Viral: ಕ್ಯಾಂಡಿ ತಿಂದು ಕೆಲ ಹೊತ್ತಿನಲ್ಲೇ ಶಾಶ್ವತವಾಗಿ ಧ್ವನಿ ಕಳೆದುಕೊಂಡ ಬಾಲಕಿ

|

Updated on: Apr 23, 2024 | 6:09 PM

‘ಬ್ಲ್ಯಾಕ್ ಡೆತ್’ ಸ್ವೀಟ್ ಎನ್ನುವ ಈ ಸಿಹಿಯನ್ನು ಬಾಲಕಿ ತಿಂದಿದ್ದು, ಹುಳಿಯಾಗಿದ್ದರಿಂದ ಉಗುಳಲು ಯತ್ನಿಸಿದ್ದು, ತಪ್ಪಾಗಿ ನುಂಗಿ ಬಿಟ್ಟಿದ್ದಾಳೆ. ಅದು ನೇರವಾಗಿ ಗಂಟಲಿನ ಕೆಳಗೆ ಸಿಲುಕಿಕೊಂಡಿದ್ದು, ಆರೋಗ್ಯದಲ್ಲಿ ಏರುಪೇರಾಗಿದೆ.

Viral: ಕ್ಯಾಂಡಿ ತಿಂದು ಕೆಲ ಹೊತ್ತಿನಲ್ಲೇ ಶಾಶ್ವತವಾಗಿ ಧ್ವನಿ ಕಳೆದುಕೊಂಡ ಬಾಲಕಿ
Follow us on

ಮಕ್ಕಳು ಸಿಹಿತಿಂಡಿ ಬೇಕೇ ಬೇಕು ಎಂದು ಹಠ ಮಾಡುವುದು ಸಹಜ. ಇದೀಗ ಪುಟ್ಟ ಬಾಲಕಿಯೊಬ್ಬಳು ಹಾಗೆಯೇ ಮನೆಯಲ್ಲಿ ಹಠ ಮಾಡಿ ಕ್ಯಾಂಡಿ ಒಂದನ್ನು ಖರೀದಿಸಿ ತಿಂದಿದ್ದಾಳೆ. ತಿಂದ ಕೆಲ ಹೊತ್ತಿನಲ್ಲೇ ಆರೋಗ್ಯದಲ್ಲಿ ಏರು ಪೇರಾಗಿದ್ದು, ತಕ್ಷಣದ ಹತ್ತಿರದ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ. ಚಿಕಿತ್ಸೆ ನೀಡಿದ ವೈದ್ಯರು ಬಾಲಕಿ ಶಾಶ್ವತವಾಗಿ ಧ್ವನಿ ಕಳೆದುಕೊಂಡು ಮೂಕಿಯಾಗಿದ್ದಾಳೆ ಎಂದು ಘೋಷಿಸಿದ್ದಾರೆ.

ಬಾಲಕಿಯ ಹೆಸರು ಮಿಯಾ-ರೋಸ್ ಬೋಯರ್(10). ವಾರಾಂತ್ಯದಲ್ಲಿ ಮಿಯಾ, ಮನೆಯವರೊಂದಿಗೆ ಸಿನಿಮಾ ನೋಡಿ ಬರುವಷ್ಟರ ಹೊತ್ತಿಗೆ ಅಲ್ಲಿಂದ ಆಕರ್ಷಕ ಕ್ಯಾಂಡಿಯನ್ನು ಕೊಡಿಸುವಂತೆ ಹಠ ಹಿಡಿದಿದ್ದಾಳೆ. ‘ಬ್ಲ್ಯಾಕ್ ಡೆತ್’ ಸ್ವೀಟ್ ಎನ್ನುವ ಈ ಸಿಹಿಯನ್ನು ಬಾಲಕಿ ತಿಂದಿದ್ದು, ಹುಳಿಯಾಗಿದ್ದರಿಂದ ಉಗುಳಲು ಯತ್ನಿಸಿದ್ದು, ತಪ್ಪಾಗಿ ನುಂಗಿ ಬಿಟ್ಟಿದ್ದಾಳೆ. ಅದು ನೇರವಾಗಿ ಗಂಟಲಿನ ಕೆಳಗೆ ಸಿಲುಕಿಕೊಂಡಿದ್ದು, ಆರೋಗ್ಯದಲ್ಲಿ ಏರುಪೇರಾಗಿದೆ. ಈ ಸಿಹಿಯನ್ನು ‘ಬ್ಲ್ಯಾಕ್ ಡೆತ್’ ಎನ್ನುವ ಕರೆಯಲು ಸಾಕಷ್ಟು ಕಾರಣವಿದೆ. ಇದನ್ನು ಬಹಳ ಎಚ್ಚರಿಕೆಯಿಂದ ತಿನ್ನಬೇಕು. ಏಕೆಂದರೆ ಇದು ಕೆಲವೊಮ್ಮೆ ಮನುಷ್ಯರಿಗೆ ಅಪಾಯಕಾರಿಯಾಗಿದೆ ಎಂದು ವರದಿಗಳಿಂದ ತಿಳಿದು ಬಂದಿದೆ.

