Viral: ಕೊಳದಲ್ಲಿ ಬಿದ್ದ ಚಿಂಕಾರವನ್ನು ರಕ್ಷಿಸಿದ ಆನೆ; ಗಜರಾಜನ ಒಳ್ಳೆಯತನಕ್ಕೆ ಒಂದು ಮೆಚ್ಚುಗೆ ಇರಲಿ

ಮನುಷ್ಯರಿಗಿಂತ ಪ್ರಾಣಿಗಳೇ ಗುಣದಲಿ ಮೇಲು ಎಂದು ಹೇಳುತ್ತಾರೆ. ಹೌದು ಮನುಜನಿಗೆ ಹೋಲಿಸಿದರೆ ಪ್ರಾಣಿಗಳಲ್ಲಿ ಒಳ್ಳೆಯತನ, ಒಳ್ಳೆಯ ಗುಣ ತುಸು ಹೆಚ್ಚೇ ಇದೆ. ಇದಕ್ಕೆ ಉತ್ತಮ ನಿದರ್ಶನದಂತಿರುವ ವಿಡಿಯೋವೊಂದು ಇದೀಗ ವೈರಲ್‌ ಆಗುತ್ತಿದ್ದು, ಕೊಳದಲ್ಲಿ ಬಿದ್ದು ಪ್ರಾಣ ರಕ್ಷಣೆಗಾಗಿ ಒದ್ದಾಡುತ್ತಿದ್ದ ಚಿಂಕಾರವನ್ನು ಆನೆಯೊಂದು ರಕ್ಷಿಸುವ ಮೂಲಕ ಒಳ್ಳೆಯತನವನ್ನು ಮೆರೆದಿದೆ. ಗಜರಾಜನ ಈ ದೊಡ್ಡ ಗುಣಕ್ಕೆ ನೆಟ್ಟಿಗರು ಮೆಚ್ಚುಗೆ ಸೂಚಿಸಿದ್ದಾರೆ.

Viral: ಕೊಳದಲ್ಲಿ ಬಿದ್ದ ಚಿಂಕಾರವನ್ನು ರಕ್ಷಿಸಿದ ಆನೆ; ಗಜರಾಜನ ಒಳ್ಳೆಯತನಕ್ಕೆ ಒಂದು ಮೆಚ್ಚುಗೆ ಇರಲಿ
ವೈರಲ್‌ ವಿಡಿಯೋ
Image Credit source: Instagram

Updated on: Jun 07, 2025 | 1:20 PM

ಈಗಂತೂ ಮನುಷ್ಯನಲ್ಲಿ ಮಾನವೀಯತೆ (Humanity), ಒಳ್ಳೆಯತನ ಎನ್ನುವಂತಹದ್ದು ಸಂಪೂರ್ಣವಾಗಿ ಮರೆಯಾಗಿದೆ. ಹಣ, ಆಸ್ತಿ-ಅಂತಸ್ತಿನ ನಡುವೆ ಸಂಬಂಧಕ್ಕೆ ಮಹತ್ವವೇ ಇಲ್ಲದಂತಾಗಿದೆ. ಇನ್ನೂ ಮನುಷ್ಯರಲ್ಲಿ ಒಳ್ಳೆಯತನ ಕಾಣಸಿಗುವುದೇ ಅಪರೂಪವಾಗಿಬಿಟ್ಟಿದ್ದು, ಇಲ್ಲೊಂದು ಆನೆ ಮಾನವೀಯತೆ, ಒಳ್ಳೆಯತನದ ಪಾಠವನ್ನು ಕಲಿಸಿದೆ. ಹೌದು ಕೊಳದಲ್ಲಿ ಬಿದ್ದ ಚಿಂಕಾರವನ್ನು ರಕ್ಷಿಸುವ ಮೂಲಕ ಆನೆಯೊಂದು (Elephant saves Antelope from falling into pond) ಒಳ್ಳೆಯತನ ಏನೆಂಬುದನ್ನು ತೋರಿಸಿಕೊಟ್ಟಿದೆ. ಈ ವಿಡಿಯೋ ಇದೀಗ ಸಿಕ್ಕಾಪಟ್ಟೆ ವೈರಲ್‌ ಆಗುತ್ತಿದ್ದು, ಗಜರಾಜನ ದೊಡ್ಡ ಗುಣಕ್ಕೆ ಭಾರೀ ಶ್ಲಾಘನೆ ವ್ಯಕ್ತವಾಗಿದೆ.

