ಹೊಸ ವಾಹನದ ಕೆಳಗೆ ನಿಂಬೆ ಹಣ್ಣು ಇಡೋದು ಯಾಕೆ ಗೊತ್ತಾ? ಇದೆ ನೋಡಿ ಕಾರಣ

ನಮ್ಮ ಹಿರಿಯರು ಮಾಡಿಕೊಂಡ ಬಂದ ಒಂದಷ್ಟು ಶಾಸ್ತ್ರ ಸಂಪ್ರದಾಯವನ್ನು ನಾವೆಲ್ಲರೂ ಇವತ್ತಿಗೂ ಕಣ್ಣು ಮುಚ್ಚಿಕೊಂಡು ಪಾಲಿಸುತ್ತೇವೆ. ಹಿರಿಯರು ಏನೇ ಮಾಡಿದ್ದರೂ ಅದರ ಹಿಂದೆ ಒಂದು ಕಾರಣವಿದೆ. ಆದರೆ ಹಿಂದಿರುವ ಕಾರಣವನ್ನು ತಿಳಿದುಕೊಳ್ಳಲು ಪ್ರಯತ್ನಿಸುವುದು ಕಡಿಮೆಯೇ. ಸಾಮಾನ್ಯವಾಗಿ ಎಲ್ಲರೂ ಹೊಸ ವಾಹನವನ್ನು ಖರೀದಿಸಿದಾಗ, ಪೂಜೆ ಮಾಡಿ ವಾಹನದ ಚಕ್ರಕ್ಕೆ ನಿಂಬೆ ಹಣ್ಣು ಇಟ್ಟು ವಾಹನ ಚಲಾಯಿಸುತ್ತಾರೆ. ಇದರ ಹಿಂದಿನ ಕಾರಣವೇನು ಎಂಬುದು ನಿಮಗೆ ತಿಳಿದಿದೆಯೇ, ಇದಕ್ಕೆ ಉತ್ತರ ಇಲ್ಲಿದೆ.

ಹೊಸ ವಾಹನದ ಕೆಳಗೆ ನಿಂಬೆ ಹಣ್ಣು ಇಡೋದು ಯಾಕೆ ಗೊತ್ತಾ? ಇದೆ ನೋಡಿ ಕಾರಣ
ಹೊಸ ವಾಹನದ ಕೆಳಗೆ ನಿಂಬೆ ಹಣ್ಣು ಇಡುವುದರ ಹಿಂದಿದೆ ಈ ಕಾರಣ
Image Credit source: Pinterest

