ಆನೆಯ ತುಂಟಾಟದ ದೃಶ್ಯಗಳನ್ನು ನೋಡುವುದೇ ಒಂದು ರೀತಿಯ ಖುಷಿ. ಪ್ರಾಣಿಗಳು ಖುಷಿ ಪಟ್ಟು ಆಡುತ್ತಾ ಸಮಯ ಕಳೆಯುವುದನ್ನು ನೋಡುತ್ತಿದ್ದರೆ ನಮ್ಮ ಸಮಯ ಕಳೆದು ಹೋಗಿರುವುದೇ ಗೊತ್ತಾಗುವುದಿಲ್ಲ. ಅಷ್ಟು ಮನಸ್ಸಿಗೆ ಇಷ್ವಾಗುವಂತಹ ಕೆಲವು ಪ್ರಾಣಿಗಳ ತುಂಟಾಟದ ವಿಡಿಯೋಗಳು ಸಾಮಾಜಿಕ ಜಾತಾಣದಲ್ಲಿ ಹರಿದಾಡುತ್ತಿರುತ್ತದೆ. ಇದೀಗ ದೈತ್ಯಾಕಾರದ ಆನೆಗಳು ಮಣ್ಣಿನ ಧೂಳಿನಲ್ಲಿ ಬಿದ್ದು ಹೊರಳಾಡುತ್ತಿರುವ ವಿಡಿಯೋ ನೆಟ್ಟಿಗರ ಮನ ಕದ್ದಿದೆ.
ಆನೆ ಚಿಕ್ಕ ವಯಸ್ಸಿನದ್ದೇ ಆಗಿರಲಿ ಅಥವಾ ದೈತ್ಯಾಕಾರದ ಆನೆಯೇ ಆಗಿರಲಿ.. ಅವುಗಳಿಗೂ ಪುಟ್ಟ ಮನಸ್ಸಿರುತ್ತದೆ. ಅದರಲ್ಲಿಯೂ ಧೂಳಿನ ಮಣ್ಣು, ಕೆಸರು ಕಂಡಾಗಲೆಂತೂ ಅವುಗಳ ಖುಷಿಗೆ ಮಿತಿಯೇ ಇಲ್ಲ. ಚಿಕ್ಕ ಮರಿಗಳಂತೆಯೇ ದೈತ್ಯಾಕಾರದ ಆನೆಗಳೂ ಸಹ ಆಟವಾಡುತ್ತವೆ. ತನ್ನ ಖುಷಿಯನ್ನು ಮಣ್ಣಿನಲ್ಲಿ ಆಟವಾಡುವ ಮೂಲಕ ತೋರಿಸುತ್ತಿದೆ. ನೆಲಕ್ಕೆ ಬಿದ್ದು ಹೊರಳಾಡುತ್ತಾ, ಕಾಲಿನಲ್ಲಿ ಮಣ್ಣನ್ನು ಕಿತ್ತು ಎಸೆಯುತ್ತಾ ಸಂತೋಷ ಹಂಚಿಕೊಳ್ಳುತ್ತಿದೆ.
ಶೆಲ್ಡ್ರಿಕ್ ವೈಲ್ಡ್ಲೈಫ್ ಟ್ರಸ್ಟ್ನ ಟ್ವಿಟರ್ ಖಾತೆಯಿಂದ ವಿಡಿಯೋ ಹಂಚಿಕೊಳ್ಳಲಾಗಿದೆ. ಧೂಳಿನಲ್ಲಿ ಆನೆ ಆಟವಾಡುತ್ತಿರುವುದು ವಿನೋದಮಯವಾಗಿದೆ. ಸೂರ್ಯನ ಶಾಖದಿಂದ ತಮ್ಮ ಚರ್ಮವನ್ನು ರಕ್ಷಿಸಿಕೊಳ್ಳಲು ಅವು ಮಣ್ಣುಗಳಲ್ಲಿ ಹೊರಳಾಡುತ್ತವೆ. ಬೇಕಾದರೆ ಕೀನ್ಯೆಯಿಯನ್ನು(ಆನೆಯ ಹೆಸರು) ಕೇಳಿ! ಎಂದು ವಿಡಿಯೋ ಕ್ಲಿಪ್ನಲ್ಲಿ ಹಂಚಿಕೊಳ್ಳಲಾಗಿದೆ.
ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹಂಚಿಕೊಳ್ಳಲಾಗುತ್ತಿದ್ದಂತೆಯೇ 6,200 ಕ್ಕೂ ಹೆಚ್ಚು ವೀಕ್ಷಣೆಗಳನ್ನು ಪಡೆದುಕೊಂಡಿದೆ. ನೆಟ್ಟಿಗರು ವಿಡಿಯೋ ಕುರಿತಾಗಿ ಕಾಮೆಂಟ್ಸ್ಗಳನ್ನೂ ಸಹ ಮಾಡಿದ್ದಾರೆ. ಕೆಲವರು ಉಲ್ಲಾಸದ ಪ್ರತಿಕ್ರಿಯೆಯನ್ನು ಹಂಚಿಕೊಳ್ಳುವುದರ ಮೂಲಕ ತಮ್ಮ ಖುಷಿಯನ್ನು ಹಂಚಿಕೊಂಡಿದ್ದಾರೆ.
Dust baths are incredibly fun – just ask Kinyei! But they serve a practical purpose too, coating the orphans in a layer of earth that protects their skin from the sun. The herd dives in daily, as part of their daily routine: https://t.co/zvym7C8mDf pic.twitter.com/kxQRlzsIoA
— Sheldrick Wildlife (@SheldrickTrust) July 2, 2021
ಇದನ್ನೂ ಓದಿ:
Viral Video: ಕೆಸರು ಕಂಡು ಖುಷಿಪಟ್ಟ ಆನೆ; ಮಣ್ಣಿನಲ್ಲಿ ಹೊರಳಾಡಿದ್ದೇ ಆಡಿದ್ದು! ವಿಡಿಯೋ ನೋಡಿ
Viral Video: ಆಹಾರ ಹುಡುಕುತ್ತಾ ಅಡುಗೆ ಮನೆಗೆ ನುಗ್ಗಿದ ಆನೆಯನ್ನು ನೋಡಿ ಮಹಿಳೆ ಕಂಗಾಲು!
Published On - 9:56 am, Mon, 5 July 21