Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭಾರತದಲ್ಲಿ ಏಪ್ರಿಲ್ ಬಿಸಿನೆಸ್ 14 ವರ್ಷದಲ್ಲೇ ಗರಿಷ್ಠ; ಆರ್ಥಿಕ ಆರೋಗ್ಯದ ಸಂಕೇತ ಇದು

PMI data of India in April 2024: ಈ ಏಪ್ರಿಲ್ ತಿಂಗಳಲ್ಲಿ ಭಾರತದಲ್ಲಿ ಬಿಸಿನೆಸ್ ಚಟುವಟಿಕೆ ಉತ್ತಮವಾಗಿ ನಡೆಯುತ್ತಿದೆ. ಎಚ್​ಎಸ್​ಬಿಸಿ ನಡೆಸಿದ ಪಿಎಂಐ ಸಮೀಕ್ಷೆ ಪ್ರಕಾರ ಕಳೆದ 14 ವರ್ಷಗಳಲ್ಲೇ ಗರಿಷ್ಠ ಇಂಡೆಕ್ಸ್ ಇದೆ. ಇಂಡಿಯಾ ಕಾಂಪೊಸಿಟ್ ಪಿಎಂಐ ಮಾರ್ಚ್​ನಲ್ಲಿ 61.8 ಇದ್ದದ್ದು ಎಪ್ರಿಲ್​ನಲ್ಲಿ 62.2ಕ್ಕೆ ಹೋಗಿದೆ. ಇದು ಆರ್ಥಿಕ ಚಟುವಟಿಕೆ ಉತ್ತಮವಾಗಿ ನಡೆಯುತ್ತಿರುವುದರ ಸಂಕೇತವಾಗಿದೆ. ಮ್ಯಾನುಫ್ಯಾಕ್ಚರಿಂಗ್ ಮತ್ತು ಸರ್ವಿಸ್ ಎರಡೂ ವಲಯಗಳಲ್ಲಿ ಇಂಡೆಕ್ಸ್ ಏರಿರುವುದು ಗಮನಾರ್ಹ.

ಭಾರತದಲ್ಲಿ ಏಪ್ರಿಲ್ ಬಿಸಿನೆಸ್ 14 ವರ್ಷದಲ್ಲೇ ಗರಿಷ್ಠ; ಆರ್ಥಿಕ ಆರೋಗ್ಯದ ಸಂಕೇತ ಇದು
ಮ್ಯಾನುಫ್ಯಾಕ್ಚರಿಂಗ್
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Apr 23, 2024 | 1:53 PM

ನವದೆಹಲಿ, ಏಪ್ರಿಲ್ 23: ಈ ಏಪ್ರಿಲ್ ತಿಂಗಳಲ್ಲಿ ಭಾರತದ ವ್ಯಾವಹಾರಿಕ ಚಟುವಟಿಕೆ (business activity) ಬಹಳ ವೇಗದಲ್ಲಿ ನಡೆಯುತ್ತಿದೆ ಎಂದು ಸಮೀಕ್ಷೆಯೊಂದು ಹೇಳಿದೆ. ಎಚ್​ಎಸ್​ಬಿಸಿ ಸಂಸ್ಥೆಯ ಇಂಡಿಯಾ ಕಾಂಪೊಸಿಟ್ ಪಿಎಂಐ (HSBC India Composite PMI survey) 62.2ಕ್ಕೆ ಏರಿದೆ. ಮಾರ್ಚ್ ತಿಂಗಳಲ್ಲಿ ಇದು 61.8 ಇತ್ತು. 2021ರ ಆಗಸ್ಟ್ ತಿಂಗಳಿಂದ ಪರ್ಚೇಸಿಂಗ್ ಮ್ಯಾನೇಜರ್ ಇಂಡೆಕ್ಸ್ 50 ಅಂಕದ ಮಟ್ಟಕ್ಕಿಂತ ಮೇಲೆಯೇ ಇದೆ. ಏಪ್ರಿಲ್ ತಿಂಗಳಲ್ಲಿನ 62.2 ಅಂಕ ಕಳೆದ 14 ವರ್ಷದಲ್ಲೇ ಗರಿಷ್ಠ ಎನ್ನಲಾಗಿದೆ. ಮ್ಯಾನುಫ್ಯಾಕ್ಚರಿಂಗ್ ಮತ್ತು ಸರ್ವಿಸ್ ಎರಡೂ ವಲಯಗಳಲ್ಲಿ ಉತ್ತಮ ಸಾಧನೆ ಆಗಿರುವುದು ಬಿಸಿನೆಸ್ ಚಟುವಟಿಕೆಗೆ ಉತ್ತೇಜನ ಸಿಗಲು ಕಾರಣ ಎಂದು ಹೇಳಲಾಗುತ್ತಿದೆ.

