Viral: ತರರರಾ…. ತುತ್ತೂರಿ ಊದುತ್ತಲೇ ಸಖತ್‌ ಫೇಮಸ್‌ ಆದ ಈ ಹುಡುಗಿ ಯಾರ್‌ ಗೊತ್ತಾ?

ತರರರಾ… ತರರರಾ….. ಎಂದು ತುತ್ತೂರಿ ಊದುವ ಯುವತಿಯೊಬ್ಬಳ ವಿಡಿಯೋ ಇತ್ತೀಚಿಗೆ ಸೋಷಿಯಲ್‌ ಮೀಡಿಯಾದಲ್ಲಿ ಬಿರುಗಾಳಿಯನ್ನೇ ಎಬ್ಬಿಸಿದೆ. ಫೇಸ್‌ಬುಕ್‌, ಇನ್‌ಸ್ಟಾಗ್ರಾಮ್‌ ಎಲ್ಲಿ ನೋಡಿದ್ರೂ ಟ್ರಂಪೆಟ್‌ ಯುವತಿಯ ವಿಡಿಯೋಗಳದ್ದೇ ಹವಾ. ಈಕೆ ಚೀನಾನ ಪ್ರಸಿದ್ಧ ಗಾಯಕ ಝಾವೊ ಲೀ ಅವರ ಮ್ಯೂಸಿಕಲ್‌ ಬ್ಯಾಂಡ್‌ನಲ್ಲಿ ತುತ್ತೂರಿ ವಾದಕಿಯಾಗಿದ್ದು, ಈಕೆ ತುತ್ತೂರಿ ಊದುವ ವಿಡಿಯೋ ಇದೀಗ ಭಾರೀ ವೈರಲ್‌ ಆಗುತ್ತಿದೆ.

Viral: ತರರರಾ…. ತುತ್ತೂರಿ ಊದುತ್ತಲೇ ಸಖತ್‌ ಫೇಮಸ್‌ ಆದ ಈ ಹುಡುಗಿ ಯಾರ್‌ ಗೊತ್ತಾ?
ವೈರಲ್​​ ವಿಡಿಯೋ ಇಲ್ಲಿದೆ ನೋಡಿ
Edited By:

Updated on: Jan 30, 2025 | 10:42 AM

ಕೆಲವೊಂದಿಷ್ಟು ಜನ ಸೋಷಿಯಲ್‌ ಮೀಡಿಯಾದ ಮೂಲಕ ರಾತ್ರೋರಾತ್ರಿ ಸಿಕ್ಕಾಪಟ್ಟೆ ಫೇಮಸ್‌ ಆಗ್ತಾರೆ. ಇತ್ತೀಚಿಗಷ್ಟೇ ತನ್ನ ಕಣ್ಣುಗಳ ಸೌಂದರ್ಯ ಮೂಲಕವೇ ಕುಂಭಮೇಳದ ಮೊನಾಲಿಸಾ ದಿನಬೆಳಗಾಗುವುದರೊಳಗೆ ಭಾರಿ ಜನಪ್ರಿಯತೆ ಪಡೆದಿದ್ದಳು. ಅಷ್ಟೇ ಅಲ್ಲ ತರರರಾ… ತರರರಾ….. ಎಂದು ತುತ್ತೂರಿ ಊದುವ ಯುವತಿಯೊಬ್ಬಳ ವಿಡಿಯೋ ಕೂಡಾ ಈಗೀಗ ಭಾರೀ ವೈರಲ್‌ ಆಗುತ್ತಿದೆ. ಫೇಸ್‌ಬುಕ್‌, ಇನ್‌ಸ್ಟಾಗ್ರಾಮ್‌ ಎಲ್ಲಿ ನೋಡಿದ್ರೂ ಟ್ರಂಪೆಟ್‌ ಯುವತಿಯ ವಿಡಿಯೋಗಳದ್ದೇ ಹವಾ. ಹೀಗೆ ತರರರಾ ಟ್ಯೂನ್‌ ನುಡಿಸಿ ವರ್ಲ್ಡ್‌ ಫೇಮಸ್‌ ಆದ ಈ ಟ್ರಂಪೆಟ್‌ ಗರ್ಲ್‌ ಯಾರು ಎಂಬುದನ್ನು ನೋಡೋಣ ಬನ್ನಿ.

ಈ ವೈರಲ್‌ ಟ್ರಂಪೆಟ್‌ ಹುಡುಗಿ ಯಾರು?

