Viral Video: ನಾಯಿಯಿಂದಾದ ಅಚಾತುರ್ಯಕ್ಕೆ ವ್ಯಕ್ತಿಗೆ ಶಿಕ್ಷೆ! ನಿಜವಾಗಿಯೂ ಏನಾಯ್ತು ಅಲ್ಲಿ?

ಓರ್ವ ತನ್ನ ಕಾರನ್ನು ಪಾರ್ಕ್​ ಮಾಡಿ ರಸ್ತೆ ದಾಟುವತ್ತ ತನ್ನ ಗಮನವನ್ನು ಕೇಂದ್ರಿಕರಿಸಿದ್ದಾನೆ. ರಸ್ತೆಯಲ್ಲಿ ಓಂದಾದ ಮೇಲೊಂದು ಕಾರು ಬರುತ್ತಲೇ ಇದೆ. ಇನ್ನೇನು ಒಂದು ಹೆಜ್ಜೆ ಮುಂದಿಡಬೇಕು ಅನ್ನುವಷ್ಟರಲ್ಲಿ ಅಚಾನಕ್​ ಆಗಿ ನಾಯಿಯೊಂದು ಗಡಿಬಿಡಿಯಿಂದ ಓಡಿ ಬಂದು ವ್ಯಕ್ತಿಗೆ ಡಿಕ್ಕಿ ಹೊಡೆದಿದೆ.

Viral Video: ನಾಯಿಯಿಂದಾದ ಅಚಾತುರ್ಯಕ್ಕೆ ವ್ಯಕ್ತಿಗೆ ಶಿಕ್ಷೆ! ನಿಜವಾಗಿಯೂ ಏನಾಯ್ತು ಅಲ್ಲಿ?
ನಾಯಿಯಿಂದಾದ ಅಚಾತುರ್ಯಕ್ಕೆ ವ್ಯಕ್ತಿಗೆ ಶಿಕ್ಷೆ!
Edited By:

Updated on: Jun 09, 2021 | 1:53 PM

ಪ್ರಾಣಿಗಳನ್ನು ಸಾಮಾನ್ಯವಾಗಿ ಎಲ್ಲರೂ ಪ್ರೀತಿಸುತ್ತಾರೆ. ಅದರಲ್ಲಿಯೂ ಮನೆಗೆ ಕಾವಲಾಗಿ ತನ್ನ ಕರ್ತವ್ಯಕ್ಕೆ ಬದ್ಧನಾಗಿ ಕೆಲಸ ಮಾಡುವ ನಾಯಿ ಕಂಡರೆ ಏನೋ ಒಂದು ರೀತಿಯ ಅನುಕಂಪ. ಸಾಮಾನ್ಯವಾಗಿ ಎಲ್ಲರ ಮನೆಯಲ್ಲಿಯೂ ಸಾಕುಪ್ರಾಣಿ ನಾಯಿ ಇದ್ದೇ ಇರುತ್ತದೆ. ಕೆಲವು ಬಾರಿ ಮುಗ್ಧ ಪ್ರಾಣಿಗಳಿಂದ ಬಾರಿ ತೊಂದರೆಗಳೂ ಆಗಬಹುದು. ಗೊತ್ತಿಲ್ಲದಂತೆ ನಡೆದ ಅಚಾತುರ್ಯಕ್ಕೆ ಕ್ಷಮೆ ನೀಡಲೇ ಬೇಕು.

ನಾಯಿ ಮಾಡಿದ ಅಚಾತುರ್ಯಕ್ಕೆ ಇಲ್ಲೋರ್ವ ವ್ಯಕ್ತಿ ಶಿಕ್ಷೆ ಅನುಭವಿಸುತ್ತಿದ್ದಾನೆ. ಹಾಗಾದರೆ ಏನಾಯ್ತು ಅಲ್ಲಿ? ಎಂಬುದೇ ಕಾಡುತ್ತಿರುವ ಪ್ರಶ್ನೆ. ವಿಡಿಯೋದಲ್ಲಿ ಗಮನಿಸಿದಂತೆ ರಸ್ತೆಯಲ್ಲಿ ಆರಾಮಾಗಿ ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿಗೆ ನಾಯಿ ಬಂದು ಡಿಕ್ಕಿ ಹೊಡೆದಿದೆ. ಇದರ ಪರಿಣಾಮದಿಂದ ವ್ಯಕ್ತಿ ರಸ್ತೆಗೆ ಹಾರಿ ಬಿದ್ದಿದ್ದಾನೆ. ಘಟನೆ ಹೇಗೆ ಸಂಭವಿಸಿತು? ಎಂಬ ವಿಡಿಯೋ ಇದೆ ನೋಡಿ.

