Viral Video: ಕೇಶರಾಶಿಯಿಂದಲೇ ದೇಹ ಮುಚ್ಚಿಕೊಂಡು ಪೋಸ್​ ಕೊಟ್ಟ ಯುವತಿ! ಹೊಸ ಶೈಲಿಯ ಉಡುಗೆ ಕಂಡು ಆಶ್ಚರ್ಯಗೊಂಡ ನೆಟ್ಟಿಗರು

| Updated By: shruti hegde

Updated on: Jun 29, 2021 | 3:43 PM

ಯುವತಿಯ ಕೇಶರಾಶಿ ತುಂಬಾ ಉದ್ದವಾಗಿದೆ ಜತೆಗೆ ದಪ್ಪವಾಗಿಯೂ ಇದೆ. ದೇಹದಕ್ಕೆ ವಸ್ತ್ರ ತೊಟ್ಟಂತೆ ತನ್ನ ದೇಹವನ್ನು ಕೇಶರಾಶಿಯಿಂದ ವಿನ್ಯಾಸಗೊಳಿಸಿದ್ದಾಳೆ. ಜತೆಗೆ ಸ್ಟೈಲ್​ ಆಗಿ ಕಾಣಿಸುವಂತೆ ಸೊಂಟಕ್ಕೆ ಕಪ್ಪು ಪಟ್ಟಿಯನ್ನು ಕಟ್ಟಿಕೊಂಡಿದ್ದಾಳೆ.

Viral Video: ಕೇಶರಾಶಿಯಿಂದಲೇ ದೇಹ ಮುಚ್ಚಿಕೊಂಡು ಪೋಸ್​ ಕೊಟ್ಟ ಯುವತಿ! ಹೊಸ ಶೈಲಿಯ ಉಡುಗೆ ಕಂಡು ಆಶ್ಚರ್ಯಗೊಂಡ ನೆಟ್ಟಿಗರು
ಕೇಶರಾಶಿಯಿಂದಲೇ ದೇಹ ಮುಚ್ಚಿಕೊಂಡು ಪೋಸ್​ ಕೊಟ್ಟ ಯುವತಿ!
Follow us on

ಹೊಸ ಹೊಸ ಶೈಲಿಯ ಉಡುಗೆಯ ವಿನ್ಯಾಸ, ಜತೆಗೆ ಟ್ರೆಂಡ್​ ಅನಿಸಿಕೊಳ್ಳುವ ಉಡುಗೆ ತೊಡುಗೆಗಳು ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯಾಗುತ್ತಲೇ ಇರುತ್ತವೆ. ಅದಕ್ಕೆ ಸಂಬಂಧಿಸಿದಂತಹ ಫೋಟೋಗಳು ಮತ್ತು ವಿಡಿಯೋಗಳು ಆಗಾಗ ಹರಿದಾಡುತ್ತಲೇ ಇರುತ್ತವೆ. ಅಂತಹುದೇ ಒಂದು ವಿಶೇಷ ಶೈಲಿಯ ಉಡುಗೆ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ತನ್ನ ಉದ್ದವಾದ ಕಂದುಬಣ್ಣದ ತಲೆ ಕೂದಲಿನಿಂದಲೇ ಯುವತಿ ಇಡೀ ದೇಹವನ್ನು ಮುಚ್ಚಿಕೊಂಡು ಪೋಸ್​ ಕೊಟ್ಟಿದ್ದಾಳೆ. ಈ ಉಡುಗೆಯನ್ನು ನೋಡಿದ ನೆಟ್ಟಿಗರು ಆಶ್ಚರ್ಯಗೊಂಡಿದ್ದಾರೆ.