‘ಮ್ಯಾನುಫ್ಯಾಕ್ಚರಿಂಗ್ ಮತ್ತು ಸರ್ವಿಸ್ ಸೆಕ್ಟರ್ ಎರಡರಲ್ಲೂ ಉತ್ತಮ ಸಾಧನೆ ಆಗಿದೆ. ಹೊಸ ಆರ್ಡರ್​ಗಳ ಸಂಖ್ಯೆ ಹೆಚ್ಚಾಗಿದೆ. ಇದರಿಂದಾಗಿ 2010ರ ಜೂನ್ ಬಳಿಕ ಅತಿಹೆಚ್ಚು ಕಾಂಪೊಸಿಟ್ ಔಟ್​ಪುಟ್ ಇಂಡೆಕ್ಸ್ ತಲುಪಲು ಕಾರಣವಾಗಿದೆ’ ಎಂದು ಎಚ್​ಎಸ್​ಬಿಸಿಯ ಆರ್ಥಿಕ ತಜ್ಞ ಪ್ರಾಂಜಲ್ ಭಂಡಾರಿ ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ: ಕೆಎಂಎಫ್​ಗೆ ಈಗ 50 ವರ್ಷದ ಇತಿಹಾಸ; ನಂದಿನಿ ಬ್ರ್ಯಾಂಡ್ ಶುರುವಾದ ಕಥೆ; ಅಮೂಲ್ ಅನ್ನು ಮೀರಿಸಬಲ್ಲುದಾ?

ಸರ್ವಿಸ್ ಸೆಕ್ಟರ್​ನಲ್ಲಿನ ಬಿಸಿನೆಸ್ ಹೆಚ್ಚು ಗಮನಾರ್ಹ ರೀತಿಯಲ್ಲಿ ಬೆಳೆಯುತ್ತಿದೆ. ಮಾರ್ಚ್​ನಲ್ಲಿ ಇದರ ಇಂಡೆಕ್ಸ್ 61.2 ಇದ್ದದ್ದು ಏಪ್ರಿಲ್​ನಲ್ಲಿ 61.7ಕ್ಕೆ ಏರಿದೆ. ಹೊಸ ಬಿಸಿನೆಸ್ ನಡೆಯುತ್ತಿರುವುದು ಇದಕ್ಕೆ ಕಾರಣ. ಈ ಹೊಸ ಬಿಸಿನೆಸ್​ಗಳು ಬೇಡಿಕೆಯನ್ನು ಪ್ರತಿನಿಧಿಸುತ್ತವೆ.

ತಯಾರಿಕಾ ಕ್ಷೇತ್ರದ ಪಿಎಂಐ ಇಂಡೆಕ್ಸ್ ಕೂಡ ಉತ್ತಮವಾಗಿದೆ. ಹೊಸ ಆರ್ಡರ್​ಗಳು ಮತ್ತು ಉತ್ಪಾದನೆ ಎರಡೂ ಕೂಡ ಉತ್ತಮವಾಗಿ ಏರಿವೆ.

ಇದನ್ನೂ ಓದಿ: ರಾಜಕೀಯ ಚಾಣಕ್ಯ ಅಮಿತ್ ಶಾ ಹೂಡಿಕೆಯಲ್ಲೂ ಚಾಣಕ್ಯನೇ; 250ಕ್ಕೂ ಹೆಚ್ಚು ಷೇರುಗಳ ಆಯ್ಕೆಗಳಲ್ಲಿ ಬುದ್ಧಿವಂತಿಕೆ ನೋಡಿ

ಪಿಎಂಐ ಹೆಚ್ಚಳವಾಗಿರುವುದು ಉತ್ತಮ ಆರ್ಥಿಕತೆಯ ಸೂಚನೆಯಾ?

