Fact Check: ಜಿಯೋ, ಏರ್‌ಟೆಲ್ ಮತ್ತು ವೊಡಾಫೋನ್​ನಿಂದ ಒಂದು ವರ್ಷದ ಉಚಿತ ರೀಚಾರ್ಜ್: ಈ ರೀತಿಯ ಪೋಸ್ಟ್ ಕಂಡರೆ ಎಚ್ಚರ

| Updated By: ಅಕ್ಷತಾ ವರ್ಕಾಡಿ

Updated on: Jan 05, 2025 | 11:56 AM

ವೈರಲ್ ವಿಡಿಯೋದಲ್ಲಿ ನೀಡಲಾದ ಎಲ್ಲಾ ಮಾಹಿತಿಯು ನಕಲಿಯಾಗಿದೆ. ವೆಬ್‌ಸೈಟ್‌ಗೆ ಭೇಟಿ ನೀಡಿದಾಗ ಮತ್ತು ಯಾವುದೇ ವರದಿಯ ಮೇಲೆ ಕ್ಲಿಕ್ ಮಾಡಿದಾಗ, ಅದು ಬಳಕೆದಾರರನ್ನು ಮತ್ತೊಂದು ವೆಬ್‌ಸೈಟ್‌ಗೆ ಕರೆದುಕೊಂಡು ಹೋಗುತ್ತದೆ. ಇದು ಬಳಕೆದಾರರನ್ನು ದಾರಿತಪ್ಪಿಸಲು ಮತ್ತು ವೀವ್ಸ್ ಮತ್ತು ಲೈಕ್‌ಗಳನ್ನು ಪಡೆಯಲು ಮಾಡಿರುವ ಟ್ರಿಕ್ ಆಗಿದೆ.

Fact Check: ಜಿಯೋ, ಏರ್‌ಟೆಲ್ ಮತ್ತು ವೊಡಾಫೋನ್​ನಿಂದ ಒಂದು ವರ್ಷದ ಉಚಿತ ರೀಚಾರ್ಜ್: ಈ ರೀತಿಯ ಪೋಸ್ಟ್ ಕಂಡರೆ ಎಚ್ಚರ
Fact Check
Follow us on

ಉಚಿತ ರೀಚಾರ್ಜ್ ಪಡೆಯಲು ಈ ರೀತಿ ಮಾಡಿ ಎಂದು ತೋರಿಸುವ ಟ್ರಿಕ್ ವಿಡಿಯೋ ಒಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಟೆಕ್ನೋ ಇಂಟೆಕ್ಸ್ ಎಂಬ ವೆಬ್‌ಸೈಟ್‌ಗೆ ಭೇಟಿ ನೀಡುವ ಮೂಲಕ, ಜಿಯೋ, ಏರ್‌ಟೆಲ್ ಮತ್ತು ವೊಡಾಫೋನ್ ಐಡಿಯಾ ಬಳಕೆದಾರರು ಒಂದು ವರ್ಷದ ಉಚಿತ ರೀಚಾರ್ಜ್ ಪಡೆಯಬಹುದು ಎಂದು ವಿಡಿಯೋದಲ್ಲಿ ಹೇಳಲಾಗುತ್ತಿದೆ. ಫೇಸ್​ಬುಕ್ ಮತ್ತು ಇನ್​ಸ್ಟಾಗ್ರಾಮ್​ನಲ್ಲು ಇದಕ್ಕೆ ಸಂಬಂಧಿಸಿದ ವಿಡಿಯೋ ಹರಿದಾಡುತ್ತಿದೆ.

ವೈರಲ್ ಆಗುತ್ತಿರುವುದು ಏನು?

ಇನ್​ಸ್ಟಾಗ್ರಾಮ್ ಬಳಕೆದಾರರೊಬ್ಬರು ಈ ವೈರಲ್ ವಿಡಿಯೋವನ್ನು ಹಂಚಿಕೊಳ್ಳುವಾಗ, “ಉಚಿತ ಮೊಬೈಲ್ ರೀಚಾರ್ಜ್ 100 ಪರ್ಸೆಂಟ್ ವರ್ಕಿಂಗ್ ಟ್ರಿಕ್ಸ್” ಎಂಬ ಶೀರ್ಷಿಕೆ ಬರೆದಿದ್ದಾರೆ.