ವಿಡಿಯೋದಲ್ಲಿ ಗಮನಿಸುವಂತೆ ಯುವತಿ ತಲೆಗೆ ಟೋಪಿ ಮತ್ತು ಸೊಂಟಕ್ಕೆ ಬೆಲ್ಟ್​ ಧರಿಸಿದ್ದಾಳೆ. ಅವಳ ತಲೆ ಕೂದಲಿನಿಂದಲೇ ಇಡೀ ದೇಹವನ್ನು ಮುಚ್ಚಿಕೊಂಡಿದ್ದಾಳೆ. ಹೊಸ ತರಹದ ಉಡುಪಿನಂತೆ ಗೋಚರವಾಗುತ್ತಿದೆ. ಕಂದು ಬಣ್ಣದ ಉಡುಗೆ ತೊಟ್ಟಂತೆ ಭಾಸವಾದರೂ ಕೇಶರಾಶಿಯಿಂದಲೇ ಇಡೀ ದೇಹವನ್ನು ಮುಚ್ಚಿಕೊಂಡಿದ್ದಾಳೆ. ಅವಳು ಪೋಸ್​ ಕೊಡುತ್ತಿರುವ ದೃಶ್ಯವನ್ನು ಚಿಕ್ಕದಾಗಿ ವಿಡಿಯೋ ಮಾಡಲಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದಂತೆಯೇ ನೆಟ್ಟಿಗರು ಆಶ್ಚರ್ಯಚಕಿತರಾಗಿದ್ದಾರೆ.

ಯುವತಿಯ ಕೇಶರಾಶಿ ತುಂಬಾ ಉದ್ದವಾಗಿದೆ ಜತೆಗೆ ದಪ್ಪವಾಗಿಯೂ ಇದೆ. ದೇಹದಕ್ಕೆ ವಸ್ತ್ರ ತೊಟ್ಟಂತೆ ತನ್ನ ದೇಹವನ್ನು ಕೇಶರಾಶಿಯಿಂದ ವಿನ್ಯಾಸಗೊಳಿಸಿದ್ದಾಳೆ. ಜತೆಗೆ ಸ್ಟೈಲ್​ ಆಗಿ ಕಾಣಿಸುವಂತೆ ಸೊಂಟಕ್ಕೆ ಕಪ್ಪು ಪಟ್ಟಿಯನ್ನು ಕಟ್ಟಿಕೊಂಡಿದ್ದಾಳೆ.

ವಿಡಿಯೋವನ್ನು ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಳ್ಳಲಾಗಿದೆ. 4,000ಕ್ಕೂ ಹೆಚ್ಚು ಲೈಕ್ಸ್​ಗಳನ್ನು ಪಡೆದುಕೊಂಡಿದೆ. ಹಲವಾರು ಕಾಮೆಂಟ್​ಗಳೂ ಕೂಡಾ ಲಭ್ಯವಾಗಿದೆ. ಕೆಲವರು ಅವಳದ್ದು ನಿಜವಾಗಲೂ ಅಷ್ಟು ಉದ್ದದ ಕೇಶರಾಶಿಯೇ? ಎಂದು ಆಶ್ಚರ್ಯಗೊಂಡಿದ್ದಾರೆ. ಇನ್ನು ಕೆಲವರು ಅವಳು ಆರ್ಟಿಫಿಶಿಯಲ್​ ತಲೆಕೂದಲನ್ನು ಅಳವಡಿಸಿಕೊಂಡಿರಬಹುದು ಎಂದು ಕಾಮೆಂಟ್​ ಮಾಡಿದ್ದಾರೆ.

ಇದನ್ನೂ ಓದಿ:

ತಲೆ ಕೂದಲಿನ ಆರೈಕೆಗೆ ಇಲ್ಲಿದೆ ಮದ್ದು; ಕೇಶರಾಶಿಯ ಹೊಳಪು ಹೆಚ್ಚಿಸಲು ವೈದ್ಯರ ಸಲಹೆಗಳೇನು?

ರೌಡಿ ಬೇಬಿಯ ಹೆಲ್ತಿ ಕೇಶರಾಶಿ ಸೀಕ್ರೆಟ್ ತೆಂಗಿನಕಾಯಂತೆ!

Published On - 11:24 am, Sun, 27 June 21