ವಿಮಾನದಲ್ಲಿ ಪ್ರಯಾಣಿಕನಿಗೆ ಕಪಾಳಮೋಕ್ಷ ಮಾಡಿದ ಸಹ ಪ್ರಯಾಣಿಕ, ಹಲ್ಲೆಗೊಳಗಾದ ವ್ಯಕ್ತಿ ನಾಪತ್ತೆ

ಮುಂಬೈನಿಂದ ಕೋಲ್ಕತ್ತಾಗೆ ಹೋಗುತ್ತಿದ್ದ ಇಂಡಿಗೋ ವಿಮಾನದಲ್ಲಿ ಪ್ರಯಾಣಿಕನಿಗೆ ಸಹ ಪ್ರಯಾಣಿಕನೊಬ್ಬ ಹಲ್ಲೆ ಮಾಡಿರುವ ಘಟನೆ ನಡೆದಿದೆ. ಆದರೆ ಇದೀಗ ಹಲ್ಲೆಗೆ ಒಳಗಾದ ವ್ಯಕ್ತಿ ನಾಪತ್ತೆಯಾಗಿದ್ದಾನೆ. ಹಲ್ಲೆಗೊಳಗಾದ ಹುಸೇನ್ ಕೋಲ್ಕತ್ತಾದಿಂದ ಸಿಲ್ಚಾರ್‌ಗೆ ಹೋಗುವ ವಿಮಾನದಲ್ಲಿ ಪ್ರಯಾಣಿಸಬೇಕಿತ್ತು. ಆತನ ಸ್ವಾಗತಕ್ಕಾಗಿ ಕುಟುಂಬ ವಿಮಾನ ನಿಲ್ದಾಣದಲ್ಲಿ ಕಾಯುತ್ತಿತ್ತು. ಆದರೆ ಸರಿಯಾದ ಸಮಯಕ್ಕೆ ಬರದ ಕಾರಣ, ಇದೀಗ ನಾಪತ್ತೆಯಾಗಿದ್ದಾನೆ ಎಂದು ಹೇಳಲಾಗಿದೆ.

ವಿಮಾನದಲ್ಲಿ ಪ್ರಯಾಣಿಕನಿಗೆ ಕಪಾಳಮೋಕ್ಷ ಮಾಡಿದ ಸಹ ಪ್ರಯಾಣಿಕ, ಹಲ್ಲೆಗೊಳಗಾದ ವ್ಯಕ್ತಿ ನಾಪತ್ತೆ
ವೈರಲ್ ವಿಡಿಯೋ
Edited By:

Updated on: Aug 02, 2025 | 3:57 PM

ಇಂಡಿಗೋ ವಿಮಾನದಲ್ಲಿ (IndiGo) ಒಂದಲ್ಲ ಒಂದು ವಿಚಾರಗಳು ವೈರಲ್​ ಆಗುತ್ತಲೇ ಇರುತ್ತದೆ. ಇದೀಗ ವಿಮಾನದಲ್ಲಿ ಪ್ರಯಾಣಿಕನೊಬ್ಬನ ಮೇಲೆ ಹಲ್ಲೆ ನಡೆಸಿದ ಪ್ರಕರಣ ಬೆಳಕಿಗೆ ಬಂದಿದೆ. ಮುಂಬೈನಿಂದ ಕೋಲ್ಕತ್ತಾಗೆ ಹೋಗುತ್ತಿದ್ದ ಇಂಡಿಗೋ ವಿಮಾನದಲ್ಲಿ ಈ ಘಟನೆ ನಡೆದಿದೆ. ಆರೋಪಿಯನ್ನು ಕೋಲ್ಕತ್ತಾ ವಿಮಾನ ನಿಲ್ದಾಣದಲ್ಲಿ ಇಳಿದ ತಕ್ಷಣ ಪೊಲೀಸರಿಗೆ ಹಸ್ತಾಂತರಿಸಲಾಗಿದೆ. ಈ ಘಟನೆಯಲ್ಲಿ ಭಾಗಿಯಾದ ಇಬ್ಬರೂ ಪ್ರಯಾಣಿಕರು ಮುಸ್ಲಿಂ ಸಮುದಾಯದವರು ಎಂದು ಹೇಳಲಾಗುತ್ತಿದೆ. ಕಪಾಳಮೋಕ್ಷ ಮಾಡಿಸಿಕೊಂಡ ವ್ಯಕ್ತಿ ಈಗ ನಾಪತ್ತೆಯಾಗಿದ್ದಾನೆ (Man missing) ಎಂದು ಹೇಳಲಾಗುತ್ತಿದೆ. ಇನ್ನು ಹಲ್ಲೆಗೆ ಒಳಗಾಗಿರುವ ವ್ಯಕ್ತಿಯನ್ನು ಹುಸೇನ್ ಅಹ್ಮದ್ ಎಂದು ಗುರುತಿಸಲಾಗಿದೆ.

