Tomato : ಟೊಮ್ಯಾಟೋ ಬೆಲೆ ಇಷ್ಟೊಂದೇಕೆ ಏರಿದೆ ಎಂದು ಕೃಷಿ ತಜ್ಞರು, ಆರ್ಥಿಕ ತಜ್ಞರು, ಹವಾಮಾನ ತಜ್ಞರು, ರಾಜಕಾರಣಿಗಳು ಮತ್ತು ನಮ್ಮ ಅನ್ನದಾತರು ಎಷ್ಟೆಲ್ಲ ಯೋಚಿಸಿದರು. ಆದರೆ ಸರಿಯಾದ ಉತ್ತರ ದೊರಕಿತೆ? ಕಳೆದುಕೊಂಡಿದ್ದು ಒಂದೆಡೆ, ಹುಡುಕುವುದು ಇನ್ನೊಂದೆಡೆ ಎಂಬಂತಾದಾಗ ಸೂಕ್ತ ಉತ್ತರ ಹೇಗೆ ಸಿಗಲು ಸಾಧ್ಯ? ಅಂತೂ ಒಂದು ಟ್ವೀಟ್ (Tweet) ಮೂಲಕ ಸಾಕ್ಷಿಸಮೇತ ಇದಕ್ಕೆ ಕಾರಣ ಪತ್ತೆಯಾಗಿದೆ. ಘನಗಂಭೀರ ಮುಖಮುದ್ರೆ ಹೊತ್ತ ಕಳ್ಳಿಯೊಬ್ಬಳ ಕರಾಮತ್ತು ಇಡೀ ಜಗತ್ತಿಗೇ ಬಹಿರಂಗವಾಗಿದೆ! ಈ ವಿಡಿಯೋ ನೋಡಿದ ನೆಟ್ಟಿಗರು ನಗಲೂ ಆಗದ ಅಳಲೂ ಆಗದ ಪರಿಸ್ಥಿತಿಗೆ ಸಿಲುಕಿದ್ದಾರೆ.
In case you were wondering who is hoarding the tomatoes.#TomatoPrice #Tomato pic.twitter.com/QVRV9W2OPx
ಇದನ್ನೂ ಓದಿ— Kaveri ?? (@ikaveri) July 16, 2023
ಆದರೆ ನೆಟ್ಟಿಗರು ಈ ಕಳ್ಳಿಯನ್ನೇ ಸಮರ್ಥಿಸಿಕೊಳ್ಳುತ್ತಿರುವುದು ಅಚ್ಚರಿಯನ್ನು ಹುಟ್ಟುಹಾಕುತ್ತಿದೆ. ಆಕೆಗೆ ಟೊಮ್ಯಾಟೋದ ಮಹತ್ವ ಗೊತ್ತು, ಕಳ್ಳರಿಂದ ಆಕೆ ಈ ಟೊಮ್ಯಾಟೋಗಳನ್ನು ರಕ್ಷಿಸಿದ್ದಾಳೆ ಎನ್ನುತ್ತಿದ್ದಾರೆ. ಈಕೆ ರಕ್ಷಿಸಿದ ಟೊಮ್ಯಾಟೋಗಳನ್ನು ನೀವು ತಿನ್ನುವಿರೇ? ಎಂದೂ ಕೇಳುತ್ತಿದ್ದಾರೆ. ಅದಕ್ಕೆ ಈ ಕಳ್ಳಿಯ ಪೋಷಕಿ, ಖಂಡಿತ! ತೊಳೆದು ತಿನ್ನುತ್ತೇನೆ ಎಂದು ಉತ್ತರಿಸಿದ್ದಾರೆ.
ಇದನ್ನೂ ಓದಿ : Viral: ಲೈಕ್ ಮಸುಕಾಗುತ್ತದೆ, ಡಿಜಿಟಲ್ ಗುರುತು ಉಳಿಯುತ್ತದೆ; ಅಸ್ಸಾಂ ಪೊಲೀಸರ ಟ್ವೀಟ್
ನಮ್ಮನೆಯಲ್ಲಿರುವ ಲ್ಯಾಬ್ರಡರ್ ಕೂಡ ಈ ಗೋಲ್ಡನ್ ರಿಟ್ರೈವರ್ ಕಳ್ಳಿಯಂತೆಯೇ ಟೊಮ್ಯಾಟೋ ಕದಿಯುತ್ತಾನೆ ಎಂದಿದ್ದಾರೆ ಒಬ್ಬರು. ಬಾಯಿಯಲ್ಲಿಯೇ ಇಷ್ಟಿವೆ, ಇನ್ನು ಹೊಟ್ಟೆಯಲ್ಲಿ? ಎಂದು ಕೇಳಿದ್ದಾರೆ ಮತ್ತೊಬ್ಬರು. ಈ ವಿಡಿಯೋ ಅನ್ನು ಈತನಕ ಸುಮಾರು 14,000 ಜನರು ನೋಡಿದ್ದಾರೆ. 102 ಜನರು ರೀಟ್ವೀಟ್ ಮಾಡಿದ್ದಾರೆ. ಅನೇಕರು ತಮಾಷೆಯಾಗಿ ಪ್ರತಿಕ್ರಿಯಿಸಿದ್ದಾರೆ.
ಇದನ್ನು ನೋಡಿದ ನೀವು ಏನಂತೀರಿ?
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ
Published On - 6:09 pm, Tue, 18 July 23