ಇದನ್ನೂ ಓದಿ: ಎಂಥಾ ಕಾಲ ಬಂತು ಗುರು ಫೋನ್ ಕಾಲಿಂಗ್ ಮೂಲಕ ದೇವರಿಗೆ ಪ್ರಾರ್ಥನೆ

LadBible ವೆಬ್‌ಸೈಟ್‌ನ ವರದಿಯ ಪ್ರಕಾರ, ಮಿಯಾ ತುಟಿಗಳು ನೀಲಿ ಬಣ್ಣಕ್ಕೆ ತಿರುಗಿದವು. ಸುಮಾರು ಎರಡು ನಿಮಿಷಗಳ ನಂತರ, ಗಂಟಲಿನಲ್ಲಿ ಸಿಲುಕಿಕೊಂಡಿದ್ದ ಸಿಹಿತಿಂಡಿಗಳನ್ನು ತೆಗೆದುಹಾಕಲಾಯಿತು, ಆದರೆ ಹುಡುಗಿ ಸರಿಯಾಗಿ ಉಸಿರಾಡಲು ಸಾಧ್ಯವಾಗಲಿಲ್ಲ ಮತ್ತು ಆಸ್ಪತ್ರೆಗೆ ಕರೆದೊಯ್ಯಲಾಯಿತು. ತಕ್ಷಣ ವೈದ್ಯರು ಆಮ್ಲಜನಕ, ಸ್ಟೆರಾಯ್ಡ್ ಮತ್ತು ಆ್ಯಂಟಿಬಯೋಟಿಕ್‌ಗಳನ್ನು ನೀಡಿದ್ದು, ಇದರಿಂದ ಉಸಿರಾಟದ ತೊಂದರೆ ಕಡಿಮೆಯಾಗಿದೆ. ಬಾಲಕಿಯ ಸ್ಥಿತಿ ಇನ್ನೂ ಚಿಂತಾಜನಕವಾಗಿದ್ದು,ಬ್ಲಾಕ್ ಡೆತ್ ತಿಂದು ಮಗಳ ಧ್ವನಿ ಶಾಶ್ವತವಾಗಿ ಕಳೆದುಕೊಂಡಿದ್ದಾಳೆ ಎಂದು ಆಕೆಯ ತಾಯಿ ಕಳವಳ ವ್ಯಕ್ತಪಡಿಸಿದ್ದಾರೆ.

ವರದಿಗಳ ಪ್ರಕಾರ ‘ವಿಶ್ವದ ಹುಳಿ ಕ್ಯಾಂಡಿ ಎಂದು ಕರೆಯಲ್ಪಡುವ ಬ್ಲಾಕ್ ಡೆತ್ ಸ್ವೀಟ್ ನಿಂಬೆಯಂತೆ ಅತ್ಯಂತ ಹುಳಿಯಾಗಿದೆ. ಇದು ತಾತ್ಕಾಲಿಕ ಬಾಯಿ ಮತ್ತು ಹೊಟ್ಟೆಯ ಕಿರಿಕಿರಿಯನ್ನು ಉಂಟುಮಾಡುತ್ತದೆ. ಅದನ್ನು ಮಾರಾಟ ಮಾಡುವ ಮುನ್ನ ಕೆಲವು ಷರತ್ತುಗಳನ್ನೂ ವಿಧಿಸಲಾಗಿದೆ. ಎಂಟು ವರ್ಷಕ್ಕಿಂತ ಮೇಲ್ಪಟ್ಟವರು ಮತ್ತು ಅದೇ ರೀತಿ 60 ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಗೆ ಮಾತ್ರ ಸೇವಿಸುವ ಎಚ್ಚರಿಕೆಯೊಂದಿಗೆ ಮಾರಾಟ ಮಾಡಲಾಗುತ್ತದೆ.

ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