ಹುಸೇನ್ ಕೋಲ್ಕತ್ತಾದಿಂದ ಸಿಲ್ಚಾರ್‌ಗೆ ಹೋಗುವ ವಿಮಾನದಲ್ಲಿ ಪ್ರಯಾಣಿಸಬೇಕಿತ್ತು ಎಂದು ಆತನ ಕುಟುಂಬದರು ಹೇಳಿದ್ದಾರೆ. ಆದರೆ ಹುಸೇನ್ ಸಿಲ್ಚಾರ್‌ ತಲುಪಿಲ್ಲ ಎಂದು ಹೇಳಲಾಗಿದೆ. ಸಿಲ್ಚಾರ್ ವಿಮಾನ ನಿಲ್ದಾಣದಲ್ಲಿ ಆತನಿಗಾಗಿ ಆತನ ಕುಟುಂಬ ಕಾಯುತ್ತಿತ್ತು. ಆದರೆ ಹುಸೇನ್ ಸಮಯಕ್ಕೆ ಸರಿಯಾಗಿ ತಲುಪಿಲ್ಲ. ಇದೀಗ ಆತ ನಾಪತ್ತೆಯಾಗಿದ್ದಾನೆ ಎಂದು ಹೇಳಲಾಗಿದೆ. ಮೊಬೈಲ್ ಫೋನ್ ಕೂಡ ಸ್ವಿಚ್ ಆಫ್ ಆಗಿದೆ. ಇದೀಗ ಈ ಬಗ್ಗೆ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು, ದೂರು ಸಹ ನೀಡಿಲಾಗಿದೆ . ಘಟನೆಗೆ ಸಂಬಂಧಿಸಿದ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಈ ವಿಡಿಯೋದಲ್ಲಿ  ಸೀಟಿನಲ್ಲಿ ಕುಳಿತಿದ್ದ ಪ್ರಯಾಣಿಕನೊಬ್ಬ ಇದ್ದಕ್ಕಿದ್ದಂತೆ ಹುಸೇನ್​​​ಗೆ  ಕಪಾಳಮೋಕ್ಷ ಮಾಡುವುದನ್ನು ಕಾಣಬಹುದು.

ಇದನ್ನೂ ಓದಿ
ಇಲ್ಲಿನ ಜನರು ವಾರಕ್ಕೊಮ್ಮೆ ಈ ರೀತಿ ಮಾಡಿ ಒತ್ತಡಕ್ಕೆ ಬ್ರೇಕ್ ಹಾಕಿಕೊಳ್ತಾರೆ
ಭಾರತೀಯ ಕಾರು ಚಾಲಕರೆಲ್ಲರೂ ಹೀಗೆನಾ, ವಿದೇಶಿಗ ಹೀಗೆಂದಿದ್ದೇಕೆ?
ರಸ್ತೆ ಬದಿಯಲ್ಲಿ ಡ್ಯಾನ್ಸ್ ಮಾಡ್ತಿದ್ದ ವಿದೇಶಿಗ ಅರೆಸ್ಟ್
ಉತ್ತರ ಕರ್ನಾಟಕದ ರೊಟ್ಟಿ ಸವಿಯಲು ಅಮೆರಿಕದಿಂದ ಬೆಂಗಳೂರಿಗೆ ಬರುವ ಉದ್ಯಮಿ

ವೈರಲ್​​ ವಿಡಿಯೋ ಇಲ್ಲಿದೆ ನೋಡಿ:

