‘ಚಮೇಲಿ’ಯನ್ನು ಹುಡುಕಿಕೊಟ್ಟವರಿಗೆ ರೂ. 25,000 ಬಹುಮಾನ; ಪಟಾಕಿ ಸದ್ದಿಗೆ ಕಾಣೆಯಾಗಿರುವ ಸಾಧ್ಯತೆ

| Updated By: ಶ್ರೀದೇವಿ ಕಳಸದ

Updated on: Nov 24, 2022 | 6:48 PM

Dog : ನನ್ನ 13 ವರ್ಷದ ಚಮೇಲಿ ದೀಪಾವಳಿಯ ರಾತ್ರಿ ಕಾಣೆಯಾಗಿದ್ದಾಳೆ. ಅವಳನ್ನು ಹುಡುಕಿ ಕೊಟ್ಟವರಿಗೆ ರೂ. 25,00 ಬಹುಮಾನ ಕೊಡಲಾಗುತ್ತದೆ. ಈ ನಂಬರಿಗೆ ಸಂಪರ್ಕಿಸಿ ; 9891027274

‘ಚಮೇಲಿ’ಯನ್ನು ಹುಡುಕಿಕೊಟ್ಟವರಿಗೆ ರೂ. 25,000 ಬಹುಮಾನ; ಪಟಾಕಿ ಸದ್ದಿಗೆ ಕಾಣೆಯಾಗಿರುವ ಸಾಧ್ಯತೆ
ಚಮೇಲಿ ಹುಡುಕಿಕೊಟ್ಟವರಿಗೆ ರೂ. 25,000 ಬಹುಮಾನ
Follow us on

Viral Video : ಒಂದು ತಿಂಗಳಿಂದ ದೆಹಲಿ ಮೂಲದ ಚಮೇಲಿ ಎಂಬ 13 ವರ್ಷದ ನಾಯಿ ಕಾಣೆಯಾಗಿದೆ. ದೆಹಲಿಯಲ್ಲಿ ವಾಸಿಸುತ್ತಿರುವ ಅದರ ಪೋಷಕಿ ಅದನ್ನು ಹುಡುಕಿ ಹುಡುಕಿ ಹತಾಶೆಗೆ ಒಳಗಾಗಿದ್ದಾರೆ. ಕೊನೆಗೆ ಸಾಮಾಜಿಕ ಜಾಲತಾಣದಲ್ಲಿ ಜಾಹೀರಾತನ್ನು ಪ್ರಕಟಿಸಿ ಜೊತೆಗೆ ವಿಡಿಯೋ ಕೂಡ ಮಾಡಿ, ಚಮೇಲಿಯನ್ನು ಹುಡುಕಿ ಕೊಟ್ಟವರಿಗೆ ರೂ. 25,000 ನೀಡುವುದಾಗಿ ಘೋಷಿಸಿದ್ದಾರೆ. ಈ ಪೋಸ್ಟ್​ ಈಗ ವೈರಲ್ ಆಗಿದೆ.

ಅನುಪ್ರಿಯಾ ದಾಲ್ಮಿಯಾ ವೃತ್ತಿಯಲ್ಲಿ ತಳಿವಿಜ್ಞಾನಿ. ಅವರು 14 ವರ್ಷದವರಿದ್ದಾಗಿನಿಂದಲೂ ನಾಯಿಗಳ ಒಡನಾಟದಲ್ಲಿದ್ದವರು. ‘ನಾವಿರುವುದು ದೆಹಲಿಯ ಉತ್ತರ ಭಾಗದಲ್ಲಿರುವ ಸಿವಿಲ್​ ಲೈನ್ಸ್​ನಲ್ಲಿ. ಅಕ್ಟೋಬರ್ 24ರಂದು ದೀಪಾವಳಿಯ ರಾತ್ರಿ ಬಹುಶಃ ಪಟಾಕಿಗಳ ಶಬ್ದಕ್ಕೆ ಚಮೇಲಿ ಹೆದರಿ ಓಡಿಹೋದ ಸಂಭವವಿದೆ. ಹದಿಮೂರು ವರ್ಷಗಳಿಂದ ನಮ್ಮೊಂದಿಗೆ ವಾಸಿಸುತ್ತಿರುವ ಈಕೆಗೆ ಅಪಾಯದಿಂದ ರಕ್ಷಿಸಿಕೊಳ್ಳುವುದು ಅಷ್ಟಾಗಿ ತಿಳಿದಿಲ್ಲ. ಈಗೆಲ್ಲಿದ್ದಾಳೋ ಏನೋ ಬಹಳ ನೋವಾಗುತ್ತಿದೆ’ ಎಂದಿದ್ದಾರೆ ಪೋಷಕಿ ಅನುಪ್ರಿಯಾ ದಾಲ್ಮಿಯಾ.

ಇದನ್ನೂ ಓದಿ
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಅಂದಿನಿಂದ ಇಂದಿನವರೆಗೂ ನಮ್ಮ ಮನೆಯ ಸುತ್ತ ಮುತ್ತ ಅಂದರೆ ಐದಾರು ಕಿ.ಮೀ ಅಂತರದಲ್ಲಿ ಎಲ್ಲೆಡೆ ಹುಡುಕಿದರೂ ಚಮೇಲಿ ಸಿಗುತ್ತಿಲ್ಲ. ಕಾಲ್ನಡಿಗೆಯಲ್ಲಿಯೇ ಹುಡುಕಲು ಹೋಗುತ್ತಿದ್ದೇವೆ. ಪೋಸ್ಟರ್, ಫ್ಲೈಯರ್​​ಗಳನ್ನು ಎಲ್ಲೆಡೆ ಹಾಕುತ್ತಿದ್ದೇವೆ. ಜಾಹೀರಾತುಗಳನ್ನೂ ನೀಡುತ್ತಿದ್ದೇವೆ ಎಂದು ಅನುಪ್ರಿಯಾ ತಿಳಿಸಿದ್ದಾರೆ.

ಯಾರೇ ಚಮೇಲಿಯನ್ನು ನೋಡಿದರೂ ಈ ನಂಬರಿಗೆ ಸಂಪರ್ಕಿಸಲು ಅವರು ಕೋರಿದ್ದಾರೆ ; 9891027274
ವಿಳಾಸ : ಅನುಪ್ರಿಯಾ ದಾಲ್ಮಿಯಾ, # 37, ರಾಜ್‌ಪುರ ರಸ್ತೆ, ಸಿವಿಲ್ ಲೈನ್ಸ್, ದೆಹಲಿ – 110054
ನಾಯಿಯನ್ನು ಹುಡುಕಲು ಸಹಾಯ ಮಾಡುವವರು ಇವರಿಗೆ ವಾಟ್ಸಪ್​ ಮೆಸೇಜ್ ಕೂಡ​ ಕಳಿಸಬಹುದಾಗಿದೆ; 8860316406

ಮತ್ತಷ್ಟು ವೈರಲ್​ ನ್ಯೂಸ್​ಗಾಗಿ ಕ್ಲಿಕ್ ಮಾಡಿ

Published On - 6:34 pm, Thu, 24 November 22