Viral Video: ಇದು ವಿಶ್ವದ ಮೊದಲ ಎಐ ಬಟ್ಟೆ; ಹೇಗಿದೆ ನೋಡಿ ಈ ರೋಬೋಟಿಕ್‌ ಸ್ನೇಕ್‌ ಡ್ರೆಸ್‌

| Updated By: ಅಕ್ಷಯ್​ ಪಲ್ಲಮಜಲು​​

Updated on: Jul 03, 2024 | 5:43 PM

ಕೆಲ ತಿಂಗಳುಗಳ ಹಿಂದೆ ಕೇರಳದ ಶಾಲೆಯೊಂದರಲ್ಲಿ ಎಐ (ಕೃತಕ ಬುದ್ಧಿಮತ್ತೆ) ರೋಬೋಟಿಕ್ ಶಿಕ್ಷಕಿಯನ್ನು ನೇಮಕ ಮಾಡಿದ ವಿಚಾರ ಭಾರೀ ಸುದ್ದಿಯಲ್ಲಿತ್ತು. ಈಗೀಗ ಈ ಕೃತಕ ಬುದ್ಧಿಮತ್ತೆ ನಮ್ಮ ದೈನಂದಿನ ಜೀವನದ ಭಾಗವಾಗುತ್ತಿತ್ತು, ಇದೀಗ ಎಐ ಫ್ಯಾಶನ್‌ ಕ್ಷೇತ್ರಕ್ಕೂ ಎಂಟ್ರಿ ಕೊಟ್ಟಿದೆ. ಎಂಜಿನಿಯರ್‌ ಒಬ್ಬರು ಎಐ ತಂತ್ರಜ್ಞಾನ ಬಳಸಿ ವಿಶೇಷವಾದ ರೋಬೋಟಿಕ್‌ ಡ್ರೆಸ್‌ ತಯಾರಿಸಿದ್ದು, ಈ ಸುದ್ದಿ ಇದೀಗ ಸಖತ್‌ ವೈರಲ್‌ ಆಗುತ್ತಿದೆ.

Viral Video: ಇದು ವಿಶ್ವದ ಮೊದಲ ಎಐ ಬಟ್ಟೆ; ಹೇಗಿದೆ ನೋಡಿ ಈ ರೋಬೋಟಿಕ್‌ ಸ್ನೇಕ್‌ ಡ್ರೆಸ್‌
ವೈರಲ್​ ವಿಡಿಯೋ
Follow us on

ಈ ಡಿಜಿಟಲ್‌ ಯುಗದಲ್ಲಿ ಕೃತಕ ಬುದ್ಧಿಮತ್ತೆ ನಮ್ಮ ದೈನಂದಿನ ಜೀವನದ ಭಾಗವಾಗುತ್ತಿದ್ದು, ಮುಂದೊಂದು ದಿನ ಅದು ಎಲ್ಲಿವರೆಗೆ ಹೋಗಿ ಮುಟ್ಟುತ್ತೋ ಗೊತ್ತಿಲ್ಲ. ಆರೋಗ್ಯ ಕ್ಷೇತ್ರದಿಂದ ಹಿಡಿದು ಶಿಕ್ಷಣದ ವರೆಗೆ ಪ್ರತಿಯೊಂದು ಕ್ಷೇತ್ರದಲ್ಲೂ ಆರ್ಟಿಫೀಶಿಯಲ್‌ ಇಂಟೆಲಿಜೆನ್ಸ್‌ ತನ್ನ ಛಾಪನ್ನು ಮೂಡಿಸಿದೆ. ಲೇಟೆಸ್ಟ್‌ ವಿಚಾರ ಏನೆಂದ್ರೆ ಕೃತಕ ಬುದ್ಧಿಮತ್ತೆ ಫ್ಯಾಷನ್‌ ಲೋಕಕ್ಕೂ ಕಾಲಿಟ್ಟಿದ್ದು, ಎಐ ಟೀಚರ್‌, ಎಐ ಸಾಫ್ಟ್‌ವೇರ್‌ ಇಂಜಿನಿಯರ್‌ ಬಳಿಕ ಇದೀಗ ಎಐ ಉಡುಗೆಯನ್ನು ಕೂಡಾ ತಯಾರಿಸಲಾಗಿದೆ. ಈ ಕುರಿತ ಸುದ್ದಿಯೊಂದು ಇದೀಗ ಸಖತ್‌ ವೈರಲ್‌ ಆಗುತ್ತಿದೆ.