ಸೀಟಿನಲ್ಲಿ ಕುಳಿತಿದ್ದ ವ್ಯಕ್ತಿ ಹುಸೇನ್ ಮೇಲೆ ಹಲ್ಲೆ ನಡೆಸಿದ್ದಾನೆ. ಈ ವೇಳೆ ಅಲ್ಲಿದ್ದ ವಿಮಾನ ಸಿಬ್ಬಂದಿಗಳು ತಕ್ಷಣ ಹುಸೇನ್‌ನನ್ನು ಪಕ್ಕಕ್ಕೆ ಕರೆದುಕೊಂಡು ಹೋಗುತ್ತಾರೆ. ಹುಸೇನ್ ಹಲ್ಲೆಯಿಂದ ಅಳಲು ಶುರು ಮಾಡುತ್ತಾನೆ. ಪ್ರಯಾಣಿಕರ ಈ ವರ್ತನೆಗೆ ಅಲ್ಲಿದ್ದ ವಿಮಾನ ಸಿಬ್ಬಂದಿ ಹೀಗೆ ಮಾಡಬಾರದು ಎಂದು ಕೋಪದಲ್ಲಿ ಹೇಳುತ್ತಾರೆ. ಇನ್ನು ಪಕ್ಕದಲ್ಲೇ ಇದ್ದ ಸಹ ಪ್ರಯಾಣಿಕ ನೀನು ಯಾಕೆ ಕಪಾಳಮೋಕ್ಷ ಮಾಡಿದ್ದೆ, ಯಾರಿಗೂ ಹೊಡೆಯುವ ಹಕ್ಕಿಲ್ಲ ಎಂದು ಹೇಳುವುದನ್ನು ಈ ವಿಡಿಯೋದಲ್ಲಿ ನೋಡಬಹುದು. ಇನ್ನು ಈ ಜಗಳ ಯಾಕೆ ನಡೆದಿದೆ. ಯಾಕಾಗಿ ಹುಸೇನ್ ಮೇಲೆ ಹಲ್ಲೆ ಮಾಡಲಾಗಿದೆ ಎಂಬುದು ತಿಳಿದು ಬಂದಿಲ್ಲ.

ಇದನ್ನೂ ಓದಿ: ಪೋಷಕರಿಗೆ ಹುಷಾರಿಲ್ಲ ಎಂದರೂ ಇಂಟರ್ನ್ ಉದ್ಯೋಗಿಗೆ ರಜೆ ನೀಡಲು ನಿರಾಕರಿಸಿದ ಬಾಸ್‌

ಇನ್ನು ಈ ಘಟನೆಯ ಬಗ್ಗೆ ಇಂಡಿಗೋ ಎಕ್ಸ್ ನಲ್ಲಿ ಟ್ವೀಟ್ ಮಾಡಿದ್ದು,  “ನಮ್ಮ ವಿಮಾನಗಳಲ್ಲಿ ಒಂದರ ಮೇಲೆ ನಡೆದ ಹಲ್ಲೆ ಘಟನೆಯ ಬಗ್ಗೆ ನಮಗೆ ತಿಳಿದಿದೆ. ಇಂತಹ ಅಸಭ್ಯ ವರ್ತನೆ ಸಂಪೂರ್ಣವಾಗಿ ಸ್ವೀಕಾರಾರ್ಹವಲ್ಲ ಮತ್ತು ನಮ್ಮ ಪ್ರಯಾಣಿಕರು ಮತ್ತು ಸಿಬ್ಬಂದಿಯ ಸುರಕ್ಷತೆ , ಘನತೆಗೆ ಧಕ್ಕೆ ತರುವ ಯಾವುದೇ ಕೃತ್ಯವನ್ನು ನಾವು ಬಲವಾಗಿ ಖಂಡಿಸುತ್ತೇವೆ. ನಮ್ಮ ಸಿಬ್ಬಂದಿಗಳು ಎಲ್ಲವನ್ನು ತಾಳ್ಮೆಯಿಂದ ನಿಭಾಯಿಸಿದ್ದಾರೆ. ಈ ಘಟನೆಯಲ್ಲಿ ಹಲ್ಲೆ ಮಾಡಿದ ವ್ಯಕ್ತಿಯನ್ನು ಗುರುತಿಸಲಾಗಿದೆ. ಈಗಾಗಲೇ ಹಲ್ಲೆ ಮಾಡಿದ ವ್ಯಕ್ತಿಯನ್ನು ಭದ್ರತಾ ಅಧಿಕಾರಿಗಳಿಗೆ ಒಪ್ಪಿಸಲಾಗಿದೆ. ಶಿಷ್ಟಾಚಾರದ ಪ್ರಕಾರ, ಸಂಬಂಧಪಟ್ಟ ಎಲ್ಲಾ ನಿಯಂತ್ರಕ ಸಂಸ್ಥೆಗಳಿಗೆ ಸೂಕ್ತವಾಗಿ ತಿಳಿಸಲಾಗಿದೆ. ನಮ್ಮ ಎಲ್ಲಾ ವಿಮಾನಗಳಲ್ಲಿ ಸುರಕ್ಷಿತ ಮತ್ತು ಗೌರವಾನ್ವಿತ ವಾತಾವರಣವನ್ನು ಕಾಪಾಡಿಕೊಳ್ಳಲು ನಾವು ಬದ್ಧರಾಗಿದ್ದೇವೆ” ಎಂದು ಹೇಳಿದೆ.

ವೈರಲ್​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