ಜಡಿ ಮಳೆಯನ್ನೂ ಲೆಕ್ಕಿಸದೆ ಪಿಜ್ಝಾ ಡೆಲಿವರಿ; ಟ್ವಿಟರ್ನಲ್ಲಿ ಜೋರಾಯ್ತು ಪರ-ವಿರೋಧ ಚರ್ಚೆ
ಡಾಮಿನೋಸ್ ಸಂಸ್ಥೆ ಡೆಲಿವರಿ ಬಾಯ್ ಶೊವೊನ್ ಘೋಶ್, ಕೋಲ್ಕತ್ತಾದಲ್ಲಿ ಸುರಿದ ಮಳೆಯನ್ನೂ ಲೆಕ್ಕಿಸದೆ, ಮಳೆ ನೀರಿನಿಂದ ತುಂಬಿಹೋದ ರಸ್ತೆಯಲ್ಲಿ ನಿಂತಿರುವ ಫೊಟೊ ಹಂಚಿಕೊಂಡಿದೆ. ಆ ಮೂಲಕ ಆತನಿಗೆ ಅಭಿನಂದನೆ ಸಲ್ಲಿಸಿದೆ.
ಬಹುರಾಷ್ಟ್ರೀಯ ಪಿಜ್ಝಾ ಕಂಪೆನಿ ಡಾಮಿನೋಸ್ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಪರ-ವಿರೋಧದ ಚರ್ಚೆ ವ್ಯಕ್ತವಾಗಿದೆ. ಪಿಜ್ಝಾ ಡೆಲಿವರಿ ಬಾಯ್‌ಯನ್ನು ಹೀಗೆ ಬಳಸಿಕೊಂಡಿರುವುದು ಕೆಲವರು ಸರಿ ಎಂದು ಮತ್ತೆ ಕೆಲವರು ತಪ್ಪು ಎಂದು ಅಭಿಪ್ರಾಯಪಟ್ಟಿದ್ದಾರೆ. ಅಷ್ಟಕ್ಕೂ ನಡೆದ ಘಟನೆ ಏನು ಎಂಬ ವಿವರ ಇಲ್ಲಿದೆ. ಕೋಲ್ಕತ್ತಾದಲ್ಲಿ ಸುರಿದ ಭಾರೀ ಮಳೆಯ ನಡುವೆಯೂ ಡಾಮಿನೋಸ್ ಪಿಜ್ಝಾ ಡೆಲಿವರಿ ಬಾಯ್ ತನ್ನ ಗ್ರಾಹಕನಿಗೆ ಪಿಜ್ಝಾ ಡೆಲಿವರಿ ಮಾಡಿದ್ದಾನೆ. ಅಂಥಾ ಮಳೆಯಲ್ಲೂ ಸೇವೆ ಒದಗಿಸಿರುವುದಕ್ಕೆ ಡಾಮಿನೋಸ್ ಸಂಸ್ಥೆ ಡೆಲಿವರಿ ಬಾಯ್ ಫೊಟೊ ಹಂಚಿಕೊಂಡು ಅಭಿನಂದಿಸಿದೆ. ಆದರೆ, ನೆಟ್ಟಿಗರಲ್ಲಿ ಈ ಬಗ್ಗೆ ಪರ-ವಿರೋಧದ ಅಭಿಪ್ರಾಯ ಕೇಳಿಬಂದಿದೆ.