ಪರ್ಚೇಸಿಂಗ್ ಮ್ಯಾನೇಜರ್ಸ್ ಇಂಡೆಕ್ಸ್ ಎಂಬುದು ಆರ್ಥಿಕ ಚಟುವಟಿಕೆಯ ಒಂದು ಅಳತೆಗೋಲಾಗಿದೆ. ಈ ಬಿಸಿನೆಸ್ ಚಟುವಟಿಕೆ ತೀವ್ರಗೊಂಡಷ್ಟೂ ಜಿಡಿಪಿ ಬೆಳವಣಿಗೆ ಚುರುಕುಗೊಳ್ಳುತ್ತದೆ. ಹೀಗಾಗಿ, ಪಿಎಂಐ ಇಂಡೆಕ್ಸ್ ಹೆಚ್ಚಾಗಿರುವುದು ಭಾರತದಲ್ಲಿ ಜಿಡಿಪಿ ದರ ಕಡಿಮೆ ಆಗುವ ಸಾಧ್ಯತೆಯನ್ನು ತಳ್ಳಿಹಾಕುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಉಗ್ರರಿಗೆ ಪಾಕಿಸ್ತಾನ ತರಬೇತಿ ನೀಡುತ್ತಿರೋದನ್ನು ಖಂಡಿಸಬೇಕು: ಹರಿಪ್ರಸಾದ್​​
ಉಗ್ರರಿಗೆ ಪಾಕಿಸ್ತಾನ ತರಬೇತಿ ನೀಡುತ್ತಿರೋದನ್ನು ಖಂಡಿಸಬೇಕು: ಹರಿಪ್ರಸಾದ್​​
ಪಹಲ್ಗಾಮ್ ದಾಳಿ: ಹುಟ್ಟುಹಬ್ಬ ಆಚರಣೆ ರದ್ದು ಮಾಡಿದ ಯುವ
ಪಹಲ್ಗಾಮ್ ದಾಳಿ: ಹುಟ್ಟುಹಬ್ಬ ಆಚರಣೆ ರದ್ದು ಮಾಡಿದ ಯುವ
ಪಹಲ್ಗಾಮ್‌ ಉಗ್ರರ ದಾಳಿಯಿಂದ ಗ್ರೇಟ್​ ಎಸ್ಕೆಪ್​ ಆದ ಬಾಗಲಕೋಟೆಯ 13 ಮಂದಿ
ಪಹಲ್ಗಾಮ್‌ ಉಗ್ರರ ದಾಳಿಯಿಂದ ಗ್ರೇಟ್​ ಎಸ್ಕೆಪ್​ ಆದ ಬಾಗಲಕೋಟೆಯ 13 ಮಂದಿ
ಉಗ್ರರ ದಾಳಿಗೆ ಬಲಿಯಾದ ಲೆ. ವಿನಯ್ ನರ್ವಾಲ್​ಗೆ ಪತ್ನಿಯಿಂದ ಭಾವುಕ ವಿದಾಯ
ಉಗ್ರರ ದಾಳಿಗೆ ಬಲಿಯಾದ ಲೆ. ವಿನಯ್ ನರ್ವಾಲ್​ಗೆ ಪತ್ನಿಯಿಂದ ಭಾವುಕ ವಿದಾಯ
ಈಗ ಮತಾಂತರ ಮಾಡಲಾಗಲ್ಲ, ಹಾಗಾಗೇ ಮುಸ್ಲಿಮೇತರರನ್ನು ಕೊಲ್ಲೋದು: ರವಿ
ಈಗ ಮತಾಂತರ ಮಾಡಲಾಗಲ್ಲ, ಹಾಗಾಗೇ ಮುಸ್ಲಿಮೇತರರನ್ನು ಕೊಲ್ಲೋದು: ರವಿ
ಭಯೋತ್ಪಾದಕರ ದಾಳಿ ಪಾಕಿಸ್ತಾನದ ಹತಾಷೆಯ ಪ್ರತೀಕ: ಬಸನಗೌಡ ಯತ್ನಾಳ್
ಭಯೋತ್ಪಾದಕರ ದಾಳಿ ಪಾಕಿಸ್ತಾನದ ಹತಾಷೆಯ ಪ್ರತೀಕ: ಬಸನಗೌಡ ಯತ್ನಾಳ್
ಪಹಲ್ಗಾಮ್​ ಉಗ್ರರ ದಾಳಿ: ಗುಪ್ತಚರ ಇಲಾಖೆ ವೈಫಲ್ಯ ಎಂದ ಸಿದ್ದರಾಮಯ್ಯ
ಪಹಲ್ಗಾಮ್​ ಉಗ್ರರ ದಾಳಿ: ಗುಪ್ತಚರ ಇಲಾಖೆ ವೈಫಲ್ಯ ಎಂದ ಸಿದ್ದರಾಮಯ್ಯ
ಕುರಿ ಮೇಯಿಸುತ್ತಿರುವಾಗಲೇ ಬಂತು UPSC ಫಲಿತಾಂಶ: ಕುರಿ ಹೊತ್ತು ಕುಣಿದ ಯುವಕ
ಕುರಿ ಮೇಯಿಸುತ್ತಿರುವಾಗಲೇ ಬಂತು UPSC ಫಲಿತಾಂಶ: ಕುರಿ ಹೊತ್ತು ಕುಣಿದ ಯುವಕ
ವಯಸ್ಸಾದವರು ಅಪಾಯದಿಂದ ಪಾರಾಗಲು ಬಹಳ ಕಷ್ಟಪಟ್ಟರು: ದೊಡ್ಡಬಸಯ್ಯ
ವಯಸ್ಸಾದವರು ಅಪಾಯದಿಂದ ಪಾರಾಗಲು ಬಹಳ ಕಷ್ಟಪಟ್ಟರು: ದೊಡ್ಡಬಸಯ್ಯ
ಪ್ರವಾಸಿಗರ ಮೇಲೆ ಉಗ್ರರು ದಾಳಿ ನಡೆಸಿದ್ದ ಪಹಲ್ಗಾಮ್​ಗೆ ಅಮಿತ್​ ಶಾ ಭೇಟಿ
ಪ್ರವಾಸಿಗರ ಮೇಲೆ ಉಗ್ರರು ದಾಳಿ ನಡೆಸಿದ್ದ ಪಹಲ್ಗಾಮ್​ಗೆ ಅಮಿತ್​ ಶಾ ಭೇಟಿ