ಓರ್ವ ತನ್ನ ಕಾರನ್ನು ಪಾರ್ಕ್​ ಮಾಡಿ ರಸ್ತೆ ದಾಟುವತ್ತ ತನ್ನ ಗಮನವನ್ನು ಕೇಂದ್ರಿಕರಿಸಿದ್ದಾನೆ. ರಸ್ತೆಯಲ್ಲಿ ಓಂದಾದ ಮೇಲೊಂದು ಕಾರು ಬರುತ್ತಲೇ ಇದೆ. ಇನ್ನೇನು ಒಂದು ಹೆಜ್ಜೆ ಮುಂದಿಡಬೇಕು ಅನ್ನುವಷ್ಟರಲ್ಲಿ ಅಚಾನಕ್​ ಆಗಿ ನಾಯಿಯೊಂದು ಗಡಿಬಿಡಿಯಿಂದ ಓಡಿ ಬಂದು ವ್ಯಕ್ತಿಗೆ ಡಿಕ್ಕಿ ಹೊಡೆದಿದೆ. ವ್ಯಕ್ತಿ ರಸ್ತೆಗೆ ಹಾರಿ ಬಿದ್ದಾದ್ದಾನೆ.

ವಿಡಿಯೋದಲ್ಲಿ ಗಮನಿಸಿದತೆ, ಕೆಳಗೆ ಹಾರಿ ಬಿದ್ದ ವ್ಯಕ್ತಿಗೆ ನೋವಾಗಿದೆ. ಬಿದ್ದ ತಕ್ಷಣವೇ ತನ್ನ ಸೊಂಟವನ್ನು ಗಟ್ಟಿಯಾಗಿ ಹಿಡಿದುಕೊಂಡಿರುವುದು ದೃಶ್ಯದಲ್ಲಿ ಸೆರೆಯಾಗಿದೆ. ಆದರೆ ಮುಂದೆ ಬರುತ್ತಿದ್ದ ಕಾರಿನವರಿಗೆ ಗೊತ್ತಾಗಬಾರದೆಂದು ಮಲಗಿ ಎದ್ದಂತೆ ಪೋಸ್​ ಕೊಡುತ್ತಿದ್ದಾನೆ. ವಿಡಿಯೋ ಇದೀಗ ಎಲ್ಲರ ಗಮನ ಸೆಳೆದಿದೆ.

ಕೆಲವರು, ವ್ಯಕ್ತಿ ಬಿದ್ದು ಯಾರೂ ನೋಡಬಾರದೆಂದು ಮೇಲೆದ್ದ ರೀತಿಯನ್ನು ಚರ್ಚಿಸಿದ್ದಾರೆ. ಇನ್ನು ಕೆಲವರು, ಛೆ! ನಾಯಿ ಬರುತ್ತಿರುವುದನ್ನು ಗಮನಿಸಬೇಕಿತ್ತಲ್ವೇ? ಎಂದು ಹಣೆ ಚಚ್ಚಿಕೊಂಡಿದ್ದಾರೆ. ಬಾರೀ ಸುದ್ದಿಯಲ್ಲಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ತಮಾಷೆಯಾಗಿ ಹರಿದಾಡುತ್ತಿದೆ.

ಇದನ್ನೂ ಓದಿ:

Viral Video: 28 ಪತ್ನಿಯರು, 35 ಮಕ್ಕಳೆದುರು 37ನೇ ಮದುವೆಯಾದ ಧೈರ್ಯಶಾಲಿ ವ್ಯಕ್ತಿ..!

Viral Video: ಒಂದು ಕಾಲು ಕಳೆದುಕೊಂಡರೇನು? ಈಕೆಯ ಸಾಲ್ಸಾ ನೃತ್ಯ ನೋಡಿದರೆ ನಾವೇ ನಾಚಬೇಕು!

Loading...
Unable to load recommendations.
Follow Us