ಡಾಮಿನೋಸ್ ಸಂಸ್ಥೆ ಡೆಲಿವರಿ ಬಾಯ್ ಶೊವೊನ್ ಘೋಶ್, ಕೋಲ್ಕತ್ತಾದಲ್ಲಿ ಸುರಿದ ಮಳೆಯನ್ನೂ ಲೆಕ್ಕಿಸದೆ, ಮಳೆ ನೀರಿನಿಂದ ತುಂಬಿಹೋದ ರಸ್ತೆಯಲ್ಲಿ ನಿಂತಿರುವ ಫೊಟೊ ಹಂಚಿಕೊಂಡಿದೆ. ಆ ಮೂಲಕ ಆತನಿಗೆ ಅಭಿನಂದನೆ ಸಲ್ಲಿಸಿದೆ. ಸೈನಿಕನು ಯಾವತ್ತೂ ಆಫ್ ಡ್ಯೂಟಿಯಲ್ಲಿ ಇರುವುದಿಲ್ಲ. ನಮ್ಮವರು ಬಿಸಿಯಾದ, ಶುಚಿಯಾದ, ರುಚಿಯಾದ ಆಹಾರ ಒದಗಿಸುತ್ತಾರೆ. ನಾವು ನಮ್ಮ ಫುಡ್ ಡೆಲಿವರಿ ಬಾಯ್ ಶೊವೊನ್ ಘೋಶ್‌ಗೆ, ಕಠಿಣ ಪರಿಸ್ಥಿತಿಯಲ್ಲೂ ಆಹಾರ ಒದಗಿಸಿದ್ದಕ್ಕೆ ಅಭಿನಂದನೆ ಸಲ್ಲಿಸುತ್ತೇವೆ ಎಂದು ಡಾಮಿನೋಸ್ ಸಂಸ್ಥೆ ತನ್ನ ಟ್ವೀಟ್‌ನಲ್ಲಿ ಹೇಳಿದೆ. #DominosFoodSloldier ಎಂಬ ಹ್ಯಾಷ್ ಟ್ಯಾಗ್‌ನ್ನು ಕೂಡ ಬಳಕೆ ಮಾಡಿದೆ.
A Soldier is never off duty! Ours come in blue and deliver hot, fresh & safe meals powering through the rains of Kolkata! We salute the service of our #DominosFoodSoldier Mr Shovon Ghosh who ensured that our stranded customer received their food even in such adverse conditions! pic.twitter.com/0xc6yTvn0S
— dominos_india (@dominos_india) May 12, 2021
ಈ ಟ್ವೀಟ್‌ಗೆ ಕೆಲವರು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ. ಇದು ಕಾರ್ಮಿಕ ಕಾನೂನಿನ ಉಲ್ಲಂಘನೆ ಎಂದು ಆಕ್ರೋಶ ಹೊರಹಾಕಿದ್ದಾರೆ. ಇದರಲ್ಲಿ ಹೆಮ್ಮೆ ಪಡುವಂಥದ್ದು ಏನೂ ಇಲ್ಲ ಎಂದು ಕೆಲವರು ಹೇಳಿದ್ದಾರೆ. ಇನ್ನು ಕೆಲವರು ಆತನನ್ನು ಅಭಿನಂದಿಸಿ ಬರೆದುಕೊಂಡಿದ್ದಾರೆ. ತನ್ನ ಕೆಲಸದ ಬಗ್ಗೆ ಡೆಲಿವರಿ ಬಾಯ್‌ಗೆ ಇರುವ ಶ್ರದ್ಧೆಯನ್ನು ಕೆಲವರು ಕೊಂಡಾಡಿದ್ದಾರೆ.
Such delivery specialists are making life bearable amid the COVID-19 crisis. Massive respect.
— IAMprady (@PradyXL) May 12, 2021
Good for the brand of @dominos_india but bad for the delivery man called DominofoodSoldier being in a such bad hazardous environment. We respect the man, not Domino’s. And please be considerate while ordering, Delivery man’s safety is more important than craving pizza.
— ashishbmt (@ashishbmt) May 12, 2021
“Look how we are exploiting our employees and using their story to gain points on the internet”
— Raj (@vegbiriyani) May 12, 2021
Really Great job ?
— Ranga Naik (@NaikRanganna) May 12, 2021
ಈ ಬಗ್ಗೆ ನಿಮ್ಮ ಅಭಿಪ್ರಾಯವೇನು?
ಇದನ್ನೂ ಓದಿ: ವಾಗ್ವಾದಕ್ಕಿಳಿದ ಯುವಕನಿಗೆ ಕಪಾಳಮೋಕ್ಷ ಮಾಡಿದ ಪೊಲೀಸ್, ಫುಡ್ ಡೆಲಿವರಿ ಬಾಯ್ಸ್ಗೆ ಖಡಕ್ ವಾರ್ನಿಂಗ್
ಅಮೆಜಾನ್ನ ಡೆಲಿವರಿ ಸಿಬ್ಬಂದಿಯಿಂದ ದೇಶದಾದ್ಯಂತ ಒಂದು ದಿನದ ಮುಷ್ಕರಕ್ಕೆ ಸಿದ್ಧತೆ
Published On - 7:31 pm, Fri, 14 May 21