Viral Video: ನಾಗಪುರ ಮೆಟ್ರೋದಲ್ಲಿ ಫ್ಯಾಷನ್​ ಷೋ; ಪ್ರಯಾಣಿಕರಿಗೆ ತೊಂದರೆ

|

Updated on: Sep 01, 2023 | 5:15 PM

Nagpur : ಸಾಮಾನ್ಯರು ಪ್ರಯಾಣಿಸುವ ಈ ಮೆಟ್ರೊ ರೈಲಿನಲ್ಲಿ ಇಂಥ ಆಡಂಬರದ ಫ್ಯಾಷನ್​ ಷೋ ಅವಶ್ಯಕತೆ ಇತ್ತೆ? ಇದರಿಂದ ಯಾರಿಗೆ ಏನು ಪ್ರಯೋಜನವಾಗಲಿದೆ? ಯಾವ ರ್ಯಾಂಪ್​ ಷೋಗೂ ಕಡಿಮೆ ಇಲ್ಲದ ಹಾಗೆ ಅದ್ದೂರಿಯಾಗಿ ಪ್ರದರ್ಶನ ಮಾಡಿದ್ದರ ಉದ್ದೇಶವಾದರೂ ಏನು ಎಂದು ಕೇಳಿದ್ದಾರೆ ಕೆಲವರು. ಒಟ್ಟಾರೆಯಾಗಿ ಪ್ರಯಾಣಿಕರಿಗೂ ಇದು ತೊಂದರೆಗೀಡು ಮಾಡಿದೆ.

Viral Video: ನಾಗಪುರ ಮೆಟ್ರೋದಲ್ಲಿ ಫ್ಯಾಷನ್​ ಷೋ; ಪ್ರಯಾಣಿಕರಿಗೆ ತೊಂದರೆ
ನಾಗಪುರ ಮೆಟ್ರೋದಲ್ಲಿ ಫ್ಯಾಷನ್ ಷೋ
Follow us on

Nagpur: ನಾಗಪುರದ ಮೆಟ್ರೋದೊಳಗೆ ಬಣ್ಣಬಣ್ಣದ ಚಿಟ್ಟೆಗಳ ಕಲರವ. ಚಿಕ್ಕಮಕ್ಕಳು ಯುವಕ ಯುವತಿಯರೆಲ್ಲ ಈ ಮೆಟ್ರೋದೊಳಗೆ ಫ್ಯಾಷನ್​ ಷೋದಲ್ಲಿ (Fashion Show) ಮುಳುಗಿದ್ದಾರೆ. ಪ್ರಯಾಣಿಕರೆಲ್ಲ ಬೆರಗಿನಿಂದ ಅವರನ್ನು ನೋಡುತ್ತಿದ್ದಾರೆ. ಈ ವಿಡಿಯೋ ಇದೀಗ ವೈರಲ್ ಆಗುತ್ತಿದೆ. ನೆಟ್ಟಿಗರು ಈ ಸುಂದರವಾದ ದೃಶ್ಯವನ್ನು ನೋಡುತ್ತಿದ್ದಾರೆ. ಆದರೆ ಆ ಮೆಟ್ರೋದಲ್ಲಿ ಪ್ರಯಾಣಿಸಿದವರಿಗೆ ಮಾತ್ರ ಈ ಫ್ಯಾಷನ್​ ಷೋದಿಂದ ಕಿರಿಕಿರಿಯಾಗಿದೆ. ಈ ವಿಡಿಯೋ ಅನ್ನು ಅಮೀರ್ ಶೇಖ್​ ಎಂಬ ಇನ್​ಸ್ಟಾಗ್ರಾಂ ಖಾತೆದಾರರು ಪೋಸ್ಟ್ ಮಾಡಿದ್ದಾರೆ. Best Fashion Designer India ನಾಗಪುರದ ಮೆಟ್ರೋ ರೈಲಿನಲ್ಲಿ ಈ ಫ್ಯಾಷನ್​ ಷೋ ಹಮ್ಮಿಕೊಂಡಿತ್ತು.