Updated on: Jul 24, 2025 | 11:39 AM

ನಾವುಗಳು ಎಷ್ಟೇ ಓದಿಕೊಂಡಿರಲಿ, ನಮ್ಮ ಹಿರಿಯರು ಮಾಡಿಕೊಂಡು ಬಂದ ಶಾಸ್ತ್ರ ಸಂಪ್ರದಾಯಗಳನ್ನು (tradition) ಮರುಪ್ರಶ್ನಿಸದೇ ಅನುಸರಿಸುತ್ತೇವೆ. ಇದು ಎಲ್ಲಾ ವಿಚಾರದಲ್ಲಿ ಅನ್ವಯಿಸುತ್ತದೆ. ಆ ಬಗ್ಗೆ ಪ್ರಶ್ನೆ ಮಾಡುವುದಾಗಲಿ, ಕೆಲವು ಆಚರಣೆಗಳು ಯಾಕಾಗಿ ಪ್ರಾರಂಭವಾಯಿತು ಎಂದು ಉತ್ತರ ತಿಳಿದುಕೊಳ್ಳುವ ಗೋಜಿಗೆ ಹೋಗುವುದೇ ಇಲ್ಲ. ಯಾರೇ ಆಗಿರಲಿ, ಮನೆಗೆ ಹೊಸ ವಾಹನ ತಂದರೆ ಮೊದಲು ಮಾಡುವ ಕೆಲಸವೇ ಪೂಜೆ. ವಾಹನಕ್ಕೆ ಪೂಜೆ ಮಾಡಿಸಿ ಚಕ್ರದ ಮುಂದೆ ನಿಂಬೆ ಹಣ್ಣನ್ನಿಟ್ಟು (lemon) ಅದರ ಮೇಲೆ ಗಾಡಿ ಓಡಿಸುತ್ತಾರೆ. ಈ ರೀತಿ ಮಾಡಿದ್ರೆ ಯಾವುದೇ ಅಪಘಾತ ಸಂಭವಿಸುವುದಿಲ್ಲ ಎನ್ನುವ ನಂಬಿಕೆ ಅನೇಕರಲ್ಲಿದೆ. ನಿಂಬೆಯನ್ನು ಕೆಟ್ಟ ಕಣ್ಣಿನಿಂದ ಅಥವಾ ಕೆಟ್ಟ ದೃಷ್ಟಿಯಿಂದ ದೂರವಿರಿಸಲು ಬಳಸಲಾಗುತ್ತದೆ ಎಂದು ನಂಬಲಾಗುತ್ತದೆ. ನಮ್ಮ ಹಿರಿಯರು ಹೊಸ ವಾಹನದ ಕೆಳಗೆ ನಿಂಬೆ ಹಣ್ಣು ಇಡುತ್ತಿದ್ದದ್ದು ಯಾಕೆ ಗೊತ್ತಾ? ಇದರ ಹಿಂದಿರುವ ವೈಜ್ಞಾನಿಕ ಕಾರಣದ ಕುರಿತಾದ ಮಾಹಿತಿ ಇಲ್ಲಿದೆ.

ಈಗಿನವರಿಗೆ ದುಬಾರಿ ಬೆಲೆಯ ಐಷಾರಾಮಿ ಕಾರುಗಳುಖರೀದಿಸುವ ಸಾಮರ್ಥ್ಯ ಇದೆ, ಆದರೆ ಹಿಂದೆಲ್ಲಾ ಹೀಗೆ ಇರಲಿಲ್ಲ. ಒಂದು ಕಡೆಯಿಂದ ಮತ್ತೊಂದು ಕಡೆಗೆ ಹೋಗಲು ಜನರು ಕುದುರೆ ಗಾಡಿ ಅಥವಾ ಎತ್ತಿನ ಗಾಡಿಯನ್ನೇ ಅವಲಂಬಿಸಿಕೊಂಡಿದ್ದರು. ಆ ಸಮಯದಲ್ಲಿ, ಎತ್ತುಗಳು ಹಾಗೂ ಕುದುರೆಗಳು ಕಲ್ಲು ಮಣ್ಣು, ಕೆಸರು ಹಾಗೂ ನೀರಿನಲ್ಲಿ ನಡೆಯುತ್ತಿತ್ತು. ಹೀಗಾದಾಗ ಈ ಪ್ರಾಣಿಗಳ ಕಾಲುಗಳ ಮಧ್ಯದಲ್ಲಿ ಗಾಯವಾಗುತ್ತಿತ್ತು. ಈ ಗಾಯಗಳಲ್ಲಿ ಹುಳಗಳಾದ್ರೆ ಈ ಪ್ರಾಣಿಗಳಿಗೆ ಹೆಚ್ಚು ದೂರ ನಡೆಯಲು ಆಗುವುದಿಲ್ಲ. ಹೀಗಾಗಿ ನಿಂಬೆಹಣ್ಣನ್ನು ಎತ್ತುಗಳು ಹಾಗೂ ಕುದುರೆಗಳ ಪಾದಗಳಡಿಯಲ್ಲಿ ಇಟ್ಟು ತುಳಿಸುತ್ತಿದ್ದರು.

