
ಧೋಲ್ಪುರ್, ಜುಲೈ 04: ನಮ್ಮ ದೇಶವು ಅಭಿವೃದ್ಧಿಯತ್ತ (development) ಸಾಗುತ್ತಿದೆ ಎಂದು ಹೇಳುತ್ತೇವೆ. ಆದರೆ ಇವತ್ತಿಗೂ ಕೂಡ ಎಷ್ಟೋ ಊರುಗಳನ್ನು ಸಂಪರ್ಕಿಸಲು ಸರಿಯಾದ ರಸ್ತೆಗಳೇ ಇಲ್ಲ. ಕೆಲವು ಕಡೆಗಳಲ್ಲಿ ನದಿ ದಾಟಿಕೊಂಡು ತಮ್ಮ ದಿನನಿತ್ಯ ಕೆಲಸಕಾರ್ಯಗಳಿಗೆ ಹಾಗೂ ಶಾಲೆಗಳಿಗೆ ತೆರಳಬೇಕಾದ ಪರಿಸ್ಥಿತಿಯಿವೆ. ಧೋಲ್ಪುರ್ ಜಿಲ್ಲೆಯಲ್ಲಿ (Dholpur District) ಇಂತಹದ್ದೇ ಪರಿಸ್ಥಿತಿಯಿದ್ದು, ಇಲ್ಲಿನ ಗ್ರಾಮಸ್ಥರು ಹಾಗೂ ಮಕ್ಕಳು ದಿನನಿತ್ಯ ತಮ್ಮ ಪ್ರಾಣವನ್ನು ಪಣಕಿಟ್ಟು ಪ್ರಯಾಣಿಸುತ್ತಿದ್ದಾರೆ. ಹೌದು, ವಿದ್ಯಾರ್ಥಿಗಳು ಸೇರಿದಂತೆ ಗ್ರಾಮದ ಜನರು ತಾಸಿಮೊ ಪಟ್ಟಣಕ್ಕೆ ಹೋಗಬೇಕೆಂದರೆ ಈ ಪಾರ್ವತಿ ನದಿ ದಾಟಲೇ ಬೇಕು. ಹೀಗಾಗಿ ಕಬ್ಬಿಣದ ಮಂಚವನ್ನೇ ತೆಪ್ಪವನ್ನಾಗಿ ಮಾಡಿಕೊಂಡಿದ್ದಾರೆ. ಇದುವೇ ಇಲ್ಲಿನ ಜನರ ದಿನನಿತ್ಯದ ದಿನಚರಿಯಾಗಿದೆ. ಇದೀಗ ಪ್ರಾಣವನ್ನು ಪಣಕ್ಕಿಟ್ಟು ಪಾರ್ವತಿ ನದಿ ದಾಟುತ್ತಿರುವ ವಿದ್ಯಾರ್ಥಿಗಳ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ (social media) ಹರಿದಾಡುತ್ತಿದೆ.
@Lap surgeon ಹೆಸರಿನ ಎಕ್ಸ್ ಖಾತೆಯಲ್ಲಿ ವಿಡಿಯೋ ಶೇರ್ ಮಾಡಿಕೊಳ್ಳಲಾಗಿದ್ದು, ಮುಂದೆ ಈ ಮಕ್ಕಳು ಉದ್ಯೋಗಕ್ಕಾಗಿ ಎಸಿ ಕೊಠಡಿಗಳಲ್ಲಿ ಓದುವ ಮಕ್ಕಳೊಂದಿಗೆ ಸ್ಪರ್ಧಿಸಬೇಕು ಎಂದು ಶೀರ್ಷಿಕೆಯಲ್ಲಿ ಬರೆಯಲಾಗಿದೆ. ಶೇರ್ ಮಾಡಿಕೊಳ್ಳಲಾದ ಈ ವಿಡಿಯೋದಲ್ಲಿ ಧೋಲ್ಪುರ್ ಜಿಲ್ಲೆಯ ವಿದ್ಯಾರ್ಥಿಗಳು ಪ್ರಾಣ ಪಣಕಿಟ್ಟು ಪಾರ್ವತಿ ನದಿ ದಾಟುತ್ತಿರುವುದನ್ನು ಕಾಣಬಹುದು. ಇಲ್ಲಿ ಮಂಚವನ್ನೇ ತೆಪ್ಪವನ್ನಾಗಿಸಿಕೊಂಡಿದ್ದು, ಆದರೆ ಈ ಹಾಸಿಗೆಯನ್ನು ಎರಡು ಕಡೆಗಳಲ್ಲಿ ಮರಕ್ಕೆ ಕಟ್ಟಲಾಗಿರುವುದು ನೀವಿಲ್ಲಿ ಕಾಣಬಹುದು.