ಇದನ್ನೂ ಓದಿ : Viral Video: ಪಾಕಿಸ್ತಾನ; ಒಂದು ಟೋಪಿಯಿಂದಾಗಿ ಮದುವೆಯ ಔತಣಕೂಟ ಕುಸ್ತಿ ಅಖಾಡಾ ಆದ ಹೊತ್ತು 

ಇದನ್ನೂ ಓದಿ
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ನಾಲ್ಕು ದಿನಗಳ ಹಿಂದೆ ಈ ವಿಡಿಯೋ ಪೋಸ್ಟ್ ಮಾಡಲಾಗಿದ್ದು 1.7 ಮಿಲಿಯನ್​ಗಿಂತಲೂ ಹೆಚ್ಚು ಜನರು ಈ ವಿಡಿಯೋ ನೋಡಿದ್ದಾರೆ. 1.5 ಲಕ್ಷ ಜನರು ಲೈಕ್ ಮಾಡಿದ್ದಾರೆ. ಸಾವಿರಾರು ಜನರು ಬಗೆಬಗೆಯಲ್ಲಿ ಪ್ರತಿಕ್ರಿಯಿಸಿದ್ದಾರೆ. ಅನೇಕರು ಈ ವಿಡಿಯೋ ಬಗ್ಗೆ ವಿರೋಧ ವ್ಯಕ್ತಪಡಿಸಿದ್ದಾರೆ.

ನಾಗಪುರದ ಮೆಟ್ರೋದಲ್ಲಿ ನಡೆದ ಫ್ಯಾಷನ್ ಷೋ

ಗ್ರಾಹಕರನ್ನು ಸೆಳೆಯಲು ಹೊಸ ಹೊಸ ತಂತ್ರಗಳನ್ನು ರೂಪಿಸಲಾಗುತ್ತಿದೆ ಎಂದಿದ್ದಾರೆ ಒಬ್ಬರು. ಏನೇ ಮಾಡಲಿ ಆದರೆ ಪ್ರಯಾಣಿಕರಿಗೆ ತೊಂದರೆಯಾಗದಂತೆ ಮಾಡಬೇಕಲ್ಲವೆ? ಎಂದು ಪ್ರಶ್ನಿಸಿದ್ದಾರೆ ಇನ್ನೊಬ್ಬರು. ಈ ಫ್ಯಾಷನ್​ ಷೋದ ಉದ್ದೇಶವೇನು? ಎಂದು ಕೇಳಿದ್ದಾರೆ ಮತ್ತೊಬ್ಬರು. ಇನ್ನು  ಮುಂದಿನ ಫ್ಯಾಷನ್​ ಷೋ ವಿಮಾನದಲ್ಲಿ ನಡೆಯುವುದೇ? ಎಂದಿದ್ದಾರೆ ಮಗದೊಬ್ಬರು.

ಇದನ್ನೂ ಓದಿ : Viral Video: ದೈತ್ಯಕೊಂಬಿನ ಗೂಳಿಯೊಂದಿಗೆ ಕಾರ್​ ಸವಾರಿ ಮಾಡಿದ ವ್ಯಕ್ತಿ; ಅಯ್ಯಯ್ಯೋ ಎಂದ ನೆಟ್ಟಿಗರು

ನಮ್ಮ ನಾಗಪುರ ದೆಹಲಿಗಿಂತ ಕಡಿಮೆ ಏನಿಲ್ಲ, ಗೊತ್ತಾಯ್ತಾ? ಎಂದು ಕೇಳಿದ್ದಾರೆ ಒಬ್ಬರು. ದೆಹಲಿಯ ಮೆಟ್ರೋ ವೈರಸ್ ಅಂತೂ ನಾಗಪುರ ಮೆಟ್ರೋಗೆ ಹರಡಿದೆ ಎಂದಿದ್ದಾರೆ ಮತ್ತೊಬ್ಬರು. ಇದರಲ್ಲಿ ಹೊಸತನ ಎನ್ನುವುದು ಏನಿದೆ? ಆಡಂಬರದ ಪ್ರದರ್ಶನದಿಂದ ಯಾರಿಗೆ ಪ್ರಯೋಜನವಾಗಲಿದೆ? ಎಂದು ಕೇಳಿದ್ದಾರೆ ಅನೇಕರು. ಪ್ರಯಾಣಿಕರು ಇನ್ನುಮುಂದೆ ಮೆಟ್ರೋಗಳಲ್ಲಿ ಹೀಗೆ ಉಚಿತ ಮನರಂಜನೆ ಪಡೆಯಬಹುದಲ್ಲವೆ? ಎಂದು ಕೇಳಿದ್ದಾರೆ ಒಂದಿಷ್ಟು ಜನ.

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ನ್ಯೂಸ್​​ಗಾಗಿ ಕ್ಲಿಕ್ ಮಾಡಿ