ಇದನ್ನೂ ಓದಿ: ಮುರ್ಸಿ ಹೆಣ್ಣು ಮಕ್ಕಳ ತುಟಿಯಲ್ಲಿ ಅಡಗಿದೆ ಸೌಂದರ್ಯ, ಇವ್ರು ತುಟಿ ಅಂದ ಹೆಚ್ಚಿಸಲು ಏನ್ ಮಾಡ್ತಾರೆ ಗೊತ್ತಾ?

ಇದನ್ನೂ ಓದಿ
ಇಸ್ಕಾನ್​​ನ ಸಸ್ಯಾಹಾರಿ ಹೋಟೆಲ್ ಒಳಗೆ ಚಿಕನ್ ತಿಂದ ಯುವಕ
ಅಂಬಾನಿ ದಂಪತಿಯ ಈ ಅಪರೂಪದ ಫೋಟೋ ನೋಡಿರಲು ಸಾಧ್ಯವಿಲ್ಲ
ಬೆಂಗಳೂರಿನಲ್ಲಿ ಬಾಡಿಗೆ ಮನೆ ತುಂಬಾ ದುಬಾರಿ, ಕಹಿ ಅನುಭವ ಹಂಚಿಕೊಂಡ ವಿದೇಶಿಗ
ರೈಲಿನಲ್ಲಿ ಬಡ ವ್ಯಾಪಾರಿ ಚೀಲದಲ್ಲಿದ್ದ ತಿಂಡಿ ಎಗರಿಸಿದ ಪ್ರಯಾಣಿಕ

ಈ ನಿಂಬೆಹಣ್ಣಿನಲ್ಲಿರುವ ಸಿಟ್ರಿಕ್‌ ಅಸಿಡ್ ಈ ಪ್ರಾಣಿಗಳ ಕಾಲಿನ ಗಾಯದಲ್ಲಿನ ಬ್ಯಾಕ್ಟಿರಿಯಾವನ್ನು ನಾಶಪಡಿಸಿ, ಗಾಯವು ಬಹುಬೇಗನೆ ಗುಣಮುಖವಾಗುತ್ತಿತ್ತು. ಇನ್ನು ಈ ಮಣ್ಣಿನಲ್ಲಿರುವ ಸೂಕ್ಷ್ಮ ಜೀವಿಗಳು ಕುದುರೆಗಳು, ಎತ್ತುಗಳ ಪಾದಗಳ ಒಳಗೆ ಹೋಗಬಾರದು, ಸೋಂಕುಗಳು ಬರಬಾರದು ಎನ್ನುವ ಕಾರಣಕ್ಕೆ ನಿಂಬೆಹಣ್ಣುಗಳನ್ನು ಬಳಸುತ್ತಿದ್ದರು. ಆದರೆ ಇವತ್ತಿಗೂ ನಿಂಬೆಹಣ್ಣುಗಳನ್ನು ವಾಹನದ ಚಕ್ರದ ಕೆಳಗೆ ಇಟ್ಟು ಓಡಿಸುತ್ತಾರೆ. ವ್ಯತ್ಯಾಸವೇನೆಂದರೆ ಎತ್ತಿನ ಗಾಡಿ ಹಾಗೂ ಕುದುರೆ ಗಾಡಿ ಜಾಗದಲ್ಲಿ ಜೀವ ಇಲ್ಲದ ಟೈಯರ್ ವಾಹನಗಳು ಬಂದಿವೆ. ಆದರೆ ಇದರ ಹಿಂದಿನ ಕಾರಣವನ್ನು ಅರಿಯದೇ ಹೊಸ ವಾಹನಗಳ ಚಕ್ರಗಳಿಗೂ ಈ ನಿಂಬೆಹಣ್ಣನ್ನು ಇಟ್ಟು ವಾಹನ ಓಡಿಸುವ ಸಂಪ್ರದಾಯವನ್ನು ಪಾಲಿಸಿಕೊಂಡು ಬರುತ್ತಿದ್ದೇವೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:07 pm, Wed, 23 July 25