
ಹಾವು (snakes) ಗಳೆಂದರೆ ಎಲ್ಲರಿಗೂ ಭಯ, ಎಷ್ಟೇ ಧೈರ್ಯವಂತರಾಗಿದ್ದರೂ ಹಾವನ್ನು ಕಂಡೊಡನೆ ಒಂದು ಮೈಲಿ ದೂರ ಓಡಿ ಬಿಡುತ್ತಾರೆ. ಆದರೆ ಇತ್ತೀಚೆಗಿನ ದಿನಗಳಲ್ಲಿ ನಗರ ಪ್ರದೇಶ ಹಾಗೂ ಜನವಸತಿ ಪ್ರದೇಶಗಳಲ್ಲಿ ಕಾಣಿಸಿಕೊಳ್ಳುವುದು ಹೆಚ್ಚಾಗಿದೆ. ಬೇಸಿಗೆ (summer) ಬಂದರಂತೂ ವಿಷಕಾರಿ ಹಾವುಗಳು ಮನೆಯೊಳಗೂ ಕಾಣಸಿಗುತ್ತದೆ. ಹಾವುಗಳು ಮನೆಯ ಮೂಲೆಯಲ್ಲಿ ಅವಿತುಕೊಂಡಿರುವ ವಿಡಿಯೋಗಳು ಸೋಶಿಯಲ್ ಮೀಡಿಯಾ ದಲ್ಲಿ ವೈರಲ್ ಆಗುವುದಿದೆ. ಇದೀಗ ನಾಗರಹಾವೊಂದು ಫ್ರಿಡ್ಜ್ (fridge) ಒಳಗೆ ಹೆಡೆಯೆತ್ತಿ ಕುಳಿತಿದ್ದು, ಈ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ಹೃದಯ ಗಟ್ಟಿ ಮಾಡಿಕೊಂಡು ಈ ವಿಡಿಯೋ ನೋಡಿದ್ದಾರೆ.
ಈ ವಿಡಿಯೋವನ್ನು brabhu king353 ಹೆಸರಿನ ಖಾತೆಯಲ್ಲಿ ಶೇರ್ ಮಾಡಿಕೊಳ್ಳಲಾಗಿದ್ದು, ಈ ವಿಡಿಯೋದಲ್ಲಿ ಫ್ರಿಡ್ಜ್ ಬಾಗಿಲು ತೆರೆಯುತ್ತಿದ್ದಂತೆ ನಾಗರಹಾವೊಂದು ಹೆಡೆಯೆತ್ತಿ ಕುಳಿತುಕೊಂಡಿರುವುದನ್ನು ಕಾಣಬಹುದು. ದೂರ ನಿಂತುಕೊಂಡೆ ಮಹಿಳೆಯೊಬ್ಬರು ಬಾಗಿಲು ತೆಗೆದಿದ್ದಾರೆ. ಆದರೆ ಈ ನಾಗರಹಾವು ಎಲ್ಲಿಂದ ಬಂದಿತು. ಹೇಗೆ ಫ್ರಿಡ್ಜ್ ಯೊಳಗೆ ಬಂದಿತು ಎನ್ನುವ ಬಗ್ಗೆ ಮಾಹಿತಿ ತಿಳಿದಿಲ್ಲ.
ಇದನ್ನೂ ಓದಿ :Viral : ಕನ್ನಡ ಮಾತಾಡೋ ಹಾಗಿದ್ರೆ ಮಾತ್ರ ಅಂಗಡಿಗೆ ಬಾ ಪರಭಾಷಿಕನಿಗೆ ಖಡಕ್ ವಾರ್ನಿಂಗ್ ಕೊಟ್ಟ ಮಹಿಳೆ
ಈ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ಅಧಿಕ ವೀಕ್ಷಣೆ ಕಂಡಿದ್ದು, ನೆಟ್ಟಿಗರು ತರಹೇವಾರಿ ಕಾಮೆಂಟ್ ಗಳನ್ನು ಮಾಡಿದ್ದಾರೆ. ಬಳಕೆದಾರರೊಬ್ಬರು, ‘ಬೇಸಿಗೆಯಲ್ಲಿ ಮನೆಯ ಮೂಲೆಗೆ ಅಥವಾ ಸಂದಿಗಳಲ್ಲಿ ಕೈ ಹಾಕುವಾಗ, ಶೂ ಹಾಕಿಕೊಳ್ಳುವಾಗ ಬಹಳ ಜಾಗ್ರತೆ ವಹಿಸಬೇಕು’ ಎಂದಿದ್ದಾರೆ. ಇನ್ನೊಬ್ಬರು, ಅಬ್ಬಾ ಈ ನಾಗರ ಹಾವಿಗೂ ಕೂಡ ಸೆಕೆ ತಡೆದುಕೊಳ್ಳಲು ಆಗಿಲ್ಲ ಕಾಣಿಸುತ್ತೆ. ಅದಕ್ಕೆ ಫ್ರಿಡ್ಜ್ ಯೊಳಗೆ ಬಂದು ಕೂತು ಬಿಟ್ಟಿದೆ’ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊರ್ವ ಬಳಕೆದಾರರು, ‘ನಾಗರ ಹಾವಿಗೂ ಫ್ರಿಡ್ಜ್ ಯೊಳಗೆ ಕುಳಿತರೆ ಕೂಲ್ ಕೂಲ್ ಆಗುತ್ತೆ ಎನ್ನುವುದು ತಿಳಿದಿದೆ’ ಎಂದು ಕಾಮೆಂಟ್ ನಲ್ಲಿ ತಿಳಿಸಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 12:58 pm, Fri, 25 April 25