ಕೊಳದಲ್ಲಿ ಬಿದ್ದ ಚಿಂಕಾರವನ್ನು ರಕ್ಷಿಸಿದ ಆನೆ:

ಆನೆಯೊಂದು ಕೊಳದಲ್ಲಿ ಬಿದ್ದು, ಪ್ರಾಣ ರಕ್ಷಣೆಗಾಗಿ ಒದ್ದಾಡುತ್ತಿದ್ದ ಚಿಂಕಾರವನ್ನು (ಜಿಂಕೆ ಜಾತಿಗೆ ಸೇರಿದ ಪ್ರಾಣಿ) ರಕ್ಷಿಸುವ ಮೂಲಕ ನಮಗೆಲ್ಲರಿಗೂ ಮಾನವೀಯತೆ ಮತ್ತು ಒಳ್ಳೆಯತನದ ಪಾಠವನ್ನು ಮಾಡಿದೆ. ಈ ಕುರಿತ ವಿಡಿಯೋವನ್ನು ಸಂತೋಷ್‌ ಎಸ್.‌ ನಾವಳ್ಳಿ (santosh_s_navalli) ಎಂಬವರು ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಹಂಚಿಕೊಂಡಿದ್ದು, “ದೊಡ್ಡವರ ದೊಡ್ಡ ಗುಣ” ಎಂಬ ಶೀರ್ಷಿಕೆಯನ್ನು ಬರೆಯಲಾಗಿದೆ.

ಇದನ್ನೂ ಓದಿ
ಹೊಂಡದಲ್ಲಿ ಬಿದ್ದ ತನ್ನನ್ನು ರಕ್ಷಿಸಿದವರಿಗೆ ಥ್ಯಾಂಕ್ಸ್ ಹೇಳಿದ ಆನೆ ಮರಿ
ಸೈಕಲ್‌ ಸವಾರನನ್ನು ಕಂಡು ಭಯಬಿದ್ದ ಕರಡಿ
ಶಾಪಿಂಗ್ ಮಾಡಲು ಸೂಪರ್ ಮಾರ್ಕೆಟ್‌ಗೆ ಎಂಟ್ರಿ ಕೊಟ್ಟ ಗಜರಾಜ
ಪ್ಲೀಸ್ ನನ್ನ ಬಿಟ್ಟೋಗ್ಬೇಡ, ನಿನ್ನ ಜತೆ ನಾನು ಬರ್ತೀನಿ

ವೈರಲ್‌  ವಿಡಿಯೋ ಇಲ್ಲಿದೆ ನೋಡಿ:

ವೈರಲ್‌ ಆಗುತ್ತಿರುವ ವಿಡಿಯೋದಲ್ಲಿ ಚಿಂಕಾರವೊಂದು ಕೊಳದಲ್ಲಿ ಬಿದ್ದು ಒದ್ದಾಡುತ್ತಿರುವಂತಹ ದೃಶ್ಯವನ್ನು ಕಾಣಬಹುದು. ಇದನ್ನು ಕಂಡಂತಹ ಗಜರಾಜ ಅಲ್ಲಿಗೆ ಹೋಗಿ, ತನ್ನ ಸೊಂಡಿಲಿನ ಸಹಾಯದಿಂದ ಕೊಳದಲ್ಲಿ ಬಿದ್ದ ಚಿಂಕಾರವನ್ನು ಮೇಲೆತ್ತುವ ಮೂಲಕ ಮುಗ್ಧ ಜೀವವನ್ನು ರಕ್ಷಣೆ ಮಾಡಿದೆ.

ಇದನ್ನೂ ಓದಿ: ಹೊಂಡದಲ್ಲಿ ಬಿದ್ದ ತನ್ನನ್ನು ರಕ್ಷಿಸಿದವರಿಗೆ ಮುದ್ದಾಗಿ ಥ್ಯಾಂಕ್ಸ್ ಹೇಳಿದ ಆನೆ ಮರಿ

ಜೂನ್‌ 7 ರಂದು ಹಂಚಿಕೊಳ್ಳಲಾದ ಈ ವಿಡಿಯೋ 3 ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼದೊಡ್ಡವರು ದೊಡ್ಡ ಗುಣ ಹೊಂದಿರಬೇಕು ಎಂಬುದಕ್ಕೆ ಇದೆ ಸಾಕ್ಷಿʼ ಎಂಬ ಕಾಮೆಂಟ್‌ ಬರೆದುಕೊಂಡಿದ್ದಾರೆ, ಮತ್ತೊಬ್ಬ ಬಳಕೆದಾರರು ʼಆದರೆ ಮನುಷ್ಯ ಮಾತ್ರ ಕ್ರೂರಿʼ ಎಂದು ಹೇಳಿದ್ದಾರೆ. ಇನ್ನೊಬ್ಬ ಬಳಕೆದಾರರು ʼಎಂತಹ ಅದ್ಭುತ ವಿಡಿಯೋ, ಮನುಷ್ಯನಲ್ಲಿ ಈ ಗುಣ ಇಲ್ವೇ ಇಲ್ಲʼ ಎಂದು ಹೇಳಿದ್ದಾರೆ. ಇನ್ನೂ ಅನೇಕರು ಗಜರಾಜನ ದೊಡ್ಡ ಗುಣಕ್ಕೆ ತಲೆ ಬಾಗಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