Viral Video: ವಧುವಿಗೆ ರೊಟ್ಟಿ ತಯಾರಿಸಲು ಸಹಾಯ ಮಾಡಿದ ವರ! ಅತಿಥಿಗಳೆಲ್ಲಾ ತಮಾಷೆ ಮಾಡಿ ನಕ್ಕ ವಿಡಿಯೋವಿದು

ಮದುವೆಯಾದ ಹೊಸ ಜೋಡಿ ಅಡುಗೆ ಮನೆಯಲ್ಲಿ ರೊಟ್ಟಿ ತಯಾರಿಸುತ್ತಿದ್ದಾರೆ. ವಧುವಿಗೆ ಸಹಾಯ ಮಾಡಿದ ವರನಿಗೆ ಚಪ್ಪಾಳೆ ತಟ್ಟಿ ಅತಿಥಿಗಳು ಹುರಿದುಂಬಿಸಿದ್ದಾರೆ. ವಿಡಿಯೋ ಇದೆ ನೀವೂ ನೋಡಿ.

Viral Video: ವಧುವಿಗೆ ರೊಟ್ಟಿ ತಯಾರಿಸಲು ಸಹಾಯ ಮಾಡಿದ ವರ! ಅತಿಥಿಗಳೆಲ್ಲಾ ತಮಾಷೆ ಮಾಡಿ ನಕ್ಕ ವಿಡಿಯೋವಿದು
ರೊಟ್ಟಿ ತಟ್ಟಲು ವಧುವಿಗೆ ಸಹಾಯ ಮಾಡುತ್ತಿರುವ ವರ!
Edited By:

Updated on: Oct 22, 2021 | 12:04 PM

ಮದುವೆ ಅಂದಾಕ್ಷಣ ಎಲ್ಲೆಲ್ಲೂ ಸಡಗರ ಸಂಭ್ರಮ. ವಧು-ವರರಿಗೆ ಕಾಲೆಳೆಯುತ್ತಾ ನಗುತ್ತಾ ಆಚರಿಸುತ್ತೇವೆ ಈ ದಿನವನ್ನ. ಎಲ್ಲರೂ ನಗುತ್ತಾ ಸಂಭ್ರಮಿಸುವ ಈ ದಿನದಂದು ನಡೆಯುವ ಕೆಲವು ತಮಾಷೆ ದೃಶ್ಯಗಳು ಮನ ಗೆಲ್ಲುತ್ತವೆ. ಆರಾಧ್ಯ ವಿಡಿಯೋ ಇದೀಗ ಫುಲ್ ವೈರಲ್ಲಾಗಿದೆ. ಮದುವೆಯಾಗಿ ಗಂಡನ ಮನೆಗೆ ಬಂದ ವಧು ಮನೆಯಲ್ಲಿ ಮೊದಲ ಬಾರಿಗೆ ರೊಟ್ಟಿ ತಯಾರಿಸುತ್ತಿದ್ದಾಳೆ. ಅವಳಿಗೆ ಸಹಾಯ ಮಾಡಲು ವರ ಕೂಡಾ ಬಂದು ಕುಳಿತಿದ್ದಾನೆ. ಪರಸ್ಪರ ಪ್ರೀತಿಯ ಸಹಕಾರದ ಈ ವಿಡಿಯೋ ನೋಡಿ ನೆಟ್ಟಿಗರು ಜೋಡಿಯನ್ನು ಮೆಚ್ಚಿಕೊಂಡಿದ್ದಾರೆ.