ಗೂಗಲ್‌ ಸಾಫ್ಟ್‌ವೇರ್‌ ಇಂಜಿನಿಯರ್‌ ಹಾಗೂ SheBuildsRobots.org ನ ಸಂಸ್ಥಾಪಕಿ ಕ್ರಿಸ್ಟಿನಾ ಆರ್ನ್ಸ್ಟ್‌ ಎಐ ತಂತ್ರಜ್ಞಾನ ಬಳಸಿ ಮೊದಲ ರೋಬೋಟಿಕ್‌ ಡ್ರೆಸ್‌ ತಯಾರಿಸಿದ್ದಾರೆ. ಮೆಡುಸಾ ಡ್ರೆಸ್‌ಗೆ ಅವರು ಚಲಿಸುವ ರೊಬೋಟಿಕ್‌ ಹಾವುಗಳನ್ನು ಜೋಡಿಸಿದ್ದು, ಈ ವಿಶೇಷ ಉಡುಗೆ ಫ್ಯಾಶನ್‌ ಪ್ರಿಯರ ಗಮನ ಸೆಳೆಯುತ್ತಿದೆ.

ಕ್ರಿಸ್ಟಿನಾ ಅವರು ಎಂಜಿನಿಯರ್‌ ಆಗಿದ್ದರೂ, ಫ್ಯಾಷನ್‌ ಮೇಲಿನ ಪ್ರೀತಿಯಿಂದ ಅವರು ಈ ಪ್ರಯೋಗವನ್ನು ಕೈಗೆತ್ತಿಕೊಂಡು ಇದೀಗ ವಿಶ್ವದ ಮೊದಲ ಎಐ ಉಡುಪನ್ನು ತಯಾರಿಸಿದ್ದಾರೆ. ಈ ಕುರಿತ ವಿಡಿಯೋವನ್ನು ಅವರು ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ವೈರಲ್​​ ವಿಡಿಯೋ ಇಲ್ಲಿದೆ ನೋಡಿ:

ವೈರಲ್‌ ವಿಡಿಯೋದಲ್ಲಿ ಕ್ರಿಸ್ಟಿನಾ ವಿಶೇಷ ರೋಬೋಟಿಕ್‌ ಸ್ನೇಕ್‌ ಮೆಡುಸಾ ಡ್ರೆಸ್‌ ಅನ್ನು ಧರಿಸಿರುವುದನ್ನು ಕಾಣಬಹುದು. ನಾನು ಈ ವಿಶೇಷ ಉಡುಗೆಯನ್ನು ತಯಾರಿಸಲು ಹೋಗಿ ಹಲವಾರು ಬಾರಿ ಇದರಲ್ಲಿ ವಿಫಲತೆಯನ್ನು ಕಂಡಿದ್ದೇನೆ, ಕೊನೆಯಲ್ಲಿ ಆಟೋಮ್ಯಾಟಾ ಆಟಿಕೆಗಳಿಂದ ಸ್ಫೂರ್ತಿ ಪಡೆದು ರೋಬೋಟಿಕ್‌ ಸ್ನೇಕ್ ಉಡುಗೆಯನ್ನು ಸಿದ್ಧಪಡಿಸಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಲೈವ್‌ ರಿಪೋರ್ಟಿಂಗ್‌ ವೇಳೆ ಪತ್ರಕರ್ತೆಗೆ ಗುಮ್ಮಿದ ಗೂಳಿ

shibuildsrobots ಹೆಸರಿನ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಹಂಚಿಕೊಳ್ಳಲಾದ ಈ ವಿಡಿಯೋ 3 ಮಿಲಿಯನ್‌ಗೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಈ ಒಂದು ಪ್ರಯತ್ನಕ್ಕೆ ಕ್ರಿಸ್ಟಿನಾ ಅವರಿಗೆ ನೆಟ್ಟಿಗರು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.

ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