Viral Post: ಅಮ್ಮನ ಮಡಿಲು ಸೇರಿದ ಕಂದಮ್ಮ, ಆನೆಗಳ ಭಾವನಾತ್ಮಕ ಚಿತ್ರ ಹೇಗಿದೆ? ನೋಡಿ 

| Updated By: ಅಕ್ಷಯ್​ ಪಲ್ಲಮಜಲು​​

Updated on: Jan 04, 2024 | 6:02 PM

ಇದೀಗ ತಾಯಿ ಆನೆಯ ತೋಳಿನಲ್ಲಿ ಆನೆ ಮರಿಯೊಂದು  ನೆಮ್ಮದಿಯ ನಿದ್ದೆ ಮಾಡುತ್ತಿರುವಂತಹ ಭಾವನಾತ್ಮಕ ಚಿತ್ರವೊಂದು ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗುತ್ತಿದೆ. ಮಗು ತನ್ನ ತಾಯಿಯ ತೋಳಲ್ಲಿ ಮಲಗಿದೆ, ಇದ್ರಲ್ಲಿ ಅಂತಹ ವಿಶೇಷವೇನಿದೆ ಎಂದು ಹಲವರು ಭಾವಿಸಬಹುದು. ಆದ್ರೆ  ಇದರ ಹಿಂದಿನ ಕಥೆ ನಿಮ್ಮನ್ನು ಖಂಡಿತವಾಗಿಯೂ ಭಾವುಕರನ್ನಾಗಿಸುತ್ತದೆ. 

Viral Post: ಅಮ್ಮನ ಮಡಿಲು ಸೇರಿದ ಕಂದಮ್ಮ, ಆನೆಗಳ ಭಾವನಾತ್ಮಕ ಚಿತ್ರ ಹೇಗಿದೆ? ನೋಡಿ 
ವೈರಲ್ ಫೋಟೋ
Follow us on

ಇದೀಗ ಮುದ್ದಾದ ಮರಿ ಆನೆಯು ತನ್ನ ತಾಯಿಯ ತೋಲಿನಲ್ಲಿ ನೆಮ್ಮದಿಯಾಗಿ ನಿದ್ದೆ ಮಾಡುತ್ತಿರುವಂತಹ ಚಿತ್ರವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಮಗು ತನ್ನ ತಾಯಿಯ ತೋಳಲ್ಲಿ ಮಲಗಿದೆ, ಇದ್ರಲ್ಲಿ ಅಂತಹ ವಿಶೇಷವೇನಿದೆ ಎಂದು ನೀವು ಭಾವಿಸಬಹುದು. ಆದ್ರೆ  ಇದರ ಹಿಂದಿನ ಕಥೆ ನಿಮ್ಮನ್ನು ಖಂಡಿತವಾಗಿಯೂ ಭಾವುಕರನ್ನಾಗಿಸುತ್ತದೆ. ಹೌದು ಇದು ತಾಯಿ ಆನೆ ಮತ್ತು ಮರಿ ಆನೆಯ ಪುನರ್ಮಿನಲದ ಹೃದಯಸ್ಪರ್ಶಿ ಕಥೆಯಾಗಿದೆ.

ಈ ಘಟನೆ ಪೊಲ್ಲಾಚಿಯ ಆನಮಲೈ ಹುಲಿ ಸಂರಕ್ಷಿತ ಪ್ರದೇಶದಲ್ಲಿ ನಡೆದಿದ್ದು, ಈ ಪ್ರದೇಶದಲ್ಲಿ  ಕೆಲವು ದಿನಗಳ ಹಿಂದೆ 4 ರಿಂದ 5 ತಿಂಗಳಿನ ಆನೆ ಮರಿಯೊಂದು, ತನ್ನ ಹಿಂಡಿನಿಂದ ಬೇರ್ಪಟ್ಟಿತ್ತು. ತನ್ನ ತಾಯಿಯ ಮಡಿಲು ಸೇರಲು ಈ ಪುಟಾಣಿ ಆನೆ ಮರಿ ನಿದ್ದೆ ಊಟವನ್ನೆಲ್ಲಾ ಬಿಟ್ಟು ತನ್ನ ತಾಯಿ  ಹುಡುಕಾಟದಲ್ಲಿತ್ತು. ಆನೆ ಮರಿ ತಾಯಿಯನ್ನು ಹುಡುಕಾಡುತ್ತಾ  ಏಕಾಂಗಿಯಾಗಿ ಅಲೆದಾಡುತ್ತಿರುವುದನ್ನು ಗಮನಿಸಿದ ಅರಣ್ಯಾಧಿಕಾರಿಗಳು, ಆನೆ ಮರಿಯನ್ನು ಹಿಡಿದು ಅದನ್ನು ಹೇಗಾದರೂ ತಾಯಿ ಆನೆಯೊಂದಿಗೆ ಸೇರಿಸಬೇಕೆಂದು ನಿರ್ಧರಿಸುತ್ತಾರೆ. ಇದಕ್ಕಾಗಿ ಅರಣ್ಯಾಧಿಕಾರಿಗಳು ಡ್ರೋಣ್ ಬಳಸಿ ಆನೆಗಳ ಹಿಂಡಿನ ಶೋಧ ಕಾರ್ಯ ನಡೆಸುತ್ತಾರೆ. ಹಾಗೂ  ಸುಮಾರು 3 ಕಿ.ಮೀ ದೂರದಲ್ಲಿ ಆನೆಗಳ ಹಿಂಡು ಇರುವುದನ್ನು ಪತ್ತೆ ಹಚ್ಚಿ, ತಾಯಿಯಿಂದ ಬೇರ್ಪಟ್ಟಿದ್ದ ಈ ಮರಿ ಆನೆಯನ್ನು ಅದರ ಕುಟುಂಬದ ಜೊತೆಗೆ ಸೇರಿಸುವಲ್ಲಿ ಯಶಸ್ವಿಯಾಗಿದ್ದಾರೆ.  ಅರಣ್ಯಾಧಿಕಾರಿಗಳು  ತಾಯಿ ಮಗುವಿನ ಪುನರ್ಮಿಲನದ ಫೋಟೋವೊಂದನ್ನು ಸೆರೆ ಹಿಡಿದಿದ್ದು, ಈ ಭಾವನಾತ್ಮಕ ಫೋಟೋ ಇದೀಗ ವೈರಲ್ ಆಗಿದೆ.