ಪರಿಚಯವಿಲ್ಲದೆ ಮದುವೆಯಾಗಿ ಹೊಸ ಬಾಳನ್ನು ನಡೆಸಬೇಕಿರುವ ವಧು ವರರು ಮನೆಯಲ್ಲಿ ಇಬ್ಬರೂ ಸೇರಿ ರೊಟ್ಟಿ ತಯಾರಿಸುತ್ತಿದ್ದಾರೆ. ಮದುವೆಯ ನಂತರ ವಧು ಅಡುಗೆ ಮನೆಯಲ್ಲಿ ಏನಾದರೂ ಖಾದ್ಯವನ್ನು ತಯಾರಿಸುವ ಪದ್ಧತಿ ಕೆಲವೆಡೆ ಇರುತ್ತದೆ. ಅದೇ ರೀತಿ ವಧು ರೊಟ್ಟಿ ತಯಾರಿಸಲು ಮುಂದಾಗಿದ್ದಾಳೆ. ವಧುವಿಗೆ ಸಹಾಯ ಮಾಡಲು ವರ ಕೂಡಾ ಅಡುಗೆ ಮನೆಗೆ ಬಂದಿದ್ದಾನೆ. ಮನೆಯವರೆಲ್ಲಾ, ವರ ರೊಟ್ಟಿ ತಯಾರಿಸುವುದನ್ನು ನೋಡುತ್ತಾ ನಗುತ್ತಾ ಖುಷಿಯಿಂದ ಸಮಯ ಕಳೆದಿದ್ದಾರೆ.

ಸುತ್ತಲೂ ಅತಿಥಿಗಳೆಲ್ಲ ಕುಳಿತಿದ್ದಾರೆ. ವರ ಕೂಡಾ ವಧುವಿನ ಪಕ್ಕದಲ್ಲಿ ಕುಳಿತು ರೊಟ್ಟಿ ಬೇಯಿಸುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದು. ವಧು, ರೊಟ್ಟಿಯನ್ನು ತಟ್ಟಿ ಕಾದ ತವಾ ಮೇಲೆ ಹಾಕುತ್ತಿದ್ದಂತೆಯೇ ಅತಿಥಿಗಳು ಚಪ್ಪಾಳೆ ತಟ್ಟುತ್ತಾ ಅವಳನ್ನು ಶ್ಲಾಘಿಸುತ್ತಾ ಹುರಿದುಂಬಿಸುತ್ತಾರೆ. ಆ ಕ್ಷಣ ವಧುವಿನ ಪಕ್ಕದಲ್ಲಿ ಕುಳಿತ ವರ ನಾಚಿಕೊಳ್ಳುವ ವಿಡಿಯೋ ಇದೀಗ ಫುಲ್ ವೈರಲ್ ಆಗಿದೆ.

ಈ ರೀತಿಯಾಗಿ ವೈವಾಹಿಕ ಜೀವನವು ಅತ್ಯಂತ ಪ್ರೀತಿಯಿಂದಿರಬೇಕು ಎಂದು ದೃಶ್ಯ ನೋಡಿದ ಕೆಲವರು ಅಭಿಪ್ರಾಯ ಹಂಚಿಕೊಂಡಿದ್ದಾರೆ. ಪರಸ್ಪರ ಸಹಕಾರ ಸಹ ಬಾಳ್ವೆಯಿಂದ ಉತ್ತಮ ಜೀವನ ನಡೆಸಬಹುದು ಎಂದು ಮತ್ತೋರ್ವರು ಹೇಳಿದ್ದಾರೆ. ಪ್ರತಿದಿನವೂ ಇದೇ ರೀತಿ ಸಹಾಯ ಮಾಡಬೇಕು ಎಂದು ಸಹ ಕೆಲವರು ಕಾಲೆಳೆದಿದ್ದಾರೆ, ಈ ವಿಡಿಯೋವನ್ನು ನೆಟ್ಟಿಗರು ಹೆಚ್ಚು ಇಷ್ಟಪಟ್ಟಿದ್ದು ಫುಲ್ ವೈರಲ್ ಆಗಿದೆ.

ಇದನ್ನೂ ಓದಿ:

Viral Video: ಅನಾರೋಗ್ಯದಿಂದ ಚೇತರಿಸಿಕೊಂಡ ಮಗನನ್ನು ಕಂಡು ಕುಣಿದು ಕುಪ್ಪಳಿಸಿದ ಅಪ್ಪ; ಹೃದಯಸ್ಪರ್ಶಿ ವಿಡಿಯೋವಿದು

Viral Video: ನೆಟ್ಟಿಗರ ಮನಸೂರೆಗೊಂಡ ಹಾವಿನ ರೂಪದ ಕೇಕ್; ಏನಿದು ಸಮಾಚಾರ? ವಿಡಿಯೋ ನೋಡಿ