ಪ್ರಾಣಿಗಳು ತಪ್ಪಿಸಿಕೊಂಡ ರಸ್ತೆಯಲ್ಲಿ ಓಡಾಡುತ್ತಿರುವ ಸುದ್ದಿಯನ್ನು ಆಗಾಗ ಕೇಳುತ್ತಿರುತ್ತೇವೆ. ಆದರೆ ಇಲ್ಲಿ ಸಿಂಹದ ಕುಟುಂಬವೇ ರಸ್ತೆಗೆ ಇಳಿದಿದೆ. ದಾರಿ ತಪ್ಪಿದ ಸಿಂಗದ ಕುಟುಂಬ ರಸ್ತೆಯಲ್ಲಿ ಅಡ್ಡಾಡುತ್ತಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಗುಜರಾತಿನ ಪಿಪಾವವ್ ರಸ್ತೆಯಲ್ಲಿ ಎರಡು ಸಿಂಹದ ಮರಿಗಳು ಸೇರಿದಂತೆ ಒಟ್ಟು 5 ಸಿಂಹಗಳು ರಸ್ತೆಯಲ್ಲಿ ನಡೆದಾಡುತ್ತಿರುವ ದೃಶ್ಯ ಸೆರೆಯಾಗಿದೆ.
ರಸ್ತೆಯಲ್ಲಿ ಸುತ್ತಾಡುತ್ತಿರುವ ಸಿಂಹದ ಕುಟುಂಬವನ್ನು ನೋಡಿ ಜನರು ಬೆರಗಾಗಿದ್ದಾರೆ. ವಿಷಯ ತಿಳಿಯುತ್ತಿದ್ದಂತೆಯೇ ಅರಣ್ಯ ಇಲಾಖೆ ಸಿಬ್ಬಂದಿ ತನಿಖೆ ನಡೆಸಿವೆ. ಆಹಾರ ಹುಡುಕುತ್ತಾ ಬಂದಿರುವ ಸಿಂಹಗಳು ದಾರಿ ತಪ್ಪಿ ರಸ್ತೆಗಿಳಿದಿವೆ ಎಂದು ಹೇಳಲಾಗುತ್ತಿದೆ.
ಗುರಜಾತ್ನ ಪ್ರಸಿದ್ಧ ಗಿರ್ ಕಾಡುಗಳು ಏಷ್ಯಾಟಿಕ್ ಸಿಂಹಗಳ ವಾಸಸ್ಥಾನ. ಅಲ್ಲಿಂದ ದಾರಿ ತಪ್ಪಿ ಸಿಂಹಗಳು ಬಂದಿರಬೇಕು ಎಂಬ ಶಂಕೆ ಇದೆ. ಇತ್ತೀಚಿನ ಸಿಂಹ ಗಣತಿಯ ಪ್ರಕಾರ ಏಷ್ಯಾಟಿಕ್ ಸಿಂಹಗಳು ಶೇ.29ರಷ್ಟು ಏರಿಕೆಯಾಗಿದೆ. ಹಾಗೆಯೇ ಗಿರ್ ರಾಷ್ಟ್ರೀಯ ಉದ್ಯಾನವನದಲ್ಲಿ 674 ಸಿಂಹಗಳು ವಾಸಿಸುತ್ತಿರುವುದು ತಿಳಿದು ಬಂದಿದೆ. ಪ್ರತಿ ಐದು ವರ್ಷಕ್ಕೊಮ್ಮೆ ಸಿಂಹಗಳ ಗಣತಿಯನ್ನು ನಡೆಸಲಾಗುತ್ತದೆ. ಈ ವರ್ಷ ಜೂನ್ 5-6ರಂದು ಗಣತಿ ನಡೆಯಬೇಕಿತ್ತು. ಆದರೆ ಕಾರಣಾಂತರಗಳಿಂದ ಮುಂದೂಡಲಾಗಿದೆ.
This is not #Africa it’s #India a pride of lions walking at Pipavav port. #Rajulacity #Gujarat #saurastra #asiaticlion #gir #girlion #IncredibleIndia #Mumbai #goodmorning pic.twitter.com/GQ8Ic8bwBY
— Old Bombay (@oldmumbai) July 6, 2021
ಇದನ್ನೂ ಓದಿ:
Viral Video: ಸಿಂಹಕ್ಕೆ ಕಾಟ ಕೊಡುತ್ತಿದೆ ಪುಟ್ಟ ಆಮೆ! ಸಿಂಹದ ಪಜೀತಿ ಕೇಳುವವರು ಯಾರೂ ಇಲ್ವೇ?
Published On - 1:52 pm, Tue, 6 July 21