ಈ ಭಾವನಾತ್ಮಕ ಫೋಟೋವನ್ನು ಐ.ಎ.ಎಸ್ ಅಧಿಕಾರಿ ಸುಪ್ರಿಯಾ ಸಾಹು ತಮ್ಮ X ಖಾತೆಯಲ್ಲಿ ಹಂಚಿಕೊಂಡಿದ್ದು,  ತಾಯಿ ಮಗು ಮತ್ತೆ ಜೊತೆ ಸೇರಿದಾಗ, ತನ್ನ ತಾಯಿಯ ಸಾಂತ್ವಾನದ ತೋಳುಗಳಲ್ಲಿ ಆನೆ ಮರಿ ನೆಮ್ಮದಿಯಾಗಿ ಮಲಗಿರುವ ಭಾವನಾತ್ಮಕ ಚಿತ್ರ ಎಂಬ ಶೀರ್ಷಿಕೆಯನ್ನು ಬರೆದುಕೊಂಡಿದ್ದಾರೆ. ಫೋಟೋದಲ್ಲಿ ತಾಯಿ ಆನೆ ಮತ್ತು ಮರಿ ಆನೆಯ ಪುನರ್ಮಿಲನದ ಫೋಟೋವನ್ನು ಕಾಣಬಹುದು.

ಅರಣ್ಯಾಧಿಕಾರಿಗಳು ಡ್ರೋನ್ ಶಾಟ್ ಮೂಲಕ ಈ ಭಾವನಾತ್ಮಕ ಫೋಟೋವನ್ನು ಕ್ಲಿಕ್ಕಿಸಿದ್ದು, ತಾಯಿ ಆನೆಯ ತೋಲಿನಲ್ಲಿ ಹಲವು ದಿನಗಳಿಂದ ನಿದ್ದೆಗೆಟ್ಟಿದ್ದ ಮರಿ ಆನೆಯು  ನೆಮ್ಮದಿಯಾಗಿ ಮಲಗಿರುವ ಮುದ್ದಾದ ದೃಶ್ಯವನ್ನು ಕಾಣಬಹುದು.  ಅಲ್ಲದೆ ಅರಣ್ಯಾಧಿಕಾರಿಗಳು ಮರಿ ಆನೆಯನ್ನು ಕರೆದುಕೊಂಡು ಹೋಗಿ ಆನೆಗಳ ಹಿಂಡಿನೊಂದಿಗೆ ಬಿಟ್ಟುಬರುವ  ವಿಡಿಯೋವನ್ನು ಸಹ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: ಮುಯ್ಯಿಗೆ ಮುಯ್ಯಿ: ತನಗೆ ಕಚ್ಚಿದ ಇಲಿಗೆ ಈ ಹುಡುಗಿ ಮಾಡಿದ್ದೇನು ನೋಡಿ? 

ಜನವರಿ 02 ರಂದು ಹಂಚಿಕೊಳ್ಳಲಾದ ಈ ವಿಡಿಯೋ 1 ಮಿಲಿಯನ್ ವೀಕ್ಷಣೆಗಳನ್ನು ಪಡೆದುಕೊಂಡಿದೆ. ಹಾಗೂ ಹಲವಾರು ಕಮೆಂಟ್ಸ್ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಆನೆ ಮರಿಯನ್ನು ಅದರ ತಾಯಿಯೊಂದಿಗೆ ಸೇರಿಸುವಲ್ಲಿ ಯಶಸ್ವಿಯಾದ  ತಮಿಳುನಾಡು ಅರಣ್ಯ ಇಲಾಖೆಯ  ಸಿಬ್ಬಂದಿಗಳು ಹಾಗೂ ಸ್ವಯಂ ಸೇವಕರಿಗೆ ನನ್ನದೊಂದು ಸಲಾಂʼ ಎಂದು  ಕಮೆಂಟ್ ಮಾಡಿದ್ದಾರೆ.  ಇನ್ನೊಬ್ಬ ಬಳಕೆದಾರರು ʼಈ ದೃಶ್ಯ ತುಂಬಾ ಭಾವನಾತ್ಮಕವಾಗಿದೆʼ ಎಂದು ಕಮೆಂಟ್ ಮಾಡಿದ್ದಾರೆ. ಮತ್ತೊಬ್ಬ ಬಳಕೆದಾರರು ಮರಿ ಆನೆಯನ್ನು ತಾಯಿಯೊಂದಿಗೆ ಸೇರಿಸುವಲ್ಲಿ ಯಶಸ್ವಿಯಾದ ಪ್ರತಿಯೊಬ್ಬ ಅರಣ್ಯಾಧಿಕಾರಿಗೂ ಅಭಿನಂದನೆಗಳನ್ನು ತಿಳಿದಿದ್ದಾರೆ.  ಇನ್ನೂ ಅನೇಕರು ಈ ಹೃದಯಸ್ಪರ್ಶಿ  ಚಿತ್ರಕ್ಕೆ ಮೆಚ್ಚುಗೆಯನ್ನು ಸೂಚಸಿದ್ದಾರೆ.

ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