Viral : ಹಣವಿದ್ದರೆ ಎಲ್ಲವೂ ಸುಸೂತ್ರ. ಇಂದು ಯಾವ ಸಮಸ್ಯೆಗೂ ಉತ್ತರ ಬಹಳ ಸುಲಭವಾಗಿ ಸಿಗುತ್ತದೆ. ಹಾಗೆ ಸಾವಿಗೆ ಸಂಬಂಧಿಸಿಯೂ. ನಾಳೆ ನಾನು ಸತ್ತುಹೋದರೆ ನನ್ನ ಅಂತ್ಯಸಂಸ್ಕಾರ ಯಾರು ಮಾಡುತ್ತಾರೆ ಎಂದು ಕೊರಗಬೇಕಿಲ್ಲ. ಹಣವಿದ್ದರೆ ಅದೂ ಕೂಡ ಸುಗಮವೇ. ಏಕೆಂದರೆ ನಾಮಕರಣ, ಹುಟ್ಟುಹಬ್ಬ, ಸೀಮಂತ, ಮದುವೆ, ವಾರ್ಷಿಕೋತ್ಸವ ಮುಂತಾದ ಸಮಾರಂಭಗಳಿಗೆ ಇವೆಂಟ್ ಮ್ಯಾನೇಜ್ಮೆಂಟ್ ಕಂಪೆನಿಗಳು ಹೇಗೆ ಸಾರಥ್ಯ ವಹಿಸುತ್ತವೆಯೋ ಹಾಗೆಯೇ ಅಂತ್ಯಸಂಸ್ಕಾರಕ್ಕೂ ಸಾರಥ್ಯ ವಹಿಸುವ ಹೊಸ ಸ್ಟಾರ್ಟ್ ಅಪ್ ಮುಂಬೈನಲ್ಲಿ ಶುರುವಾಗಿದೆ.
ऐसे ‘स्टार्टअप’ की ज़रूरत क्यों पड़ी होगी ? pic.twitter.com/UekzjZ5o7b
ಇದನ್ನೂ ಓದಿ— Awanish Sharan (@AwanishSharan) November 20, 2022
ಸುಖಾಂತ ಫ್ಯುನರಲ್ ಕಂಪೆನಿಯ ಮಳಿಗೆಯು ದೆಹಲಿಯ ಇಂಡಿಯಾ ಇಂಟರ್ನ್ಯಾಷನಲ್ ಟ್ರೇಡ್ ಫೇರ್ನಲ್ಲಿ ಕಾಣಿಸಿಕೊಂಡಿದೆ. ಐಎಎಸ್ ಅಧಿಕಾರಿ ಅವನೀಶ್ ಶರಣ್ ಇದನ್ನು ಟ್ವೀಟ್ ಮಾಡಿದ್ದಾರೆ. ನೆಟ್ಟಿಗರು ಹೌಹಾರುತ್ತಿದ್ದಾರೆ. ಏನಿದು, ನೀವು ಹೀಗೆ ಹೇಳುತ್ತಿದ್ದೀರಿ ಎಂದು ಪ್ರಶ್ನಿಸುತ್ತಿದ್ದಾರೆ. ಈ ಥರವೂ ಒಂದು ಕಂಪೆನಿ ಇರಲು ಸಾಧ್ಯವಾ ಎಂದು ಕೇಳುತ್ತಿದ್ದಾರೆ.
ಮನುಷ್ಯನ ಅಂತಿಮಯಾತ್ರೆಯು ಗೌರವದಿಂದ ಕೂಡಿರಬೇಕೆಂಬ ಉದ್ದೇಶವನ್ನು ಈ ಕಂಪೆನಿ ಹೊಂದಿದೆ. ಅಂತಿಮ ಸಂಸ್ಕಾರದ ಪೂರ್ವ ವಿಧಿವಿಧಾನ, ಅಂತ್ಯಸಂಸ್ಕಾರ ಮತ್ತು ಶ್ರದ್ಧಾಂಜಲಿ ಕಾರ್ಯಕ್ರಮವನ್ನು ಇದು ಯೋಜಿಸಿ ಕೊಡುತ್ತದೆ. ಸಂಬಂಧಿಸಿದ ಪರಿಣತರು, ಅನುಭವಿಗಳನ್ನು ಈ ಕಂಪೆನಿಯು ಹೊಂದಿದೆ. ಪ್ರಸ್ತುತ ಮಳಿಗೆಯಲ್ಲಿ ಅಂತ್ಯಸಂಸ್ಕಾರದ ವಿಧಿವಿಧಾನಕ್ಕೆ ಬೇಕಾಗುವ ಎಲ್ಲ ಪರಿಕರಗಳನ್ನೂ ಪ್ರದರ್ಶನಕ್ಕೆ ಇಡಲಾಗಿತ್ತು.
ಇದನ್ನೂ ಓದಿ : ಮೆನ್ಸ್ ಡೇ ಪಂಚಾಂಗದಾಗೂ ಇಲ್ಲ ಮತ್ತ ಗೂಗಲ್ ಡೂಡಲ್ದಾಗೂ ಇಲ್ಲ; ಸೋನು ವೇಣುಗೋಪಾಲ
ಇಂತಹ ಸ್ಟಾರ್ಟ್ ಅಪ್ ಅಗತ್ಯವಿತ್ತೇ? ಎಂದು ನೆಟ್ಟಿಗರು ಬೆಚ್ಚಿ ಬೆದರಿ ನಕ್ಕು ಕೇಳುತ್ತಿದ್ದಾರೆ. ಜನರು ಸಾಮಾಜಿಕ ಮಾಧ್ಯಮಗಳಲ್ಲಿ ಮಾತ್ರ ಸಮಾಜಮುಖಿಯಾಗಿ ತೊಡಗಿಕೊಂಡಿದ್ಧಾರೆ. ನಿಜ ಬದುಕಿನಲ್ಲಿ ವಾದ, ಜಗಳಗಳಿಂದ ಮುಕ್ತವಾಗಿ ಅಂತಿಮ ಯಾತ್ರೆಯನ್ನು ಗೌರವದಿಂದ ಪೂರೈಸಲಿ ಬಿಡಿ ಎಂದಿದ್ದಾರೆ ಒಬ್ಬರು. ಅಲ್ಲದೆ, ಈ ಪೋಸ್ಟ್ನ ಥ್ರೆಡ್ನಲ್ಲಿ ಪಾಶ್ಚಾತ್ಯ ಸಂಸ್ಕೃತಿಯ ಪ್ರಭಾವ, ನಿರುದ್ಯೋಗ, ಹೆಚ್ಚುತ್ತಿರುವ ಜನಸಂಖ್ಯೆ, ನೌಕರಿಗಾಗಿ ವಲಸೆ, ಮಾಹಿತಿ ತಂತ್ರಜ್ಞಾನದ ಪ್ರಭಾವ, ಪೀಳಿಗೆಗಳ ಅಂತರ ಹೀಗೆ ಮುಂತಾದ ವಿಷಯಗಳು ಚರ್ಚೆಗೆ ಒಳಗಾಗಿವೆ.
ಸುಖಾಂತ ಫ್ಯೂನರಲ್ ಕಂಪೆನಿಯ ಸಂಸ್ಥಾಪಕರು ಸಂಜಯ್ ರಾಮಗುಡೆ. ಕಂಪೆನಿಯ ಸದಸ್ಯತ್ವ ಶುಲ್ಕ ರೂ. 37,500.
ಹೇಗಿದೆ ಈ ಯೋಜನೆ. ಏನಂತೀರಿ ನೀವು?
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ
Published On - 6:18 pm, Mon, 21 November 22