Fact Check:

ಈ ಸುದ್ದಿಯ ಸತ್ಯಾಸತ್ಯತೆಯನ್ನು ಟಿವಿ9 ಕನ್ನಡ ಪರಿಶೋದಿಸಿದಾಗ ವೈರಲ್ ಹಕ್ಕು ಸುಳ್ಳು ಎಂದು ಕಂಡುಹಿಡಿದಿದೆ. ವಾಸ್ತವವಾಗಿ, ವೈರಲ್ ವಿಡಿಯೋದಲ್ಲಿ ನೀಡಲಾದ ಎಲ್ಲಾ ಮಾಹಿತಿಯು ನಕಲಿಯಾಗಿದೆ. ವೆಬ್‌ಸೈಟ್‌ಗೆ ಭೇಟಿ ನೀಡಿದಾಗ ಮತ್ತು ಯಾವುದೇ ವರದಿಯ ಮೇಲೆ ಕ್ಲಿಕ್ ಮಾಡಿದಾಗ, ಅದು ಬಳಕೆದಾರರನ್ನು ಮತ್ತೊಂದು ವೆಬ್‌ಸೈಟ್‌ಗೆ ಕರೆದುಕೊಂಡು ಹೋಗುತ್ತದೆ. ಇದು ಬಳಕೆದಾರರನ್ನು ದಾರಿತಪ್ಪಿಸಲು ಮತ್ತು ವೀವ್ಸ್ ಮತ್ತು ಲೈಕ್‌ಗಳನ್ನು ಪಡೆಯಲು ಮಾಡಿರುವ ಟ್ರಿಕ್ ಆಗಿದೆ.

ವೈರಲ್ ಆಗಿರುವ ವಿಡಿಯೋದ ನಿಜಾಂಶ ತಿಳಿಯಲು, ಸಂಬಂಧಿತ ಕೀವರ್ಡ್‌ಗಳ ಸಹಾಯದಿಂದ ನಾವು ಗೂಗಲ್‌ನಲ್ಲಿ ಹುಡುಕಿದೆವು. ಜಿಯೋ, ಏರ್‌ಟೆಲ್ ಮತ್ತು ವೊಡಾಫೋನ್ ಐಡಿಯಾ ಉಚಿತ ರೀಚಾರ್ಜ್ ಅನ್ನು ನೀಡುತ್ತಿವೆ ಎಂದು ಉಲ್ಲೇಖಿಸಿರುವ ಕ್ಲೈಮ್‌ಗೆ ಸಂಬಂಧಿಸಿದ ಯಾವುದೇ ಸುದ್ದಿ ವರದಿ ನಮಗೆ ಕಂಡುಬಂದಿಲ್ಲ.

ತನಿಖೆಯನ್ನು ಮುಂದಕ್ಕೆ ತೆಗೆದುಕೊಂಡು, ನಾವು ವಿಡಿಯೋದಲ್ಲಿ ಉಲ್ಲೇಖಿಸಿರುವ ವೆಬ್‌ಸೈಟ್ ಕುರಿತು ಹುಡುಕಿದೆವು. ವೆಬ್‌ಸೈಟ್‌ನಲ್ಲಿ ಉಚಿತ ರೀಚಾರ್ಜ್ ಅನ್ನು ಹೇಗೆ ಪಡೆಯುವುದು ಎಂದು ನಮೂದಿಸಿಲ್ಲ ಎಂದು ನಾವು ಕಂಡುಕೊಂಡಿದ್ದೇವೆ. ಬದಲಿಗೆ ವೆಬ್‌ಸೈಟ್‌ನಲ್ಲಿನ ಯಾವುದೇ ವರದಿಯನ್ನು ಕ್ಲಿಕ್ ಮಾಡಿದಾಗ ಬಳಕೆದಾರರನ್ನು ಬೇರೆ ವೆಬ್‌ಸೈಟ್‌ಗೆ ಹೋಗುವಂತೆ ಮಾಡುತ್ತದೆ. ವಿಡಿಯೋದಲ್ಲಿ ತೋರಿಸಿರುವ ವಿಧಾನ ಮತ್ತು ಟ್ರಿಕ್ ಅನ್ನು ವೆಬ್‌ಸೈಟ್‌ನಲ್ಲಿ ನೀಡಲಾಗಿಲ್ಲ.

