Viral: ‘ಈ ದೇಶ ಬಿಟ್ಟು ಇನ್ನೊಂದೆಡೆ ಹೋಗುತ್ತೀರಾ? ಹಾಗಿದ್ದರೆ ರೂ 70 ಲಕ್ಷ ಕೊಡುತ್ತೇವೆ’

| Updated By: ಶ್ರೀದೇವಿ ಕಳಸದ

Updated on: Jun 16, 2023 | 3:30 PM

Offshore : ದೇಶ ಬಿಟ್ಟು ತೊಲಗಿ ಎಂದು ಎಷ್ಟೇ ಹೇಳಿದರೂ ಕಿವುಡರಂತೆ ಇಲ್ಲಿಯೇ ಉಳಿದಿರುವ “ದೇಶವಿರೋಧಿ”ಗಳನ್ನು ಈ ಯೋಜನೆ ಮೂಲಕ ಎತ್ತಿಹಾಕಬಹುದೇ? ಅಥವಾ ಅವಕಾಶ ಸಿಕ್ಕರೆ ನೀವೂ ಹೋಗುವಿರೋ?

Viral: ಈ ದೇಶ ಬಿಟ್ಟು ಇನ್ನೊಂದೆಡೆ ಹೋಗುತ್ತೀರಾ? ಹಾಗಿದ್ದರೆ ರೂ 70 ಲಕ್ಷ ಕೊಡುತ್ತೇವೆ
Follow us on

Ireland : ಒಂದೂರಿಂದ ಇನ್ನೊಂದೂರಿಗೆ ಹೋಗಿ ನೆಲಸುವುದೇ ಎಷ್ಟೊಂದು ಕಷ್ಟದ ಕೆಲಸ. ಮೇಲೆ ಖರ್ಚಿನ ಹೊರೆ ಬೇರೆ. ಆದರೂ ಇದ್ದೂರು ಅಷ್ಟೇ ಏಕೆ ದೇಶವನ್ನೇ ಬಿಟ್ಟು ಬೇರೆ ಕಡೆ ಹೋಗಿ ನೆಲೆಸಬೇಕು, ಜಗತ್ತನ್ನು ಸುತ್ತಬೇಕು, ಹೊಸ ಅನುಭವಗಳನ್ನ ಪಡೆಯಬೇಕು ಎಂದು ಕನಸು ಕಾಣುವ ಸಾಹಸಿಗಳೂ ಇದ್ದೇ ಇದ್ದಾರೆ. ಆ ಸಾಹಸಕ್ಕೆ ಭೇಷ್​ ಎನ್ನುವಂಥ ಧನಸಹಾಯವೂ ಸಿಕ್ಕರೆ? ಇದು ನಿಮ್ಮ ಕಣ್ಣರಳಿಸಿದರೆ ಇಲ್ಲೊಂದು ಸುವರ್ಣಾವಕಾಶವಿದೆ, ಗಮನಿಸಿ.

ಇದನ್ನೂ ಓದಿ : Viral: ಹೆಬ್ಬಾವೇ ಶವರ್ ಬಾತ್ ಬೇಕಿತ್ತೆ ನಿನಗೆ? ಆಸ್ಟ್ರೇಲಿಯಾದಲ್ಲಿ ನಡೆದ ಘಟನೆ

