದಂತೆ ಕಾಣುವ ಕ್ಸೈಲೇರಿಯಾ ಪಾಲಿಮಾರ್ಫಾ ಶಿಲೀಂಧ್ರ
Edited By:

Updated on: Jan 17, 2023 | 2:29 PM

Viral News : ಈ ಕಟ್ಟಿಗೆಯ ಕೆಳಗೆ ಕಾಣುತ್ತಿರುವ ಪಾದ ಶವದ್ದೇ? ನೋಡಿದ ಯಾರಿಗೂ ಈ ಅನುಮಾನ ಬಾರದೇ ಇರದು. ಈ ತೆಳುಪಾದವನ್ನು ಮತ್ತೆ ನೋಡಿದಾಗ ಇದೊಂದು ಹೆಣ್ಣುಶವದ ಪಾದವಿದ್ದಿರಬೇಕು ಎನ್ನಿಸುತ್ತದೆ. ಮತ್ತೂ ನೋಡಿದಾಗ ನಾಜೂಕಾದ ಉಗುರುಗಳಿಗೆ ನೇಲ್​ಪಾಲಿಶ್ ಹಚ್ಚಿದಂತೆ ಕಂಡು, ಇದು ಪಕ್ಕಾ ಹೆಣ್ಣುಶವದ ಪಾದವೇ ಎಂಬ ತೀರ್ಮಾನಕ್ಕೆ ಬರಬೇಕು ಎನ್ನಿಸುತ್ತದೆ.

ಐಎಫ್‌ಎಸ್ ಅಧಿಕಾರಿ ಸಾಮ್ರಾಟ್ ಗೌಡ ಈ ಫೋಟೋ ಟ್ವೀಟ್ ಮಾಡಿದ್ದಾರೆ. ಇದು ಶವದ ಬೆರಳುಗಳಂತೆ ಕಾಣುವ ಶಿಲೀಂಧ್ರ (Dead man’s finger). ಇದನ್ನು ಕ್ಸೈಲೇರಿಯಾ ಪಾಲಿಮಾರ್ಫಾ (Xylaria polymorpha)  ಎಂದು ಕರೆಯಲಾಗುತ್ತದೆ. ಇದನ್ನು ನೋಡಿದ ನೆಟ್ಟಿಗರು, ಸದ್ಯ! ಇದೊಂದು ಶಿಲೀಂಧ್ರ. ಈಗಲೂ ಈ ಫೋಟೋ ನೋಡಿ ಭಯವಾಗುತ್ತಿದೆ ಎಂದಿದ್ದಾರೆ.

ಇದನ್ನೂ ಓದಿ : ನಾನೂ ನನ್ನ ಬೆಕ್ಕುಗಳೂ; ಬೆಕ್ಕುಗಳೊಂದಿಗೆ ಬೈಕ್​ಸವಾರಿ ಮಾಡುತ್ತಿರುವ ಬೆಂಗಳೂರಿಗನ ವಿಡಿಯೋ ವೈರಲ್

ಈ ಶಿಲೀಂಧ್ರವು ಬೀಚ್​ವುಡ್​ ಮರಗಳ ಬೊಡ್ಡೆಗಳಡಿ ಬೆಳೆಯುತ್ತದೆ. ವರ್ಷವಿಡೀ ಇದು ಹೀಗೇ ಇರುತ್ತದೆ. ಆದ್ದರಿಂದ ಡೆಡ್​ ಮ್ಯಾನ್ಸ್​ ಫಿಂಗರ್ಸ್​ ಎಂದೇ ಇದನ್ನು ಕರೆಯುತ್ತಾರೆ. ಬ್ರಿಟನ್ ಮತ್ತು ಐರ್ಲೆಂಡ್​ನಲ್ಲಿ ಇದು ಸಾಮಾನ್ಯವಾಗಿ ಬೆಳೆಯುತ್ತದೆ. ಉತ್ತರ ಅಮೆರಿಕಾ, ಯುರೋಪ್​ನ ಅನೇಕ ಪ್ರದೇಶಗಳಲ್ಲಿ ಕೂಡ ಇದು ಬೆಳೆಯುತ್ತದೆ.

ಇದನ್ನೂ ಓದಿ : 1971ರಲ್ಲಿ 2 ಮಸಾಲೆ ದೋಸೆ, 2 ಕಾಫಿಗೆ 2 ರೂಪಾಯಿ! ದೆಹಲಿಯ ರೆಸ್ಟೋರೆಂಟ್ ಬಿಲ್ ವೈರಲ್

ಪ್ರಕೃತಿಗಿಂತ ಸೃಜನಶೀಲ ಯಾವುದೂ ಇಲ್ಲ ಎಂದಿದ್ದಾರೆ ನೆಟ್ಟಿಗರೊಬ್ಬರು. ದೆವ್ವ ಇದು! ಎಂದು ನಕ್ಕಿದ್ದಾರೆ  ಕೆಲವರು. ಖಂಡಿತ ಈ ಕುರಿತು ಯುಪಿಎಸ್​ಸಿ ಪರೀಕ್ಷೆಯಲ್ಲಿ ಕೇಳುತ್ತಾರೆ, ಮಾಹಿತಿಗಾಗಿ ಥ್ಯಾಂಕ್ಸ್​ ಅಣ್ಣಾ ಎಂದಿದ್ದಾರೆ ಇನ್ನೊಬ್ಬರು. ಹನುಮಾನ್​ ಚಾಲೀಸಾ ಪಠಿಸಿ, ಆಗ ಇದು ನಿಮ್ಮ ಹತ್ತಿರ ಬರಲಾರದು ಎಂದಿದ್ದಾರೆ ಮತ್ತೊಬ್ಬರು.

ಅನೇಕ ನೆಟ್ಟಿಗರು, ಇದು ಕನಸಲ್ಲೂ ಕಾಡುವಂತಿದೆ ಎಂದಿದ್ದಾರೆ. ನೀವೇನಂತೀರಿ?

ಮತ್ತಷ್ಟು ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ

Published On - 2:18 pm, Tue, 17 January 23