ಖಾಸಗಿ ವೆಬ್​ಸೈಟ್ ಒಂದು ಈ ಸುದ್ದಿಯ ಕುರಿತ ಹೆಚ್ಚಿನ ಮಾಹಿತಿಗಾಗಿ ಸೈಬರ್ ತಜ್ಞ ಅನುಜ್ ಅಗರ್ವಾಲ್ ಅವರನ್ನು ಸಂಪರ್ಕಿಸಿದೆ. ಅವರು ನೀಡಿರುವ ಮಾಹಿತಿಯ ಪ್ರಕಾರ, ವೀವ್ಸ್ ಮತ್ತು ಲೈಕ್ಸ್​ ಪಡೆಯುವ ಉದ್ದೇಶದಿಂದ ಈ ವಿಡಿಯೋವನ್ನು ಹಂಚಿಕೊಳ್ಳಲಾಗುತ್ತಿದೆ. ಬಳಕೆದಾರರನ್ನು ಒಂದು ವೆಬ್‌ಸೈಟ್‌ನಿಂದ ಇನ್ನೊಂದು ವೆಬ್‌ಸೈಟ್‌ಗೆ ಕರೆದುಕೊಂಡು ಹೋಗಲಾಗುತ್ತದೆ ಇದರಿಂದ ಅವರ ವೈಯಕ್ತಿಕ ಮಾಹಿತಿಯನ್ನು ಕದಿಯಬಹುದು ಎಂದು ಅವರು ಹೇಳಿದ್ದಾರೆ.

ಈ ಹಿಂದೆಯೂ ಹಲವು ಬಾರಿ ಉಚಿತ ರೀಚಾರ್ಜ್ ಹೆಸರಿನಲ್ಲಿ ಬಳಕೆದಾರರನ್ನು ದಾರಿ ತಪ್ಪಿಸಿರುವ ಕುರಿತು ವರದಿ ಆಗಿದೆ. ಹ್ಯಾಕರ್‌ಗಳು ವಿಭಿನ್ನ ಪೋಸ್ಟ್​ಗಳ ಮೂಲಕ ಬಳಕೆದಾರರ ಡೇಟಾವನ್ನು ಕದಿಯಲು ಪ್ರಯತ್ನಿಸುವ ಟ್ರಿಕ್ ಇದಾಗಿದೆ.
ಹೀಗಾಗಿ ಟಿವಿ9 ಕನ್ನಡ ತನ್ನ ತನಿಖೆಯಲ್ಲಿ ಉಚಿತ ರಿಚಾರ್ಜ್ ಹೆಸರಿನಲ್ಲಿ ವೈರಲ್ ಆಗುತ್ತಿರುವ ಪೋಸ್ಟ್ ಸುಳ್ಳು ಎಂದು ಕಂಡುಹಿಡಿದಿದೆ. ವಾಸ್ತವವಾಗಿ, ವೈರಲ್ ವಿಡಿಯೋದಲ್ಲಿ ನೀಡಲಾದ ಎಲ್ಲಾ ಮಾಹಿತಿಯು ನಕಲಿಯಾಗಿದೆ. ವೆಬ್‌ಸೈಟ್‌ಗೆ ಭೇಟಿ ನೀಡಿದಾಗ ಮತ್ತು ಯಾವುದೇ ವರದಿಯ ಮೇಲೆ ಕ್ಲಿಕ್ ಮಾಡಿದಾಗ, ಅದು ಬಳಕೆದಾರರನ್ನು ಮತ್ತೊಂದು ವೆಬ್‌ಸೈಟ್‌ಗೆ ಕರೆದುಕೊಂಡು ಹೋಗುತ್ತದೆ. ಇವು ಬಳಕೆದಾರರನ್ನು ದಾರಿತಪ್ಪಿಸಲು ಮತ್ತು ವೀವ್ಸ್ ಮತ್ತು ಲೈಕ್‌ಗಳನ್ನು ಪಡೆಯಲು ಮಾಡಿರುವ ಪೋಸ್ಟ್ ಆಗದೆ. ಇಂತಹ ಮಾಹಿತಿಯನ್ನು ನಂಬಿ ಕ್ಲಿಕ್ ಮಾಡುವಾಗ ನೀವು ಎಚ್ಚರವಹಿಸಬೇಕು.

ಫ್ಯಾಕ್ಟ್ ಚೆಕ್​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