ತಮ್ಮ ದೇಶಕ್ಕೆ ಬಂದು ಅಲ್ಲಿನ ಕಡಲಾಚೆಯ ಸಮುದಾಯವೊಂದರಲ್ಲಿ (Offshore Community) ನೆಲೆಗೊಳ್ಳಬಯಸುವವರಿಗೆ ಐರ್​ಲ್ಯಾಂಡ್ ಸರಕಾರ 8000 ಯೂರೋ, ಎಂದರೆ ಸುಮಾರು ರೂ. 71 ಲಕ್ಷ ಕೊಡಲು ಮುಂದಾಗಿದೆ! ಇದು ನಂಬಲು ಕಷ್ಟವೆನ್ನಿಸಿದರೂ ಸತ್ಯ. ನಮ್ಮಲ್ಲಿ ಜನಸಂಖ್ಯೆ ಹೆಚ್ಚುತ್ತಲೇ ಹೋಗುತ್ತಿದ್ದರೂ ಜಗತ್ತಿನ ಮುಂದುವರಿದ ಅನೇಕ ದೇಶಗಳಲ್ಲಿ ಅದು ಕಡಿಮೆಯಾಗುತ್ತಿದೆ. ಇಟಲಿಯ ಒಂದು ಪಟ್ಟಣದಲ್ಲೂ ಇದೇ ರೀತಿಯ ಯೋಜನೆ ಘೋಷಿಸಲಾಗಿದೆ. ಐರ್​ಲ್ಯಾಂಡ್‌ನ ನಡುಗಡ್ಡೆಗಳಲ್ಲಿ ಹೆಚ್ಚಿಸುವುದಕ್ಕೋಸ್ಕರ ಈ ಕ್ರಮ ಕೈಗೊಳ್ಳಲು ನಿರ್ಧರಿಸಿದ್ದಾರೆ.

ಇದನ್ನೂ ಓದಿ
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಇದನ್ನೂ ಓದಿ : Viral: ಗುಳೇದಗುಡ್ಡದ ಖಣ ತೊಟ್ಟುಬಂದ ಜವಾರೀ ನೋಟ್​ಬುಕ್​ಗಳು

“ನಮ್ಮ ಕಡಲಕರೆಯಾಚೆಯ ನಡುಗಡ್ಡೆಗಳಲ್ಲಿ ಸುಸ್ಥಿರವಾದ ಸ್ಪಂದನಶೀಲ ಸಮುದಾಯಗಳು ಮುಂಬರುವ ವರ್ಷಗಳಲ್ಲಿ ಬೆಳೆದು ಏಳ್ಗೆ ಹೊಂದಲಿ, ಮುಂದುವರಿಯಲಿ ಎಂಬುದು ಈ ಹಮ್ಮುಗೆಯ ಉದ್ದೇಶ. ನಮ್ಮ ದ್ವೀಪಗಳನ್ನು ಸಂದರ್ಶಿಸುವವರು ಅಲ್ಲಿನ ಅನನ್ಯ ಸಂಸ್ಕೃತಿ, ಪರಂಪರೆ, ಹಾಗೂ ನೈಸರ್ಗಿಕ ಸಂಪತ್ತಿನ ಕೊಡುಗೆಗಳನ್ನು ಅನುಭವಿಸಲಿ, ಆನಂದಿಸಲಿ ಎಂಬುದು ನಮ್ಮ ಆಕಾಂಕ್ಷೆಯಾಗಿದೆ.” ಎಂದು ಸರಕಾರದ ವೆಬ್‌ಸೈಟ್‌ನಲ್ಲಿ ನಮೂದಿಸಲಾಗಿದೆ. ಈ ಯೋಜನೆಯ ಅರ್ಜಿಪತ್ರಗಳು ಜುಲೈ ಒಂದರಿಂದ ಅಲ್ಲಿ ಸಿಗಲಿವೆ.

ದೇಶ ಬಿಟ್ಟು ತೊಲಗಿ ಎಂದು ಎಷ್ಟೇ ಹೇಳಿದರೂ ಕಿವುಡರಂತೆ ಇಲ್ಲಿಯೇ ಉಳಿದಿರುವ “ದೇಶವಿರೋಧಿ”ಗಳನ್ನು ಈ ಯೋಜನೆ ಮೂಲಕ ಎತ್ತಿಹಾಕಬಹುದೇ? ಅಥವಾ ಅವಕಾಶ ಸಿಕ್ಕರೆ ನೀವೂ ಹೋಗುವಿರೋ?

ಮತ್ತಷ್ಟು ವೈರಲ್​ ನ್ಯೂಸ್​ಗಾಗಿ ಕ್ಲಿಕ್ ಮಾಡಿ

Published On - 3:27 pm, Fri, 16 June 23