ಇದನ್ನೂ ಓದಿ : Video :ವಾವ್ಹ್…. ನೇಪಾಳದ ಈ ‘ಚಾಯ್ ವಾಲಿ’ ಸೌಂದರ್ಯಕ್ಕೆ ಕ್ರಶ್ ಆಗುವುದು ಖಂಡಿತ
ಅನಾರೋಗ್ಯ ಪೀಡಿತ ರೋಗಿಗಳನ್ನು ಆಸ್ಪತ್ರೆಗೆ ಕರೆದೊಯ್ಯಲು, ಮನೆಗೆ ದಿನಸಿ ಸಾಮಾನುಗಳನ್ನು ಖರೀದಿಸಲು ಮಾರುಕಟ್ಟೆಗೆ ಹೋಗಬೇಕೆಂದರೆ, ಮಕ್ಕಳು ಶಾಲೆಗೆ ತೆರಳಲು ಈ ರೀತಿ ನದಿ ದಾಟುವುದು ಅನಿವಾರ್ಯ. ನದಿಗೆ ಸೇತುವೆ ನಿರ್ಮಿಸುವಂತೆ ಹಲವು ಬಾರಿ ಪಂಚಾಯತ್ ಮತ್ತು ಆಡಳಿತಕ್ಕೆ ಬೇಡಿಕೆ ಸಲ್ಲಿಸಲಾಗಿತ್ತು, ಆದರೆ ಇಲ್ಲಿಯವರೆಗೆ ಕೇವಲ ಭರವಸೆಗಳು ಮಾತ್ರ ಸಿಕ್ಕಿವೆ ಎಂದು ಇಲ್ಲಿನ ಗ್ರಾಮಸ್ಥರು ಹೇಳುತ್ತಾರೆ.
📍धौलपुर, राजस्थान।
आगे जाके इन बच्चों को Job के लिए AC में बैठ कर पढ़ने वाले बच्चों से competition करना पड़ेगा।🙏
pic.twitter.com/bQazQlCymF— Dr. B L Bairwa MS, FACS (@Lap_surgeon) July 3, 2025
ಈ ಪೋಸ್ಟ್ ಒಂದೂವರೆ ಲಕ್ಷಕ್ಕೂ ಅಧಿಕ ವೀಕ್ಷಣೆ ಪಡೆದುಕೊಂಡಿದೆ. ಬಳಕೆದಾರರೊಬ್ಬರು, ನಿಜ ನಾನು ಎಂಬಿಬಿಎಸ್ ಓದುತ್ತಿರುವವರಲ್ಲಿ ಒಬ್ಬ ಎಂದಿದ್ದಾರೆ. ಇನ್ನೊಬ್ಬರು, ಸರ್ಕಾರಕ್ಕೆ ನಾಚಿಕೆಯಾಗಬೇಕು, ಇಲ್ಲಿನ ರಾಜಕಾರಣಿಗಳು ವಿಶ್ವದ ನಾಲ್ಕನೇ ಅತಿದೊಡ್ಡ ಆರ್ಥಿಕತೆ ಎಂದು ಬೀಗುತ್ತಿದೆ. ಆದರೆ ಇಲ್ಲಿನ ಜನರಿಗೆ ಮೂಲ ಸೌಕರ್ಯಗಳನ್ನು ಒದಗಿಸಲು ಸಾಧ್ಯವಾಗುತ್ತಿಲ್ಲವೇ ಎಂದು ಪ್ರಶ್ನೆ ಮಾಡಿದ್ದಾರೆ. ಮತ್ತೊಬ್ಬರು ಇಂತಹ ಕೆಲವು ವ್ಯವಸ್ಥೆಯಿಂದಲೇ ಹಳ್ಳಿಯ ಮಕ್ಕಳು ಹಿಂದುಳಿದಿದ್ದಾರೆ. ಹಳ್ಳಿಯಲ್ಲಿ ಸಾಕಷ್ಟು ಪ್ರತಿಭೆಗಳಿವೆ, ಅವರಿಗೆ ಸಮಾನ ಶಿಕ್ಷಣ ದೊರೆಯಬೇಕು ಎಂದಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