ಸಾವಿನ ಮನೆಯ ಸೂಕಕ ಹೇಳತೀರದು. ಬಂಧು ಬಳಗದವರು ತಮ್ಮ ಆಪ್ತಕರನ್ನು ಕಳೆದುಕೊಂಡು ದುಃಖವನ್ನು ಸಹಿಸಿಕೊಳ್ಳಲಾರದೆ ಮೃತ ದೇಹದ ಮುಂದೆ ಕಣ್ಣೀರು ಹಾಕುತ್ತಾ ಕುಳಿತಿರುತ್ತಾರೆ. ಇಂತಹ ಒಳ್ಳೆ ವ್ಯಕ್ತಿ ಮತ್ತೆ ಬಾರನೆಂಬ ಬೇಸರವನ್ನು ಹೊರಹಾಕುತ್ತಿರುತ್ತಾರೆ. ಒಟ್ಟಿನಲ್ಲಿ ಸಾವಿನ ಮನೆಯಲ್ಲಿ ಸೂತಕದ ಛಾಯೆ ಆವರಿಸಿರುತ್ತದೆ. ಆದರೆ ಇಲ್ಲೊಂದು ಸಾವಿನ ಮನೆಯಲ್ಲಿ ಬಂಧು-ಬಳಗದವರು ಜೊತೆಯಾಗಿ ಶವದ ಮುಂದೆಯೇ ದೊಡ್ಡ ಪ್ರೊಜೆಕ್ಟರ್ ಅಳವಡಿಸಿ ಫುಟ್‌ಬಾಲ್ ಪಂದ್ಯವನ್ನು ವೀಕ್ಷಿಸಿದ್ದಾರೆ. ಸದ್ಯ ಈ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
ಈ ವಿಚಿತ್ರ ಘಟನೆ ಚಿಲಿ ದೇಶದಲ್ಲಿ ನಡೆದಿದ್ದು, ಸಾವಿನ ಮನೆಯಲ್ಲಿ ಶವದ ಮುಂದೆಯೇ ಕುಟುಂಬಸ್ಥರು ತಮ್ಮ ದುಃಖವನ್ನೆಲ್ಲಾ ಮರೆತು ದೊಡ್ಡ ಪ್ರೊಜೆಕ್ಟರ್‌ನಲ್ಲಿ ಚಿಲಿ ಮತ್ತು ಪೆರು ನಡುವಿನ ರೋಚಕ ಕೋಪಾ ಅಮೇರಿಕನ್ ಫುಟ್ಬಾಲ್ ಪಂದ್ಯವನ್ನು ವೀಕ್ಷಿಸಿದ್ದಾರೆ.
VisionPais2050 ಹೆಸರಿನ ಎಕ್ಸ್ ಖಾತೆಯಲ್ಲಿ ಈ ಕುರಿತ ಪೋಸ್ಟ್ ಒಂದನ್ನು ಹಂಚಿಕೊಳ್ಳಲಾಗಿದ್ದು, “ಇದು ಇಂದು ನಾವು ನೋಡುತ್ತಿರುವ ಅತ್ಯಂತ ವಿಚಿತ್ರ ಸಂಗತಿಯಾಗಿದೆ” ಎಂಬ ಶೀರ್ಷಿಕೆಯನ್ನು ಬರೆದುಕೊಳ್ಳಲಾಗಿದೆ.
Esto es lo mas bizarro que verán hoy…. pic.twitter.com/sU1fF679VO
— Vision Pais (@VisionPais2050) June 22, 2024
ವೈರಲ್ ವಿಡಿಯೋದಲ್ಲಿ ಶವದ ಮುಂದೆಯೇ ಕುಟುಂಬಸ್ಥರು ರೋಚಕ ಫುಟ್ಬಾಲ್ ಪಂದ್ಯವನ್ನು ವೀಕ್ಷಿಸುತ್ತಿರುವ ದೃಶ್ಯವನ್ನು ಕಾಣಬಹುದು. ಸಾವಿನ ಮನೆಯಲ್ಲಿದ್ದ ಕುಟುಂಬಸ್ಥರು ತಮ್ಮ ದುಃಖವನ್ನೆಲ್ಲಾ ಬದಿಗಿಟ್ಟು ಶವದ ಮುಂದೆಯೇ ದೊಡ್ಡ ಪ್ರೊಜೆಕ್ಟರ್ ಅಳವಡಿಸಿ ಚಿಲಿ ಮತ್ತು ಪೆರು ದೇಶಗಳ ನಡುವಿನ ರೋಚಕ ಕೋಪಾ ಅಮೇರಿಕನ್ ಫುಟ್ಬಾಲ್ ಪಂದ್ಯವನ್ನು ವೀಕ್ಷಿಸಿದ್ದಾರೆ.
ಇದನ್ನೂ ಓದಿ: ಸಿರಪ್ ಬಾಟಲಿ ನುಂಗಿ ಸಂಕಷ್ಟಕ್ಕೆ ಸಿಲುಕಿದ ನಾಗಪ್ಪ; ರಕ್ಷಣೆಗೆ ಧಾವಿಸಿದ ಸ್ನೇಕ್ ಹೆಲ್ಪ್‌ಲೈನ್
ಜೂನ್ 23 ರಂದು ಹಂಚಿಕೊಳ್ಳಲಾದ ಈ ವಿಡಿಯೋ 5 ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಈ ವಿಚಿತ್ರ ಸಂಗತಿಯನ್ನು ನೋಡಿ ಜನ ಹಿಂಗೂ ಇರ್ತಾರಾ ಎಂದು ನೆಟ್ಟಿಗರು ಫುಲ್ ಶಾಕ್ ಆಗಿದ್ದಾರೆ.
ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