ವರದಿಗಳ ಪ್ರಕಾರ, ಈ ಯುವತಿಯ ಹೆಸರು ಗಾವೋ ಯಿಫೀ. ಈಕೆ ತರರರಾ ಟ್ಯೂನ್‌ ನುಡಿಸುವ ಮೂಲಕವೇ ಇಂಟರ್‌ನೆಟ್‌ನಲ್ಲಿ ಸೆನ್ಸೇಶನ್‌ ಸೃಷ್ಟಿಸಿದ್ದಾಳೆ. ಆಕೆ ತುತ್ತೂರಿ ಊದುವ ಈ ವೈರಲ್‌ ವಿಡಿಯೋವನ್ನು ಮೊದಲು ಚೀನಾದ ಸಾಮಾಜಿಕ ಮಾಧ್ಯಮ ಅಪ್ಲಿಕೇಶನ್ WeChat ನಲ್ಲಿ ಅಪ್‌ಲೋಡ್ ಮಾಡಲಾಗಿತ್ತು. ಇದರ ನಂತರ, ಈ ವೀಡಿಯೊ ಇತರೆ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಾದ ಫೇಸ್‌ಬುಕ್, ಯೂಟ್ಯೂಬ್ ಮತ್ತು ಇನ್‌ಸ್ಟಾಗ್ರಾಮ್‌ನಲ್ಲಿ ಭಾರೀ ವೈರಲ್ ಆಗಿದೆ.

ಇದನ್ನೂ ಓದಿ: ಕಾಲೇಜಿನ ತರಗತಿಯಲ್ಲಿ ವಿದ್ಯಾರ್ಥಿಯನ್ನು ಮದುವೆಯಾದ ಪ್ರಾಧ್ಯಾಪಕಿ

ಖ್ಯಾತ ಚೈನೀಸ್ ಗಾಯಕ ಝಾವೋ ಲೀ ಅವರ ನೇತೃತ್ವದ ಮ್ಯೂಸಿಕಲ್‌ ಬ್ಯಾಂಡ್‌ನಲ್ಲಿ ಈಕೆ ತುತ್ತೂರಿ ವಾದಕಿಯಾಗಿದ್ದಾಳೆ. “ಟೈಮ್ ಆಫ್ ಅವರ್ ಲೈವ್ಸ್” ಹಾಡಿನ ಪ್ರದರ್ಶನದ ವೇಳೆ ಗಾವೋ ಯಿಫೀ ತರರರಾ…. ಟ್ಯೂನ್ ನುಡಿಸಿದ್ದು, ಈ ವಿಡಿಯೋ ತುಣುಕು ಎಲ್ಲೆಡೆ ಹರಿದಾಡುತ್ತಿದೆ. ಆಕೆಯ ವಿಶಿಷ್ಟ ಶೈಲಿ ಮತ್ತು ಅದ್ಭುತ ಕಲೆಯನ್ನು ಕಂಡು ಜನ ಆಕೆಯನ್ನು “ತರರರಾ ಗರ್ಲ್” ಎಂದೇ ಕರೆಯುತ್ತಿದ್ದಾರೆ. ಈಗ ಈ‌ ತರರರಾ ಟ್ಯೂನ್ ಇಂಟರ್ನೆಟ್‌ನಲ್ಲಿ ಜನಪ್ರಿಯವಾಗಿದ್ದು, AI ಮತ್ತು ತಂತ್ರಜ್ಞಾನ ಮಾತ್ರವಲ್ಲ ಚೀನಾ ಸಂಗೀತ ಕ್ಷೇತ್ರದಲ್ಲೂ ಪ್ರಾಬಲ್ಯವನ್ನು ಹೊಂದಿದೆ ಎಂದು ನೆಟ್ಟಿಗರು ಮಾತನಾಡಿಕೊಳ್ಳುತ್ತಿದ್ದಾರೆ.

ವೈರಲ್​​ ವಿಡಿಯೋ ಇಲ್ಲಿದೆ ನೋಡಿ

Being Mumbaikar ಹೆಸರಿನ ಎಕ್ಸ್‌ ಖಾತೆಯಲ್ಲಿ ಈ ಕುರಿತ ವಿಡಿಯೋವನ್ನು ಶೇರ್‌ ಮಾಡಲಾಗಿದೆ. ವೈರಲ್‌ ಆಗುತ್ತಿರುವ ವಿಡಿಯೋದಲ್ಲಿ ಟ್ರಂಪೆಟ್‌ ಗರ್ಲ್‌ ತುತ್ತೂರಿಯಲ್ಲಿ ತರರರಾ… ಟ್ಯೂನ್‌ ನುಡಿಸುತ್ತಿರುವಂತಹ ಅದ್ಭುತ ದೃಶ್ಯವನ್ನು ಕಾಣಬಹುದು. ಈಕೆಯ ಈ ಒಂದು ವಿಡಿಯೋ ಫೂಟೇಜ್‌ ಎಲ್ಲೆಡೆ ವೈರಲ್‌ ಆಗಿದೆ.

ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