Viral Video: ಅನಾರೋಗ್ಯದಿಂದ ಚೇತರಿಸಿಕೊಂಡ ಮಗನನ್ನು ಕಂಡು ಕುಣಿದು ಕುಪ್ಪಳಿಸಿದ ಅಪ್ಪ; ಹೃದಯಸ್ಪರ್ಶಿ ವಿಡಿಯೋವಿದು

ಅನಾರೋಗ್ಯದಿಂದ ಚೇತರಿಸಿಕೊಂಡ ಮಗನನ್ನು ಕಂಡು ಅಪ್ಪ ಕುಣಿದು ಕುಪ್ಪಳಿಸತ್ತಿರುವ ದೃಶ್ಯ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

Viral Video: ಅನಾರೋಗ್ಯದಿಂದ ಚೇತರಿಸಿಕೊಂಡ ಮಗನನ್ನು ಕಂಡು ಕುಣಿದು ಕುಪ್ಪಳಿಸಿದ ಅಪ್ಪ; ಹೃದಯಸ್ಪರ್ಶಿ ವಿಡಿಯೋವಿದು
ಅಪ್ಪ ಮಗನ ಸಕತ್​ ಡಾನ್ಸ್​
Edited By:

Updated on: Oct 19, 2021 | 2:56 PM

ಪೋಷಕರು ಎಂದಿಗೂ ಮಕ್ಕಳ ಸಂತೋಷವನ್ನೇ ಬಯಸುತ್ತಾರೆ. ಮಕ್ಕಳು ಅನಾರೋಗ್ಯದಿಂದ ನರಳುತ್ತಿದ್ದರೆ ಪೋಷಕರಷ್ಟು ನೋವು ಅನುಭವಿಸುವವರು ಮತ್ತೋಬ್ಬರಿಲ್ಲ. ಅದೇ ರೀತಿ ಆರೋಗ್ಯ ಸಂಪೂರ್ಣವಾಗಿ ಸುಧಾರಿಸಿಕೊಂಡಾಗ ಅವರ ಸಂತೋಷಕ್ಕೆ ಮಿತಿಯೇ ಇಲ್ಲ. ಅದೇ ರೀತಿ, ಇದೀಗ ವೈರಲ್​ ಆದ ವಿಡಿಯೋದಲ್ಲಿ ತಂದೆ, ಮಗನೊಂದಿಗೆ ಖುಷಿಯಿಂದ ಕುಣಿದು ಕುಪ್ಪಳಿಸುತ್ತಿದ್ದಾರೆ. ಅಪ್ಪ ಮಗನ ಸಂತೋಷದ ಕ್ಷಣದ ವಿಡಿಯೋ ಇದೀಗ ಫುಲ್ ವೈರಲ್ ಆಗಿದೆ. ವಿಡಿಯೋ ಎಲ್ಲರ ಮನಮಿಡಿಯುವಂತಿದೆ.

ವಿಡಿಯೋದಲ್ಲಿ ಗಮನಿಸುವಂತೆ ಪುಟ್ಟ ಬಾಲಕ ಅನಾರೋಗ್ಯದಿಂದ ಗುಣಮುಖನಾಗಿ ಬಂದಿದ್ದಾನೆ. ಇದೀಗ ಆರೋಗ್ಯದಲ್ಲಿ ಚೇತರಿಸಿಕೊಂಡಿದ್ದರಿಂದ ಅಪ್ಪನ ಸಂತೋಷಕ್ಕೆ ಮಿತಿಯೇ ಇಲ್ಲ. ಸಂತೋಷದಿಂದ ಮಗನನ್ನು ಎತ್ತಿಕೊಂಡು ನೃತ್ಯ ಮಾಡಿದ್ದಾರೆ. ಒಂದೇ ಬಣ್ಣದ ಶರ್ಟ್ ತೊಟ್ಟ ಅಪ್ಪ ಮಗ ಇಬ್ಬರು ಸೇರಿ ಕುಣಿದು ಕುಪ್ಪಳಿಸತ್ತಿರುವ ದೃಶ್ಯ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ವಿಡಿಯೋವನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಳ್ಳಲಾಗಿದೆ. ಸುಮಾರು 2 ಲಕ್ಷಕ್ಕೂ ಹೆಚ್ಚಿನ ವೀಕ್ಷಣೆಗಳನ್ನು ಗಳಿಸಿಕೊಂಡಿದೆ. ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ನೋಡಿದ ನೆಟ್ಟಿಗರು ಇಷ್ಟಪಟ್ಟಿದ್ದಾರೆ. ಆತ್ಮವಿಶ್ವಾಸವೇ ಯಶಸ್ಸಿಗೆ ಕಾರಣ ಎಂದು ಓರ್ವರು ಹೇಳಿದ್ದಾರೆ. ಇದೇ ರೀತಿ ಜೀವನದಲ್ಲಿ ಸಂತೋಷವಾಗಿರಿ ಎಂದು ಕೆಲವರು ಹಾರೈಸಿದ್ದಾರೆ.

ಇದನ್ನೂ ಓದಿ:

Viral Videos: ಆಹಾ, ಇಷ್ಟೊಂದು ಮುದ್ದುಮುದ್ದಾಗಿ ಕದಿಯಬಹುದಾ?; ಚಾಣಾಕ್ಷ ಶ್ವಾನಗಳ ವಿಡಿಯೋ ನೋಡಿ

Viral Video: ಮೊದಲ ಬಾರಿ ವಿಮಾನ ಹತ್ತಿದ ಮಗಳಿಗೆ ಸರ್​ಪ್ರೈಸ್ ಕೊಟ್ಟ ಅಪ್ಪ; ಈ ವಿಡಿಯೋವನ್ನು ಮಿಸ್ ಮಾಡಲೇಬೇಡಿ!

Published On - 2:56 pm, Tue, 19 October 21

TV9 Web

TV9 Kannada

Read More
Loading...
Unable to load recommendations.
Follow Us